ಭಾರತದಲ್ಲಿರುವ ಪ್ರಮುಖ ಖಾಸಗಿ ವಲಯದ ಬ್ಯಾಂಕ್‌ಗಳಲ್ಲಿ ಫೆಡರಲ್ ಬ್ಯಾಂಕ್ ಕೂಡ ಒಂದಾಗಿದೆ. ಇದೀಗ ಈ ಬ್ಯಾಂಕ್ ಹೊಸ ಹೆಜ್ಜೆಯನ್ನು ಇಡುತ್ತಿದೆ. ಅಂದರೆ ಫೆಡರಲ್ ಬ್ಯಾಂಕ್‌ನ ತನ್ನ ಮೊದಲ ಬ್ರಾಂಡ್ ಅಂಬಾಸಿಡರ್ ಆಗಿ ಬಾಲಿವುಡ್ ನಟಿ ವಿದ್ಯಾಬಾಲನ್‌ನ ಪರಿಚಯಿಸಿದೆ. ಇದು ಬ್ಯಾಂಕ್‌ನ ಹೊಸ ಬದಲಾವಣೆಯ ಪ್ರಯಾಣದತ್ತ ಇಡುತ್ತಿರುವ ಮೊದಲ ಮತ್ತು ಮಹತ್ವದ ಹೆಜ್ಜೆಯಾಗಿದೆ. ಮಾರ್ಚ್ 5ರಂದು ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ, ಈ ಕುರಿತ ಘೋಷಣೆ ಮಾಡಲಾಗಿದೆ.

ಮಾರುಕಟ್ಟೆಯಲ್ಲಿ ತನ್ನ ಜಾಡು ಹಿಡಿಯಲು, ತನ್ನ ಛಾಪು ಮೂಡಿಸಲು ಫೆಡರಲ್ ಬ್ಯಾಂಕ್ ಈ ನೂತನ ಹೆಜ್ಜೆ ಇಟ್ಟಿದೆ. ಗ್ರಾಹಕರು ಹೊಸದಾಗಿ ತನ್ನಿಂದ ಪ್ರೇರೇಪಿತ ಸೇವೆಗಳನ್ನು ಒದಗಿಸಿಕೊಳ್ಳಬೇಕು ಹಾಗೂ ಈ ಬ್ಯಾಂಕಿನ ಬ್ರಾಂಡ್ ಪುನರ್ ಸ್ಥಾಪನೆಯೂ ಪ್ರಮುಖವಾಗಿ ಆಗಬೇಕಿರುವ ಕಾರಣ ಈ ಹೊಸ ಹೆಜ್ಜೆಯ ಮೂಲಕ ಫೆಡೆರಲ್ ಬ್ಯಾಂಕ್ ಹೊರ ಹೊಮ್ಮಿದೆ.
ಇನ್ನು ನಟಿ ವಿದ್ಯಾ ಬಾಲನ್‌ನ ಬ್ರಾಂಡ್ ಅಂಬಾಸಿಡರ್‍ನಾಗಿ ಆಯ್ಕೆ ಮಾಡಿದರ ಬಗ್ಗೆ, ಫೆಡರಲ್ ಬ್ಯಾಂಕ್‌ನ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ಎಂ.ವಿ.ಎಸ್. ಮೂರ್ತಿ ಮಾತನಾಡಿದ್ದಾರೆ. ವಿದ್ಯಾ ಬಾಲನ್ ಅವರನ್ನು ನಾವು ನಮ್ಮ ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಿರುವುದು ಚಿಂತಿತ ಮತ್ತು ಕಾರ್ಯತ್ಮಕ ನಿರ್ಧಾರ. ಅವರು ಬಹುಮುಖ ಪ್ರತಿಭೆ ಹೊಂದಿರುವ ನಟಿಯಾಗಿದ್ದಾರೆ. ಹಾಗೂ ಇವರು ಎಲ್ಲಾ ಜನಾಂಗ, ಲಿಂಗ ಮತ್ತು ಭೌಗೋಳಿಕ ಪ್ರದೇಶಗಳಲ್ಲಿ ಜನಪ್ರಿಯರಾಗಿದ್ದು, ಚಿತ್ರರಂಗದ ಪ್ರಭಾವಿ ವ್ಯಕ್ತಿತ್ವ ನಮ್ಮ ಬ್ರ್ಯಾಂಡ್ ಮೌಲ್ಯಗಳಿಗೆ ಸೂಕ್ತವಾಗಿ ಹೊಂದಿಕೆಯಾಗುತ್ತವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಈ ಬಗ್ಗೆ ನಟಿ ವಿದ್ಯಾ ಬಾಲನ್ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ನಮ್ಮ ಫೆಡರಲ್ ಬ್ಯಾಂಕ್ ಒಂದು ಅರ್ಥವ್ಯವಸ್ಥೆಯನ್ನು ಪುಷ್ಠಿಗೊಳಿಸರುವ ಬ್ಯಾಂಕ್ ಆಗಿ ಪ್ರಬಲ ಪಾತ್ರ ವಹಿಸಿದೆ. ಹಾಗೂ ಈ ಬ್ಯಾಂಕ್ ಮಹಿಳಾ ಉದ್ಯೋಗಕ್ಕಾಗಿ ರಾಷ್ಟ್ರದ ಮುಂಚೂಣಿಯಲ್ಲಿದೆ. ಇದು ತನ್ನ ಸಂಸ್ಕೃತಿಯ ಮೂಲಕ ಜನರಿಗೆ ಸಮಾನ ಅವಕಾಶಗಳನ್ನು ಒದಗಿಸುತ್ತಿದೆ. ಈ ಸಂಬಂಧ ಉತ್ಸಾಹಭರಿತ ಪ್ರಯಾಣ ನಿರೀಕ್ಷಿಸುತ್ತಿದ್ದೇನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಫೆಡರಲ್ ಬ್ಯಾಂಕ್‌ನ ದೂರದೃಷ್ಟಿ ಯತ್ನಗಳಿಗಾಗಿ ಈ ಹೊಸ ಶಕ್ತಿಯನ್ನು ರೂಪಿಸಲಾಗಿದೆ ಎನ್ನಲಾಗುತ್ತಿದೆ. ಪ್ರಮುಖವಾಗಿ ಮಾರ್ಕೆಟಿಂಗ್ ಅಭಿಯಾನಗಳು, ಟಿವಿಯಲ್ಲಿ ಬರುವ ಜಾಹೀರಾತುಗಳು, ಡಿಜಿಟಲ್ ಕ್ಯಾಂಪೇನ್‌ಗಳು ಹೀಗೆ ಮುಂತಾದವುಗಳಲ್ಲಿ ನಟಿ ವಿದ್ಯಾ ಬಾಲನ್ ಕಾಣಿಸಿಕೊಳ್ಳಲಿದ್ದಾರೆ. ಫೆಡರಲ್ ಬ್ಯಾಂಕ್ ತನ್ನ ಸೇವಾ ವಿಸ್ತರಣೆ, ಹೊಸ ಉತ್ಪನ್ನ ಪರಿಚಯ, ಮತ್ತು ಗ್ರಾಹಕ ಸಂಪರ್ಕಗಳಲ್ಲಿ ಹೊಸ ದಿಗ್ಬಂಧನವನ್ನು ಸಾಧಿಸಲು ಪ್ರಯತ್ನಿಸುತ್ತಿದೆ. ವಿದ್ಯಾ ಬಾಲನ್, ಭಾರತೀಯ ಸಿನಿಮಾದಲ್ಲಿ ಮಹಿಳಾ ನಾಯಕತ್ವದ ಪರಿಧಿಯನ್ನು ಪುನರ್‌ವ್ಯಾಖ್ಯಾನಿಸಿದಂತೆ, ಫೆಡರಲ್ ಬ್ಯಾಂಕ್ ತನ್ನ ವೃತ್ತಿಪರ ಸೇವೆಗಳ ಮೂಲಕ ಹೊಸ ಆಯಾಮ ಸಾಧಿಸಲು ಮುಂದಾಗಿದೆ.
ಫೆಡರಲ್ ಬ್ಯಾಂಕ್ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ವಲಯದ ಬ್ಯಾಂಕ್‌ಗಳಲ್ಲಿ ಒಂದಾಗಿದೆ. ಈ ಬ್ಯಾಂಕ್ ದೇಶಾದ್ಯಂತ ಸುಮಾರು 1,550 ಶಾಖೆಗಳನ್ನು ಹೊಂದಿದೆ. ಹಾಗೂ 2,054 ಎಟಿಎಂ/ರಿಸೈಕ್ಲರ್‌ಗಳನ್ನು ಹೊಂದಿದೆ. 2024ರ ಡಿಸೆಂಬರ್ 31ರಂದು ಬ್ಯಾಂಕಿನ ಒಟ್ಟು ವ್ಯವಹಾರ ₹4.96 ಲಕ್ಷ ಕೋಟಿ ತಲುಪಿತ್ತು. ಬ್ಯಾಂಕಿನ ಬ್ಯಾಸೆಲ್ ಮಾರ್ಗಸೂಚಿಗಳ ಪ್ರಕಾರ ಪೈಪೋಟಿಯ ಭದ್ರತಾ ಅನುಪಾತ 15.20% ಆಗಿತ್ತು ಎನ್ನಲಾಗಿದೆ. ಇನ್ನು ಈ ಫೆಡರಲ್ ಬ್ಯಾಂಕ್ ದುಬೈ ಮತ್ತು ಅಬುಧಾಬಿಯಲ್ಲಿನ ಪ್ರತಿನಿಧಿ ಕಚೇರಿಗಳ ಮೂಲಕ ಗಲ್ಫ್ ಪ್ರದೇಶದ ಅನಿವಾಸಿ ಭಾರತೀಯ ಗ್ರಾಹಕರಿಗಾಗಿ ಸೇವೆ ಸಲ್ಲಿಸುತ್ತಿದೆ. ಅಲ್ಲದೇ ಇದು ಗುಜರಾತ್‌ನ ಗಿಫ್ಟ್ ಸಿಟಿಯಲ್ಲಿ IFSC ಬ್ಯಾಂಕಿಂಗ್ ಘಟಕವನ್ನು ಹೊಂದಿದೆ. ಈ ಬ್ಯಾಂಕ್ ಗ್ರಾಹಕ ಕೇಂದ್ರಿತ ಸೇವೆಗಳಿಗೆ ಅಗ್ರಗಣ್ಯತೆ ನೀಡಿದ್ದು ಇದು ತಂತ್ರಜ್ಞಾನ-ಚಾಲಿತ ಮತ್ತು ಮಾನವೀಯ ಮೌಲ್ಯಗಳನ್ನು ಒಟ್ಟುಗೂಡಿಸುವ ದೃಷ್ಠಿಕೋನವನ್ನು ಹೊಂದಿದೆ.


Click it and Unblock the Notifications