ಜಗತ್ತಿನ ಅತ್ಯಂತ ದುಬಾರಿ ಕಾರ್ ಖರೀದಿಸಿದ ಈ ಕ್ರೀಡಾ ತಾರೆ

ಪೋರ್ಚುಗಲ್‌ನ ರಾಷ್ಟ್ರೀಯ ಫುಟ್‌ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರಿಗೆ ಐಷಾರಾಮಿ ಕಾರುಗಳನ್ನು ಖರೀದಿಸುವುದು ಒಂದು ಹವ್ಯಾಸವಾಗಿದೆ. ಅವರ ಸಂಗ್ರಹದಲ್ಲಿ ಜಗತ್ತಿನ ದುಬಾರಿ ಬೆಲೆಯ ಕಾರ್‌ಗಳಿವೆ.

ಇದೀಗ ಅವರ ಸಂಗ್ರಹಕ್ಕೆ ಜಗತ್ತಿನ ಅತಿ ಹೆಚ್ಚು ದುಬಾರಿಯ ಕಾರ್ ಸೇರಿಕೊಂಡಿದೆ. ವಿಶ್ವದ ಅತ್ಯಂತ ದುಬಾರಿ ಕಾರ್ Bugatti La Voiture Noireನ್ನು ಕ್ರಿಸ್ಟಿಯಾನೊ ರೊನಾಲ್ಡೊ ಖರೀದಿಸಿದ್ದಾರೆ.

ಇತ್ತೀಚೆಗೆ ತನ್ನ ಕ್ಲಬ್, ಜುವೆಂಟಸ್ ಚಾಂಪಿಯನ್‌ಶಿಪ್ ಗೆಲ್ಲಲು ಸಹಾಯ ಮಾಡಿದ ರೊನಾಲ್ಡೊಗೆ ಉಡುಗೊರೆಯಾಗಿ Bugatti La Voiture Noire ಬಂದಿದೆ. ಕ್ರಿಸ್ಟಿಯಾನೊ ರೊನಾಲ್ಡೊ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಕಾರ್‌ನೊಂದಿಗೆ ಇರುವ ಫೋಟೊ ಹಂಚಿಕೊಂಡಿದ್ದಾರೆ.

ಬೆಲೆ 75 ಕೋಟಿ ರುಪಾಯಿ

ಬೆಲೆ 75 ಕೋಟಿ ರುಪಾಯಿ

Bugatti La Voiture Noire ವಿಶ್ವಾದ್ಯಂತ ಕೇವಲ 10 ಕಾರ್‌ಗಳು ಉತ್ಪಾದನೆಯಾಗಿವೆ. ಈ ಕಾರ್‌ನ ಅಂದಾಜು ಬೆಲೆ 75 ಕೋಟಿ ರುಪಾಯಿಯಾಗಿದೆ.

264 ಕೋಟಿಗಿಂತ ಹೆಚ್ಚು

264 ಕೋಟಿಗಿಂತ ಹೆಚ್ಚು

ವಿಶ್ವದ ಅತ್ಯಂತ ದುಬಾರಿ ಕಾರಿನ ಮಾಲೀಕರಾದ ರೊನಾಲ್ಡೊ ಗ್ಯಾರೇಜ್‌ನಲ್ಲಿರುವ ಕಾರುಗಳ ಒಟ್ಟು ಮೌಲ್ಯವು 30 ಮಿಲಿಯನ್ ಯುರೋಗಳಷ್ಟು (₹ 264 ಕೋಟಿಗಿಂತ ಹೆಚ್ಚು) ಎಂದು ಅಂದಾಜಿಸಲಾಗಿದೆ.

380 ಕಿ.ಮೀ ವೇಗದಲ್ಲಿ ಚಲಿಸಬಲ್ಲದು

380 ಕಿ.ಮೀ ವೇಗದಲ್ಲಿ ಚಲಿಸಬಲ್ಲದು

Bugatti La Voiture Noire ಕಾರು ಗಂಟೆಗೆ 380 ಕಿ.ಮೀ ವೇಗದಲ್ಲಿ ಚಲಿಸಬಲ್ಲದು, 2.4 ಸೆಕೆಂಡುಗಳಲ್ಲಿ 60 ಕಿ.ಮೀ ಮುಟ್ಟಬಲ್ಲದು. ಈ ಕಾರನ್ನು ಕ್ರಿಸ್ಟಿಯಾನೊ ರೊನಾಲ್ಡೊಗೆ 2021 ರೊಳಗೆ ತಲುಪಿಸುವ ಸಾಧ್ಯತೆಯಿದೆ.

ಬುಗಾಟ್ಟಿ ಇತ್ತೀಚಿನ ಸೇರ್ಪಡೆಯಾಗಿದೆ

ಬುಗಾಟ್ಟಿ ಇತ್ತೀಚಿನ ಸೇರ್ಪಡೆಯಾಗಿದೆ

ರೊನಾಲ್ಡೊ ವಿಶ್ವದ ಅತ್ಯಂತ ದುಬಾರಿ ಕಾರನ್ನು ಖರೀದಿಸುವುದರಲ್ಲಿ ಆಶ್ಚರ್ಯವೇನಿಲ್ಲ. ರೊನಾಲ್ಡೊ ಅವರ ದುಬಾರಿ ಕಾರುಗಳ ಸಂಗ್ರಹಕ್ಕೆ ಬುಗಾಟ್ಟಿ ಇತ್ತೀಚಿನ ಸೇರ್ಪಡೆಯಾಗಿದೆ. ಅವರು ಐಷಾರಾಮಿ ಕಾರುಗಳನ್ನು ಮೆಚ್ಚುತ್ತಾರೆ ಮತ್ತು ಅವರ ಗ್ಯಾರೇಜ್ನಲ್ಲಿ ಅನೇಕ ಸೂಪರ್ ಕಾರುಗಳನ್ನು ಹೊಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+