ಬೆಂಗಳೂರು, ಸೆಪ್ಟೆಂಬರ್ 24: ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ) ದೇಶದಾದ್ಯಂತ ನಕಲಿ ನೋಂದಣಿ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಇಲ್ಲಿಯವರೆಗೆ ಸುಮಾರು 10,700 ನಕಲಿ ನೋಂದಣಿಗಳ ಕಂಪನಿ ಪತ್ತೆಹಚ್ಚಲಾಗಿದೆ. ಈ ಮೂಲಕ 10,179 ಕೋಟಿ ರೂಪಾಯಿ ತೆರಿಗೆ ವಂಚನೆ ಬೆಳಕಿಗೆ ಬಂದಿದೆ.
ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ) ಸದಸ್ಯ ಶಶಾಂಕ್ ಪ್ರಿಯಾ ಮಾತನಾಡಿ, ಜಿಎಸ್‌ಟಿ ನೋಂದಣಿಗೆ ಆಧಾರ್ ದೃಢೀಕರಣ ಪ್ರಕಿಯೆ ಈಗಾಗಲೇ 12 ರಾಜ್ಯಗಳಲ್ಲಿ ಅಳವಡಿಸಲಾಗಿದೆ. ಅಕ್ಟೋಬರ್ 4 ರ ವೇಳೆಗೆ ಇನ್ನೂ ನಾಲ್ಕು ರಾಜ್ಯಗಳನ್ನು ಸಹ ಅದರಲ್ಲಿ ಆರಂಭವಾಗಲಿದೆ. ಅಂತಿಮವಾಗಿ ಮಧ್ಯಪ್ರದೇಶ, ರಾಜಸ್ಥಾನ, ಅಸ್ಸಾಂ, ತಮಿಳುನಾಡು, ಉತ್ತರ ಪ್ರದೇಶ ಮತ್ತು ಹರಿಯಾಣ ಸೇರಿದಂತೆ 20 ರಾಜ್ಯಗಳು ಆಧಾರ್ ದೃಢೀಕರಣವನ್ನು ಪ್ರಾರಂಭಿಸಲಾಗುತ್ತದೆ ಎಂದಿದ್ದಾರೆ.

ಅಸೋಸಿಯೇಟೆಡ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಆಫ್ ಇಂಡಿಯಾ (ASSOCHAM) ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶಶಾಂಕ್ ಪ್ರಿಯಾ, ಭವಿಷ್ಯದಲ್ಲಿ, ತೆರಿಗೆ ಅಧಿಕಾರಿಗಳು ಇಂತಹ ತೆರಿಗೆ ವಂಚಕರಿಗೆ ಮುಂದೆ ಭವಿಷ್ಯದಲ್ಲಿ ಕೆಲವು ನಿರ್ಬಂಧಗಳನ್ನು ವಿಧಿಸುವ ಸಾಧ್ಯತೆ ಇದೆ ಎಂದಿದ್ದಾರೆ.
ನಕಲಿ ಜಿಎಸ್‌ಟಿ ನೋಂದಣಿಗಳನ್ನು ಪರಿಶೀಲಿಸಲು ಸರ್ಕಾರ ಉದ್ದೇಶಿತ ಕ್ರಮ ತೆಗೆದುಕೊಳ್ಳುತ್ತಿದೆ ಮತ್ತು ಹೆಚ್ಚಿನ ಭೌತಿಕ ಪರಿಶೀಲನೆಯನ್ನು ಮಾಡಲಾಗುತ್ತಿದೆ. ನಕಲಿ ನೋಂದಣಿ ವಿರುದ್ಧ ಆಗಸ್ಟ್ 16 ರಂದು ಪ್ರಾರಂಭವಾದ ಎರಡನೇ ಅಖಿಲ ಭಾರತ ಅಭಿಯಾನವು ಅಕ್ಟೋಬರ್ 15 ರವರೆಗೆ ಮುಂದುವರಿಯುತ್ತದೆ. ತೆರಿಗೆ ಅಧಿಕಾರಿಗಳು 67,970 CBICIN (ಸರಕು ಮತ್ತು ಸೇವಾ ತೆರಿಗೆ ಗುರುತಿನ ಸಂಖ್ಯೆ) ಗುರುತಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಇವುಗಳಲ್ಲಿ 59 ರಷ್ಟು CBICIN ಅಥವಾ 39,965 ಅನ್ನು ಸೆಪ್ಟೆಂಬರ್ 22 ರವರೆಗೆ ಪರಿಶೀಲಿಸಲಾಗಿದೆ.ಈ ಪೈಕಿ ಶೇ 27ರಷ್ಟು ಸಂಸ್ಥೆಗಳು ಅಸ್ತಿತ್ವದಲ್ಲಿಲ್ಲದಿರುವುದು ಪತ್ತೆಯಾಗಿದೆ' ಎಂದು ತಿಳಿಸಿದ್ದಾರೆ.
ಹಿಂದಿನ ಅಭಿಯಾನಕ್ಕೆ ಹೋಲಿಸಿದರೆ ಈ ಶೇಕಡಾವಾರು ಪ್ರಮಾಣವು ಬಹುತೇಕ ಒಂದೇ ಆಗಿರುತ್ತದೆ. 10,179 ಕೋಟಿ ತೆರಿಗೆ ವಂಚನೆಯನ್ನು ಪತ್ತೆ ಹಚ್ಚಿದ್ದೇವೆ. 2,994 ಕೋಟಿ ಮೌಲ್ಯದ ಇನ್ ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ನಿಲ್ಲಿಸಲಾಗಿದೆ. ಅಲ್ಲದೆ, 28 ಕೋಟಿ ರೂ.ಗಳನ್ನು ವಸೂಲಿ ಮಾಡಲಾಗಿದೆ (ಸೆಪ್ಟೆಂಬರ್ 22 ರವರೆಗಿನ ಎರಡನೇ ಅಭಿಯಾನದಲ್ಲಿ ಮೇ 16 ಮತ್ತು ಜುಲೈ 15, 2023 ರ ನಡುವೆ ಮೊದಲ ಅಭಿಯಾನವನ್ನು ನಡೆಸಲಾಯಿತು. ಇದರಲ್ಲಿ ಜಿಎಸ್‌ಟಿ ನೋಂದಣಿ ಹೊಂದಿರುವ ಒಟ್ಟು 21,791 ನಕಲಿ ಕಂಪನಿಗಳು ಅಸ್ತಿತ್ವದಲ್ಲಿಲ್ಲದಿರುವುದು ಕಂಡುಬಂದಿದೆ.


Click it and Unblock the Notifications