ಭಾರತೀಯ ಷೇರು ಮಾರುಕಟ್ಟೆಯಲ್ಲಿ ಗೂಳಿ ಓಟ ನಿಂತಿದೆ. ಕರಡಿ ಕುಣಿತ ಹೆಚ್ಚಾಗಿದೆ. ಅಂದರೆ ಭಾರೀತೀಯ ಷೇರು ಮಾರುಕಟ್ಟೆಯಲ್ಲಿ ಇಂದು (ಶುಕ್ರವಾರ) ಗಣನೀಯ ಕುಸಿತ ಕಂಡುಬಂದಿದೆ. ಈ ಕುಸಿತಕ್ಕೆ ಕಾರಣ ಐಟಿ ವಲಯದಲ್ಲಾದ ನಷ್ಟ ಹಾಗೂ ಬ್ಯಾಂಕಿಂಗ್ ವಲಯದಲ್ಲಾದ ನಷ್ಟಗಳೇ ಕಾರಣ ಎನ್ನಲಾಗಿದೆ. ಈ ಎರಡೂ ವಲಯಗಳ ನಷ್ಟದ ಫಲಿತಾಂಶವೇ ಇಂದಿನ ಭಾರತೀಯ ಷೇರು ಮಾರುಕಟ್ಟೆಯ ಮೌಲ್ಯ ಕುಸಿತ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ ಹೂಡಿಕೆದಾರರು, ಜಿಡಿಪಿ ದತ್ತಾಂಶ ಬಿಡುಗಡೆಯ ನಿರೀಕ್ಷೆಯಲ್ಲಿದ್ದರು. ಜೊತೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರರು ನೀಡಿದ, ಸುಂಕ ಸಂಬಂಧಿತ ಹೇಳಿಕೆಗಳು ಕೂಡ ವಿಶ್ವ ಮಾರುಕಟ್ಟೆಯಲ್ಲಿ ಅನಿಶ್ಚಿತತೆಯನ್ನು ಹೆಚ್ಚಿಸಿವೆ.
ಈ ಒಂದು ಬೆಳವಣಿಗೆಯ ಕಾರಣದಿಂದಾಗಿ ಬಿಎಸ್‌ಇ ಸೆನ್ಸೆಕ್ಸ್ 1,000 ಪಾಯಿಂಟ್‌ಗಳಷ್ಟು (1.34%) ಕುಸಿದಿದ್ದು, ಒಟ್ಟು 73,602 ಪಾಯಿಂಟ್ಸ್‌ಗೆ ತಲುಪಿದೆ. ಮತ್ತು ನಿಫ್ಟಿ 50 ಲಕ್ಷ 22,270 ಮಟ್ಟಕ್ಕೆ ಇಳಿದಿದೆ. ಈ ಕುಸಿತದ ಪ್ರಭಾವದಿಂದ ಬಿಎಸ್‌ಇ-ಪಟ್ಟಿಮಾಡಿದ ಎಲ್ಲಾ ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳದಲ್ಲಿ ₹7.16 ಲಕ್ಷ ಕೋಟಿ ಇಳಿದಿದೆ. ಹಾಗೆಯೇ ಒಟ್ಟು ಮಾರುಕಟ್ಟೆ ಮೌಲ್ಯದಲ್ಲಿ ₹385.94 ಲಕ್ಷ ಕೋಟಿ ಇಳಿಕೆಯಾಗಿದೆ. ಮುಂದಿನ ದಿನಗಳಲ್ಲಿ ಜಿಡಿಪಿ ಡೇಟಾ ಪರಿಣಾಮ ಹೇಗಿರಲಿದೆ ಎಂಬುದರ ಮೇಲೆ ಮಾರುಕಟ್ಟೆಯ ಸ್ಥಿತಿ ನಿರ್ಧಾರವಾಗುತ್ತದೆ. ಅಮೆರಿಕದಲ್ಲಿ ಜಾರಿಯಾಗುವ ಸುಂಕ ನೀತಿಗಳು ಮತ್ತು ವಿಶ್ವ ಮಾರುಕಟ್ಟೆಯ ಇದರಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ಹೂಡಿಕೆದಾರರು ಬ್ಯಾಂಕಿಂಗ್ ಮತ್ತು ಐಟಿ ವಲಯಗಳ ಚಲನೆ, ಜಾಗತಿಕ ಆರ್ಥಿಕ ಬೆಳವಣಿಗೆ, ಮತ್ತು ಸರ್ಕಾರದ ಆರ್ಥಿಕ ನೀತಿಗಳನ್ನು ಗಮನಿಸಬೇಕಾಗುತ್ತದೆ.

ಇನ್ನು ಐಟಿ ವಲಯದಲ್ಲಿ ಗಂಭೀರ ಕುಸಿತ ಕಂಡುಬಂದಿದೆ. ನಿಫ್ಟಿ ಐಟಿ ಸೂಚ್ಯಂಕ 4%ಗೆ ಕುಸಿದಿದೆ. ಈ ಕುಸಿತಕ್ಕೆ ಪ್ರಮುಖ ಕಾರಣ ಚಿಪ್‌ಮೇಕರ್ ಎನ್ವಿಡಿಯಾದ ಮೌಲ್ಯದಲ್ಲಿ ಆದ ಇಳಿಕೆ. ಇದು ವಾಲ್‌ಸ್ಟ್ರೀಟ್ ಮಾರುಕಟ್ಟೆಯಲ್ಲೂ ಕುಸಿತ ಉಂಟಾಗುವಂತೆ ಮಾಡಿತು. ಈ ಪರಿಣಾಮದಿಂದ ಪರ್ಸಿಸ್ಟೆಂಟ್ ಸಿಸ್ಟಮ್ಸ್, ಟೆಕ್ ಮಹೀಂದ್ರಾ ಮತ್ತು ಎಂಫಾಸಿಸ್ ಕಂಪನಿಗಳು ಹೆಚ್ಚಿನ ನಷ್ಟಕ್ಕೆ ಒಳಗಾದವು. ಇತ್ತ ಬ್ಯಾಂಕಿಂಗ್, ಆಟೋಮೊಬೈಲ್, ಮೆಟಲ್, ಫಾರ್ಮಾ, ಗ್ರಾಹಕ ವಸ್ತುಗಳು ಮತ್ತು ತೈಲ-ಅಂಗಾರ ವಲಯಗಳ ಸೂಚ್ಯಂಕವೂ ಕೂಡ ದೌರ್ಬಲ್ಯವಾದವು. ಅಂದತೆ 1% ರಿಂದ 2% ರಷ್ಟು ಕುಸಿಯುವುದರ ಮೂಲಕ ಮಾರುಕಟ್ಟೆಯಲ್ಲಿ ವೀಕ್ ಆಗಿವೆ. ಈ ಭಾರಿ ಕುಸಿತದಿಂದ ಹೂಡಿಕೆದಾರರಲ್ಲಿ ಆತಂಕ ಶುರುವಾಗಿದೆ. ಮುಂದಿನ ದಿನಗಳಲ್ಲಿ ಮಾರುಕಟ್ಟೆ ಪರಿಸ್ಥಿತಿ ಹೇಗೆ ರೂಪುಗೊಳ್ಳುತ್ತದೇ ಎಂದು ಭಯ ಶುರುವಾಗಿದ್ದು, ಈ ಬಗ್ಗೆ ಗಮನಹರಿಸುವಂತಾಗಿದೆ.
ಜಿಡಿಪಿ ದತ್ತಾಂಶ ಬಿಡುಗಡೆಗೂ ಮುನ್ನ ಆತಂಕ:
ಡಿಸೆಂಬರ್ ತ್ರೈಮಾಸಿಕದ ಜಿಡಿಪಿ ದತ್ತಾಂಶದ ನಿರೀಕ್ಷೆ ಮಾರುಕಟ್ಟೆಯ ಕುಸಿತದ ಹಿಂದಿನ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಆರ್ಥಿಕ ಬೆಳವಣಿಗೆಯಲ್ಲಿ ನಿಧಾನಗತಿ ಸಾಧಿಸುತ್ತಿರುವುದು ಮತ್ತು ಗಳಿಕೆಯಲ್ಲಿ ಸಾಮರ್ಥ್ಯ ಕುಂದುತ್ತಿರುವುದರ ಬಗ್ಗೆ ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟಾಗಿದೆ. ಇದರ ಜೊತೆಗೆ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅನಿರೀಕ್ಷಿತ ಸುಂಕ ನೀತಿ ಮತ್ತು ಅಂತರಾಷ್ಟ್ರೀಯ ಹೂಡಿಕೆದಾರರ ನಿರಂತರ ಮಾರಾಟವು ಮಾರುಕಟ್ಟೆಯ ಭರವಸೆಯನ್ನು ಇನ್ನಷ್ಟು ಕುಗ್ಗಿಸಿದೆ. ಸೆಪ್ಟೆಂಬರ್ ಅತ್ಯಂದ ಗರಿಷ್ಠ ಮಟ್ಟದಿಂದ ಮಾರುಕಟ್ಟೆ ಮೌಲ್ಯ 14% ಕುಸಿದಿದ್ದು, ಹೂಡಿಕೆದಾರರಲ್ಲಿ ಆತಂಕವನ್ನು ಹೆಚ್ಚಿಸಿದೆ.
ಟ್ರಂಪ್ ಘೋಷಿಸಿದ ಸುಂಕದ ಪರಿಣಾಮ:
ಅಮೆರಿಕ ಅಧ್ಯಕ್ಷ ಟ್ರಂಪ್ ಇತ್ತೀಚೆಗೆ ಘೋಷಿಸಿದ ಸುಂಕ ನೀತಿಗಳು, ಮಾರುಕಟ್ಟೆಯ ಅಸ್ಥಿರತೆಯನ್ನು ಹೆಚ್ಚಿಸಿರುವುದು ಮತ್ತೊಂದು ಪ್ರಮುಖ ಕಾರಣ. ನಿನ್ನೆ (ಗುರುವಾರ) ಟ್ರಂಪ್, ಮಾರ್ಚ್ 4 ರಿಂದ ಕೆನಡಾ ಮತ್ತು ಮೆಕ್ಸಿಕೋದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ, 25% ಸುಂಕವನ್ನು ತರುವ ನಿರ್ಧಾರ ಪ್ರಕಟಿಸಿದರು. ಇದರ ಜೊತೆಗೆ ಚೀನಾದ ಸರಕುಗಳ ಮೇಲೆ 10% ಸುಂಕ ಮತ್ತು ಯುರೋಪಿಯನ್ ಒಕ್ಕೂಟದಿಂದ ಸಾಗಣೆಗಳ ಮೇಲೆ 25% ಸುಂಕ ವಿಧಿಸುವ ಉದ್ದೇಶವನ್ನು ಪುನರುಚ್ಚರಿಸಿದರು. ಈ ಸುಂಕ ನೀತಿಗಳು ಹೂಡಿಕೆದಾರರಲ್ಲಿ ಆತಂಕ ಹೆಚ್ಚಿಸಿ ಮಾರುಕಟ್ಟೆ ಮೌಲ್ಯ ಕುಸಿತಕ್ಕೆ ಕಾರಣವಾಯಿತು.


Click it and Unblock the Notifications