ಮೂರು ದಿನಗಳ ಕಾಲ ಸಿಲಿಕಾನ್ ಸಿಟಿಯಲ್ಲಿ ನಡೆಯಲಿರುವ ಬೆಂಗಳೂರು ಟೆಕ್ ಸಮ್ಮಿಟ್‌ಗೆ (Bengaluru Tech Summit 2025) ಈಗಾಗಲೇ ಅಧಿಕೃತವಾಗಿ ಚಾಲನೆ ಸಿಕ್ಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸುವ ಮೂಲಕ 28ನೇ ಆವೃತ್ತಿಯ ಬೆಂಗಳೂರು ಟೆಕ್ ಸಮ್ಮಿಟ್ (BTS) ಆರಂಭವಾಗಿದೆ. ನವೆಂಬರ್ 18 ರಿಂದ 20 ರವರೆಗೆ ಮೂರು ದಿನಗ ಕಾಲ ನಡೆಯಲಿರುವ ಈ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಗೆ 50ಕ್ಕೂ ಹೆಚ್ಚು ದೇಶಗಳ ಟೆಕ್ ದಿಗ್ಗಜರು, ನಾಯರು, ವಿವಿಧ ಕ್ಷೇತ್ರಗಳ ಉದ್ಯಮಿಗಳು ಭಾಗವಹಿಸಲಿದ್ದಾರೆ. ಈ ಮಧ್ಯೆ ಟೆಕ್ ಸಮ್ಮಿಟ್ ಪ್ರತಿನಿಧಿಗಳಿಗೆ ನಮ್ಮ ಮೆಟ್ರೋ (Metro) ಗುಡ್ ನ್ಯೂಸ್ ನೀಡಿದೆ.

ಹೌದು, ಬೆಂಗಳೂರು ಟೆಕ್ ಸಮ್ಮಿಟ್ ಹಿನ್ನೆಲೆ BMRCL ಗುಡ್ ನ್ಯೂಸ್ ಕೊಟ್ಟಿದೆ. ಈ ಶೃಂಗಸಭೆಗೆ ಆಗಮಿಸಿಸುವ ಮತ್ತು ಪ್ರತಿನಿಧಿಗಳಿಗೆ ಮೆಟ್ರೋದಲ್ಲಿ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸಲಾಗಿದೆ. ಕರ್ನಾಟಕ ಸರ್ಕಾರ ಮತ್ತು ಮೊಬಿಲಿಟಿ ಸ್ಟಾರ್ಟಪ್ Tummoc ಜೊತೆಗೂಡಿ ಈ ನಿರ್ಧಾರ ಕೈಗೊಂಡಿದೆ.
ಮೆಟ್ರೋ ಪ್ರಯಾಣ ಉಚಿತ!
ಬೆಂಗಳೂರು ಟೆಕ್ ಶೃಂಗಸಭೆ (BTS) 2025ರ ಪ್ರತಿನಿಧಿಗಳು ಈ ಬಾರಿ ಮೆಟ್ರೋದಲ್ಲಿ ಉಚಿತ ಪ್ರಯಾಣ ಮಾಡಬಹುದು. ಕರ್ನಾಟಕ ಸರ್ಕಾರ ಮತ್ತು ಮೊಬಿಲಿಟಿ ಸ್ಟಾರ್ಟಪ್ Tommoc ಸಹಭಾಗಿತ್ವದಲ್ಲಿ ಈ ಸೌಲಭ್ಯ ನೀಡಲಾಗುತ್ತಿದೆ. ಆದ್ದರಿಂದ ನವೆಂಬರ್ 18 ರಿಂದ ಪ್ರಾರಂಭವಾಗುವ ಈ ಶೃಂಗಸಭೆ ಮೂರು ದಿನ ಇರಲಿದ್ದು, ಆ ದಿನಗಳಲ್ಲಿ ಪ್ರತಿನಿಧಿಗಳು ಮಾತ್ರ ಮೆಟ್ರೋದಲ್ಲಿ ಉಚಿತ ಸಂಚಾರ ಮಾಡಬಹುದು.
ಟುಮ್ಮೋಕ್ ಸಂಸ್ಥೆಯು ಕರ್ನಾಟಕದ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ. ನವೆಂಬರ್ 18 ರಿಂದ 20 ರವರೆಗೆ ನಡೆಯಲಿರುವ ಈ ಶೃಂಗಸಭೆಗೆ ಸುಗಮ ಸಂಚಾರ ಒದಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
"ಬಿಟಿಎಸ್ ಪ್ರತಿನಿಧಿಗಳಿಗೆ ಉಚಿತ ಮೆಟ್ರೋ ಪಾಸ್ ಲಭ್ಯವಿರುತ್ತದೆ. ಈ ಸೌಲಭ್ಯವನ್ನು Tummoc App ಮೂಲಕ ಪಡೆಯಬಹುದು. ಹೆಚ್ಚುವರಿ ಬೇಡಿಕೆಯನ್ನು ಪೂರೈಸುವ ಉದ್ದೇಶದಿಂದ, ಬೆಂಗಳೂರು ಮೆಟ್ರೋ ಹೆಚ್ಚುವರಿ ಸೇವೆಗಳನ್ನು ನಿರ್ವಹಿಸಲು ಸಹ ಈ ವೇಳೆ ಒಪ್ಪಿಕೊಂಡಿದೆ" ಎಂದು ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಮಂಜುಳಾ ಎನ್. ತಿಳಿಸಿದ್ದಾರೆ. ಈ ಬಾರಿ ಬೆಂಗಳೂರು ಅಂತರಾಷ್ಟ್ರೀಯ ಪ್ರದರ್ಶನ್ ಕೇಂದ್ರದಲ್ಲಿ (BIEC) ಬೆಂಗಳೂರು ಟೆಕ್ ಸಮ್ಮಿಟ್ ನಡೆಯುತ್ತಿರುವುದು ಇದೇ ಮೊದಲು ಎಂದು ಹೇಳಿದರು.
ಯಾರಿಗೆ ಸಿಗಲಿದೆ ಉಚಿತ ಪ್ರಯಾಣ?
ನವೆಂಬರ್ 18 ರಿಂದ ನವೆಂಬರ್ 20ರವರೆಗೆ ಬಿಟಿಎಸ್ ನಡೆಯಲಿದ್ದು, ಈ ಸಮ್ಮಿಟ್‌ಗೆ ನೋಂದಾಯಿಸಿದ ಪ್ರತಿನಿಧಿಗಳು ಮಾತ್ರ ಈ ಸೌಲಭ್ಯ ಪಡೆಯಬಹುದು ಎಂದು Tummoc ವಕ್ತಾರರು ಮಾಧ್ಯಮಕ್ಕೆ ತಿಳಿಸಿದ್ದಾರೆ. "ಬಿಟಿಎಸ್‌ನಲ್ಲಿ ನೋಂದಾಯಿಸಿಕೊಂಡವರಿಗೆ, ಪ್ರತಿದಿನ ಎರಡು ಉಚಿತ ಮೆಟ್ರೋ ಟಿಕೆಟ್‌ಗಳು (ರೌಂಡ್ ಟ್ರಿಪ್) ಮಾದಾವರ ಮೆಟ್ರೋ ನಿಲ್ದಾಣಕ್ಕೆ ಸಿಲಿದೆ. ಅವರು ಕೆಲವೇ ಟ್ಯಾಪ್‌ಗಳಲ್ಲಿ ಅಗತ್ಯ ಮೆಟ್ರೋ ಟಿಕೆಟ್‌ಗಳನ್ನು ಬುಕ್ ಮಾಡಬಹುದು" ಎಂದು ವಕ್ತಾರರು ತಿಳಿಸಿದ್ದಾರೆ.
ಹೇಗೆ ಟಿಕೆಟ್ ಪಡೆಯುವುದು?
ಬೆಂಗಳೂರು ಟೆಕ್ ಸಮ್ಮಿಟ್‌ಗೆ ನೋಂದಣಿ ಮಾಡಿಕೊಂಡರೆ ಮತ್ತು Tummoc ಅಪ್ಲಿಕೇಶನ್ ನಡುವಿನ ಸಹಭಾಗತ್ವದಲ್ಲಿ, ನೋಂದಾಯಿತ ಪ್ರತಿನಿಧಿಗಳು ತಮ್ಮ ದಾಖಲೆಗಳನ್ನು ಪರಿಶೀಲಿಸಿ, ಕಾರ್ಯಕ್ರಮದ ಸ್ಥಳವಾದ ಮಾದಾವರ (BIEC) ಗೆ ಮತ್ತು ಅಲ್ಲಿಂದ ಕ್ಯೂಆರ್ ಆಧಾರಿತ ಮೆಟ್ರೋ ಟಿಕೆಟ್‌ಗಳನ್ನು ಪಡೆಯಬಹುದು ಎಂದು ಟುಮ್ಮೋಕ್ ಹೇಳಿಕೆ ತಿಳಿಸಿದೆ. "ಕರ್ನಾಟಕ ಸರ್ಕಾರ ಬೆಂಬಲಿತ ಈ ಉಪಕ್ರಮವು ಸಾರ್ವಜನಿಕ ಸಾರಿಗೆ ಬಳಕೆಗೆ ಹೆಚ್ಚು ಉತ್ತೇಜನ ನೀಡಲಿದೆ ಎಂದು ಹೇಳಲಾಗಿದೆ.
ಅಷ್ಟೇ ಅಲ್ಲದೇ ಬಿಟಿಎಸ್ ಪ್ರತಿನಿಧಿಗಳು ಮೆಟ್ರೋ ನಿಲ್ದಾಣಗಳಿಂದ ಕ್ಯಾಬ್, ಆಟೋ, ಬೈಕ್-ಟ್ಯಾಕ್ಸಿ ಮತ್ತು ಕಾರ್‌ಪೂಲಿಂಗ್ ಸೇರಿದಂತೆ ಯಾವುದೇ ಸೇವೆಯನ್ನು ಸಹ Tummoc ಮೂಲಕ ಬುಕ್ ಮಾಡಬಹುದು.
ಈ ಬಾರಿಯ ಬಿಟಿಎಸ್‌ನ 28ನೇ ಆವೃತ್ತಿಯು 'ಫ್ಯೂಚರೈಸ್" ಎಂಬ ವಿಷಯದ ಅಡಿಯಲ್ಲಿ ಹತ್ತು ಕಾನ್ಫರೆನ್ಸ್ ಟ್ರ್ಯಾಕ್‌ಗಳನ್ನು ಒಳಗೊಂಡಿದೆ. ಇದರಲ್ಲಿ 100 ಕ್ಕೂ ಹೆಚ್ಚು ಸೆಷನ್‌ಗಳು, 500 ಜಾಗತಿಕ ಸ್ಪೀಕರ್‌ಗಳು, 1,000 ಕ್ಕೂ ಹೆಚ್ಚು ಪ್ರದರ್ಶಕರು, 15,000 ಅಟೆಂಡೆಂಟ್‌ಗಳು ಮತ್ತು 60 ಕ್ಕೂ ಹೆಚ್ಚು ದೇಶಗಳಿಂದ 50,000 ವ್ಯಾಪಾರ ಉದ್ಯಮಿಗಳು ಭಾಗವಹಿಸಲಿದ್ದಾರೆ ಎನ್ನಲಾಗದೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ



Click it and Unblock the Notifications