ಬೆಂಗಳೂರಿನ ರಾಮೇಶ್ವರಂ ಕೆಫೆ ತುಂಬಾನೇ ಫೇಮಸ್. ಇಡ್ಲಿ, ದೋಸೆ, ಪೊಂಗಲ್ ಟೇಸ್ಟಿ ಫುಡ್ ಕೊಡುವ ರಾಮೇಶ್ವರಂ ಕೆಫೆ, ಬೆಂಗಳೂರಿನಲ್ಲಿ ದುಬಾರಿ ಕೆಫೆಗಳಲ್ಲಿ ಒಂದು ಎನ್ನಬಹುದು. ಕೆಲವರಿಗೆ ಈ ಕೆಫೆ ಬಗ್ಗೆ ಅಸಮಾಧಾನ ಇದೆ. ಅದ್ಯಾಕೆ ಅಂದ್ರೆ ಇಲ್ಲಿನ ಬೆಲೆ. ಆದ್ರೂ ಈ ಕೆಫೆ ಕೇಜ್ ಎಂದಿಗೂ ಕಡಿಮೆಯಾಗಿಲ್ಲ. ಬೆಂಗಳೂರಲ್ಲಿ ಹಲವು ಬ್ರಾಂಚ್‌ಗಳನ್ನು ಹೊದಿರುವ ರಾಮೇಶ್ವರಂ ಕೆಫೆ, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ತನ್ನ ಛಾಪು ಮೂಡಿಸಿದೆ. ಆದ್ರೆ ಈಗ ಏರ್ಪೋರ್ಟ್‌ನಲ್ಲಿರುವ ಕೆಫೆ ವಿರುದ್ಧ ಈಗ FIR ದಾಖಲಾಗಿದೆ. ಕಾರಣ ಏನು ಅಂದ್ರೆ ಆಹಾರದಲ್ಲಿ ಹುಳು ಸಿಕ್ಕಿರೋದು. ಸದ್ಯ ಘಟನೆಗೆ ಸಂಬಂಧಿಸಿ ಗ್ರಾಹಕನ ವಿರುದ್ಧ ಸುಳ್ಳು ದೂರು ನೀಡಿದ ಆರೋಪದ ಮೇಲೆ, ಕೆಫೆ ಮಾಲೀಕರು ಹಾಗೂ ಒಬ್ಬ ಹಿರಿಯ ಪ್ರತಿನಿಧಿ ವಿರುದ್ಧ BIAL ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.

ಹೌದು, ಆಹಾರದಲ್ಲಿ ಹುಳು ಸಿಕ್ಕಿರುವ ಘಟನೆ ಹಳೆಯದ್ದೇ..ಆದ್ರೆ ಅದು ಇಂದು ಬೇರೆ ರೂಪ ಪಡೆದುಕೊಂಡಿದೆ. ಜುಲೈ 24ರಂದು ಬೆಳಗ್ಗೆ ಗುವಾಹಟಿ ಕಡೆಗೆ ಪ್ರಯಾಣಿಸುತ್ತಿದ್ದ ನಿಖಿಲ್ N ಎಂಬ ಯುವಕ ಟರ್ಮಿನಲ್-1ನಲ್ಲಿ ರಮೇಶ್ವರಾಮ್ ಕಫೆಗೆ ಭೇಟಿ ನೀಡಿ, ತನ್ನ ಸ್ನೇಹಿತರೊಂದಿಗೆ ಪೊಂಗಲ್ ಮತ್ತು ಫಿಲ್ಟರ್ ಕಾಫಿ ಆರ್ಡರ್ ಮಾಡುತ್ತಾನೆ. ತನಗೆ ನೀಡಿದ ಆಹಾದಲ್ಲಿ ಒಂದು ಸೂಪರ್ ವಾರ್ಮ್ (ಹುಳು) ಪತ್ತೆಯಾಗಿರುತ್ತದೆ. ಅದನ್ನು ಗಮನಿಸಿದ ಆತ ಸಿಬ್ಬಂದಿಗೆ ತಿಳಿಸುತ್ತಾನೆ. ಸಿಬ್ಬಂದಿ ಕೂಡ ಆಹಾರ ಬದಲಿಸಿಕೊಡಲು ಒಪ್ಪುತ್ತಾರೆ . ಆದ್ರೆ ಫ್ಲೈಟ್‌ಗೆ ಸಮಯ ಆಗಿದ್ದ ಕಾರಣ ಆ ವ್ಯಕ್ತಿ ಅಲ್ಲಿಂದ ಹಾಗೆಯೇ ಹೊರಡುತ್ತಾನೆ. ಈ ವೇಳೆ ಕೆಲವರು ವಿಡಿಯೋ ಮಾಡಿ ಹರಿಬಿಟ್ಟಿದ್ದ ಘಟನೆಯೂ ಉಂಟು.
ಆದರೆ ಈ ಘಟನೆಗೆ ಈಗ ಹೊಸ ತಿರುವು ಸಿಕ್ಕಿರೋದು ನಿಖಿಲ್‌ಗೆ ಮರುದಿನ ಗೊತ್ತಾಗುತ್ತೆ. ಅದೇನೆಂದರೆ ಕೆಫೆಯ ಪ್ರತಿನಿಧಿ ಸುಮಂತ್, ನಿಖಿಲ್ ವಿರುದ್ಧ ದೂರು ಸಲ್ಲಿಸಿ, 25 ಲಕ್ಷ ರೂ. ಬೇಡಿಕೆ ಇಟ್ಟು ಬ್ರಾಂಡ್‌ಗೆ ಹಾನಿ ಮಾಡುವ ಬೆದರಿಕೆ ನೀಡಿದ್ದಾರೆಂದು ಆರೋಪ ಕೂಡ ಮಾಡುತ್ತಾರೆ. ಇದು ಮಾಧ್ಯಮಗಳಲ್ಲಿ ವರದಿ ಕೂಡ ಆಗಿತ್ತು.
ನಿಖಿಲ್ ಈ ಆರೋಪಗಳನ್ನು ಸಂಪೂರ್ಣ ತಳ್ಳಿಹಾಕಿ, ತಾನು ಯಾವುದೇ ಹಣ ಕೇಳಿಲ್ಲ, ಬೆದರಿಕೆ ಹಾಕಿಲ್ಲ, ರಿಫಂಡ್ ಕೂಡ ಕೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾನೆ. ಕಫೆಯ ದೂರುದಲ್ಲಿ ಉಲ್ಲೇಖಿಸಿದ ಸಮಯವಾದ ಬೆಳಗ್ಗೆ 10.27ಕ್ಕೆ ತಾನು ವಿಮಾನದಲ್ಲಿ ಕುಳಿತಿದ್ದೆ ಎಂಬುದಕ್ಕೆ ಬೋರ್ಡಿಂಗ್ ಪಾಸ್ ಮತ್ತು ಪ್ರಯಾಣ ದಾಖಲೆಗಳನ್ನು ಸಹ ಒದಗಿಸಿದ್ದಾನೆ. ಕಫೆಯ ದೂರಿನಲ್ಲಿ ನೀಡಿರುವ ಫೋನ್ ಸಂಖ್ಯೆಗಳೊಂದಿಗೆ ತಾನೆಗೆ ಯಾವ ಸಂಪರ್ಕವೂ ಇಲ್ಲವೆಂದೂ ಹೇಳಿದ್ದಾನೆ.
ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ನಿಖಿಲ್ ಅಥವಾ ಅವನ ಸ್ನೇಹಿತರಿಂದ ಯಾವುದೇ ರೀತಿಯ ಒತ್ತಡ, ಬ್ಲ್ಯಾಕ್‌ಮೇಲ್, ಹಣ ಬೇಡಿಕೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಿಖಿಲ್ ಸ್ವತಃ ಪ್ರತಿದೂರು ನೀಡಿ, ಎರಡು ವಿಷಯಗಳ ಮೇಲೆ ತನಿಖೆ ನಡೆಸಬೇಕು ಎಂದು ಕೇಳಿಕೊಂಡಿದ್ದಾನೆ.
- ಆಹಾರದಲ್ಲಿ ಕಂಡುಬಂದ ಕಲುಷಿತ ಪದಾರ್ಥದ ಬಗ್ಗೆ ಕ್ರಮ
- ತನ್ನ ಮೇಲೆ ನೀಡಿದ ಸುಳ್ಳು ವಂಚನೆ ದೂರು ಕುರಿತು ತನಿಖೆ
ಅವನು 7.30 ರಿಂದ 8.00 ಗಂಟೆಯೊಳಗಿನ CCTV ದೃಶ್ಯಗಳು, ವಿಮಾನ ಪ್ರಯಾಣ ದಾಖಲೆಗಳು, ಮತ್ತು ಕಫೆಯ ದೂರುದಲ್ಲಿ ಉಲ್ಲೇಖಿಸಿರುವ ಸಂಖ್ಯೆಗಳ ಕಾಲ್ ಡೀಟೈಲ್ಸ್ ಪರಿಶೀಲಿಸಬೇಕು ಎಂದು ಮನವಿ ಸಲ್ಲಿಸಿದ್ದಾನೆ. ಈ ದೂರು ಆಧರಿಸಿ BIAL ಪೊಲೀಸರು ನವಂಬರ್ 29ರಂದು FIR ದಾಖಲಿಸಿದ್ದಾರೆ. ಪ್ರಕರಣದಲ್ಲಿ ಕಫೆ ಮಾಲೀಕರಾದ ರಘವೇಂದ್ರ ರಾವ್, ದಿವ್ಯ ರಾಘವೇಂದ್ರ ರಾವ್ ಹಾಗೂ ಹಿರಿಯ ನಿರ್ವಾಹಕ ಸುಮಂತ್ ಲಕ್ಷ್ಮೀನಾರಾಯಣ ಹೆಸರು ಸೇರಿದೆ.
FIRನಲ್ಲಿ ಬರೆಯಲ್ಪಟ್ಟಿರುವ ಗಂಭೀರ ಆರೋಪಗಳು:
- ಸೆಕ್ಷನ್ 61: ಅಪರಾಧ ಮಾಡಲು ಸಂಚು
- ಸೆಕ್ಷನ್ 123: ಹಾನಿ ಉಂಟುಮಾಡುವ ಕಲುಷಿತ ಆಹಾರ ನೀಡುವುದು
- ಸೆಕ್ಷನ್ 217: ಪೊಲೀಸರು ತಪ್ಪಾಗಿ ನಂಬುವಂತೆ ಸುಳ್ಳು ಮಾಹಿತಿ ನೀಡುವುದು
- ಸೆಕ್ಷನ್ 228, 229: ಸುಳ್ಳು ಸಾಕ್ಷಿ ಸೃಷ್ಟಿಸುವುದು
- ಸೆಕ್ಷನ್ 274, 275: ಕಲುಷಿತ ಆಹಾರ ಮಾರಾಟ ಮಾಡುವುದು
ನಿಖಿಲ್ ಹೇಳುವಂತೆ, ಕಲುಷಿತ ಆಹಾರ ನೀಡಿರುವುದು ತನ್ನ ಜೀವಕ್ಕೆ ಅಪಾಯ ತಂದಿದ್ದು, ಅದೇ ವೇಳೆ ತನ್ನ ವಿರುದ್ಧ ಸಲ್ಲಿಸಿದ ಸುಳ್ಳು ದೂರು ತನ್ನ ಮಾನ-ಗೌರವಕ್ಕೆ ಹಾನಿ ಮಾಡಿದೆ. ಈ ಪ್ರಕರಣದ ತನಿಖೆ ಈಗ ಮುಂದುವರಿದಿದೆ.


Click it and Unblock the Notifications