ಬೆಂಗಳೂರು, ಆಗಸ್ಟ್ 6: ದೇಶದ ಇ-ಕಾಮರ್ಸ್ ವಲಯದಲ್ಲಿ ವೇಗವಾಗಿ ಬೆಳೆಯುತ್ತಿರುವ ವಾಲ್‌ಮಾರ್ಟ್ ಸಮೂಹದ ಫ್ಲಿಪ್‌ಕಾರ್ಟ್ ಗ್ರಾಹಕರನ್ನು ಸೆಳೆಯಲು ಹೊಸ ಸೇವೆಯೊಂದಿಗೆ ಬಂದಿದ್ದು ಈ ಮೂಲಕ ತ್ವರಿತ ಡೆಲಿವರಿಯ ಕಮರ್ಷಿಯಲ್ ರೇಸ್‌ಗೆ ಪ್ರವೇಶಿಸಿದೆ .
ಫ್ಲಿಪ್‌ಕಾರ್ಟ್ ನ ತ್ವರಿತ ವಾಣಿಜ್ಯ ಸೇವೆಯಾನ್ನು "ಮಿನಿಟ್ಸ್" (Flipkart Minutes )ಎಂಬ ಹೆಸರಿನಲ್ಲಿ ಪ್ರಾರಂಭಿಸಿದ್ದು, ಸದ್ಯ ಇದು ಪ್ರಯೋಗಿಕವಾಗಿ ಆರಂಭವಾಗಿಲಿದ್ದು ಬೆಂಗಳೂರಿನ ಆಯ್ದ ಪ್ರದೇಶಗಳಲ್ಲಿನ ಬಳಕೆದಾರರಿಗೆ ಮಾತ್ರ ಇದರ ಪ್ರಯೋಜನ ಲಭಿಸಲಿದೆ. ಇದಲ್ಲದೇ ಮುಂದಿನ ಕೆಲವು ವಾರಗಳಲ್ಲಿ ಇದನ್ನು ಬೆಂಗಳೂರಿನ ಹೆಚ್ಚಿನ ಪ್ರದೇಶಗಳಿಗೆ ವಿಸ್ತರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಹೊಸ ಸೇವೆಯು ಗ್ರಾಹಕರು ದಿನಸಿಯಿಂದ ಹಿಡಿದು ಸ್ಮಾರ್ಟ್‌ಫೋನ್‌ಗಳವರೆಗೆ ವ್ಯಾಪಕ ಶ್ರೇಣಿಯ ವಸ್ತುಗಳನ್ನು ಆರ್ಡರ್ ಮಾಡಬಹುದಾಗಿದ್ದು, ಇದು ಕೇವಲ 10 ರಿಂದ 15 ನಿಮಿಷಗಳಲ್ಲಿ ಗ್ರಾಹಕರಿಗೆ ತಲುಪಿಸುವ ಸಾಮರ್ಥ್ಯವನ್ನು "ಮಿನಿಟ್ಸ್" ಸೇವೆ ಹೊಂದಿದೆ. ಫ್ಲಿಪ್‌ಕಾರ್ಟ್ ಗ್ರಾಹಕರಿಗೆ ರೂ 100 ಅಥವಾ $1.20 ಬೆಲೆಯ ಆರ್ಡರ್‌ಗಳ ಮೇಲೆ ಉಚಿತ ವಿತರಣೆ ನೀಡುತ್ತಿದೆ. ಬೆಳಂದೂರು ಮತ್ತು ಎಚ್‌ಎಸ್‌ಆರ್‌ನಂತಹ ಪ್ರದೇಶಗಳಲ್ಲಿ, ಫ್ಲಿಪ್‌ಕಾರ್ಟ್ ಮಿನಿಟ್ಸ್ ದಿನಸಿ, ಎಲೆಕ್ಟ್ರಾನಿಕ್ಸ್, ಸ್ಮಾರ್ಟ್‌ಫೋನ್‌ಗಳು ಮತ್ತು ಇತರ ಉತ್ಪನ್ನಗಳನ್ನು ಕೇವಲ 8-15 ನಿಮಿಷಗಳಲ್ಲಿ ತಲುಪಿಸುತ್ತಿದೆ.
ಇಂತಹ ಸೇವೆಗಳನ್ನು Swiggy ಒಡೆತನದ Instamart, ಝೊಮಾಟೊ ಒಡೆತನದ ಬ್ಲಿಂಕಿಟ್, Zepto ಮತ್ತು BigBasket ನ BB Now ಎಂಬ ಹೆಸರಿನಲ್ಲಿ ಹೊಂದಿದ್ದರೂ ಕ್ವಿಕ್ ಕಾಮರ್ಸ್ ನಲ್ಲಿ Flipkart ಕೂಡಾ ಔಪಚಾರಿಕ ಪ್ರವೇಶ ಪಡೆದಿದೆ. ಈ ಸೇವೆಯ ಕುರಿತು ಸದ್ಯದ ಮಟ್ಟಿಗೆ ಫ್ಲಿಪ್‌ಕಾರ್ಟ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಈ ವರ್ಷದ ಹಬ್ಬದ ಋತುವಿನಲ್ಲಿ ತನ್ನ ಕ್ವಿಕ್ ಕಾಮರ್ಸ್ ಕೊಡುಗೆಗಳನ್ನು ಬೂಸ್ಟ್ ಮಾಡಲು ಸುಮಾರು 100 ಡಾರ್ಕ್ ಸ್ಟೋರ್‌ಗಳನ್ನು ನಿರ್ವಹಿಸುವ ಯೋಜನೆಗಳನ್ನು ಪರಿಚಯಿಸಲಾಗುತ್ತಿದೆ ಎಂದು ಫ್ಲಿಪ್‌ಕಾರ್ಟ್ ಜುಲೈ 15 ರಂದು ಮೊದಲ ಬಾರಿಗೆ ತಿಳಿಸಿತ್ತು. ಡಾರ್ಕ್ ಸ್ಟೋರ್‌ಗಳು ಮಿನಿ ಗೋದಾಮುಗಳಾಗಿದ್ದು, ಅಲ್ಲಿಂದ ವೇಗದ ವಿತರಣೆಗಳನ್ನು ಮಾಡಲಾಗುತ್ತದೆ.
"ಮಾರುಕಟ್ಟೆ ಮತ್ತು ಗ್ರಾಹಕರ ಆದ್ಯತೆಗಳು ಬೆಳೆಯುತ್ತಿದ್ದು, ಹೀಗಾಗಿ ತ್ವರಿತಸೇವೆಯನ್ನು ಮೊದಲು ಕೆಲವು ಸ್ಥಳಗಳಲ್ಲಿ ಮಾತ್ರ ಪ್ರಯೋಗಿಸಿ ಬಳಿಕ ಅದನ್ನು ಅಳೆದು ತೂಗಿ ನೋಡುತ್ತೇವೆ" ಎಂದು ಫ್ಲಿಪ್‌ಕಾರ್ಟ್ ತನ್ನ ಯೋಜನೆಯನ್ನು ತಿಳಿಸಿತ್ತು
Blinkit ತನ್ನ ಡಾರ್ಕ್ ಸ್ಟೋರ್‌ಗಳ ಸಂಖ್ಯೆಯನ್ನು 2026 ರ ವೇಳೆಗೆ 2,000 ಕ್ಕೆ ವಿಸ್ತರಿಸಲು ಯೋಜಿಸಿದ್ದು,ಮಾರ್ಚ್ 2025 ರ ವೇಳೆಗೆ 1,000 ಡಾರ್ಕ್ ಸ್ಟೋರ್‌ಗಳನ್ನು ಹೊಂದುವ ತನ್ನ ಹಿಂದಿನ ಘೋಷಿತ ಯೋಜನೆಗಳನ್ನು ದ್ವಿಗುಣಗೊಳಿಸುತ್ತದೆ ಎಂದು ಕಳೆದ ವಾರ ಬ್ಲಿಂಕಿಟ್ ತಿಳಿಸಿತ್ತು. ಇನ್ನು Zepto ತನ್ನ ನೆಟ್‌ವರ್ಕ್ ಅನ್ನು ಮಾರ್ಚ್ 2025 ರ ವೇಳೆಗೆ 700 ಡಾರ್ಕ್ ಸ್ಟೋರ್‌ಗಳಿಗೆ ದ್ವಿಗುಣಗೊಳಿಸಲು ಯೋಜಿಸಿದೆ. Swiggy Instamart ಈಗಾಗಾಲೇ 500 ಕ್ಕೂ ಹೆಚ್ಚು ಗೋದಾಮುಗಳನ್ನು ಹೊಂದಿದೆ. ಆದರೆ ಬ್ಲಿಂಕಿಟ್ ಜೂನ್ 2024 ರ ಅಂತ್ಯದ ವೇಳೆಗೆ 639 ಡಾರ್ಕ್ ಸ್ಟೋರ್‌ಗಳನ್ನು ಹೊಂದಿತ್ತು.
ಫ್ಲಿಪ್‌ಕಾರ್ಟ್ ಪ್ರಸ್ತುತ ರೂ 99 ಕ್ಕಿಂತ ಹೆಚ್ಚಿನ ಎಲ್ಲಾ ಆರ್ಡರ್‌ಗಳಿಗೆ ಉಚಿತ ಡೆಲಿವರಿಯನ್ನು ನೀಡುತ್ತಿದೆ ಮತ್ತು ಪ್ಲಾಟ್‌ಫಾರ್ಮ್ ಶುಲ್ಕವಾಗಿ ರೂ 5 ಸಂಗ್ರಹಿಸುತ್ತಿದೆ. ಫ್ಲಿಪ್‌ಕಾರ್ಟ್ ಮಿನಿಟ್ಸ್ ಪ್ರಕಾರ, ಆರ್ಡರ್ ಗಳು ಗ್ರಾಹಕರ ನಿರೀಕ್ಷೆಗಳನ್ನು ಪೂರೈಸದಿದ್ದರೆ, ಗ್ರಾಹಕರು ತಮ್ಮ ಆರ್ಡರ್ ಕ್ಯಾನ್ಸಲ್ ಮಾಡಬಹುದು ಅಥವಾ ಮನೆ ಬಾಗಿಲಲ್ಲಿ ವಸ್ತುಗಳನ್ನು ಪಡೆದುಕೊಳ್ಳಲು ನಿರಾಕರಿಸಬಹುದಾಗಿದೆ. ಪ್ರಸ್ತುತ ಇದು ಯಾವುದೇ ಕಂಪನಿಯು ಒದಗಿಸದ ವೈಶಿಷ್ಟ್ಯವಾಗಿದೆ. ಈ ಕೊಡುಗೆಯು ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಆಯ್ದ ಬಳಕೆದಾರರಿಗೆ ಮಾತ್ರ ಗೋಚರಿಸುತ್ತದ್ದು, ಮೊದಲೇ ತಿಳಿಸಿರುವಂತೆ ಇದು ಪ್ರಯೋಗಿಕವಾದ ಕಾರಣ ಇನ್ನೂ ಬೆಂಗಳೂರಿನ ಎಲ್ಲಾ ಕಡೆಯೂ ಈ ಸೇವೆ ನೀಡಲಾಗುತ್ತಿಲ್ಲ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ



Click it and Unblock the Notifications