ಹಣದ ಬಗ್ಗೆ ಮಕ್ಕಳಿಗೆ ತಿಳುವಳಿಕೆ ನೀಡುವುದು ಅವರ ಭವಿಷ್ಯದ ಆರ್ಥಿಕ ಯಶಸ್ಸಿಗೆ ಅಡಿಪಾಯ ಹಾಕುತ್ತದೆ.ಚಿಕ್ಕ ವಯಸ್ಸಿನಿಂದಲೇ ಮಕ್ಕಳಲ್ಲಿ ಆರ್ಥಿಕ ಜ್ಞಾನವನ್ನು ಬೆಳೆಸುವುದು ಅವರ ಮುಂದಿನ ಜೀವನದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಉಳಿತಾಯ, ಖರ್ಚು ಮತ್ತು ಬಜೆಟ್‌ನಂತಹ ಮೂಲಭೂತ ಅಂಶಗಳ ಬಗ್ಗೆ ಮಕ್ಕಳಿಗೆ ಕಲಿಸುವುದರಿಂದ ಅವರು ತಮ್ಮ ಹಣವನ್ನು ಜವಾಬ್ದಾರಿಯುತವಾಗಿ ನಿರ್ವಹಿಸಲು ಸಹಾಯವಾಗುತ್ತದೆ.
ಹಣಕಾಸಿನ ಸಾಕ್ಷರತೆಯು ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು, ತಮ್ಮ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಮತ್ತು ಅವರ ಗುರಿಗಳನ್ನು ಸಾಧಿಸಲು ಮಕ್ಕಳಿಗೆ ಜ್ಞಾನವನ್ನು ನೀಡುತ್ತದೆ. ನಿಮ್ಮ ಮಕ್ಕಳಲ್ಲಿ ಹಣಕಾಸಿನ ಜ್ಞಾನವನ್ನು ಹುಟ್ಟುಹಾಕಲು ನಿಮಗೆ ಸಹಾಯ ಮಾಡುವ ಒಂದಷ್ಟು ಸಲಹೆ , ಮಾರ್ಗದರ್ಶಿ ಇಲ್ಲಿದೆ.

ಹಣವನ್ನು ಅರ್ಥಮಾಡಿಕೊಳ್ಳಲು ಆರಂಭಿಕ ಹಂತಗಳು
ಮಕ್ಕಳಿಗೆ ಹಣಕಾಸಿನ ಸಾಕ್ಷರತೆಯನ್ನು ಕಲಿಸಲು ಮೊದಲ ಹೆಜ್ಜೆ ಎಂದರೆ, ಹಣವೆಂದರೆ ಏನು ಮತ್ತು ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ವಿವರಿಸುವುದು. ಸುಲಭವಾದ ಭಾಷೆ ಮತ್ತು ನಿಜ ಜೀವನದ ಉದಾಹರಣೆಗಳನ್ನು ಬಳಸುವುದು ಹೆಚ್ಚು ಪರಿಣಾಮಕಾರಿಯಾಗಿರುತ್ತಾರೆ .
ಮಕ್ಕಳಿಗೆ ನಾವು ಖರೀದಿಸಿದ ವಸ್ತುಗಳ ಬಿಲ್ ಮತ್ತು ಅವುಗಳ ಲೆಕ್ಕಾಚಾರ ತೋರಿಸುವ ಮೂಲಕ, ಅವುಗಳ ಮೌಲ್ಯವನ್ನು ಮತ್ತು ಆರ್ಥಿಕ ವ್ಯವಹಾರಗಳಲ್ಲಿ ಬಳಸುವ ವಿಧಾನವನ್ನು ವಿವರಿಸುವುದು ಉತ್ತಮ. ಕೆಲಸದ ಮೂಲಕ ಹಣವನ್ನು ಗಳಿಸುವ ವಿಧಾನ ಮತ್ತು ಅದನ್ನು ಸರಕು ಮತ್ತು ಸೇವೆಗಳನ್ನು ಖರೀದಿಸಲು ಬಳಸುವ ಬಗ್ಗೆ ಚರ್ಚಿಸುವುದು, ಅವರ ಹಣದ ಅರಿವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ.
ಉಳಿತಾಯ ಮಾಡುವ ಕಡೆ ಪ್ರೇರೇಪಿಸಿ:
ಮಕ್ಕಳಿಗೆ ಉಳಿತಾಯದ ಪ್ರಾಮುಖ್ಯತೆಯನ್ನು ಕಲಿಸಲು, ಹಣ ನಿರ್ವಹಣೆಯ ಪ್ರಮುಖ ಅಂಶಗಳಾಗಿವೆ. ಅವರು ತಮ್ಮ ಪಾಕೆಟ್ ಮನಿಯ ಒಂದು ಭಾಗವನ್ನು ಅಥವಾ ಹಿರಿಯರಿಂದ ಉಡುಗೊರೆಯ ರೂಪದಲ್ಲಿ ಸ್ವೀಕರಿಸುವ ಹಣವನ್ನು ಉಳಿಸಲು ಪ್ರೋತ್ಸಾಹಿಸಲು ಉತ್ತಮ ಅಭ್ಯಾಸ. ಇದಕ್ಕಾಗಿ ಪಿಗ್ಗಿ ಬ್ಯಾಂಕ್ , ಜಾರ್ ಬಳಸಿದರೆ ಉತ್ತಮ. ಅವರು ತಮ್ಮ ಉಳಿತಾಯವನ್ನು ಬೆಳೆಯುತ್ತಿರುವುದು ನೋಡಿ ಪ್ರೇರಣೆ ಪಡೆಯುತ್ತಾರೆ. ಉಳಿತಾಯದ ಪ್ರಯೋಜನಗಳನ್ನು ವಿವರಿಸುತ್ತಿರುವಾಗ, ಭವಿಷ್ಯದ ವಿಶೇಷ ಖರೀದಿಗಳಿಗೆ ಅಥವಾ ತುರ್ತು ಸಂದರ್ಭಗಳಿಗೆ ಹಣವನ್ನು ಸಂಗ್ರಹಿಸಲು ಸಾಧ್ಯವಾಗುವುದು ಎಂಬುದನ್ನು ತಿಳಿಸಲು ಸಹಾಯವಾಗುತ್ತದೆ.
ಧನಾತ್ಮಕ , ಜವಾಬ್ದಾರಿಯುತ ಉದಾಹರಣೆಯನ್ನು ರೂಪಿಸಿ
ಮಕ್ಕಳು ತಮ್ಮ ಪೋಷಕರನ್ನು ನೋಡಿ ಬೆಳೆಯುತ್ತಾರೆ, ಮತ್ತು ಪೋಷಕರ ನಡತೆಯು ಮಾತುಗಳಿಗಿಂತ ಪ್ರಖರವಾಗಿರುತ್ತದೆ. ಬಜೆಟ್, ಉಳಿತಾಯ ಮತ್ತು ಸಾಲವನ್ನು ತಪ್ಪಿಸುವಂತಹ ಜವಾಬ್ದಾರಿಯುತ ಹಣಕಾಸಿನ ಅಭ್ಯಾಸಗಳನ್ನು ಅವರ ಮುಂದೆ ಹಂಚಿಕೊಳ್ಳಿ. ಹಣಕಾಸಿನ ಚರ್ಚೆಗಳಲ್ಲಿ ಅವರನ್ನು ತೊಡಗಿಸಿಕೊಳ್ಳಿ. ನಿಮ್ಮ ಕುಟುಂಬದ ಹಣಕಾಸುಗಳನ್ನು ಮುಕ್ತವಾಗಿ ಮತ್ತು ವಯಸ್ಸಿಗೆ ಅನುಗುಣವಾಗಿ ಚರ್ಚಿಸಿ, ಆದಾಯ, ವೆಚ್ಚಗಳು ಮತ್ತು ಉಳಿತಾಯದಂತಹ ಪರಿಕಲ್ಪನೆಗಳನ್ನು ವಿವರಿಸಿ.
ಬಜೆಟ್ ರಚಿಸಲು ಸಹಾಯ ಮಾಡಿ:
ನಿಮ್ಮ ಮಕ್ಕಳಿಗೆ ಅವರ ಆದಾಯ ಮತ್ತು ವೆಚ್ಚಗಳನ್ನು ಟ್ರ್ಯಾಕ್ ಮಾಡಲು ಸರಳವಾದ ಬಜೆಟ್ ರಚಿಸಲು ಸಹಾಯ ಮಾಡಿ. ಅವರ ಸಾಮರ್ಥ್ಯದಲ್ಲಿ ಖರ್ಚು ಮಾಡುವ ಮಹತ್ವವನ್ನು ಅವರಿಗೆ ತಿಳಿಸಿ. ಮಕ್ಕಳ ಸಣ್ಣ ಪುಟ್ಟ ಗುರಿಗಳನ್ನ ಈಡೇರಿಸಲು ಅಂದರೆ ಹೊಸ ಆಟಿಕೆ, ಹೊಸ ವಸ್ತು ಅಥವಾ ಪ್ರವಾಸ ಇಂತಹ ನಿರ್ದಿಷ್ಟ ಗುರಿಗಳಿಗಾಗಿ ಉಳಿಸಲು ನಿಮ್ಮ ಮಗುವನ್ನು ಪ್ರೋತ್ಸಾಹಿಸಿ. ವಿಳಂಬವಾಗಿ ಸಿಕ್ಕರೂ ಮಕ್ಕಳು ಅದರಲ್ಲಿರುವ ತೃಪ್ತಿಯನ್ನು, ಹಣದ ಮೌಲ್ಯವನ್ನು ಅರ್ಥಮಾಡಿಕೊಳ್ಳಲು ಇದು ಅವರಿಗೆ ಸಹಾಯ ಮಾಡುತ್ತದೆ.
ಕೆಲಸದ ಮೂಲಕ ಹಣದ ಮೌಲ್ಯವನ್ನು ಕಲಿಸಿ:
ಮಕ್ಕಳಿಗೆ ಕೆಲಸ ಮತ್ತು ಹಣದ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳಲು, ವಯಸ್ಸಿಗೆ ಸೂಕ್ತವಾದ ಕೆಲಸಗಳನ್ನು ನಿಗದಿಪಡಿಸುವುದು ಮತ್ತು ಅದಕ್ಕೆ ಅನುಗುಣವಾಗಿ ಸಣ್ಣ ಸಂಬಳ ನೀಡುವುದು ಸಹಾಯಕವಾಗುತ್ತದೆ. ಇದರಿಂದ, ಅವರು ಕಠಿಣ ಪರಿಶ್ರಮದ ಮೌಲ್ಯವನ್ನು ತಿಳಿದುಕೊಳ್ಳುತ್ತಾರೆ ಮತ್ತು ತಮ್ಮ ಸ್ವಂತ ಹಣವನ್ನು ಗಳಿಸುವ ತೃಪ್ತಿಯನ್ನು ಅನುಭವಿಸುತ್ತಾರೆ.
ವಿವಿಧ ಪಾವತಿ ವಿಧಾನಗಳನ್ನು ಪರಿಚಯಿಸಿ:
ನಗದು, ಡೆಬಿಟ್ ಕಾರ್ಡ್‌ಗಳು ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಮಕ್ಕಳಿಗೆ ವಿವರಿಸಿ. ಜವಾಬ್ದಾರಿಯುತ ಕ್ರೆಡಿಟ್ ಕಾರ್ಡ್ ಬಳಕೆಯ ಪ್ರಾಮುಖ್ಯತೆಯನ್ನು ಒಳಗೊಂಡಂತೆ ಪ್ರತಿ ಪಾವತಿ ವಿಧಾನದ ಅನುಕೂಲಗಳು ಮತ್ತು ಅನಾನುಕೂಲಗಳನ್ನು ಚರ್ಚಿಸಿ.
ಆರ್ಥಿಕ ಸ್ವಾತಂತ್ರ್ಯವನ್ನು ಪ್ರೋತ್ಸಾಹಿಸಿ:
ನಿಮ್ಮ ಮಗುವಿಗೆ ಉಳಿತಾಯ ಖಾತೆ ತೆರೆಯಲು ಸಹಾಯ ಮಾಡುವುದರಿಂದ, ಹಣಕಾಸಿನ ಜವಾಬ್ದಾರಿಯ ಅರಿವು ಬೆಳೆಸಲು ಪ್ರಾರಂಭವಾಗುತ್ತದೆ. ಖಾತೆ ನಿರ್ವಹಿಸುವ ಮೂಲಕ, ಅವರು ಹಣವನ್ನು ಹೇಗೆ ಉಳಿತಾಯ ಮಾಡಬೇಕು ಮತ್ತು ವೆಚ್ಚವನ್ನು ನಿಯಂತ್ರಿಸಲು ಕಲಿಯುತ್ತಾರೆ.
ಉಳಿತಾಯ ಮಾತ್ರವಲ್ಲ ಹೂಡಿಕೆಯ ಪರಿಕಲ್ಪನೆಯನ್ನು ಪರಿಚಯಿಸುವ ಮೂಲಕ, ನೀವು ಸಂಪತ್ತು ಬೆಳೆಸುವ ಮಹತ್ವವನ್ನು ತಿಳಿಸಲು ಸಾಧ್ಯವಾಗುತ್ತದೆ. ವಿವಿಧ ಹೂಡಿಕೆ ಆಯ್ಕೆಗಳ ಅಪಾಯಗಳು ಮತ್ತು ಅನುಕೂಲತೆಗಳ ಬಗ್ಗೆ ವಿವರಿಸಲು, ನೀವು ಅವರನ್ನು ನಿಖರವಾದ ಆರ್ಥಿಕ ನಿರ್ಧಾರಗಳನ್ನು ಮಾಡಲು ಸಹಾಯ ಮಾಡಿದಂತಾಗುತ್ತದೆ.


Click it and Unblock the Notifications