ಪ್ರತಿ ವರ್ಷದ ಬಜೆಟ್ ಮುಂಚಿತವಾಗಿ ನಡೆಯುವ ಪ್ರಕ್ರಿಯೆಯ ಭಾಗವಾಗಿ, 2021- 22ನೇ ಸಾಲಿನ ಬಜೆಟ್ ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರದಂದು (ಡಿಸೆಂಬರ್ 14, 2020) ವಿವಿಧ ವಲಯದ ಪ್ರಮುಖರ ಜತೆಯಲ್ಲಿ ಸಭೆ ಆರಂಭ ಮಾಡಲಿದ್ದಾರೆ. ಈ ವರ್ಚುವಲ್ ಸಭೆಗಳು ಸೋಮವಾರದಿಂದ ಶುರುವಾಗಲಿವೆ ಎಂದು ಹಣಕಾಸು ಸಚಿವಾಲಯವು ಮಾಹಿತಿ ನೀಡಿದೆ.
ಬಜೆಟ್ ಮುಂಚಿನ ಸೆಷನ್ ಗಳು ಬೆಳಗ್ಗೆ ಹಾಗೂ ಮಧ್ಯಾಹ್ನ ಪ್ರಮುಖ ಉದ್ಯಮಿಗಳ ಜತೆಗೆ ನಡೆಯಲಿವೆ. ಕೊರೊನಾ ಮಧ್ಯೆ, ಹೊಸದಾಗಿ ಇಮೇಲ್ ಸೃಷ್ಟಿಸಿ, ವಿವಿಧ ಸಂಸ್ಥೆಗಳು- ತಜ್ಞರಿಂದ ಮೂಲಕ ಸಲಹೆಗಳನ್ನು ಆಹ್ವಾನಿಸಲು ನಿರ್ಧಾರ ಮಾಡಿತ್ತು. ಆನ್ ಲೈನ್ ಕನ್ಸಲ್ಟೇಷನ್ ಹೆಚ್ಚು ಪ್ರಜಾಪ್ರಭುತ್ವ ರೀತಿಯಲ್ಲೂ ಹಾಗೂ ಸಂವಾದ ಸಾಧ್ಯವಾಗುವಂತೆಯೂ ಮಾಡುವ ಸಲುವಾಗಿ ಬಜೆಟ್ ಐಡಿಯಾಗಳಿಗಾಗಿಯೇ ಮೈಕ್ರೋಸೈಟ್ ಶುರು ಮಾಡಲಾಗಿತ್ತು.
ಈ ಪೋರ್ಟಲ್ ನವೆಂಬರ್ 15ರಿಂದ ನವೆಂಬರ್ 30ರ ತನಕ ಲಭ್ಯವಿತ್ತು. ಈಗ ಮಂಡಿಸಲಿರುವ ಬಜೆಟ್ ಮೋದಿ 2.0 ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪಾಲಿನ ಮೂರನೇ ಬಜೆಟ್ ಇದಾಗಿದೆ. ಈ ಪೈಕಿ ಒಂದು ಮಧ್ಯಂತರ ಬಜೆಟ್ ಕೂಡ ಸೇರಿದೆ.

ಈ ಮಧ್ಯೆ, ರಿಸರ್ವ್ ಬ್ಯಾಂಕ್ ಇಂಡಿಯಾ ಗವರ್ನರ್ ಶಕ್ತಿಕಾಂತ ದಾಸ್ ಕಳೆದ ವಾರ ಮಾತನಾಡಿ, ಈ ಬಾರಿಯ ಬಜೆಟ್ ಬೆಳವಣಿಗೆಗೆ ಪೂರಕ ಆಗಿರಲಿದೆ ಎಂದಿದ್ದಾರೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications