ವಿಶ್ವದ ಶ್ರೀಮಂತ ವ್ಯಕ್ತಿ/ ಉದ್ಯಮಿಗಳ ಪಟ್ಟಿ ಬುಧವಾರ ಫೆಬ್ರುವರಿ 01ರಂದು ಬಿಡುಗಡೆ ಆಗಿದೆ. ಈ ಪಟ್ಟಿ ಪ್ರಕಾರ, ಮುಖೇಶ್ ಅಂಬಾನಿಯವರು ವಿಶ್ವದ ಅತ್ಯಂತ ಶ್ರೀಮಂತ ಭಾರತೀಯ ವ್ಯಕ್ತಿಯಾಗಿದ್ದಾರೆ. ಒಟ್ಟು 10 ಶ್ರೀಮಂತರ ಮಾಹಿತಿ ಇಲ್ಲಿದೆ.
ನವದೆಹಲಿ, ಫೆಬ್ರುವರಿ 01: ವಿಶ್ವದ ಶ್ರೀಮಂತ ವ್ಯಕ್ತಿ/ ಉದ್ಯಮಿಗಳ ಪಟ್ಟಿ ಬುಧವಾರ ಫೆಬ್ರುವರಿ 01ರಂದು ಬಿಡುಗಡೆ ಆಗಿದೆ. ಈ ಪಟ್ಟಿ ಪ್ರಕಾರ, ಮುಖೇಶ್ ಅಂಬಾನಿಯವರು ವಿಶ್ವದ ಅತ್ಯಂತ ಶ್ರೀಮಂತ ಭಾರತೀಯ ವ್ಯಕ್ತಿಯಾಗಿದ್ದಾರೆ.
ಫೋರ್ಬ್ಸ್ ಬಿಡುಗಡೆ ಮಾಡಿದ 'ದಿ ರಿಯಲ್-ಟೈಮ್ ಬಿಲಿಯನೇರ್'ಗಳ ಪಟ್ಟಿ ಯ ಪ್ರಕಾರ, ಮುಖೇಶ್ ಅಂಬಾನಿಯವರು ಗೌತಮ್ ಅದಾನಿಯನ್ನು ಹಿಂದಿಕ್ಕಿ ವಿಶ್ವದ ಅತ್ಯಂತ ಶ್ರೀಮಂತ ಭಾರತೀಯರಾಗಿದ್ದಾರೆ ಎಂದು ತಿಳಿಸಿದೆ. ಒಟ್ಟು ಹತ್ತು ಮಂದಿ ಶ್ರೀಮಂತರ ಪಟ್ಟಿಯಲ್ಲಿ ಭಾರತೀಯರ ಪೈಕಿ ಅವರು ಮುಖೇಶ್ ಅಂಬಾನಿಯವರು ಅಗ್ರ ಸ್ಥಾನ ಪಡೆದುಕೊಂಡಿದ್ದಾರೆ. ಅವರ ನಂತರ ಗೌತಮ್ ಅದಾನಿಯವರು 9ನೇ ಸ್ಥಾನ ಪಡೆದಿದ್ದಾರೆ. ಶ್ರೀಮಂತ ಉದ್ಯಮಿಗಳ ವಿವರ ಮತ್ತವರ ಸ್ಥಾನದ ಸಂಪೂರ್ಣ ಮಾಹಿತಿ ಇಲ್ಲಿದೆ.

ಉದ್ಯಮಿಗಳಾದ ಗೌತಮ್ ಅದಾನಿ ವಾರ್ಷಿಕ ನಿವ್ವಳ ಆದಾಯ 83.9 ಬಿಲಿಯನ್ ಡಾಲರ್ ಇದ್ದು, ಈ ಮೂಲಕ 10ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಮುಖೇಶ್ ಅಂಬಾನಿ ನಿವ್ವಳ ಆದಾಯ 84.3 ಬಿಲಿಯನ್ ಡಾಲರ್ (09ನೇ ಶ್ರೀಮಂತ), ಲ್ಯಾರಿ ಪೇಜ್ ನಿವ್ವಳ ಆದಾಯ 85.8 ಬಿಲಿಯನ್ ಡಾಲರ್ (08ನೇ ಶ್ರೀಮಂತ), ಕಾರ್ಲೋಸ್ ಸ್ಲಿಮ್ ಹೆಲು ಆಂಡ್ ಫ್ಯಾಮಿಲಿ ಅವರ ನಿವ್ವಳ ಆದಾಯ 91.7ಬಿಲಿಯನ್ ಡಾಲರ್ (07ನೇ ಶ್ರೀಮಂತ).

ಬಿಲ್‌ಗೇಟ್ಸ್ ನಿವ್ವಳ ಆದಾಯ 104.5 ಬಿಲಿಯನ್ ಡಾಲರ್ (06ನೇ ಶ್ರೀಮಂತ), ವಾರೆನ್ ಬಫೆಟ್ಟ್ ನಿವ್ವಳ ಆದಾಯ 108.5 ಬಿಲಿಯನ್ ಡಾಲರ್ (05ನೇ ಶ್ರೀಮಂತ), ಲ್ಯಾರಿ ಎಲ್ಸೆನ್ ನಿವ್ವಳ ಆದಾಯ 111.9 ಬಿಲಿಯನ್ ಡಾಲರ್ (04ನೇ ಶ್ರೀಮಂತ), ಜೆಫ್ ಬಿಜೋಸ್ ನಿವ್ವಳ ಆದಾಯ 126.3 ಬಿಲಿಯನ್ ಡಾಲರ್ (03ನೇ ಶ್ರೀಮಂತ), ಎಲಾನ್ ಮಸ್ಕ್ ನಿವ್ವಳ ಆದಾಯ 178.3 ಬಿಲಿಯನ್ ಡಾಲರ್ (02ನೇ ಶ್ರೀಮಂತ) ಹಾಗೂ ಬರ್ನಾರ್ಡ್ ಅರ್ನಾಲ್ಟ್ ಮತ್ತು ಕುಟುಂಬ ನಿವ್ವಳ ಆದಾಯ 213.7ಬಿಲಿಯನ್ ಡಾಲರ್ (01ನೇ ಶ್ರೀಮಂತನೇ) ಮೂಲಕ ವಿಶ್ವದ ಮೊದಲ ಶ್ರೀಮಂತ ವ್ಯಕ್ತಿಯಾಗಿದ್ದಾರೆ ಎಂದು ಪಟ್ಟಿ ತಿಳಿಸಿದೆ.


Click it and Unblock the Notifications