ಸೈಬರ್‌ ವಂಚಕರಿಂದ ಉಚಿತ ಫೋನ್‌ ಉಡುಗೊರೆ! 2.8 ಕೋಟಿ ರೂ. ಕಳೆದುಕೊಂಡ ಬೆಂಗಳೂರಿನ ವ್ಯಕ್ತಿ!

ಬೆಂಗಳೂರಿನಲ್ಲಿ ಸೈಬರ್‌ ವಂಚನೆಗಳು ಮತ್ತಷ್ಟು ಹೆಚ್ಛಾಗ್ತಿವೆ. ಸರ್ಕಾರ ಪೊಲೀಸ್‌ ಅಧಿಕಾರಿಗಳು ಎಷ್ಟೇ ಎಚ್ಚರಿಕೆಗಳನ್ನ ನೀಡಿದ್ರು ಕೂಡ ಮತ್ತೆ ಸೈಬರ್‌ ವಂಚನೆಗೆ ಬಲಿಯಾಗುವವರ ಸಂಖ್ಯೆ ಹೆಚ್ಚಾಗ್ತಿದೆ. ಈಗಾಗಲೇ ಬೆಂಗಳೂರಿನಲ್ಲಿ ಸೈಬರ್‌ ವಂಚನೆಗೆ ಬಲಿಯಾಗಿ ಕೋಟಿಗಟ್ಟಲೆ ಹಣವನ್ನ ಕಳೆದುಕೊಂಡಿದ್ದಾರೆ. ಆದ್ರೂ ಕೂಡ ಸಾರ್ವಜನಿಕರು ಎಚ್ಚರಿಕೆಯನ್ನ ವಹಿಸದಿರುವುದು ವಿಷಾದ.

ಬೆಂಗಳೂರಿನಲ್ಲಿ ಹಿರಿಯ ನಾಗರಿಕರೊಬ್ಬರು ಸೈಬರ್‌ ವಂಚನೆಗೆ ಬಲಿಯಾಗಿದ್ದಾರೆ. ತಮ್ಮ ಕ್ರೆಡಿಟ್‌ ಕಾರ್ಡ್‌ಗಾಗಿ ಕಾಂಪ್ಲಿಮೆಂಟರಿ ಗಿಫ್ಟ್‌ ಎಂದು ಮೊಬೈಲ್‌ ಕಳುಹಿಸಿ, ನಂತರ ಅವರ ಖಾತೆಯಿಂದ 2.8 ಕೋಟಿ ರೂಪಾಯಿ ಹಣವನ್ನ ವಂಚಿಸಿದ್ದಾರೆ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಪೊಲೀಸ್‌ ವೇಷವನ್ನ ಧರಿಸಿ ವಾಟ್ಸಪ್‌ ಕರೆಗಳನ್ನ ಮಾಡುವ ಮೂಲಕ ಜನರ ಬಳಿ ಇರುವ ಕೋಟಿ ಕೋಟಿ ಹಣವನ್ನ ಸೈಬರ್‌ ವಂಚಕರು ದೋಚಿದ್ದಾರೆ.

ಸೈಬರ್‌ ವಂಚನೆ: 2.8 ಕೋಟಿ ರೂ. ಕಳೆದುಕೊಂಡ ಬೆಂಗಳೂರಿನ ವ್ಯಕ್ತಿ!

ಆದ್ರಿಗ ಅದೇ ರೀತಿ 60 ವರ್ಷದ ಹಿರಿಯ ನಾಗರಿಕರೊಬ್ಬರಿಗೆ ಸಿಟಿ ಬ್ಯಾಂಕ್‌ ಅಧಿಕಾರಿ ಎಮದು ಹೇಳಿಕೊಳ್ಳುವ ಅಪರಿಚಿತ ವ್ಯಕ್ತಿಯೋರ್ವ ಕರೆ ಮಾಡಿ, ನಿಮ್ಮ ಕ್ರೆಡಿಟ್‌ ಕಾರ್ಡ್‌ಅನ್ನು ಅನುಮೋದಿಸಲಾಗಿದೆ ಹೀಗಾಗಿ ಮುಂದಿನ ಪ್ರಕ್ರಿಯೆಗಾಗಿ ತಮ್ಮ ಪ್ರಸ್ತುತ ಫೋನ್‌ ಸಂಖ್ಯೆಯನ್ನ ಏರ್‌ಟೇಲ್‌ಗೆ ಬದಲಾಯಿಸಬೇಕು ಎಂದು ವಂಚಕರು ಹೇಳಿಕೊಂಡಿದ್ದಾರೆ. ಅದೇ ರೀತಿ ವಂಚನೆಗೆ ಬಲಿಯಾದ ವ್ಯಕ್ತಿ ಮಾಡಿದ್ದಾರೆ.

ನಂತರ ಅಂದರೆ ಡಿಸೆಂಬರ್‌ 1 ರಂದು ಅವರ ವಿಲಾಸಕ್ಕೆ 10,000 ರೂ. ಮೌಲ್ಯದ ರೆಡ್‌ಮಿ ಮೊಬೈಲ್‌ ಫೋನ್‌ ಅನ್ನು ಕಳುಹಿಸಿದ್ದಾರೆ. ಜೊತೆಗೆ ತಾವು ಕಳುಹಿಸಿರುವ ಮೊಬೈಲ್‌ ಸಿಮ್‌ ಬದಲಾಯಿಸುವಂತೆ ತಿಳಿಸಿದ್ದಾರೆ.

ಇದೇ ರೀತಿ ವಂಚನೆಗೊಳಗಾದ ವ್ಯಕ್ತಿ ತಮ್ಮ ಸಿಮ್‌ ಕಾರ್ಡ್‌ ಅನ್ನು ವಂಚಕರು ಮೊಬೈಲ್‌ ಕಳುಹಿಸಿದ ಅದೇ ದಿನ ಬದಲಾಯಿಸಿದ್ದಾರೆ. ನಂತರ ಅವರ ಬ್ಯಾಂಕ್‌ ಖಾತೆಯಲ್ಲಿದ್ದ 2.8 ಕೋಟಿ ಹಣ ಡೆಬಿಟ್‌ ಆಗಿರುವುದು ತಿಳಿದುಬಂದಿದೆ. ಇದಾದ ಮೇಲೆ ವಂಚಕರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

ಐಟಿ ಕಾಯ್ದೆಯ ಅಡಿಯಲ್ಲಿ ವೈಟ್‌ಫೀಲ್ಡ್‌ ಸಿಇಎನ್‌ ಪೊಳೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇನ್ನು ಪೊಲೀಸರು ಈ ಪ್ರಕರಣದ ತನಿಖೆಯನ್ನ ನಡೆಸುತ್ತಿದ್ದಾರೆ. ಮೇಲ್ನೋಟಕ್ಕೆ ವಂಚಕರು ಡೇಟಾ ಕದಿಯಲು ಮೊಬೈಲ್ ಫೋನ್ ಕ್ಲೋನ್ ಮಾಡಿರುವುದು ತಿಳಿದುಬಂದಿದೆ ಎಂದು ವೈಟ್ ಫೀಲ್ಡ್ ಉಪ ಪೊಲೀಸ್ ಆಯುಕ್ತ ಶಿವಕುಮಾರ್ ಗುಣಾರೆ ಹೇಳಿದ್ದಾರೆ.

ಸೈಬರ್‌ ವಂಚನೆ ಪ್ರಕರಣಗಳ ಬಗ್ಗೆ ತಿಳಿಯಿರಿ

ದೇಶದಾದ್ಯಂತ ಸೈಬರ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗಿದ್ದಾರೆ. ಅಲ್ಲದೆ ಇವರ ವಿರುದ್ಧ ಕ್ರಮವನ್ನ ತೆಗೆದುಕೊಳ್ಳಲು ಸರ್ಕಾರ ತನಿಖೆಯನ್ನ ಕೂಡ ನಡೆಸುತ್ತಿದೆ. ಇದರ ಜೊತೆಗೆ ಜನರಿಗೆ ವಂಚನೆಗೆ ಒಳಗಾಗದಂತೆ ಇರಲು ಮುನ್ನೆಚ್ಚರಿಕೆ ಕ್ರಮಗಳನ್ನ ಕೂಡ ನೀಡಿದೆ. ಈ ಎಲ್ಲಾ ಕ್ರಮಗಳ ಮಧ್ಯೆ ಸೈಬರ್‌ ವಂಚಕರು ಮತ್ತೆ ಬೇರೆ ವೇಶಗಳನ್ನ ಧರಿಸಿ ಜನರನ್ನ ಮೋಸ ಮಾಡಲು ಮುಂದಾಗಿದ್ದಾರೆ.

ಕರ್ನಾಟಕದಲ್ಲಿ ವರ್ಷದಿಂದ ವರ್ಷಕ್ಕೆ ಸೈಬರ್ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದ್ರು ಕೂಡಡ ಈ ಸೈಬರ್‌ ವಂಚನೆಗಳ ಸಂಖ್ಯೆ ಮಾತ್ರ ಇಳಿಕೆಯಾಗ್ತಿಲ್ಲ. ಕರ್ನಾಟಕದಲ್ಲಿ ಈವರೆಗೆ ಒಟ್ಟು 55,948 ಸೈಬರ್‌ ವಂಚನೆ ಪ್ರಕರಣಗಳು ದಾಖಲಾಗಿವೆ. ಆದರೆ, ಈ ಎಲ್ಲಾ ಪ್ರಕರಣಗಳಲ್ಲಿ 14.51%ಕೇಸ್‌ಗಳು ಮಾತ್ರ ಮಗಿದಿವೆ. ಹೊರತಾಗಿ ಇನ್ನುಳಿದ ಪ್ರಕರಣಗಳ ತನಿಖೆಯನ್ನ ನಡೆಸಿದ್ರು ಕೂಡಡ ವಂಚಕರ ಸುಳಿವು ಮಾತ್ರ ಸಿಕ್ಕಿಲ್ಲ. ಈ ಸೈಬರ್ ಅಪರಾಧಗಳನ್ನ ಪರಿಹರಿಸಲು, ಸರ್ಕಾರ ಎಲ್ಲಾ ಜಿಲ್ಲೆಗಳ ಸೈಬರ್ ಎಕನಾಮಿಕ್ಸ್ ಮತ್ತು ನಾರ್ಕೋಟಿಕ್ಸ್ (CEN) ಪೊಲೀಸ್ ಠಾಣೆಗಳನ್ನು ಸ್ಥಾಪಿಸಿದೆ ಮತ್ತು DGP (ಪೊಲೀಸ್ ಮಹಾನಿರ್ದೇಶಕ) ಹುದ್ದೆಯನ್ನು ಸೃಷ್ಟಿಸಿದೆ. ಇಷ್ಟೆಲ್ಲಾ ಕ್ರಮಗಳನ್ನ ತೆಗೆದುಕೊಂಡ್ರೂ ಕೂಡ ಬೆಂಗಳೂರಿನಲ್ಲಿ ಸೈಬರ್‌ ವಂಚನೆಗಳು ಸುಧಾರಿಸುತ್ತಿಲ್ಲ.

ರಾಷ್ಟ್ರ ಮಟ್ಟದಲ್ಲಿ ನಾವು ಈ ಪ್ರಕರಣಗಳನ್ನ ಗಮನಿಸುವುದಾದ್ರೆ, ಇಂತಹ ಸೈಬರ್‌ ವಂಚನೆ ಪ್ರಕರಣಗಳು ಪ್ರತಿದಿನ 7,000 ದಾಖಲಾಗುತ್ತವೆ. ಅಂದರೆ ಭಾರತ ಹೆಚ್ಚಿನ ಪ್ರಮಾಣದಲ್ಲಿ ಸೈಬರ್‌ ವಂಚನೆಯನ್ನ ಎದುರಿಸುತ್ತಿದೆ. ಇನ್ನು ಕರ್ನಾಟಕದ ಸೈಬರ್‌ ಪ್ರಕರಣಗಳು ಉತ್ತರ ರಾಜ್ಯಗಳೊಂದಿಗೆ ಲಿಂಕ್‌ ಆಗಿವೆ ಎನ್ನಲಾಗ್ತಿದೆ.

ಸೈಬರ್‌ ವಂಚನೆಗಳಿಂದ ಎಚ್ಚರಿಕೆ ವಹಿಸುವುದು ಹೇಗೆ?

ಸೈಬರ್ ಸ್ಕ್ಯಾಮ್‌ಗಳ ಕುರಿತು ಹೆಚ್ಚು ಎಚ್ಚರಿಕೆ ವಹಿಸುವುದು ಒಳ್ಳೆಯದು. ಇನ್ನು ಇಂತಹ ವಂಚನೆಗಳನ್ನ ತಪ್ಪಿಸಲು ವೈಯಕ್ತಿಕ ಮಾಹಿತಿ, ಹಣ ಅಥವಾ ಲಾಗಿನ್ ರುಜುವಾತುಗಳನ್ನು ಕೇಳುವ ಇಮೇಲ್‌ಗಳು, ಸಂದೇಶಗಳು ಅಥವಾ ಫೋನ್ ಕರೆಗಳು ಜೊತೆಗೆ ವಾಟ್ಸ್‌ಆಪ್‌ ಕರೆಗಳನ್ನ ಸ್ವೀಕರಿಸದಿರುವುದು ಉತ್ತಮ. ಯಾವುದೇ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡುವ ಮೊದಲು, URL ಅನ್ನು ಪರಿಶೀಲಿಸಿ. ಹಾಗೆ ಯಾವುದೇ ಅನಾಮಿಕ ಕರೆಗಳು ಬಂದರೆ ಸೈಬರ್‌ ಪೊಲೀಸರಿಗೆ ತಿಳಿಸುವುದು ಉತ್ತಮ. ಇಮೇಲ್ ಅಥವಾ ಪರಿಚಯವಿಲ್ಲದ ವೆಬ್‌ಸೈಟ್‌ಗಳ ಮೂಲಕ ಸೂಕ್ಷ್ಮ ಮಾಹಿತಿಯನ್ನು ಎಂದಿಗೂ ಹಂಚಿಕೊಳ್ಳಬೇಡಿ.

ಇನ್ನು ಬಹಳ ಮುಖ್ಯವಾಗಿ ಅನಿರೀಕ್ಷಿತ ಬಹುಮಾನಗಳು, ಉದ್ಯೋಗ ಕೊಡುಗೆಗಳು ಅಥವಾ ಹೂಡಿಕೆಗಳಂತಹ ಆಫರ್‌ಗಳ ಬಗ್ಗೆ ಎಚ್ಚರ ವಹಿಸಿ. ಸ್ಕ್ಯಾಮರ್‌ಗಳು ನಿಮ್ಮ ನಂಬಿಕೆ ಮತ್ತು ಅವಸರವನ್ನು ಬಳಸಿಕೊಳ್ಳಲು ಈ ತಂತ್ರಗಳನ್ನು ಹೆಚ್ಚಾಗಿ ಬಳಸುತ್ತಾರೆ. ಪ್ರಸ್ತಾಪವು ಅನುಮಾನಾಸ್ಪದ ಅಥವಾ ತುಂಬಾ ಆಕರ್ಷಕವಾಗಿ ತೋರುತ್ತಿದ್ದರೆ, ಅದನ್ನು ಸಂಪೂರ್ಣವಾಗಿ ಸಂಶೋಧಿಸಲು ಸಮಯ ತೆಗೆದುಕೊಳ್ಳಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+