BBMP: ಬೆಂಗಳೂರಿನಲ್ಲಿ ನಕಲಿ ಪ್ಲಾನ್ ಮಂಜೂರಾತಿಗಾಗಿ ಬಿಲ್ಡರ್‌ಗಳ ವಿರುದ್ಧ ಎಫ್‌ಐಆರ್!

ಬೆಂಗಳೂರು ನವೆಂಬರ್ 1: ಬೆಂಗಳೂರಿನ ಆರ್ಆರ್ ನಗರದಲ್ಲಿ 1,388 ಚದರ ಮೀಟರ್ ಜಾಗದಲ್ಲಿ 20 ಮನೆಗಳನ್ನು ನಿರ್ಮಾಣ ಮಾಡಿದ ಕಾರಣ ಬಿಬಿಎಂಪಿ ಕ್ರಮಕ್ಕೆ ಮುಂದಾಗಿದೆ. ಆರ್‌ಆರ್‌ ನಗರದ ಮಲ್ಲತ್ತಹಳ್ಳಿಯಲ್ಲಿ ಬಿಬಿಎಂಪಿಯಿಂದ ಮಂಜೂರಾದ ಪ್ಲಾನ್‌ ಅನ್ನು ಬಿಟ್ಟು ನಕಲಿ ದಾಖಲೆ ಪ್ಲ್ಯಾನ್ ಸೃಷ್ಟಿಸಿ ಬಹುಮಹಡಿ ಕಟ್ಟಡ ನಿರ್ಮಿಸಲಾಗಿದೆ. ಹೀಗಾಗಿ ಈ ಎಲ್ಲಾ ಆಸ್ತಿ ಮಾಲೀಕರು ಹಾಗೂ ಬಿಲ್ಡರ್‌ ವಿರುದ್ಧ ಪಾಲಿಕೆ ಪೊಲೀಸರು ದೂರು ದಾಖಲಿಸಿದ್ದಾರೆ.

ಪೌರಾಡಳಿತ ಸಂಸ್ಥೆ ನಾಲ್ಕು ಅಂತಸ್ತಿನ ಕಟ್ಟಡಕ್ಕೆ ಮಂಜೂರಾತಿ ನೀಡಿದೆ. ಆದರೆ ಬಿಲ್ಡರ್‌ಗಳು ಆರು ಮಹಡಿಗಳಿಗೆ ಅನುಮೋದನೆ ನೀಡುವ ನಕಲಿ ರೇಖಾಚಿತ್ರವನ್ನು ರಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಹೀಗಾಗಿ 1,388 ಚದರ ಮೀಟರ್ ಜಾಗದಲ್ಲಿ 20 ವಸತಿ ಘಟಕಗಳನ್ನು ಸೂಕ್ತ ಅನುಮೋದನೆ ಇಲ್ಲದೆ ನಿರ್ಮಿಸಿದ್ದಾರೆ ಎಂದು ಆರೋಪಿಸಿ ಆಸ್ತಿ ಮಾಲೀಕ ಜಿ ಲಕ್ಷ್ಮೀ ಪ್ರಸಾದ್, ಡೆವಲಪರ್‌ಗಳಾದ ಡಿ ಹರ್ದೀಪ್ ಮತ್ತು ಎ ವಿಜಯಕುಮಾರ್ ಸೇರಿದಂತೆ ನಾಲ್ವರ ವಿರುದ್ಧ ಬಿಬಿಎಂಪಿ ದೂರು ದಾಖಲಿಸಿದೆ.

ಬೆಂಗಳೂರಿನಲ್ಲಿ ನಕಲಿ ಪ್ಲಾನ್ ಮಂಜೂರಾತಿಗಾಗಿ ಬಿಲ್ಡರ್‌ಗಳ ವಿರುದ್ಧ ಎಫ

ಬಿಬಿಎಂಪಿ ಅನುಮೋದಿಸಿದ ಸ್ಕೆಚ್‌ನಲ್ಲಿ ನೆಲಮಹಡಿ ಮತ್ತು ಮೂರು ಹೆಚ್ಚುವರಿ ಮಹಡಿಗಳಿಗೆ ಮಾತ್ರ ಅನುಮತಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಬಿಲ್ಡರ್ ಕಂಪ್ಲೈಂಟ್ ಬೇರೆ ಒಂದು ಸ್ಕೆಚ್ ಅನ್ನು ತಯಾರಿಸಿದ್ದಾರೆ. ಅದರಂತೆ ಬಹುಮಹಡಿ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ. ಅಕ್ರಮ ನಿರ್ಮಾಣದ ದೂರುಗಳನ್ನು ಸ್ವೀಕರಿಸಿದ ನಂತರ ಬಿಬಿಎಂಪಿ ಆರಂಭದಲ್ಲಿ ಆಸಕ್ತಿ ಮಾಲೀಕರಿಗೆ ನೋಟಿಸ್ ಜಾರಿ ಮಾಡಿತು. ದೂರಿನ ಆಧಾರದ ಮೇಲೆ ಜ್ಞಾನಭಾರತಿ ಪೊಲೀಸರು ಬುಧವಾರ ಎಫ್‌ಐಆರ್ ದಾಖಲಿಸಿದ್ದಾರೆ.

ಬಿ.ಸಿ. ಆರ್.ಆರ್.ನಗರ ವಲಯದ ಜಂಟಿ ಆಯುಕ್ತ ಸತೀಶ್ ಮಾತನಾಡಿ, '1,388 ಚದರ ಮೀಟರ್ ವಿಸ್ತೀರ್ಣದಲ್ಲಿ ಗ್ರೌಂಡ್ ಪ್ಲಸ್ ಮೂರು ಮಹಡಿಗಳ ಯೋಜನೆಗೆ ಬಿಬಿಎಂಪಿ ಅನುಮೋದನೆ ನೀಡಿದೆ. ಆದರೆ, ಬಿಲ್ಡರ್ ಅಧಿಕಾರಿಯೊಬ್ಬರ ನಕಲಿ ಸಹಿ ಹಾಕಿ, ಯೋಜನೆ ಮಂಜೂರಾತಿ ದಾಖಲೆ ಸಿದ್ಧಪಡಿಸಿ, ಗ್ರೌಂಡ್ ಪ್ಲಸ್ ಆರು ಮಹಡಿಗಳನ್ನು ನಿರ್ಮಿಸಿದ್ದಾರೆ. ಪ್ರತಿ ಮಹಡಿಯು ನಾಲ್ಕು ಮನೆಗಳನ್ನು ಹೊಂದಿದ್ದು, ಒಟ್ಟು ಈ ರೀತಿ 20 ವಸತಿ ಕಟ್ಟಡಗಳು ಇವೆ. ಅದರ ಮಾಲೀಕರು ಹಾಗೂ ಬಿಲ್ಡರ್‌ಗಳ ವಿರುದ್ಧ ದೂರು ದಾಖಲಾಗಿದೆ' ಎಂದಿದ್ದಾರೆ.

ಅನ್ನಸಂದ್ರಪಾಳ್ಯದ ಶಿಥಿಲಗೊಂಡ ಕಟ್ಟಡ ತೆರವು

ಅಲ್ಲದೇ ಇದೇ ವೇಳೆ ಮಹದೇವಪುರ ವಲಯದ ಎಚ್‌ಎಎಲ್ ಉಪವಿಭಾಗದ ಅನ್ನಸಂದ್ರಪಾಳ್ಯದಲ್ಲಿ ಶಿಥಿಲಗೊಂಡಿರುವ ಕಟ್ಟಡ ತೆಗೆಯುವ ಕಾಮಗಾರಿಗೆ ಬಿಬಿಎಂಪಿ ಚಾಲನೆ ನೀಡಿತು.

ಅನ್ನಸಂದ್ರಪಾಳ್ಯದ 1ನೇ ಕ್ರಾಸ್ 1ನೇ ಮುಖ್ಯರಸ್ತೆಯಲ್ಲಿ ಸೈಟ್ ನಂ.707ರಲ್ಲಿ ಇರುವ ಈ ಆಸ್ತಿ ಫಿರೋಜ್ ಖಾನ್ ಅವರ ಒಡೆತನದಲ್ಲಿದೆ. ಸುಮಾರು 40 ವರ್ಷಗಳ ಹಿಂದೆ 30x60 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾದ ನೆಲಮಹಡಿ ಮತ್ತು ಮೊದಲ ಮಹಡಿಯನ್ನು ಒಳಗೊಂಡಿರುವ ಕಟ್ಟಡ ಶಿಥಿಲಾವಸ್ಥೆಯಲ್ಲಿತ್ತು.

ಕಟ್ಟಡದ ಸ್ಥಿತಿಗತಿಗೆ ಸ್ಪಂದಿಸಿದ ಬಿಬಿಎಂಪಿ ಈ ಹಿಂದೆ ಮಾಲೀಕರಿಗೆ ನೋಟಿಸ್ ಜಾರಿ ಮಾಡಿ, ಮುಂಜಾಗ್ರತಾ ಕ್ರಮವಾಗಿ ಕಟ್ಟಡ ತೆಗೆಯುವಂತೆ ಸೂಚನೆ ನೀಡಿತ್ತು. ಮಾಲೀಕರು ಬಿಬಿಎಂಪಿ ಸೂಚನೆಯನ್ನು ಒಪ್ಪಿಕೊಂಡರು. ಕಟ್ಟಡ ತೆರವಿಗೆ ಹೆಚ್ಚುವರಿ ಸಮಯವನ್ನು ಕೋರಿದರು.

ಆದರೆ, ನೋಟಿಸ್ ಅವಧಿ ಮುಗಿದು ಕಟ್ಟಡ ಅಪಾಯದ ಭೀತಿ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಕೆಡವಲು ಮುಂದಾಯಿತು. ಎಚ್‌ಎಎಲ್ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರ ಮೇಲ್ವಿಚಾರಣೆಯಲ್ಲಿ ಮಾಲೀಕರ ವೆಚ್ಚದಲ್ಲಿ ಕಟ್ಟಡವನ್ನು ಕೆಡವಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+