5 ಬಾರಿ ವ್ಯವಹಾರ ವೈಫಲ್ಯ, ತಿರಸ್ಕಾರ; ಫೀನಿಕ್ಸ್ ನಂತೆ ಎದ್ದು ನಿಂತ ಬೆಂಗಳೂರು ಯುವಕ.!

ಸೋಲು, ವೈಫಲ್ಯ, ವ್ಯಂಗ್ಯ ಎಲ್ಲವೂ ಒಮ್ಮಿಂದೊಮ್ಮೆ ಬೆನ್ನುಹತ್ತಿದಾಗ ಸಾಮಾನ್ಯವಾಗಿ ಎಂಥಹ ದೃಢಚಿತ್ತದವರಾದರೂ ಹತಾಶರಾಗು ವುದು, ನಿರಾಶರಾಗುವುದು ಸಹಜ. ಇವೆಲ್ಲವೂ ಮಾನಸಿಕವಾಗಿ ಒಮ್ಮಿಂದೊಮ್ಮೆಲೆ ಕುಗ್ಗುವಂತೆ ಮಾಡುತ್ತದೆ. ಆದರೆ ಇದೆಲ್ಲವನ್ನು ಬದಿಗೆ ಸರಿಸಿ ಮತ್ತೆ ಫಿನಿಕ್ಸ್ ನಂತೆ ಮೇಲೆರುವುದು ಅಸಮಾನ್ಯವೇ ಸರಿ. ಇಂತಹ ಸ್ಟೋರಿ ಬೆಂಗಳೂರಿನ ಯುವಕನದ್ದು..

ಬೆಂಗಳೂರಿನ ಉದ್ಯಮಿ ವಿಕ್ರಮ್ ಪೈ ಅವರ ಕಥೆಯು ಸ್ಥಿತಿಸ್ಥಾಪಕತ್ವ, ವೈಫಲ್ಯಗಳು ಮತ್ತು ಅಂತಿಮವಾಗಿ ಗೆಲುವು ಸಾಧಿಸಿದ ಕಥೆಯಾಗಿದೆ. ಈಗ ಯಶಸ್ವಿ ವೇದಿಕೆಯ ಸಿಇಒ ಆಗಿರುವ ವಿಕ್ರಮ್ ಪೈ ಬೆಂಗಳೂರು ಮೂಲದ ಉದ್ಯಮಿಯಾಗಿದ್ದಾರೆ. ರೆಫರ್ ರಶ್ ಎಂಬ ಇ-ಕಾಮರ್ಸ್ ರೆಫರಲ್ ಮಾರಾಟ ವೇದಿಕೆಯನ್ನು ನಡೆಸುತ್ತಿದ್ದಾರೆ. ವಿಕ್ರಮ್ ಪೈ ಅವರ ಒಂದಲ್ಲ, ಎರಡಲ್ಲ ಬರೋಬ್ಬರಿ ಐದು ವಿಫಲ ವ್ಯವಹಾರಗಳು ಅನುಭವಿಸಿ, 2 ಕೋಟಿ ರೂ.ಗಳ ಆರ್ಥಿಕ ನಷ್ಟಕ್ಕೆ ಸಿಲುಕಿ ಮತ್ತು ಆರೋಗ್ಯ ಸಮಸ್ಯೆಯನ್ನು ಎದುರಿಸಿದ ನಂತರವೂ ಸೋಲನ್ನು ಒಪ್ಪಿಕೊಳ್ಳಲು ನಿರಾಕರಿಸಿ ಮರಳಿ ಯತ್ನವ ಮಾಡುವ ಎಂಬ ಗುರಿಯಿಟ್ಟು ಪ್ರಯತ್ನಿಸಿ ಫಲವನ್ನು ಉಂಡವರು. ಇದೀಗ ಇವರ ಪ್ರಯತ್ನಕ್ಕೆ ಫಲ ಎಂಬಂತೆ ಜೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ನೇತೃತ್ವದ ಉಪಕ್ರಮವಾದ ಡಬ್ಲ್ಯೂಟಿಫಂಡ್‌ನಿಂದ ಹಣಕಾಸು ಸಹಾಯ ದೊರಕಿದೆ.

ಫೀನಿಕ್ಸ್ ನಂತೆ ಮೇಲೆದ್ದ ಬೆಂಗಳೂರು ಯುವಕನ ಸಕ್ಸಸ್ ಸ್ಟೋರಿ

ಲಿಂಕ್ಡ್ಇನ್ ಹಾಗೂ ಎಕ್ಸ್ ಪೋಸ್ಟ್‌ನಲ್ಲಿ, ಅವರು ತಮ್ಮ ಆರು ವರ್ಷಗಳ ಹೋರಾಟವನ್ನು ವಿವರವಾಗಿ ಹಂಚಿಕೊಂಡಿದ್ದಾರೆ, ಅದು ವ್ಯಾಪಾರ ವೈಫಲ್ಯಗಳು, ಆರ್ಥಿಕ ಸಂಕಷ್ಟ ಮತ್ತು ಕುಟುಂಬ ಮತ್ತು ಸ್ನೇಹಿತರಿಂದ ನಂಬಿಕೆಯನ್ನು ಕಳೆದುಕೊಂಡು ಜೀವನದಲ್ಲಿ ಹತಾಶೆಯೇ ತುಂಬಿತ್ತು.

ವಿಕ್ರಮ್ ಪೈ ಅವರು ತಮ್ಮ ಜೀವನದಲ್ಲಿ ಬಹಳ ಕಷ್ಟಕರವಾದ ಸಮಯವನ್ನು ಎದುರಿಸಿದರು. ಅವರ ದೇಹದ ಅರ್ಧ ಭಾಗ ಪಾಶ್ವ ಒಳಗಾಯಿತು, ಅವರ ಬಳಿ ಹಣವಿರಲಿಲ್ಲ ಮತ್ತು ಅವರ ಸುತ್ತಮುತ್ತರಿನ ಆಪ್ತವಲಯವೇ ಅವರನ್ನು ನಂಬುವ ಸ್ಥಿತಿಯಲ್ಲಿರಲಿಲ್ಲ.

ನನ್ನನ್ನು ಎಲಾನ್ ಮಸ್ಕ್ ಎಂದು ಮೂದಲಿಸಿದರು. ಮತ್ತೊಂದೆಡೆ ದೇಹದ ಅರ್ಧದಷ್ಟು ಭಾಗ ಪಾರ್ಶ್ವವಾಯುವಿಗೆ ಒಳಗಾಯಿತು. ನನ್ನಲ್ಲಿ ಕೊನೆಯ 4 ಸಾವಿರ ರೂ. ಮಾತ್ರ ಉಳಿದಿತ್ತು. ನನ್ನ ಸಹ-ಸಂಸ್ಥಾಪಕರ ಸಂಬಳವನ್ನು ಪಾವತಿಸಲು ಸಾಧ್ಯವಾಗಲಿಲ್ಲ. ನಾನು ಅವರಿಗೆ ತಿಂಗಳಿಗೆ 36 ಸಾವಿರ ರೂಪಾಯಿಗಳನ್ನು ಕಳುಹಿಸುವ ಮೊದಲು ಸ್ಕ್ರೀನ್‌ಶಾಟ್ ಇಲ್ಲಿದೆ. ಅವರಿಗೆ ಬಹಳಷ್ಟು ಜವಾಬ್ದಾರಿಗಳಿದ್ದವು. ನನ್ನ ಅಜ್ಜಿ ಕೂಡ ನನ್ನನ್ನು ಪ್ರಶ್ನಿಸತೊಡಗಿದರು. ಅಪ್ಪ ನಾನು ವ್ಯವಹಾರದ ಆಟ ಆಡುತ್ತಿದ್ದೇನೆ ಎಂದು ಕೇಳಿದ್ದರು. ನಾನು ಒಂದು ರೀತಿಯ ಭ್ರಮೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದೆ. ಸಂಬಂಧಿಕರು ನನ್ನ ಬಗ್ಗೆ ಗಾಸಿಪ್ ಮಾಡುತ್ತಿದ್ದರು. ನನ್ನ ತಾಯಿ ನನ್ನ ಮೇಲಿಟ್ಟ ನಂಬಿಕೆ ಕಳೆದುಕೊಂಡಿದ್ದರು. ನನ್ನ ಆತ್ಮೀಯ ಸ್ನೇಹಿತ ನನಗೆ ದ್ರೋಹ ಬಗೆದ. ಎಲ್ಲವನ್ನು ಕಳೆದುಕೊಂಡು ನಾನು ದುಃಖಿತನಾಗಿದ್ದೆ" ಎಂದು ಪೈ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಬೆಳವಣಿಗೆ ಸಹಕಾರಿಯಾದ ಬ್ಲ್ಯೂಟಿಫಂಡ್ ಅನುದಾನ

WTFund ಅನುದಾನಕ್ಕಾಗಿ ಅರ್ಜಿ ಸಲ್ಲಿಸಿದ್ದ 2,400 ಕ್ಕೂ ಹೆಚ್ಚು ಅರ್ಜಿದಾರರಲ್ಲಿ ಆಯ್ಕೆಯಾದ ಕೇವಲ ಒಂಬತ್ತು ವ್ಯವಹಾರಗಳಲ್ಲಿಇ-ಕಾಮರ್ಸ್ ರೆಫರಲ್ ಮಾರಾಟ ವೇದಿಕೆಯಾದ "ರೆಫರ್‌ರಶ್" ಕೂಡ ಸೇರಿದೆ. ಆರಂಭಿಕ ತಿಂಗಳುಗಳಲ್ಲಿ ಗ್ರಾಹಕರಿಗೆ 1 ಲಕ್ಷ ರೂ. ಆದಾಯ ಗಳಿಸಲು ನಾಲ್ಕು ತಿಂಗಳುಗಳನ್ನು ತೆಗೆದುಕೊಂಡ ಈ ನವೋದ್ಯಮವು ಈಗ ದಿನಕ್ಕೆ 1.5 ಲಕ್ಷ ರೂ. ಗಳಿಸುತ್ತಿದೆ. ಹಣಕಾಸಿನ ಮಹತ್ವವನ್ನು ಪೈ ಹೇಳಿದ್ದಾರೆ ಆದರೆ ಪರಿಶ್ರಮ ಮತ್ತು ಆತ್ಮವಿಶ್ವಾಸವು ಅವರ ಪ್ರಯಾಣದಲ್ಲಿ ದೊಡ್ಡ ಪಾತ್ರವನ್ನು ವಹಿಸಿದೆ ಎಂದು ಒತ್ತಿ ಹೇಳಿದರು.e

ನನ್ನ ನಂಬಿಕೆ ಸದಾ ನನ್ನ ಜೊತೆಗಿತ್ತು. ನನಗೆ ಬೇಕಾಗಿದ್ದು ಆಹಾತ ಮತ್ತು ವಸತಿ ಮಾತ್ರ ಅದು ನನ್ನಲ್ಲಿತ್ತು. ಇಂದುreferrush ಸಂಸ್ಥೆಯು TheWTFund ನಿಂದ 2400+ ಸಂಸ್ಥೆಗಳಲ್ಲಿ 9 ಸಂಸ್ಥೆಗಳಲ್ಲಿ ಒಂದಾಗಿ ಆಯ್ಕೆಯಾಗಿದೆ. ಲಾಭದ ಹಾದಿಯಲ್ಲಿದ್ದೇವೆ, ಇದು ಆರಂಭವಷ್ಟೇ. ಮೊದಲ ಐದು ವರ್ಷಗಳು ಗೆಲುವಿನದ್ದು ಆಗಿರಲಿಲ್ಲ. ಕೌಶಲ್ಯ ವೃದ್ಧಿಯ ಸಮಯವಾಗಿತ್ತು ಅಷ್ಟೇ. ಅಪ್ಪ-ಅಮ್ಮ, ರೋಹನ್, ಈ ಅವಕಾಶ, ಈ ಬದುಕಿಗೆ ಚಿರಋಣಿ. ಛಲ ಬಿಡಬೇಡಿ, ನಿಮ್ಮ ಮೇಲೆ ನಂಬಿಕೆ ಇರಲಿ," ಎಂದು ಪೈ ಬರೆದುಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+