Bengaluru Weather: ಮೈಕೊರೆಯುವ ಚಳಿಯಲ್ಲಿ ಬೆಂದಕಾಳೂರು! ಏರ್‌ಪೋರ್ಟ್‌ನಿಂದ ಜನರಿಗೆ ಮಹತ್ವದ ಸೂಚನೆ

ದಿನವಿಡೀ ತಾಪಮಾನ ಏರಿಕೆಯಲ್ಲಿದ್ದ "ಬೆಂದಕಾಳೂರು", ಇದೀಗ ದಟ್ಟ ಮಂಜಿನಿಂದ ಆವೃತವಾಗಿದೆ. ಮೈಕೊರೆವ ಚಳಿಯಲ್ಲಿ ಬೆಂಗಳೂರಿನ (Bengaluru Weather) ಜನ ಸದ್ಯ ಜೀವನ ಸಾಗಿಸುತ್ತಿದ್ದಾರೆ. ದಿನೇ ದಿನೇ ತಾಪಮಾನದಲ್ಲಿ ಭಾರೀ ಇಳಿಕೆಯಾಗುತ್ತಿದ್ದು, ಹವಾಮಾನ ಇಲಾಖೆ ಕೂಡಾ ಮತ್ತಷ್ಟು ಇಳಿಕೆಯಾಗಲಿದೆ ಎಂದು ಸೂಚನೆ ನೀಡಿದೆ. ಇದೀಗ ಬೆಂಗಳೂರು ಏರ್‌ಪೋರ್ಟ್‌ ಪ್ರಯಾಣಿಕರಿಗೆ ಮತ್ತು ರಸ್ತೆ ಪ್ರಯಾಣಿಕರಿಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (KIA) ಮಹತ್ವದ ಎಚ್ಚರಿಕ ನೀಡಿದೆ.

ಮೈಕೊರೆಯುವ ಚಳಿಯಲ್ಲಿ ಬೆಂದಕಾಳೂರು! ಏರ್‌ಪೋರ್ಟ್‌ನಿಂದ ಜನರಿಗೆ ಸೂಚನೆ

ಹೌದು, ಬೆಂಗಳೂರು ನಗರದಲ್ಲಿ ದಟ್ಟ ಮಂಜು ಆವರಿಸಿದ್ದು, ದೂರದ ಪ್ರದೇಶಗಳು ಕಾಣುಸುತ್ತಲೇ ಇಲ್ಲ. ಇದೀಗ ಈ ಹಿನ್ನೆಲೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (KIA) ಮಂಗಳವಾರ (ಡಿಸೆಂಬರ್ 16) ಪ್ರಯಾಣಿಕರಿಗೆ ಪ್ರಕಟಣೆ ಹೊರಡಿಸಿದೆ. ವಿಮಾನಗಳ ವಿಳಂಬ ಮತ್ತು ರಸ್ತೆಗಳಲ್ಲಿ ಸಂಚಾರ ದಟ್ಟಣೆ ಕುರಿತು ಪ್ರಯಾಣಿಕರಿಗೆ ಎಚ್ಚರಿಕೆ ನೀಡಲಾಗಿದ್ದು, ಯಾವುದೇ ತೊಂದರೆಯಿಲ್ಲದೆ ಪ್ರಯಾಣಿಸಲು ಸಮಯಕ್ಕೆ ಮುಂಚಿತವಾಗಿ ನಿಲ್ದಾಣಕ್ಕೆ ತಲುಪುವಂತೆ ಮನವಿ ಮಾಡಿದೆ.

ಪ್ರಯಾಣಿಕರಿಗೆ ಸಲಹೆ
"ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂ ಪ್ರಕಟಣೆ ಹೊರಡಿಸಿದ್ದು, ಇದರಲ್ಲಿ ಮುಂದಿನ ಕೆಲವು ದಿನಗಳಲ್ಲಿ ಕಡಿಮೆ ಗೋಚರತೆಯ ಸಾಧ್ಯತೆ ಇರುವುದರಿಂದ, ವಿಮಾನಗಳು ವಿಳಂಬವಾಗಬಹುದು ಮತ್ತು ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಬಹುದು. ಸುಗಮ ಪ್ರಯಾಣಕ್ಕಾಗಿ, ಸಮಯಕ್ಕೂ ಮೊದಲೇ ಬನ್ನಿ" ಎಂದು ವಿಮಾನ ನಿಲ್ದಾಣವು X (ಹಿಂದಿನ ಟ್ವಿಟರ್‌) ನಲ್ಲಿ ಪೋಸ್ಟ್‌ ಮಾಡಿದೆ.

ಇದಲ್ಲದೆ, ಬೆಂಗಳೂರು ವಿಮಾನ ನಿಲ್ದಾಣವು, ಪ್ರಯಾಣಿಕರು ತಮ್ಮ ವಿಮಾನಯಾನ ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿರಲು ಮತ್ತು ಎಲ್ಲಾ ವಿಮಾನ-ಸಂಬಂಧಿತ ಮಾಹಿತಿಯನ್ನು ನಿರಂತರ ಪರಿಶೀಲಿಸುತ್ತಿರುವಂತೆ ಪ್ರಕಟಿಸಿದೆ. ಯಾವುದೇ ರೀತಿಯ ಸಹಾಯಕ್ಕಾಗಿ, ಈ ಕೆಳಗಿನ ತುರ್ತು ಸಂಪರ್ಕ ಸಂಖ್ಯೆಗಳನ್ನು ಬಳಸಿ ಎಂದು ತಿಳಿಸಿದೆ.

ಸಹಾಯಕ್ಕಾಗಿ ದೂರವಾಣಿ ಸಂಖ್ಯೆಗಳು: 080-66785555 ಮತ್ತು 080-47406666. ಈ ಸಂಖ್ಯೆಗಳಿಗೆ ಕರೆ ಮಾಡುವ ಮೂಲಕ ಅಗತ್ಯ ಮಾಹಿತಿ ಅಥವಾ ಸಹಾಯ ಪಡೆಯಬಹುದು ಎಂದು ವಿಮಾನ ನಿಲ್ದಾಣ ಸ್ಪಷ್ಟಪಡಿಸಿದೆ.

ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌, ಎಚ್ಚೆತ್ತ ವಿಮಾನ ನಿಲ್ದಾಣ!
ಈಗಾಗಲೇ ಮಂಜಿನಿಂದ ಆವೃತವಾದ ಬೆಂಗಳೂರಿನ ಕೆಲವು ಪ್ರದೇಶಗಳ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗುತ್ತಿದೆ. ಈ ವೈರಲ್‌ ಬೆನ್ನಲ್ಲೇ ಎಚ್ಚೆತ್ತ ವಿಮಾನ ನಿಲ್ದಾಣದ ಅಧಿಕಾರಿಗಳು ಈ ಪ್ರಕಟಣೆ ಹೊರಡಿಸಿದರು. ಅಲ್ಲದೇ ಸೋಮವಾರ ಕನಿಷ್ಠ ತಾಪಮಾನದಿಂದ ಉಂಟಾದ ಕಡಿಮೆ ಗೋಚರತೆಯಿಂದ 48 ವಿಮಾನಗಳು ವಿಳಂಬವಾಗಿದೆ ಎಂದು ದೃಢಪಡಿಸಿದರು. ಈ ವಾತಾವರಣದಿಂದ ಪ್ರಯಾಣಿಕರಿಗೆ ನೆರವು ನೀಡುವುದಾಗಿ ಮತ್ತು ಹವಾಮಾನ ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (BIAL) ವಕ್ತಾರರ ಪ್ರಕಾರ, ಬೆಳಗ್ಗೆ 4.14 ರಿಂದ 10.30 ರವರೆಗೆ ವಿಮಾನ ಕಾರ್ಯಾಚರಣೆಗೆ ಮಂಜು ಅಡ್ಡವಾಗುತ್ತಿದೆ. ವಿಳಂಬಗೊಂಡ 48 ವಿಮಾನಗಳಲ್ಲಿ, 46 ದೇಶೀಯ ವಿಮಾನಗಳಾಗಿದ್ದರೆ, ಎರಡು ಅಂತರಾಷ್ಟ್ರೀಯ ವಿಮಾನಗಳಾಗಿವೆ ಎಂದು ಹೇಳಲಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+