ಬಡತನ ತಮಗೆ ಅಂಟಿದ ಶಾಪ ಅಂತಾನೇ ಬಹಳಷ್ಟು ಜನರು ಭಾವಿಸುತ್ತಾರೆ. ಯಾಕೆಂದರೆ ಬಡತನದಿಂದಾಗಿಯೇ ತಮಗೆ ಯಾವುದೇ ಸಾಧನೆ ಮಾಡಲಾಗಲಿಲ್ಲ ಅಂತ ಕೊರಗುವವರೂ ಇದ್ದಾರೆ. ಆದರೆ ಇದಕ್ಕೆ ತದ್ವಿರುದ್ದವಾಗಿ ಬಡತನದಿಂದ ಹೊರಬಂದು ಉತ್ತಮ ಬದುಕು ಕಟ್ಟಿಕೊಂಡವರು ಬಹಳಷ್ಟು ಜನರಿದ್ದಾರೆ. ಇದಕ್ಕೆ ಜ್ವಲಂತ ಉದಾಹರಣೆ ಸೌಮೇಂದ್ರ ಜೆನಾ. ಇವರ ಜೀವನ ಪಯಣ ಎಲ್ಲರಿಗೂ ಸ್ಪೂರ್ತಿದಾಯಕ
ಬಡವರಾಗಿ ಹುಟ್ಟೋದು ನಮ್ಮ ತಪ್ಪಲ್ಲ ಆದರೆ ಬಡವರಾಗಿಯೇ ಸಾಯೋದು ನಮ್ಮದೇ ತಪ್ಪು. ಹುಟ್ಟು ನಮ್ಮ ಕೈಯಲ್ಲಿಲ್ಲ ಆದರೆ ಬದುಕು ನಮ್ಮ ಕೈಯಲ್ಲಿದೆ. ಹೊಟ್ಟೆಯಲ್ಲಿನ ಹಸಿವು ಬುದ್ಧಿಗೆ, ಭುಜಕ್ಕೆ ಕಸುವು ತುಂಬುತ್ತದೆ. ಅದೇ ಹೊಟ್ಟೆ ತುಂಬಿದವರಿಗೆ ಅದ್ಯಾವ ಕಸುಬು ಗೊತ್ತಿರುವುದಿಲ್ಲ. ಇದರಿಂದಾಗಿಯೇ, ಸಾಧಕನ ಮಗ ಸಾಧಕನಾಗಲಾರ. ಸಾಮಾನ್ಯನ ಮಗ ಅಸಾಮಾನ್ಯ ಸಾಧನೆ ಮಾಡುತ್ತಾನೆ. ಹಸಿವಿನ ಶಕ್ತಿ ಅಷ್ಟರ ಮಟ್ಟಿಗೆ ವ್ಯಕ್ತಿಯ ಬದುಕನ್ನು ಉದ್ದೀಪಿಸುತ್ತದೆ. ಎನ್ನುವ ಮಾತು ಸೌಮೇಂದ್ರ ಅವರ ಪಾಲಿಗೆ ನಿಜವಾದಂತೆ ತೋರುತ್ತದೆ.

ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಒಡಿಶಾದ ರೂರ್ಕೆಲಾದ ಸೌಮೇಂದ್ರ ಜೆನಾ ಅವರು ತಮ್ಮ ಕಠಿಣ ಪರಿಶ್ರಮ ಮತ್ತು ಛಲದಿಂದ ಹೇಗೆ ಯಶಸ್ಸಿನ ಎತ್ತರಕ್ಕೇರಿದರು ಎಂಬುದನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಕೇವಲ ಎರಡು ಪೋಟೋಗಳ ಮೂಲಕ ಹಂಚಿಕೊಂಡಿದ್ದಾರೆ. ಅವರ ಜೀವನ ಇತರರಿಗೆ ಸ್ಪೂರ್ತಿ ಹಾಗೂ ಮಾದರಿಯಾಗಿದೆ.
ಜೆನಾ ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ತಮ್ಮ ಹಳೆಯ ಮತ್ತು ಹೊಸ ಜೀವನವನ್ನು ಹೋಲಿಸುವ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಬಾಲ್ಯದ ಮನೆ (ರೂರ್ಕೇಲಾ) ಮತ್ತು ಪ್ರಸ್ತುತ ವಾಸವಾಗಿರುವ (ದುಬೈ) ಎರಡನ್ನೂ ಪೋಸ್ಟ್ ಮಾಡಿದ್ದಾರೆ. ಬಾಲ್ಯದ ಮನೆ ಪುಟ್ಟ ಗುಡಿಸಲಿನಂತಿದ್ದರೆ ದುಬೈನಲ್ಲಿನ ಮನೆ ಅದ್ದೂರಿ ಮಹಲ್ ನಂತಿದೆ. ಅಷ್ಟೇ ಅಲ್ಲ, ಅವರು ಪೋರ್ಷೆ ಟೇಕಾನ್ ಮತ್ತು ಜಿ. ವ್ಯಾಗನ್ ಬ್ರಬಸ್ 800 ಕಾರುಗಳನ್ನು ಎಂದು ಹೇಳಿಕೊಂಡಿದ್ದಾರೆ.
ಸೌಮೇಂದ್ರ ಜೆನಾ. ಅವರು X ನಲ್ಲಿ "ಇದು ನನ್ನ ಮನೆಯಾಗಿತ್ತು-ಒಡಿಶಾದ ರೂರ್ಕೆಲಾದ ಒಂದು ಸಣ್ಣ ಪಟ್ಟಣ, ಅಲ್ಲಿ ನಾನು ಹುಟ್ಟಿ, ಬೆಳೆದು ಅಲ್ಲೇ ನಾನ್ಯ್ 12 ನೇ ತರಗತಿಯವರೆಗೆ ಓದಿದೆ (1988-2006). 2021 ರ ನೆನಪುಗಳನ್ನುಮರುಪರಿಶೀಲಿಸುಲಿತ್ತಿದ್ದೇನೆ. ಇಂದು, ದುಬೈನಲ್ಲಿರುವ ನನ್ನ ಮನೆಯು 17 ವರ್ಷಗಳ ನಿರಂತರ ಪರಿಶ್ರಮ, ನಿದ್ದೆಯಿಲ್ಲದ ರಾತ್ರಿಗಳು ಮತ್ತು ಶಾರ್ಟ್‌ಕಟ್‌ಗಳಿಲ್ಲದ ಕಥೆಯನ್ನು ಹೇಳುತ್ತದೆ. ಯಶಸ್ಸು ಸಮಯ ತೆಗೆದುಕೊಳ್ಳುತ್ತದೆ. ನಿಮ್ಮ ನೆಪವೇನು? ಎಂದು ಹೇಳಿದ್ದಾರೆ.
ಈ ಪೋಸ್ಟ್ ಬಹಳಷ್ಟು ವೇಗವಾಗಿ ಅನೇಕರ ಗಮನ ಸೆಳೆದಿದ್ದು, ಸೌಮೇಂದ್ರ ಜೆನಾ ಅವರ ಜೀವನ ಪ್ರಯಾಣವನ್ನು ಹೊಗಳಿದ್ದು ಅವರ ಕಥೆಯಿಂದ ಸ್ಫೂರ್ತಿ ಪಡೆದುಕೊಂಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಕಾಮೆಂಟ್ ವಿಭಾಗದಲ್ಲಿ ಒಬ್ಬ ಬಳಕೆದಾರರು , "ಈ 17 ವರ್ಷಗಳಲ್ಲಿ ನೀವು ಏನು ಮಾಡಿದ್ದೀರಿ ಎಂದು ತಿಳಿಯಬಹುದೇ? ಏಕೆಂದರೆ ನಾನು ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಿದ್ದೇನೆ ಆದರೆ ಇನ್ನೂ ನಾನು ನನಗೆ ಒಂದು ಮನೆಯನ್ನು ಕಟ್ಟಿಸಲು ಸಾಧ್ಯವಾಗಿಲ್ಲ, ಅದೂ ನನ್ನ ಗ್ರಾಮದಲ್ಲಿ ಅಲ್ಲ, ನಾನು ನನಗೆ ಕಾರು ಖರೀದಿಸಲು ಸಾಧ್ಯವಾಗಿಲ್ಲ" ಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು, "ಯಶಸ್ಸಿಗೆ ಸಮಯ, ಶ್ರಮ, ಅದೃಷ್ಟವೂ ಬೇಕು ಎಂದು ಬರೆದುಕೊಂಡಿದ್ರೆ, ಮತ್ತೊಬ್ಬರು "ಕಠಿಣ ಪರಿಶ್ರಮದ ಜೊತೆಗೆ ಎಲ್ಲರೂ 17 ವರ್ಷಗಳಲ್ಲಿ ಅದನ್ನು ಮಾಡಲು ಸಾಧ್ಯವಿಲ್ಲ. ಅದೃಷ್ಟವು ಪ್ರಮುಖ ಪಾತ್ರ ವಹಿಸುತ್ತದೆ." ಎಂದು ಹೇಳಿದ್ದಾರೆ.
ಅಂದಹಾಗೆ ಸೌಮೇಂದ್ರ ಜೆನಾ ಅವರು ಹಣಕಾಸು ವಲಯದಲ್ಲಿ ಪ್ರಮುಖ ಕಂಟೆಟ್ ಕ್ರಿಯೇಟರ್ ಆಗಿದ್ದು ತಮ್ಮದೇ ಆದ ಪ್ರೇಕ್ಷಕರ ವರ್ಗವನ್ನು ಹೊಂದಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 3,00,000 ಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದುಇಲ್ಲಿ ಅವರು ಹಣಕಾಸು ಸಂಬಂಧಿತ ಅಮೂಲ್ಯ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಯೂಟ್ಯೂಬ್‌ನಲ್ಲಿ ನಲ್ಲಿ ಚಾನೆಲ್ ಹೊಂದಿದ್ದು ಸಂಕೀರ್ಣ ಆರ್ಥಿಕ ವಿಷಯಗಳನ್ನು ಸರಳಗೊಳಿಸುವ, ಹೂಡಿಕೆ ಸಲಹೆಯನ್ನು ನೀಡುವ ಮತ್ತು ವೀಕ್ಷಕರಿಗೆ ತಿಳುವಳಿಕೆಯುಳ್ಳ ಆರ್ಥಿಕ ಆಯ್ಕೆಗಳನ್ನು ಬಗ್ಗೆ ವಿವರ್ರ ನೀಡುವ ವೀಡಿಯೊಗಳೊಂದಿಗೆ ಪೋಸ್ಟ್ ಮಾಡುತ್ತಿದ್ದು 4,87,000 ಸಬ್ ಸ್ಕೈಬರ್ ಹೊಂದಿದ್ದಾರೆ.


Click it and Unblock the Notifications