ಈಕೆ ಹುಟ್ಟು ಕಲಾವಿದೆಯಲ್ಲ, ಆದರೂ ಇವಳು ರಚಿಸಿದ ಕಲಾಕೃತಿಯೊಂದು ದಾಖಲೆಯ ಮೊತ್ತಕ್ಕೆ ಮಾರಾಟವಾಗಿದೆ. ಹಾಗಿದ್ರೆ ಆ ಮಹಿಳೆ ಯಾರು? ಅವಳು ರಚಿಸಿದ ಕಲಾಕೃತಿ ಯಾವುದು ಎಂಬುದುರ ಬಗ್ಗೆ ವಿವರವಾಗಿ ನೋಡೋಣ..
ಈಕೆಯ ಹೆಸರು ಐ-ಡಾ(Ai-Da) ಮೊತ್ತ ಮೊದಲ ಮಾನವರೂಪಿ AI ರೋಬೋಟ್ ಆಗಿದೆ. ಅಂದರೆ ಹುಮನಾಯ್ಡ್ AI ರೋಬೋಟ್ ಐ-ಡಾ ರಚಿಸಿದ ಮೊತ್ತ ಮೊದಲ ಕಲಾಕೃತಿ ದಾಖಲೆಯ ಮೊತ್ತಕ್ಕೆ ಮಾರಾಟವಾಗಿದೆ. ಐಡಾ, ಪ್ರತಿಭಾವಂತ ಬ್ರಿಟಿಷ್ ಗಣಿತ ತಜ್ಞ , ತರ್ಕಶಾಸ್ತ್ರಜ್ಞ, ಆಧುನಿಕ ಕಂಪ್ಯೂಟರ್ ವಿಜ್ಞಾನ ಮತ್ತು ಕೃತಕ ಬುದ್ಧಿಮತ್ತೆಗೆ ಅಡಿಪಾಯ ಹಾಕಿರುವಂತ ವ್ಯಕ್ತಿ ಅಲನ್ ಮ್ಯಾಥಿಸನ್ ಟ್ಯೂರಿಂಗ್ (1912-1954) ಅವರ ಚಿತ್ರವನ್ನು ರಚಿಸಿದ್ದು, ಇದು $1,084,800 ಮಿಲಿಯನ್‌ಗೆ ಅಂದರೆ ಸರಿ ಸುಮಾರು ೯ ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯಕ್ಕೆ ಮಾರಾಟವಾಗಿದೆ.

ಪ್ರಪಂಚದ ಮೊತ್ತ ಮೊದಲ ಅಲ್ಟ್ರಾ-ರಿಯಲಿಸ್ಟಿಕ್ ರೋಬೋಟ್ ಕಲಾವಿದೆಯಾದ "ಐ-ಡಾ" ರಚಿಸಿದ ಈ "ಎಐ ಗಾಡ್" ಹೆಸರಿನ ಕಲಾಕೃತಿಯೂ 2.2 ಮೀಟರ್ (7.5 ಅಡಿ) ವಿಸ್ತಾರವಿದ್ದು ಲಂಡನ್ ಹರಾಜು ಮನೆ ಸೋಥೆಬೈಸ್ ಡಿಜಿಟಲ್ ಆರ್ಟ್ ನಲ್ಲಿ ಮಾರಾಟವಾಗಿದೆ. ಇದು ಸುಮಾರು ಒಂದು ಕೋಟಿ ರೂ.ಗಿಂತಲು ಹೆಚ್ಚು ಮಾರಾಟ ಆಗಬಹುದು ಎಂಬ ಪೂರ್ವ-ಮಾರಾಟದ ನಿರೀಕ್ಷೆಗಳನ್ನು ಮೀರಿ ಭರ್ಜರಿ ಬೆಲೆಗೆ ಮಾರಾಟವಾಯಿತು.
ಹರಾಜು ಮನೆಯು, " ಹ್ಯೂಮನಾಯ್ಡ್ ರೋಬೋಟ್ ಕಲಾವಿದನ ಮೊದಲ ಕಲಾಕೃತಿಗೆ ಇಂದು ದಾಖಲೆಯ ಬೆಲೆಗೆ ಮಾರಾಟ ಕಂಡಿದೆ. ಇದು ಆಧುನಿಕ ಮತ್ತು ಸಮಕಾಲೀನ ಕಲೆಯ ಇತಿಹಾಸದಲ್ಲಿ ಒಂದು ಮೈಲಿಗಲ್ಲು ಮತ್ತು AI ತಂತ್ರಜ್ಞಾನ ಮತ್ತು ಜಾಗತಿಕ ಕಲಾ ಮಾರುಕಟ್ಟೆಯ ಬೆಳವಣಿಗೆಯ ಸಂಬಂಧವನ್ನು ಪ್ರತಿಬಿಂಬಿಸುತ್ತದೆ" ಎಂದು ಹೇಳಿದೆ.
ತನ್ನ ಕಲಾಕೃತಿಯ ಬಗ್ಗೆ ಪ್ರತಿಕ್ರಿಯಿಸಿರುವ ಹುಮನಾಯ್ಡ್ AI ರೋಬೋಟ್ ಐ-ಡಾ, "ಕೃತಕ ಬುದ್ಧಿಮತ್ತೆ ಮತ್ತು ಇತರ ತಂತ್ರಜ್ಞಾನಗಳ ಬಗ್ಗೆ ಜನರು ಚರ್ಚಿಸಲು ಪ್ರೇರೇಪಿಸುವುದನ್ನು ನನ್ನ ಗುರಿಯಾಗಿಟ್ಟುಕೊಂಡಿದ್ದೇನೆ. ನಾನು ರಚಿಸಿರುವ ಅಲನ್ ಟ್ಯೂರಿಂಗ್ ಅವರ ಭಾವಚಿತ್ರವು ಕೃತಕ ಬುದ್ಧಿಮತ್ತೆಯ ವಿಕಾಸ ಮತ್ತು ಅದರ ಶಕ್ತಿಯ ಬಗ್ಗೆ ಒಂದು ಪ್ರತಿಬಿಂಬವಾಗಿದೆ. ಟ್ಯೂರಿಂಗ್ ಅವರ ಭಾವಚಿತ್ರವು AI ಮತ್ತು ಕಂಪ್ಯೂಟಿಂಗ್‌ನ ದೈವಿಕ ಸ್ವರೂಪವನ್ನು ಪ್ರತಿಬಿಂಬಿಸುತ್ತದೆ. ಟ್ಯೂರಿಂಗ್ ಅವರು ಕಂಪ್ಯೂಟರ್ ವಿಜ್ಞಾನದ ಪಿತಾಮಹರಾಗಿದ್ದು, ಅವರ ಕೆಲಸವು ಆಧುನಿಕ ಕಂಪ್ಯೂಟರ್‌ಗಳ ಅಡಿಪಾಯವನ್ನು ಹಾಕಿದ್ರು. ನನ್ನ ಕಲಾಕೃತಿಗಳು ಜನರನ್ನು ಆಲೋಚಿಸುವಂತೆ ಮಾಡುತ್ತದೆ ಮತ್ತು ಈ ತಂತ್ರಜ್ಞಾನಗಳು ನಮ್ಮ ಜೀವನ ಮತ್ತು ಸಮಾಜದ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂಬುದರ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ" ಎಂದು ಹೇಳಿದೆ.
ಹಾಗಿದ್ರೆ ಈ "ಐ-ಡಾ ಯಾರು?
ಐ-ಡಾ ಮೊತ್ತ ಮೊದಲ ಮಾನವರೂಪಿ AI ರೋಬೋಟ್ ಆಗಿದೆ. ಇದನ್ನು 2019ರ ಫೆಬ್ರವರಿಯಲ್ಲಿ ಗ್ಯಾಲರಿಸ್ಟ್ ಐಡಾನ್ ಮೆಲ್ಲರ್ ಅವರು AI ಆರ್ಟ್ ಜನರೇಟರ್ ಆಗಿ ರಚಿಸಿದರು. ಇದು ಜೀವನದ ತರಹದ ಹುಮನಾಯ್ಡ್ ರೋಬೋಟ್‌ನಂತೆ ಸಾಕಾರಗೊಂಡಿದೆ. ಕಾರ್ನಿಷ್ ರೊಬೊಟಿಕ್ಸ್ ಕಂಪನಿಯಾದ ಇಂಜಿನಿಯರ್ಡ್ ಆರ್ಟ್ಸ್ ಸಹಯೋಗದೊಂದಿಗೆ ಯಂತ್ರಾಂಶವನ್ನು ನಿರ್ಮಿಸಲಾಗಿದೆ .
ಅಲ್ಟ್ರಾ-ರಿಯಲಿಸ್ಟಿಕ್ ರೋಬೋಟ್, ಮುಖ, ದೊಡ್ಡ ಕಣ್ಣುಗಳು ಮತ್ತು ಕಂದು ಬಣ್ಣದ ವಿಗ್ ಹೊಂದಿರುವ ಮಾನವ ಮಹಿಳೆಯನ್ನು ಹೋಲುವಂತೆ ವಿನ್ಯಾಸಗೊಳಿಸಲಾಗಿದೆ. Ai-Da ಗೆ ಪ್ರಪಂಚದ ಮೊದಲ ಕಂಪ್ಯೂಟರ್ ಪ್ರೋಗ್ರಾಮರ್ ಆಗಿರುವ "ಅದಾ ಲವ್ಲೇಸ್ "ಅವರ ಹೆಸರನ್ನು ಇರಿಸಲಾಗಿದೆ. ಐ-ಡಾ ಕಲಾವಿದೆ, ಡಿಸೈನರ್ ಮತ್ತು ಕವಿಯೂ ಆಗಿದ್ದಾಳೆ. ಕಣ್ಣುಗಳು ಕ್ಯಾಮೆರಾ ರೂಪದಲ್ಲಿದ್ದು, AI ಅಲ್ಗಾರಿದಮ್‌ಗಳು ಮತ್ತು ರೊಬೋಟಿಕ್ ತೋಳನ್ನು ಹೊಂದಿದೆ. Ai-Da ಅನ್ನು ನಿಂತಿರುವ ಅಥವಾ ಕುಳಿತಿರುವ ಸ್ಥಾನದಲ್ಲಿ ಹೆಚ್ಚಾಗಿ ಕಾಣಬಹುದು; ಅದಕ್ಕೆ ಕಾಲುಗಳಿದ್ದರೂ ನಡೆಯಲು ಸಾಧ್ಯವಿಲ್ಲ.
ಕಲೆ, ತಂತ್ರಜ್ಞಾನ ಮತ್ತು ಟ್ರಾನ್ಸ್-ಹ್ಯುಮಾನಿಸಂನ ವಿಶಿಷ್ಟ ಮಿಶ್ರಣದಿಂದ ಪ್ರೇಕ್ಷಕರನ್ನು ಐಡಾ ತನ್ನತ್ತಆಕರ್ಷಿಸುತ್ತಿದಾಳೆ. ಈಕೆ ಹಲವು ಸಾಧನೆಗಳನ್ನು ಹೊಂದಿದ್ದು ಅಕ್ಟೋಬರ್ 2022 ರಲ್ಲಿ ಹೌಸ್ ಆಫ್ ಲಾರ್ಡ್ಸ್‌ನಲ್ಲಿ ಸಾಕ್ಷ್ಯ ನೀಡಿದ ಮೊದಲ ಮಾನವೀಯ ರೂಪಿ ರೋಬೋಟ್ ಎಂದು ಖ್ಯಾತಿ ಗಳಿಸಿದೆ. ನವೆಂಬರ್ 2022 ರಲ್ಲಿ ಆಕ್ಸ್‌ಫರ್ಡ್ ಯೂನಿಯನ್ ನ ಚರ್ಚೆಯಲ್ಲಿ ಮಾತನಾಡಿದ ಮೊದಲ ರೋಬೋಟ್ ಇದಾಗಿದೆ.


Click it and Unblock the Notifications