ಬೆಂಗಳೂರು, ಸೆಪ್ಟೆಂಬರ್ 13: ಬಹಳಷ್ಟು ಜನ ಜೀವನದಲ್ಲಿ ರಿಸ್ಕ್ ತೆಗೆದುಕೊಳ್ಳಲು ಇಷ್ಟಪಡುವುದಿಲ್ಲ. ಸಾಧಿಸಬೇಕು ಎಂಬ ಆಸೆ ಆಕಾಂಕ್ಷೆಗಳು ಮನಸ್ಸಿನಲ್ಲಿದ್ರೂ ಮುಂದೊದಗಬಹುದಾದ ಪರಿಸ್ಥಿತಿಗಳನ್ನು ನಿಭಾಯಿಸಲು ಅವರು ಸಿದ್ದರಾಗಿರುವುದಿಲ್ಲ. ಇನ್ನು ಕೆಲವು ಜನರು ಜೀವನದಲ್ಲಿ ಅಪಾಯಗಳನ್ನು ತೆಗೆದುಕೊಳ್ಳಲು, ಜಿವನಕ್ಕೊಂದು ಹೊಸ ಆಯಾಮ ನೀಡಲು ವೃತ್ತಿಜೀವನವನ್ನು ಪರಿವರ್ತಿಸಲು ಸಾಕಷ್ಟು ಧೈರ್ಯ ಇರುತ್ತದೆ. ಆದರೆ ಕೆಲವೊಮ್ಮೆ ಆರಾಮ ವಲಯ (ಕಂಫರ್ಟ್ ಝೋನ್) ದಿಂದ ಹೊರಬರುವುದು ವೃತ್ತಿಪರವಾಗಿ ಮತ್ತು ವೈಯಕ್ತಿಕವಾಗಿ ಎಲ್ಲ ರೀತಿಯ ಹೊಸ ಅವಕಾಶಗಳಿಗೆ ಕಾರಣವಾಗಬಹುದು.
ಕೆಲವರು ತಮ್ಮ ಸ್ವಂತ ವ್ಯವಹಾರವನ್ನು ತೆರೆಯುವುದು ಅಥವಾ ತಮ್ಮ ಉದ್ಯಮದಲ್ಲಿ ಟ್ರೆಂಡ್‌ಸೆಟರ್ ಆಗುವುದನ್ನು ನಾವು ನಾವು ಕೇಳಿರುತ್ತೇವೆ, ನೋಡಿರುತ್ತೇವೆ. ಹೀಗೆ ಜೀವನದಲ್ಲಿ ರಿಸ್ಕ್ ತೆಗೆದುಕೊಂಡು ಯಶಸ್ವಿ ಉದ್ಯಮಿಯಾಗಿ ಬೆಳೆದುನಿಂತ ಒಂದು ಸ್ಪೂರ್ತಿದಾಯಕ ಕಥೆಯು ಜನಪ್ರಿಯ ದೂರದರ್ಶನ ನಟಿ ಆಶ್ಕಾ ಗೊರಾಡಿಯಾ ಅವರದ್ದು.

ಗೊರಾಡಿಯಾ ತನ್ನ ನಟನಾ ವೃತ್ತಿಜೀವನವನ್ನು 2002 ರಲ್ಲಿ "ಅಚಾನಕ್ 37 ಸಾಲ್ ಬಾದ್ " ಮೂಲಕ ಪ್ರಾರಂಭಿಸಿದರು. ಕುಸುಮ್ ನಲ್ಲಿ ಕುಮುದ ಪಾತ್ರವನ್ನು ನಿರ್ವಹಿಸಿದರು. ಇದಲ್ಲದೇ Zee TV ನಲ್ಲಿ ಅಕೇಲಾ, ಸಿಂದೂರ್ ತೇರೆ ನಾಮ್ ಕಾ, 9X ನಲ್ಲಿ ಮೇರೆ ಅಪ್ನೆ ಮತ್ತು ಸೋನಿ ಟಿವಿಯಲ್ಲಿ ವಿರದ್ಧ್ ನಲ್ಲಿ ಮುಂತಾದ ಹಿಂದಿ ಧಾರವಾಹಿಯಲ್ಲಿ ನಟಿಸಿದ್ದಾರೆ. ನಕಾರಾತ್ಮಕ ಪಾತ್ರಗಳ ನಟನೆಯಿಂದ ಇವರುಪ್ರಸಿದ್ದಿಗೆ ಬಂದಿದ್ದರು.
ಕೊನೆಯದಾಗಿ ಅವರು 2019 ರಲ್ಲಿ ದೂರದರ್ಶನ ಕಾರ್ಯಕ್ರಮವೊಂದರಲ್ಲಿ ನಟಿಸಿದ್ದರು. ಇದಾದ ಬಳಿಕ ಅವರು ರಿಸ್ಕ್ ತೆಗೆದುಕೊಳ್ಳಬೇಕೆಂದು ನಿರ್ಧರಿಸಿ ತಮ್ಮ ವೃತ್ತಿಜೀವನವನ್ನು ಬದಲಾಯಿಸಿ ಇಂದಿನ ಯಶಸ್ವಿ ಉದ್ಯಮಿಯಾಗಿ ಬೆಳೆದುನಿಂತರು. ಗೊರಾಡಿಯಾ 2020 ರಲ್ಲಿ ತಮ್ಮ ಕಾಲೇಜು ಸ್ನೇಹಿತರಾದ ಅಶುತೋಷ್ ವಲಾನಿ ಮತ್ತು ಪ್ರಿಯಾಂಕ್ ಶಾ ಅವರೊಂದಿಗೆ ರೆನೀ ಕಾಸ್ಮೆಟಿಕ್ಸ್ ಅನ್ನು ಸ್ಥಾಪಿಸಿದರು. ರೇನಿ ವಿವಿಧ ಸೌಂದರ್ಯ ಉತ್ಪನ್ನಗಳ ಖ್ಯಾತ ಬ್ರಾಂಡ್ ಆಗಿ ಹೊರಹೊಮ್ಮಿದೆ. ಈ ಬ್ರಾಂಡ್ ಸ್ಥಾಪಸಿದ ಕೇವಲ ಎರಡು ವರ್ಷಗಳ ನಂತರ ಅವರು 100 ಮಿಲಿಯನ್ ಡಾಲರ್ ಮೌಲ್ಯವನ್ನು ತಲುಪಿದಾಗ ಗೊರಾಡಿಯಾ ಕೂಡಾ ಯಶಸ್ವಿ ಉದ್ಯಮಿಯಾಗಿ ಬೆಳೆದುನಿಂತಿರು
ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಗೊರಾಡಿಯಾ ಅವರು ಆರ್ಥಿಕ ವರ್ಷ 2024 ರಲ್ಲಿ 400 ಕೋಟಿ ರೂಪಾಯಿ ಆದಾಯವನ್ನು ಗಳಿಸಲು ಶ್ರಮಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಕಂಪನಿಯ ನಿರ್ದೇಶಕ ಮತ್ತು CMO ಆಗಿರುವ ಅಶ್ಕಾ ಮಾರ್ಕೆಟಿಂಗ್ ಮತ್ತು ಸಂವಹನಗಳನ್ನು ನೋಡಿಕೊಳ್ಳುತ್ತಾರೆ. ಉಳಿದ ಇಬ್ಬರು ಸಹ-ಸಂಸ್ಥಾಪಕರು ಹಣಕಾಸು, ಕಾರ್ಯಾಚರಣೆಗಳು ಮತ್ತು ವಿತರಣೆಯನ್ನು ನಿರ್ವಹಿಸುತ್ತಿದ್ದರೆ.
ಕಂಪನಿಯು ಅಹಮದಾಬಾದ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. 2023 ರಲ್ಲಿ ಇದರ ವಹಿವಾಟು 25 ಮಿಲಿಯನ್ ಡಾಲರ್ ಆಗಿತ್ತು. ಕಂಪನಿಯು Flipkart, Amazon, Myntra ಮತ್ತು Nykaa ನಂತಹ ಆನ್‌ಲೈನ್ ಸೈಟ್‌ಗಳ ಮೂಲಕ 200 ಕ್ಕೂ ಹೆಚ್ಚು ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ. ಇದಲ್ಲದೆ, ಉತ್ಪನ್ನಗಳನ್ನು ಭಾರತದಾದ್ಯಂತ 650 ಕ್ಕೂ ಹೆಚ್ಚು ಮಳಿಗೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ಮೇಡ್-ಇನ್-ಇಂಡಿಯಾ ಬ್ರ್ಯಾಂಡ್ ಗಿರುವ ರೆನೀ ತಮ್ಮ ಉತ್ಪನ್ನವನ್ನು ಸಸ್ಯಾಹಾರಿ ಮತ್ತು ಪ್ರಾಣಿ ಹಿಂಸೆ-ಮುಕ್ತವಾಗಿದೆ ಎಂದು ಹೇಳಿಕೊಂಡಿದ್ದಾರೆ.
ಸೌಂದರ್ಯ ಉತ್ಪನ್ನಗಳ ಈ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ, ರೆನೀ ಬ್ರ್ಯಾಂಡ್ ತನ್ನದೇ ಆದ ಛಾಪನ್ನು ಮೂಡಿಸಿದ್ದು ಗ್ರಾಹಕರು ಈ ಉತ್ಪನ್ನಗಳನ್ನು ಇಷ್ಟಪಡಲಾರಂಭಿಸಿದ್ದು, ಈ ಕಾರಣಕ್ಕಾಗಿ ಹೊಸದಾದ್ರು ಬ್ರ್ಯಾಂಡ್ ತನ್ನ ಬ್ರ್ಯಾಂಡಿಂಗ್ ಮತ್ತು ಉತ್ತಮ-ಗುಣಮಟ್ಟದ ಕೊಡುಗೆಗಳಿಂದ ಮಾರುಕಟ್ಟೆಗೆ ಪ್ರವೇಶಿಸಿದ ತಕ್ಷಣವೇ ಅದರ ಪ್ರತಿಸ್ಪರ್ಧಿ ಸಂಸ್ಥೆಗಳಿಗೆ ಠಕ್ಕರ್ ಕೊಡಲು ಸಾಧ್ಯವಾಗಿದೆ.
ಆಶ್ಕಾ ಗೊರಾಡಿಯಾ ತಮ್ಮ ನಟನ ಜೀವನದಿಂದ ಸಮಯದಿಂದಲೂ ವಿಭಿನ್ನ ಕ್ಅಪ್ ಲುಕ್‌ಗಳೊಂದಿಗೆ ಪ್ರಯೋಗವನ್ನು ಹೆಚ್ಚಾಗಿ ಆನಂದಿಸುತ್ತಿದ್ದರು. ತಮ್ಮದೇ ಆದ ತ್ವಚೆ ಮತ್ತು ಸೌಂದರ್ಯವರ್ಧಕಗಳನ್ನು ಆರಂಬಿಸಿದ್ರೆ ಹೇಗಿರುತ್ತದೆ ಎಂಬ ಅಲೋಚನೆಗಳು ಅವರನ್ನು ಕಾಡುತ್ತಿತ್ತು. ಆದರೆ ಕುಟುಂಬ ಮತ್ತು ಸ್ನೇಹಿತರ ಬೆಂಬಲದಿಂದಾಗಿ ನಟಿಯಿಂದ ಉದ್ಯಮಿಯಾಗಿ ಜೀವನದಲ್ಲಿ ಸಾಧಿಸಲು ಸಾಧ್ಯವಾಯಿತು.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications