ಭಾರತದಲ್ಲಿ ಆಪಲ್ ಐಫೋನ್ ತಯಾರಕಾ ಘಟಕ ಶುರುವಾಗುತ್ತೆ, ಇನ್ಮೇಲೆ ಐಫೋನ್‌ಗಳು ಭಾರತದಲ್ಲೇ ತಯಾರಾಗುತ್ತವೆ ಎಂಬ ಸುದ್ದಿ ದೇಶಾದ್ಯಂತ ಚರ್ಚೆ ಮಾಡಿತ್ತು. ಆದ್ರೀಗ ಚೀನಾ ಮತ್ತೊಂದೆ ತನ್ನ ಬುದ್ಧಿ ತೋರಿಸಿದೆ. ಭಾರತದಲ್ಲಿ ನಡೆಯಬೇಕಿದ್ದ ಐಫೋನ್ ತಯಾರಿಕೆಗೆ ಶುರುವಿನಲ್ಲೇ ಚೀನಾ ಕೊಕ್ಕೆ ಇಟ್ಟಿದೆ.

ಹೌದು, ಆಪಲ್‌ನ ಪ್ರಮುಖ ತಯಾರಕ ಫಾಕ್ಸ್‌ಕಾನ್...ಈಗ ಈ ಕಂಪನಿಯು ಭಾರತದಲ್ಲಿರುವ ಉತ್ಪಾದನಾ ಘಟಕಗಳಿಂದ, 300ಕ್ಕೂ ಹೆಚ್ಚು ಚೀನಿ ತಜ್ಞರು ಮತ್ತು ಇಂಜಿನಿಯರ್‍ಗಳನ್ನು ವಾಪಸ್ ಕರೆಸಿಕೊಂಡಿದೆ. ವಿಷಯ ಏನಂದ್ರೆ ಐಫೋನ್ 17 ಸೀರೀಸ್‌ನ ಉತ್ಪಾದನೆಗೆ ತಯಾರಿ ನಡೆಸುತ್ತಿರುವ ಸಂದರ್ಭದಲ್ಲೇ, ಈ ಬೆಳವಣಿಗೆ ನಡೆದಿದೆ. ಇದರಿಂದ ಭಾರತೀಯ ಘಟಕಗಳಲ್ಲಿ ಕಾರ್ಯಾಚರಣಾ ಸವಾಲುಗಳನ್ನು ಸೃಷ್ಟಿಸಿದೆ.
ಹಿಂದೆ ಕರೆಯಲಾದ ತಜ್ಞರ ಪೈಕಿ ಹೆಚ್ಚಿನವರು ತಾಂತ್ರಿಕ ಕೌಶಲ್ಯಗಳನ್ನು ಹೊಂದಿದ್ದು, ಈ ಹಿಂದೆ ಫಾಕ್ಸ್‌ಕಾನ್‌ನ ದಕ್ಷಿಣ ಭಾರತ ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇದರಿಂದಾಗಿ ತೈವಾನ್ ಮೂಲದ ಕೆಲವು ಬೆಂಬಲ ಸಿಬ್ಬಂದಿಯನ್ನು ಹೊರತುಪಡಿಸಿ ಹೆಚ್ಚಿನ ತಜ್ಞರಿಂದ ಭಾರತ ವಂಚಿತವಾಗಿದೆ. ನವೀಕರಿಸಿರುವ ಐಫೋನ್ ಅಸೆಂಬ್ಲಿ ಘಟಕದ ನಿರ್ಮಾಣದ ಹಂತದಲ್ಲಿಯೇ ಈ ಹಿಂತೆಗೆತ ಸಂಭವಿಸಿದೆ. ಇದರ ಪರಿಣಾಮವಾಗಿ ಅಸೆಂಬ್ಲಿ ಲೈನ್‍ಗಳ ಕಾರ್ಯಕ್ಷಮತೆ ಮತ್ತು ಉತ್ಪಾದನಾ ಪ್ರಮಾಣವರ್ಧನೆಗೆ ಇಕ್ಕಟ್ಟು ಉಂಟಾಗುವ ಸಾಧ್ಯತೆ ಇದೆ.
ಚೀನಾ ಸರ್ಕಾರ ತನ್ನ ತಂತ್ರಜ್ಞರನ್ನು ವಿದೇಶದ ಸ್ಪರ್ಧಾತ್ಮಕ ಉತ್ಪಾದನಾ ಕೇಂದ್ರಗಳಿಗೆ ವಲಸೆ ಹೋಗದಂತೆ ಮೌನವಾಗಿ ನಿಯಂತ್ರಿಸುತ್ತಿದೆ. ನಿರ್ವ್ಯಾಜವಾಗಿ ನಿಬಂಧನೆಗಳನ್ನು ಬಲಪಡಿಸುತ್ತಾ, ತಂತ್ರಜ್ಞಾನ ವರ್ಗಾವಣೆ, ಉಪಕರಣ ರಫ್ತು ಮತ್ತು ಪರಿಣತಿ ಹಂಚಿಕೆಗೆ ನಿರ್ಬಂಧ ವಿಧಿಸಲಾಗುತ್ತಿದೆ. ಭಾರತ ಮತ್ತು ವಿಯೆಟ್ನಾಂನಂತಹ ರಾಷ್ಟ್ರಗಳು ತಮ್ಮ ತಂತ್ರಜ್ಞಾನ ಆಧಾರಿತ ಪೂರೈಕೆ ಸರಪಳಿಗಳನ್ನು ಸ್ಥಾಪಿಸಲು ಬಯಸುತ್ತಿರುವ ಈ ಸಂದರ್ಭದಲ್ಲಿ, ಚೀನಾದ ಈ ನಿಲುವು ಅಡಚಣೆಯಾಗಿ ಪರಿಣಮಿಸಿದೆ.
ಆಪಲ್ ಸಿಇಒ ಟಿಮ್ ಕುಕ್ ಹಲವು ಬಾರಿ ಚೀನೀ ತಜ್ಞರ ಶ್ರೇಷ್ಠತೆಯನ್ನು ಹೊರಹಾಕಿದ್ದು, ಕೇವಲ ವೆಚ್ಚದ ದೃಷ್ಟಿಯಿಂದವಲ್ಲದೆ, ಗುಣಮಟ್ಟದ ಉತ್ಪಾದನೆಗೆ ಅಗತ್ಯವಾದ ಸೂಕ್ಷ್ಮತೆಯಲ್ಲಿ ಅವರು ಅನುಭವೀ ಎಂಬುದನ್ನು ವಿವರಿಸಿದ್ದಾರೆ. ಈ ನಿಟ್ಟಿನಲ್ಲಿ, ಚೀನೀ ತಜ್ಞರ ಹಿಂದಕ್ಕೆ ಕರೆಸಿಕೊಳ್ಳುವ ನಿರ್ಧಾರವು ಫಾಕ್ಸ್‌ಕಾನ್ ಭಾರತದಲ್ಲಿ ಇಳಿಸಿದ ತಂತ್ರಜ್ಞರನ್ನು ತೀವ್ರವಾಗಿ ಕೊರತೆಯಾಗುವ ಸ್ಥಿತಿಗೆ ಕರೆದೊಯ್ಯುತ್ತದೆ.
ನಾಲ್ಕು ವರ್ಷಗಳ ಹಿಂದೆ ಭಾರತದಲ್ಲಿ ಆರಂಭವಾದ ಐಫೋನ್ ಜೋಡಣಾ ಘಟಕಗಳು ಈಗ ಜಾಗತಿಕ ಉತ್ಪಾದನೆಯ ಐದನೇ ಒಂದು ಭಾಗವನ್ನು ಪೂರೈಸುತ್ತಿರುವ ಮಟ್ಟಿಗೆ ಬೆಳದಿವೆ. 2026 ರೊಳಗೆ ಹೆಚ್ಚುವರಿ ಯುಎಸ್ ಬೌಂಡ್ ಐಫೋನ್‌ಗಳನ್ನು ಭಾರತದಲ್ಲಿ ತಯಾರಿಸುವ ಆಪಲ್ ಗುರಿ ಹೊಂದಿದ್ದರೂ, ತಾಂತ್ರಿಕ ಶ್ರಮದ ಕೊರತೆಯಿಂದ ಇದು ವಿಳಂಬಕ್ಕೆ ಒಳಗಾಗುವ ಸಾಧ್ಯತೆ ಇದೆ.
ಯುಎಸ್ ಮತ್ತು ಚೀನಾ ನಡುವಿನ ವ್ಯಾಪಾರ ಉದ್ವಿಗ್ನತೆಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ, ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಉತ್ಪಾದನಾ ಆಧಾರಗಳನ್ನು ಭಾರತ ಮತ್ತು ದಕ್ಷಿಣ ಏಷ್ಯಾದ ದೇಶಗಳಿಗೆ ಸ್ಥಳಾಂತರಿಸುತ್ತಿವೆ. ಆದರೆ, ಈ ತಂತ್ರಜ್ಞರ ಪ್ರವೇಶಕ್ಕೆ ಚೀನಾ ಹಾಕುತ್ತಿರುವ ಅಡ್ಡಿ ಈ ವಿಸ್ತರಣಾ ಪ್ರಯತ್ನಗಳಿಗೆ ತೀವ್ರ ಸವಾಲುಗಳನ್ನು ಎತ್ತಿ ತೋರಿಸುತ್ತಿದೆ. ಇತ್ತೀಚಿನ ರಾಜತಾಂತ್ರಿಕ ಸಮಾಲೋಚನೆಗಳ ಹೊರತಾಗಿಯೂ ಚೀನಾ-ಭಾರತ ಸಂಬಂಧಗಳು ಗಂಭೀರ ಸ್ಥಿತಿಗೆ ತಲುಪಿವೆ.
ಈ ಬಿಕ್ಕಟ್ಟಿನಿಂದ ಭಾರತಕ್ಕೆ ಒಂದು ಸ್ಪಷ್ಟ ಸಂದೇಶ ದೊರೆಯುತ್ತದೆ: ತಂತ್ರಜ್ಞರಲ್ಲಿ ಆತ್ಮನಿರಭವ ಭಾರತವೊಂದೇ ದೀರ್ಘಾವಧಿ ಪರಿಹಾರ. ಭಾರತೀಯ ಯುವತಂತ್ರಜ್ಞರಿಗೆ ತರಬೇತಿ, ಸ್ಥಳೀಯ ತಂತ್ರಜ್ಞಾನ ಅಭಿವೃದ್ಧಿಗೆ ಉತ್ತೇಜನ ಮತ್ತು ಕಾರ್ಯಪ್ರವೃತ್ತಿ ಯೋಜನೆಗಳ ಮೂಲಕ ಮಾತ್ರ ಈ ರೀತಿಯ ತಾತ್ಕಾಲಿಕ ಗೊಂದಲಗಳಿಗೆ ದಿಟ್ಟ ಪ್ರತಿಕ್ರಿಯೆ ನೀಡುವುದು ಸಾಧ್ಯ.
ಆಪಲ್‌ನ ಭಾರತದಲ್ಲಿ ಉತ್ಪಾದನಾ ಹೂಡಿಕೆಯು ಅಂತಾರಾಷ್ಟ್ರೀಯ ರಾಜಕೀಯ ಮತ್ತು ತಾಂತ್ರಿಕ ಸಹಾಯದ ಮಧ್ಯೆ ಸಾಗುತ್ತಿರುವ ಸಂಕೀರ್ಣ ಸಮತೋಲನವಾಗಿದೆ. ಚೀನಾ ತನ್ನ ತಾಂತ್ರಿಕ ನುಡಿಮುಟ್ಟಿನಿಂದ ಹೊರಬಂದ ನಿಪುಣರನ್ನು ಹಿಂದಕ್ಕೆ ಕರೆಸಿಕೊಳ್ಳುತ್ತಿರುವುದು ಕೇವಲ ಆ ದೇಶದ ತಂತ್ರವಲ್ಲ, ಭವಿಷ್ಯದ ತಂತ್ರಜ್ಞಾನ ಆರ್ಥಿಕತೆಯಲ್ಲಿ ತನ್ನ ಪ್ರಭಾವವನ್ನು ಕಾಪಾಡಿಕೊಳ್ಳಲು ತೆಗೆದುಕೊಳ್ಳುತ್ತಿರುವ ತುರ್ತು ಕ್ರಮವಾಗಿದೆ.


Click it and Unblock the Notifications