ಎಲ್ಲೆಡೆ ನಿಷೇಧದ ಭೀತಿ ಎದುರಿಸುತ್ತಿರುವ ಟಿಕ್ ಟಾಕ್ ಇದೀಗ ಮಹತ್ವದ ಕ್ರಮಕ್ಕೆ ಮುಂದಾಗಿದೆ. ಟಿಕ್‌ಟಾಕ್ ಒಡೆತನದ ಬೈಟ್‌ಡ್ಯಾನ್ಸ್ ಕಂಪನಿಯಿಂದ ಪ್ರತ್ಯೇಕಗೊಂಡು ಚೀನಾವನ್ನೇ ತೊರೆದು ಹೊರ ಬರಲು ನಿರ್ಧರಿಸಿದೆ ಎಂದು ಮಾಧ್ಯಮಗಳು ಇತ್ತೀಚೆಗೆ ವರದಿ ಮಾಡಿದ್ದವು. ಇದು ಭಾರತದ ಟಿಕ್‌ಟಾಕ್ ಪ್ರಿಯರಲ್ಲಿ ಸಂಚಲನಕ್ಕೆ ಕಾರಣವಾಗಿತ್ತು.
ಇದೀಗ ಟಿಕ್‌ಟಾಕ್ ಮಹತ್ವದ ಸುದ್ದಿಯೊಂದನ್ನು ನೀಡಿದೆ. ಚೀನಾದೊಂದಿಗೆ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ತನ್ನ ಕೇಂದ್ರ ಕಚೇರಿಯನ್ನು ಲಂಡನ್‌ಗೆ ಸ್ಥಳಾಂತರಿಸುವ ಕ್ರಮ ಕೈಗೊಂಡಿದೆ ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಈ ಸಂಬಂಧ ಯುಕೆ ಸರ್ಕಾರದ ಜೊತೆ ಟಿಕ್‌ಟಾಕ್ ಮಾತುಕತೆ ನಡೆಸುತ್ತಿದ್ದು, ಶೀಘ್ರದಲ್ಲೇ ಈ ಬಗ್ಗೆ ಅಂತಿ ನಿರ್ಧಾರ ಹೊರ ಬಿಳ್ಳುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.
ಆಡಳಿತಾತ್ಮಕ ಮಂಡಳಿಯನ್ನು ರದ್ದು ಮಾಡುವುದು
ಭಾರತವೂ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಟಿಕ್ ಟಾಕ್‌ನ್ನು ನಿಷೇಧಿಸಲಾಗಿದೆ. ಅಮೆರಿಕದಲ್ಲೂ ನಿಷೇಧಿಸುವ ಸೂಚನೆ ಇದೆ. ಇದರಿಂದ ಕಂಗಾಲಾಗಿರುವ ಟಿಕ್‌ಟಾಕ್ ತನ್ನ ಆಡಳಿತಾತ್ಮಕ ಮಂಡಳಿಯನ್ನೇ ಬೈಟ್‌ಡ್ಯಾನ್ಸ್‌ನೊಂದಿಗೆ ಕಡಿದುಕೊಂಡು ಹೊರ ಬರಲು ನಿರ್ಧರಿಸಿದೆ. ಹೊಸ ಆಡಳಿತ ಮಂಡಳಿಯನ್ನು ರಚಿಸಿಕೊಂಡು ಚೀನಾ ಬಿಟ್ಟು ಲಂಡನ್‌ನಲ್ಲಿ ಟಿಕ್‌ಟಾಕ್‌ನ್ನು ಪುನರ್ ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ.
59 ಮೊಬೈಲ್ ಅಪ್ಲಿಕೇಶನ್ ನಿಷೇಧಿಸಿ
ಕೊರೊನಾವೈರಸ್ ಹುಟ್ಟಿಗೆ ಕಾರಣವಾದ ಹಾಗೂ ಭಾರತದೊಂದಿಗೆ ಗಡಿ ತಂಟೆ ತೆಗೆದ ಚೀನಾ ಇದೀಗ ಇಡೀ ಜಗತ್ತಿನಲ್ಲಿ ಖಳನಾಯಕನ ಸ್ಥಾನದಲ್ಲಿ ನಿಂತಿದೆ. ಚೀನಾದ ವಿರುದ್ಧ ಕ್ರಮಗಳನ್ನು ಕೈಗೊಳ್ಳಲು ಅನೇಕ ರಾಷ್ಟ್ರಗಳು ಹೆಜ್ಜೆ ಇಡುತ್ತಿವೆ. ಈ ನಿಟ್ಟಿನಲ್ಲಿ ಭಾರತ ಚೀನಾ ಮೂದಲ 59 ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿಷೇಧಿಸಿ ಆ ದೇಶಕ್ಕೆ ಮರ್ಮಾಘಾತ ನೀಡಿದೆ.
ಚೀನಾ ಆಪ್‌ಗಳಿಗೆ 79 ಪ್ರಶ್ನೆ
ಟಿಕ್ ಟಾಕ್ ಸೇರಿದಂತೆ ಚೀನಾ ಮೂಲದ 59 ಮೊಬೈಲ್ ಆಫ್‌ಗಳನ್ನು ನಿಷೇಧಿಸಿರುವ ಭಾರತ ಸರ್ಕಾರ ಇದೀಗ ಈ ಕಂಪನಿಗಳಿಗೆ 79 ಪ್ರಶ್ನೆಗಳನ್ನು ಕೇಳಿದೆ. ಸಮರ್ಪಕ ಉತ್ತರ ನೀಡದಿದ್ದರೆ ಖಾಯಂ ನಿಷೇಧ ಹೇರುವ ಎಚ್ಚರಿಕೆಯನ್ನು ಕೇಂದ್ರ ಸರ್ಕಾರ ನೀಡಿದೆ.
ಅಮೆರಿಕವೂ ನಿಷೇಧಿಸಲಿದೆ
ಟಿಕ್‌ಟಾಕ್ ನಿಷೇಧಿಸಲು ಜಗತ್ತಿನ ದೊಡ್ಡಣ್ಣ ಅಮೆರಿಕ ಕೂಡ ಮುಂದಾಗಿದೆ. ಟಿಕ್‌ಟಾಕ್ ಸೇರಿದಂತೆ ಚೀನಾದ ಆಪ್‌ಗಳನ್ನು ನಿಷೇಧಿಸಲು ಮುಂದಾಗಿದೆ. ಟಿಕ್‌ಟಾಕ್ ಸೇರಿದಂತೆ ಚೀನಾದ ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿಷೇಧಿಸುವುದನ್ನು ಅಮೆರಿಕ ಖಂಡಿತವಾಗಿಯೂ ಎದುರು ನೋಡುತ್ತಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಹೇಳಿದ್ದಾರೆ.


Click it and Unblock the Notifications