ಇನ್ನೇನು ಕೆಲವೇ ದಿನಗಳಲ್ಲಿ ಗಣರಾಜ್ಯೋತ್ಸವ ದಿನ ಬರಲಿದೆ. ಈ ಸಂದರ್ಭದಲ್ಲಿ ಅನೇಕ ಕಂಪನಿಗಳು ವಿಶೇಷ ಆಫರ್‌ಗಳನ್ನು ತನ್ನ ಗ್ರಾಹಕರಿಗಾಗಿ ನೀಡುತ್ತದೆ. ಅದೇ ರೀತಿ ಇದೀಗ ಅಮೆಜಾನ್ (Amazon Offer) ಮತ್ತು ಫ್ಲಿಪ್‌ಕಾರ್ಟ್ ರಿಪಬ್ಲಿಕ್ ಡೇ ಪ್ರಯುಕ್ತ ವಿಶೇಷ ಆಫರ್ ಸೇಲ್ ಆರಂಭಿಸಿದೆ. ಇದೀಗ ಫ್ಲಿಪ್‌ಕಾರ್ಟ್‌ನಿಂದ ರಿಪಬ್ಲಿಕ್ ಡೇ ಸೇಲ್ 2026 (Flipkart Republic Day Sale 2026) ನಾಳೆಯಿಂದ ಅಂದರೆ ಜನವರಿ 17 ರಿಂದ ಪ್ರಾರಂಭವಾಗಲಿದೆ ಎಂದು ವರದಿಯಾಗಿದೆ.

ಫ್ಲಿಪ್‌ಕಾರ್ಟ್ ಗಣರಾಜ್ಯೋತ್ಸವ ಮಾರಾಟ 2026 ಜನವರಿ 17 ರಂದು ಪ್ರಾರಂಭವಾಗಲಿದೆ ಎಂದು ದೃಢಪಡಿಸಿದೆ. ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಎಲೆಕ್ಟ್ರಾನಿಕ್ಸ್, ಗೃಹೋಪಯೋಗಿ ಉಪಕರಣಗಳು ಹಾಗೂ ಫ್ಯಾಷನ್ ಸೇರಿದಂತೆ ವಿವಿಧ ವಸ್ತುಗಳು ಭಾರೀ ಕಡಿಮೆ ಬೆಲೆಗೆ ಸಿಗಲಿದೆ.
ಮುಖ್ಯ ಮಾರಾಟಕ್ಕೂ ಮುನ್ನ, ಫ್ಲಿಪ್‌ಕಾರ್ಟ್ ಪ್ಲಸ್ ಮತ್ತು ಬ್ಲಾಕ್ ಸದಸ್ಯರಿಗೆ ಜನವರಿ 16 ರ ಮಧ್ಯರಾತ್ರಿಯಿಂದಲೇ ಈ ಆಫರ್ ಸೌಲಭ್ಯ ಸಿಗಲಿದೆ. ಅಂದರೆ ಸಾರ್ವಜನಿಕರಿಗೆ ತೆರೆಯುವ 24 ಗಂಟೆಗಳ ಮೊದಲೇ ಸೀಮಿತ ಸ್ಟಾಕ್ ಡೀಲ್‌ಗಳು, ವಿಶೇಷ ರಿಯಾಯಿತಿಗಳು ಮತ್ತು ಬ್ಯಾಂಕ್ ಕೊಡುಗೆಗಳನ್ನು ಫ್ಲಿಪ್‌ಕಾರ್ಡ್ ಪ್ಲಸ್ ಗ್ರಾಹಕರು ಪಡೆಯುತ್ತಾರೆ.
ಫ್ಲಿಪ್‌ಕಾರ್ಡ್ ಮೊದಲ ಆಫರ್ ಸೇಲ್!
2026 ರಲ್ಲಿ ಫ್ಲಿಪ್‌ಕಾರ್ಟ್‌ನಲ್ಲಿ ಇದೇ ಮೊದಲು ಆಫರ್ ಸೇಲ್ ಆರಂಭವಾಗುತ್ತಿದೆ. ಭಾರತದ 77ನೇ ಗಣರಾಜ್ಯೋತ್ಸವ ಸಮಾರಂಭದ ಸಂದರ್ಭದಲ್ಲಿ ಫ್ಲಿಪ್‌ಕಾರ್ಡ್ ಈ ಆಫರ್ ಸೇಲ್ ಘೋಷಣೆ ಮಾಡಿದೆ. ಸಾಮಾನ್ಯ ಖರೀದಿದಾರರಿಗೆ ಜನವರಿ 17 ರಿಂದ ಡೀಲ್‌ಗಳು ತೆರೆದಿರುತ್ತವೆ. ಆದರೆ ಪ್ಲಸ್ ಮತ್ತು ಬ್ಲಾಕ್ ಸದಸ್ಯರು ಅಧಿಕ ಬೇಡಿಕೆಯ ಉತ್ಪನ್ನಗಳ ಮೇಲೆ ಮೊದಲೇ ರಿಯಾಯಿತಿಗಳನ್ನು ಪಡೆಯುತ್ತಾರೆ.
ಗರಿಷ್ಠ ಉಳಿತಾಯಕ್ಕಾಗಿ, ಹಲವು ಬ್ಯಾಂಕ್ ಪಾಲುದಾರಿಕೆಗಳು ಸಿದ್ಧವಾಗಿವೆ. HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರು ಸ್ಮಾರ್ಟ್‌ಫೋನ್‌ಗಳು, ಎಲೆಕ್ಟ್ರಾನಿಕ್ಸ್ ಮತ್ತು ಉಪಕರಣಗಳ ಮೇಲೆ 10% ತ್ವರಿತ ರಿಯಾಯಿತಿ ಪಡೆಯಬಹುದು. ಬಜಾಜ್ ಫಿನ್‌ಸರ್ವ್ ಇನ್‌ಸ್ಟಾ EMI ಕಾರ್ಡ್‌ದಾರರಿಗೆ ₹400 ವರೆಗೆ ಹೆಚ್ಚುವರಿ ರಿಯಾಯಿತಿ ಲಭ್ಯವಿದೆ.
ಫ್ಲಿಪ್‌ಕಾರ್ಟ್ ಬಳಕೆದಾರರು ಆ್ಯಪ್ ಮೂಲಕ ಸೂಪರ್‌ಕಾಯಿನ್‌ಗಳನ್ನು ಗಳಿಸಿ ಹೆಚ್ಚುವರಿ ಉಳಿತಾಯ ಮಾಡುವ ಅವಕಾಶವೂ ಇದೆ.
ಐಫೋನ್ ಮೇಲೆ ಭಾರೀ ರಿಯಾಯಿತಿ
ಆರಂಭಿಕ ಡೀಲ್‌ಗಳ ಭಾಗವಾಗಿ, ಫ್ಲಿಪ್‌ಕಾರ್ಟ್ ಐಫೋನ್ 17 ಅನ್ನು ₹74,990 ರೂ.ನಲ್ಲಿ ಭಾರೀ ಕಡಿಮೆ ಬೆಲೆಯೊಂದಿಗೆ ನೀಡುತ್ತಿದೆ. ನೇರ ರಿಯಾಯಿತಿ, ವಿನಿಮಯ ಕೊಡುಗೆಗಳು ಮತ್ತು ಬ್ಯಾಂಕ್ ರಿಯಾಯಿತಿಗಳೊಂದಿಗೆ ಈ ದರ ನಿಗದಿಪಡಿಸಲಾಗಿದೆ. ಲ್ಯಾವೆಂಡರ್, ಮಿಸ್ಟ್ ಬ್ಲೂ, ಸೇಜ್ ಗ್ರೀನ್, ಬಿಳಿ, ಕಪ್ಪು ಬಣ್ಣಗಳಲ್ಲಿ ಈ ಫೋನ್ ಲಭ್ಯವಿದೆ.
ಇತರ Apple ಉತ್ಪನ್ನಗಳ ಮೇಲೂ ಈ ಬಾರಿ ಫ್ಲಿಪ್‌ಕಾರ್ಟ್‌ನಲ್ಲಿ ಭಾರೀ ಆಫರ್ ಲಭ್ಯವಿದೆ. ಅರ್ಹ ಕಾರ್ಡ್‌ದಾರರಿಗೆ ವಿನಿಮಯ ಕೊಡುಗೆಗಳು ಮತ್ತು ಯಾವುದೇ ಶುಲ್ಕವಿಲ್ಲದ EMI ಮೂಲಕ ಖರೀದಿಸುವ ಅವಕಾಶವಿದೆ. ಈ ಮೂಲಕ ಐಫೋನ್‌ನಂತಹ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳು ಭಾರೀ ಕಡಿಮೆ ಬೆಲೆಗೆ ಸಿಗುವಂತೆ ಮಾಡುತ್ತದೆ.
ಈ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ರಿಯಾಯಿತಿ
ಫ್ಲಿಪ್‌ಕಾರ್ಟ್ ಗಣರಾಜ್ಯೋತ್ಸವ ಮಾರಾಟ 2026 ರ ವೆಬ್‌ಸೈಟ್‌ನಲ್ಲಿ ಲ್ಯಾಪ್‌ಟಾಪ್‌ಗಳು ಮತ್ತು ಇತರ ಸ್ಮಾರ್ಟ್‌ಫೋನ್‌ಗಳ ಮೇಲಿನ ಗಮನಾರ್ಹ ರಿಯಾಯಿತಿಗಳನ್ನು ಸಹ ಬಹಿರಂಗಪಡಿಸಿದೆ. ಐಫೋನ್ 16 ಅನ್ನು ₹69,999 ರೂ. ರಿಂದ ₹56,999 ರೂ. ಕ್ಕೆ ಇಳಿಸಲಾಗಿದೆ. Motorola Edge 60 Fusion ₹22,999 ರೂ. ರಿಂದ ₹19,999 ರೂ.ಗೆ ಲಭ್ಯವಾಗಲಿದೆ.
ವಿವೋ ಮೊಬೈಲ್ ಖರೀದಿದಾರರು, Vivo T4x 5G ಅನ್ನು ₹15,499 ರೂ. ರಿಂದ ₹14,249 ರೂ.ಗೆ ಖರೀದಿಸಬಹುದು. ಇದಲ್ಲದೆ, Vivo T4 Lite 5G ಗೆ ₹9,999 ರೂ., Vivo T4 5G ಗೆ ₹20,499 ರೂ. ಮತ್ತು Vivo T4R 5G ಗೆ ₹18,999 ರೂ. ಖರೀದಿಸುವ ಅವಕಾಶವಿದೆ.


Click it and Unblock the Notifications