ನವದೆಹಲಿ, ಆಗಸ್ಟ್ 3: ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ನಲ್ಲಿ ಈ ಬಾರಿ ಭಾರತ ಶೂಟಿಂಗ್‌ನಲ್ಲಿ ಪದಕ ಗೆಲ್ಲುವ ಮೂಲಕ ಈಗಾಗಲೇ ಶುಭಾರಂಭ ಮಾಡಿದೆ. ಈ ನಡುವೆ ಬ್ಯಾಡ್ಮಿಂಟನ್‌ನಲ್ಲಿ ಇದೀಗ ಯುವ ಪ್ರತಿಭೆ ಲಕ್ಷ್ಯ ಸೇನ್ ಅವರು ಕೂಡ ಸೆಮಿ-ಫೈನಲ್‌ಗೆ ಎಂಟ್ರಿ ನೀಡುವ ಮೂಲಕ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ. ಹೀಗಿರುವಾಗ, ಇನ್ನು ಕೂಡ ಹಲವು ನಮ್ಮ ದೇಶದ ಕ್ರೀಡಾ ಪ್ರತಿಭೆಗಳು ಮೆಡಲ್ ಗೆಲ್ಲುವ ವಿಶ್ವಾಸ ಹಾಗೂ ನಿರೀಕ್ಷೆ ಭಾರತೀಯ ಕ್ರೀಡಾಭಿಮಾನಿಗಳಲ್ಲಿ ಇದೆ.
ಈ ಹಿಂದೆಯೆಲ್ಲ ಸಾಕಷ್ಟು ವಿಶ್ವದರ್ಜೆ ಟೂರ್ನಿಯಲ್ಲಿ ಚಿನ್ನದ ಪದಕ ಗೆಲ್ಲು ಭಾರತದ ಧ್ವಜವನ್ನು ಎತ್ತಿ ಹಿಡಿದವರು ನೀರಜ್ ಚೋಪ್ರಾ. ಹೀಗಿರುವಾಗ, ಈ ಬಾರಿಯ ಪ್ಯಾರಿಸ್ ಒಲಿಪಿಂಕ್ಸ್ ಕ್ರೀಡಾಕೂಟದಲ್ಲಿಯೂ ನೀರಜ್ ಚೋಪ್ರಾ ಅವರು ಗೋಲ್ಡ್ ಗೆಲ್ಲುತ್ತಾರೆ ಎನ್ನುವ ದೃಢ ನಂಬಿಕೆ ಹಲವು ಕ್ರೀಡಾಸಕ್ತರಲ್ಲಿ ಇದೆ. ಆದರೆ, ಅಟ್ಲಿಸ್ ಸಿಇಒ ಮೋಹಕ್ ನಹ್ತಾ ಅವರು ಈ ಬಾರಿ ಬಹಳ ಅಚ್ಚರಿಯ ಹಾಗೂ ಬಂಪರ್ ಎನ್ನಬಹುದಾದ ಘೋಷಣೆಯೊಂದನ್ನು ಮಾಡಿದ್ದಾರೆ. ಅದೇನೆಂದರೆ ನೀರಜ್ ಚೋಪ್ರಾ ಅವರು ಈ ಬಾರಿಯ ಒಲಿಪಿಂಕ್ಸ್‌ನಲ್ಲಿ ಚಿನ್ನ ಗೆದ್ದರೆ ಅವರು ತಮ್ಮ ಎಲ್ಲ ಯೂಸರ್‌ಗಳಿಗೂ ಒಂದು ದಿನದ ಉಚಿತ ವೀಸಾ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ಈ ಕುರಿತು ಲಿಂಕ್ಡ್-ಇನ್‌ನಲ್ಲಿ ಪೋಸ್ಟ್ ಮಾಡಿರುವ ಅಟ್ಲಿಸ್ ಸಿಇಒ ಮೋಹಕ್ ನಹ್ತಾ ಅವರು ನೀರಜ್ ಚೋಪ್ರಾ ಅವರು ಒಲಿಪಿಂಕ್ಸ್‌ನಲ್ಲಿನ ಚಿನ್ನ ಗೆದ್ದರೆ ನಾನು ಎಲ್ಲರಿಗೂ ವೈಯಕ್ತಿಕವಾಗಿ ಉಚಿತವಾಗಿ ವೀಸಾ ನೀಡುತ್ತೇನೆ. ಭಾರತ ಗೆಲ್ಲುವಂತಾಗಲಿ ಎಂದು ಮೊದಲು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿದ್ದಂತೆ ಅವರು ಮತ್ತೊಂದು ಪೋಸ್ಟ್ ಹಾಕಿದ್ದಾರೆ.
ಅದರಲ್ಲಿ ಅಟ್ಲಿಸ್ ಸಿಇಒ ಮೋಹಕ್ ನಹ್ತಾ ಅವರು "ಜು.30ರಂದು ನೀರಜ್ ಚೋಪ್ರಾ ಅವರು ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದರೆ ಉಚಿತ ವೀಸಾ ನೀಡುವುದಾಗಿ ಘೋಷಣೆ ಮಾಡಿದ್ದೆ. ಆದರೆ, ಆ ಬಳಿಕ ಹಲವರು ಈ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ನೀರಜ್ ಚೋಪ್ರಾ ಅವರು ಆ.8ರಂದು ಪದಕಕ್ಕಾಗಿ ಸೆಣಸಾಟ ನಡೆಸಲಿದ್ದಾರೆ. ಒಂದುವೇಳೆ ಈ ಸ್ಪರ್ಧೆಯಲ್ಲಿ ಚೋಪ್ರಾ ಅವರು ಚಿನ್ನ ಗೆದ್ದು ಭಾರತದ ಕೀರ್ತಿ ಪತಾಕೆ ಹಾರಿಸುವುದಾದರೆ ನಾನು ನಮ್ಮ ಎಲ್ಲ ಬಳಕೆದಾರರಿಗೆ ಒಂದು ದಿನದ ಉಚಿತ ವೀಸಾವನ್ನು ನೀಡುವುದಾಗಿ" ಹೇಳಿದ್ದಾರೆ.
ಈ ಬಗ್ಗೆ ಮತ್ತೆ ಸ್ಪಷ್ಟನೆ ನೀಡಿರುವ ಅಟ್ಲಿಸ್ ಸಿಇಒ ಮೋಹಕ್ ನಹ್ತಾಅವರು, ಈ ವೀಸಾವು ಉಚಿತವಾಗಿದ್ದು ಅದು ಎಲ್ಲ ದೇಶಗಳಿಗೂ ಮಾನ್ಯತೆಯನ್ನು ಒದಗಿಸುತ್ತದೆ. ಹಾಗಾದರೆ, ಈ ಕೊಡುಗೆಯನ್ನು ಪಡೆಯಬೇಕಾದರೆ ಜನರು ಏನು ಮಾಡಬೇಕು ಎನ್ನುವುದನ್ನು ಕೂಡ ಹೇಳಿದ್ದಾರೆ.
ಅಂದರೆ, ಈ ಉಚಿತ ವೀಸಾವನ್ನು ಪಡೆಯುವುದಕ್ಕೆ ಆಸಕ್ತಿ ಹೊಂದಿರುವವರು ತಮ್ಮ ಇ-ಮೇಲ್ ವಿಳಾಸವನ್ನು ಲಿಂಕ್ಡ್-ಇನ್ ಈ ಮೆಸೇಜ್ ಬಾಕ್ಸ್‌ನಲ್ಲಿ ಹಾಕಬೇಕು. ನಿಮಗೆ ನಮ್ಮ ಕಡೆಯಿಂದ ಒಂದು ಉಚಿತ ವೀಸಾ ಪಡೆಯುವ ಖಾತೆಯನ್ನು ಮಂಜೂರು ಮಾಡಿಸಲಾಗುವುದು ಎಂದಿದ್ದಾರೆ. ಅಟ್ಲಿಸ್ ಸಿಇಒ ಮೋಹಕ್ ನಹ್ತಾ ಅವರು ಈ ಸಂದೇಶಕ್ಕೆ 1100ಕ್ಕೂ ಹೆಚ್ಚು ಮಂದಿ ಪ್ರತಿಕ್ರಿಯಿಸಿದ್ದಾರೆ. ಅಷ್ಟೇ ಅಲ್ಲ ಈ ಮೋಹಕ್ ಅವರ ಈ ಪೋಸ್ಟ್‌ಗೆ ಬಳಕೆದಾರರು ಕೂಡ ವಿಭಿನ್ನ ರೀತಿ ಕಾಮೆಂಟ್ಸ್ ಮಾಡುತ್ತಿದ್ದಾರೆ.
"ವಾಹ್ಹ್, ಬಹಳ ಆಕರ್ಷಕವಾಗಿದೆ! ಭಾರತ ಜಯಶಾಲಿಯಾಗಲಿ, ಕೇವಲ ಒಂದು ಚಿನ್ನದಿಂದ ತೃಪ್ತಿ ಪಡುವುದು ಬೇಡ "ಎಂದು ಲಿಂಕ್ಡ್‌ಇನ್ ಬಳಕೆದಾರರು ಬರೆದಿದ್ದಾರೆ. "ನಿಮ್ಮ ಕಡೆಯಿಂದ ಸುಂದರವಾದ ಗೆಸ್ಚರ್ ಇದು. ಚೆನ್ನಾಗಿದೆ. ನೀವು ಇಲ್ಲಿ ಇ-ಮೇಲ್ ವಿಳಾಸ ಹಾಕಿ ಕಾಮೆಂಟ್ ಮಾಡಿ ಅನ್ನುವುದಕ್ಕಿಂತ ಒಂದು ಗೂಗಲ್ ಫಾರಂನ್ನು ಕ್ರಿಯೇಟ್ ಮಾಡಿ ಇ-ಮೇಲ್ ವಿಳಾಸ ನಮೂದಿಸುವುದಕ್ಕೆ ಅವಕಾಶ ಮಾಡಿಕೊಡುವುದು ಉತ್ತಮ ಎಂಬುದಾಗಿ ಇನ್ನೊಬ್ಬರು ಬಳಕೆದಾರರು ಸಲಹೆ ಮಾಡಿದ್ದಾರೆ.
"ಬಹಳ ಉತ್ತಮವಾದ ಉಪಕ್ರಮ ಇದಾಗಿದೆ ಮೋಹಕ್. ಇಂಥಹ ನಿರ್ಧಾರಗಳು ನೀರಜ್ ಚೋಪ್ರಾ ಹಾಗೂ ಅವರ ಅಭಿಮಾನಿಗಳಿಗೆ ಪ್ರೋತ್ಸಾಹ ಹಾಗೂ ಉತ್ತೇಜನವನ್ನು ನೀಡುತ್ತದೆ. ಆ ಮೂಲಕ ಭಾರತ ಚಿನ್ನ ಗಳಿಸುವುದಕ್ಕೆ ಕಾಯುತ್ತಿದ್ದೇವೆ ಎಂದು ಇನ್ನೊಬ್ಬರು ಮೋಹಕ್ ಅವರ ಈ ನಿರ್ಧಾರವನ್ನು ಬೆಂಬಲಿಸಿ ಕಾಮೆಂಟ್ ಮಾಡಿದ್ದಾರೆ.
ಇನ್ನೊಬ್ಬರು ಕೂಡ ಇದೇ ಮಾದರಿಯ ಕಾಮೆಂಟ್ಸ್ ಮಾಡಿದ್ದು, "ಇದು ಬಹಳ ದೊಡ್ಡ ನಿರ್ಧಾರ. ಇದೆಲ್ಲಕ್ಕಿಂತಲೂ ನೀರಜ್ ಚೋಪ್ರಾ ಅವರು ಚಿನ್ನವನ್ನು ಒಪಿಂಪಿಕ್ಸ್‌ನಲ್ಲಿ ಗೆಲ್ಲುವುದು ಭಾರತೀಯರ ಪಾಲಿಗೆ ಅತ್ಯಂತ ಹೆಮ್ಮೆಯ ವಿಚಾರ. ನನ್ನ ಪ್ರಕಾರ ನೀರಜ್ ಚೋಪ್ರಾ ಅವರು ಈ ಬಾರಿ ಚಿನ್ನವನ್ನಷ್ಟೇ ಗೆಲ್ಲುವುದಲ್ಲ ಈ ಹಿಂದಿನ ತಮ್ಮ ದಾಖಲೆಯನ್ನೇ ಮುರಿಯಲಿದ್ದಾರೆ ಎನ್ನುವ ವಿಶ್ವಾಸವಿದೆ. ನೀರಜ್ ಚೋಪ್ರಾ ಅವರು ಭಾರತ ಸೃಷ್ಟಿಸಿರುವ ಅತ್ಯದ್ಭುತ ಅಥ್ಲೆಟ್. ಅವರಿಗೆ ಆಲ್ ದಿ ಬೆಸ್ಟ್. ಒಬ್ಬ ಭಾರತೀಯನಾಗಿ ನಾನು ಅವರ ಬಗ್ಗೆ ಬಹಳ ಹೆಮ್ಮೆಪಡುತ್ತೇನೆ ಎಂದು ಬಹಳ ಅಭಿಮಾನದ ಮಾತುಗಳಲ್ಲಿ ಕಾಮೆಂಟ್ ಮಾಡಿದ್ದಾರೆ.
ಅಟ್ಲಿಸ್ ಕಂಪೆನಿ ಬಗ್ಗೆ:
ಈ ಅಟ್ಲಿಸ್ ಕಂಪನಿಯು 2020ರಲ್ಲಿ ಯುನೈಟೆಡ್ ಸ್ಟೇಟ್ಸ್‌ನ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಸ್ಥಾಪಿಸಲಾಗಿದೆ. ಅಮೆರಿಕಾದ ಜೊತೆಗೆ, ಇದು ಭಾರತದಲ್ಲಿ ತನ್ನ ಎರಡು ಕಚೇರಿಗಳನ್ನು ಹೊಂದಿದೆ. ಮುಂಬೈ ಮತ್ತು ಗುರುಗ್ರಾಮದಲ್ಲಿ ಈ ಕಚೇರಿ ಇದೆ. ವೀಸಾಗಳಿಗೆ ಅರ್ಜಿ ಸಲ್ಲಿಸಲು ಈ ಕಂಪನಿಯು ಬಳಕೆದಾರರಿಗೆ ಸಹಾಯ ಮಾಡುತ್ತದೆ.
More From GoodReturns

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

LPG Cylinder Shortage Live Updates: ಭಾರತದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ಪಿಎಂ ಮೋದಿ ಮಹತ್ವದ ಸಭೆ

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

Natural Gas Supply: ದೇಶದಲ್ಲಿ ಅನಿಲ ಕೊರತೆ..ಹೊಸ ಆದೇಶದ ಪ್ರಕಾರ ಯಾರಿಗೆ ಮೊದಲ ಆದ್ಯತೆ ಎಂದು ತಿಳಿಯಿರಿ

LPG ಪೂರೈಕೆಯಲ್ಲಿ ಕೊರತೆ; ದೇಶದಲ್ಲಿ ಎಲ್ಪಿಜಿ ಉತ್ಪಾದನೆ 10% ಹೆಚ್ಚಳ

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

LPG shortage: ಮಧ್ಯಪ್ರಾಚ್ಯದ ಉದ್ವಿಗ್ನತೆ, ಬೆಂಗಳೂರು-ಮುಂಬೈನಲ್ಲಿ LPG ಕೊರತೆ ಆತಂಕ: ರೆಸ್ಟೋರೆಂಟ್ಗಳು ಮುಚ್ಚುವ ಭೀತಿ

Biggest Airport: ಭಾರತದ ಅತಿದೊಡ್ಡ ವಿಮಾನ ನಿಲ್ದಾಣ ಸಂಚಾರಕ್ಕೆ ಸಿದ್ಧ; 45 ದಿನದೊಳಗೆ ಆರಂಭ

India Oil: ಇಸ್ರೇಲ್, ಯುಎಸ್ ಮತ್ತು ಇರಾನ್ ನಡುವೆ ವಾರ್! ಭಾರತದ ಕಚ್ಚಾ ತೈಲದ ಮೇಲೆ ಪರಿಣಾಮ ಬೀರಿದ್ದು ಹೇಗೆ?

Market Prediction: ನಾಳೆ ಹೇಗಿರಲಿದೆ ಷೇರು ಮಾರುಕಟ್ಟೆ? ಲಾಭವೋ? ನಷ್ಟವೋ? ಇಲ್ಲಿದೆ ಓದಿ

iPhone EMI: ಐಫೋನ್ EMIನಲ್ಲಿ ತಗೊಳೋದು ಎಷ್ಟು ಸೇಫ್? ಮಾಸಿಕ ಪಾವತಿ ಸುಲಭ, ಆದರೆ ನಿಮ್ಮ ಹಣಕಾಸು ಸುರಕ್ಷಿತವೇ?



Click it and Unblock the Notifications