ಚೆನ್ನೈ ಮೂಲದ ಸಾಫ್ಟ್‌ವೇರ್ ಹಾಗೂ ಸೇವಾ ಕಂಪನಿ (software-as-a-serivce/ SaaS) ಫ್ರೆಶ್‌ವರ್ಕ್ಸ್ ತನ್ನ ಉದ್ಯೋಗಿಗಳಿಗಾಗಿ 2,000 ಕ್ಕೂ ಹೆಚ್ಚು ಜೈಲರ್ ಸಿನಿಮಾದ ಟಿಕೆಟ್‌ಗಳನ್ನು ಕಾಯ್ದಿರಿಸಿದೆ. ಚೆನ್ನೈ ಮೂಲದ ಜಾಗತಿಕ ಸಾಫ್ಟ್‌ವೇರ್ ಕಂಪನಿ ಫ್ರೆಶ್‌ವರ್ಕ್ಸ್ ಗುರುವಾರ ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ರಜನಿಕಾಂತ್ ಅಭಿನಯದ ಜೈಲರ್‌ನ 2,200 ಟಿಕೆಟ್‌ಗಳನ್ನು ಬುಕ್ ಮಾಡಿದೆ. ಅದು ಬರೀ ತನ್ನ ಉದ್ಯೋಗಿಗಳಿಗೆ ಮಾತ್ರ ಅಷ್ಟು ಟಿಕೆಟ್ ಬುಕ್ ಮಾಡಿದೆ.
ನಾಸ್ಡಾಕ್ ಪಟ್ಟಿಯಲ್ಲಿರುವ SaaS ಸಂಸ್ಥೆಯ ಸಂಸ್ಥಾಪಕ ಮತ್ತು ಸಿಇಒ ಗಿರೀಶ್ ಮಾತೃಭೂತಮ್ ಈ ಮಾಹಿತಿಯನ್ನು ಎಕ್ಸ್ (ಈ ಹಿಂದಿನ ಟ್ವಿಟ್ಟರ್) ನಲ್ಲಿ ಪೋಸ್ಟ್ ಮಾಡಿದ್ದಾರೆ. "2,200 ಟಿಕೆಟ್‌ಗಳು, 7 ಸ್ಕ್ರೀನ್‌ಗಳು, ಫ್ರೆಶ್‌ವರ್ಕ್ಸ್ ಉದ್ಯೋಗಿಗಳಿಗೆ ಮಾತ್ರ," ಎಂದು ಮಾತೃಭೂತಂ ಮಾಹಿತಿ ನೀಡಿದೆ. ಇನ್ನು ಈ ಸಿನಿಮಾದಲ್ಲಿ ನಮ್ಮ ಶಿವರಾಜ್ ಕುಮಾರ್ ಕೂಡಾ ಕಾಣಿಸಿಕೊಂಡಿದ್ದಾರೆ.

ಉದ್ಯೋಗಿಗಳಿಗೆ ರಜೆ ನೀಡಿದ ಸಂಸ್ಥೆಗಳು
ಜೈಲರ್ ಸಿನಿಮಾ ಬಿಡುಗಡೆಯ ದಿನಾಂಕವಾದ ಆಗಸ್ಟ್ 10 ರಂದು ದಕ್ಷಿಣ ಭಾರತದ ಹಲವಾರು ಕಂಪನಿಗಳು ತನ್ನ ಉದ್ಯೋಗಿಗಳಿಗೆ ರಜೆ ಘೋಷಿಸಿವೆ. ಚೆನ್ನೈ, ಮಧುರೈ ಮಾತ್ರವಲ್ಲದೆ ಬೆಂಗಳೂರು, ಹೈದರಾಬಾದ್, ತಂಜಾವೂರು, ವಿಶಾಖಪಟ್ಟಣ, ಮೈಸೂರು, ಎಲ್ಲೂರು, ತಿರುವನಂತಪುರಂ ಮತ್ತು ಕೊಚ್ಚಿಯಂತಹ ನಗರಗಳಲ್ಲಿನ ಕೆಲವು ಕಚೇರಿಗಳು ರಜೆಯನ್ನು ಘೋಷಿಸಿದೆ.
ಇನ್ನು ಹಲವಾರು ದೊಡ್ಡ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಚಲನಚಿತ್ರವನ್ನು ವೀಕ್ಷಿಸಲು ಉಚಿತ ಟಿಕೆಟ್‌ಗಳನ್ನು ನೀಡಿವೆ. ಕ್ಯಾಲಿಫೋರ್ನಿಯಾದ ಸ್ಯಾನ್ ಮ್ಯಾಟಿಯೊದಲ್ಲಿ ಪ್ರಧಾನ ಕಚೇರಿಯನ್ನು ಫ್ರೆಶ್‌ವರ್ಕ್ಸ್ ಸಂಸ್ಥೆ ಹೊಂದಿದ್ದು, ಇದು ಆಲ್‌ಬರ್ಡ್ಸ್, ಬ್ಲೂ ನೈಲ್, ಬ್ರಿಡ್ಜ್‌ಸ್ಟೋನ್, ಡಾಟಾಬ್ರಿಕ್ಸ್, ಕ್ಲಾರ್ನಾ, ಎನ್‌ಎಚ್‌ಎಸ್, ಆಫೀಸ್‌ಮ್ಯಾಕ್ಸ್ ಮತ್ತು ಫೋನ್‌ಪೇ ಸೇರಿದಂತೆ ಸಾವಿರಾರು ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿರುವ ಸಂಸ್ಥೆಯಾಗಿದೆ.
2021 ರ ಸೆಪ್ಟೆಂಬರ್‌ನಲ್ಲಿ ಈ ಸಂಸ್ಥೆಯ ಆರಂಭಿಕ ಬೆಲೆಯು ಪ್ರತಿ ಸ್ಟಾಕ್‌ಗೆ 36 ಡಾಲರ್ ಆಗಿದ್ದು, ಸಂಸ್ಥೆಯ ಮಾರುಕಟ್ಟೆ ಮೌಲ್ಯವು 12.2 ಬಿಲಿಯನ್ ಡಾಲರ್ ಆಗಿತ್ತು. ಗಿರೀಶ್ ಮಾತೃಭೂತಮ್ ಮತ್ತು ಶಾನ್ ಕೃಷ್ಣಸಾಮಿ 2010 ರಲ್ಲಿ ಚೆನ್ನೈನಲ್ಲಿ ಫ್ರೆಶ್‌ಡೆಸ್ಕ್ ಸ್ಥಾಪಿಸಿದರು. ಕಂಪನಿಯು ಗ್ರಾಹಕ ಬೆಂಬಲಕ್ಕಾಗಿ ಇರುವ ಸಾಫ್ಟ್‌ವೇರ್ ಸಹಾಯವಾಣಿಯಾಗಿ ತನ್ನ ಉದ್ಯಮವನ್ನು ಪ್ರಾರಂಭಿಸಿತು. ಕಂಪನಿಯ ಬೆಳೆಯುತ್ತಿರುವ ಸಾಫ್ಟ್‌ವೇರ್ ಉದ್ಯಮದ ನಡುವೆ ಜೂನ್ 2017 ರಲ್ಲಿ ಫ್ರೆಶ್‌ವರ್ಕ್ಸ್ ಅನ್ನು ರಿಬ್ರ್ಯಾಂಡ್ ಮಾಡಲು ನಿರ್ಧರಿಸಿತು.
'ಜೈಲರ್' ಚಿತ್ರದಲ್ಲಿ ಸ್ಯಾಂಡಲ್‌ವುಡ್ ಸ್ಟಾರ್ ಶಿವರಾಜ್ ಕುಮಾರ್, ಮೋಹನ್‌ಲಾಲ್ ಮತ್ತು ಜಾಕಿ ಶ್ರಾಫ್ ಕೂಡ ನಟಿಸಿದ್ದಾರೆ. ಆದರೂ ಅವರು ನಿರ್ವಹಿಸುತ್ತಿರುವ ಪಾತ್ರಗಳನ್ನು ಇಲ್ಲಿಯವರೆಗೆ ಪ್ರಚಾರದಿಂದ ಹೊರಗಿಡಲಾಗಿದೆ. ಸಿನಿಮಾದಲ್ಲಿ ರಮ್ಯಾ ಕೃಷ್ಣನ್, ತಮನ್ನಾ, ವಿನಾಯಕನ್ ಮತ್ತು ಹಾಸ್ಯನಟ ಯೋಗಿ ಬಾಬು ಇದ್ದಾರೆ. ಸಿನಿಮಾಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದು ಸನ್ ಪಿಕ್ಚರ್ಸ್ ಸಿನಿಮಾವನ್ನು ನಿರ್ಮಿಸಿದೆ.


Click it and Unblock the Notifications