ಉತ್ತಮ ಮಾಸಿಕ ವೇತನದ ಉದ್ಯೋಗ ತ್ಯಜಿಸಿ ಸ್ವಂತ ಉದ್ಯಮ ಸಾಧಿಸಿ ಯಶಸ್ವಿಯಾದ ಅನೇಕರು ನಿದರ್ಶನಗಳನ್ನು ನಾವು ಈಗಾಗಲೇ ನೋಡಿದ್ದೇವೆ. ಸದ್ಯ ಈ ಪಟ್ಟಿಗೆ ಮತ್ತೊಂದು ಹೆಸರು ಸೇರ್ಪಡೆಯಾಗಿದೆ. ವಕೀಲೆಯಾಗಿ ಸೇವೆ ಸಲ್ಲಿಸುತ್ತಿದ್ದ ಕೀಯಾ ಸಾಲೋಟ್ ಅವರು ಸದ್ಯ ಕೃಷಿ ಉದ್ಯಮದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಅಧಿಕ ಲಾಭ ಪಡೆಯುತ್ತಿದ್ದಾರೆ. ಸಲೋಟಾ ಅವರು ಮಹಾರಾಷ್ಟ್ರದ ಪುಣೆಯಲ್ಲಿ ರಾಸ್ಪ್ಬೆರಿ ಮತ್ತು ಬ್ಲೂಬೆರ್ರಿ ಬೆಳೆಯುವ ಮೂಲಕ ಕೃಷಿ ಉದ್ಯಮಕ್ಕೆ ಪ್ರವೇಶಿಸಿದ್ದು, ಈ ಬಾರಿ ಅವನ ಕನಸಿನಂತೆ ಭರ್ಜರಿ ಇಳುವರಿಯನ್ನು ಕೂಡ ಪಡೆದುಕೊಂಡಿದ್ದಾರೆ. ಈ ಮೂಲಕ ಸ್ವಉದ್ಯೋಗ ಸ್ಥಾಪಿಸಿ ಹಲವರಿಗೆ ಉದ್ಯೋಗ ಕೂಡ ನೀಡುವ ಮೂಲಕ ಪ್ರದೇಶದ ಆರ್ಥಿಕ ಕ್ರಾಂತಿಗೂ ಕಾರಣರಾಗಿದ್ದಾರೆ. ಸದ್ಯ ಅವರ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯೋಣ.
ಯಾರೀಕೆ ಕೀಯಾ ಸಾಲೋಟ್?
ಗುಜರಾತ್ ಮೂಲದವರಾಗಿರುವ ಸಲೋಟಾ ಅವರು ಚಿಕ್ಕಂದಿನಿಂದಲೇ ಉದ್ಯಮಿಯಾಗಬೇಕೆನ್ನುವ ಆಸೆ, ಹಂಬಲ ಹೊಂದಿದ್ದರು. ಅದೂ ಅಲ್ಲದೆ ಅವರು ವ್ಯವಹಾರಗಳು ಮತ್ತು ಉದ್ಯಮಿಗಳ ನಡುವೆ ಬೆಳೆದಿದ್ದ ಹಿನ್ನೆಲೆಯಲ್ಲಿ ಅವರ ಮೇಲೆ ಸಾಕಷ್ಟು ಪ್ರಭಾವ ಬೀರಿತ್ತು. ಆದರೂ ಉದ್ಯಮಶೀಲತೆ ಸೇರಿದಂತೆ ಜೀವನದಲ್ಲಿ ಭದ್ರ ಬುನಾದಿಗಾಗಿ ಅಡಿಪಾಯಕ್ಕೆ ಉತ್ತಮ ಶಿಕ್ಷಣ ಅಗತ್ಯ ಎಂದು ಕೀಯಾ ಮತ್ತು ಅವರ ಕುಟುಂಬಕ್ಕೆ ತಿಳಿದಿತ್ತು. ಹೀಗಾಗಿ ಶಿಕ್ಷಣದಲ್ಲಿ ಉತ್ತಮ ಪ್ರಗತಿ ಸಾಧಿಸಿದ ಅವರು ಮುಂದೆ ವಕೀಲೆಯಾಗಿ ತನ್ನ ವೃತ್ತಿ ಜೀವನ ಆರಂಭಿಸಿದ್ದರು. ಇನ್ನು ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಗುಜತಾತಿಗಳು ವ್ಯವಹಾರದಲ್ಲಿ ತುಸು ಮುಂದೆ ಇರುತ್ತಾರೆ ಎಂಬ ಮಾತಿದೆ. ಇದಕ್ಕೆ ಸಲೋಟಾ ಕೂಡ ಭಿನ್ನವಾಗಿರಲಿಲ್ಲ. ವಕೀಲೆ ವೃತ್ತಿಯಲ್ಲಿದ್ದರೂ ಸಲೋಟಾ ತನ್ನ ಬಾಲ್ಯದ ಕನಸಾದ ಉದ್ಯಮವನ್ನು ಸ್ಥಾಪಿಸಲು ಹೆಚ್ಚಿನ ಹರಸಾಹಸ ಪಟ್ಟರು. ಮುಂಬೈನ IB (ಇಂಟರ್ನ್ಯಾಷನಲ್ ಬ್ಯಾಕಲೌರಿಯೇಟ್) ಶಾಲೆಯಲ್ಲಿ ಓದಿದ್ದ ಕೀಯಾಗೆ ಶಾಲೆಯಲ್ಲಿ ಜಾಗತಿಕ ವಿದ್ಯಾಮಾನದ ಸಂಗತಿಯನ್ನು ಅರಿತುಕೊಂಡರು. ಹಾಗಾಗಿ ಕಾನೂನು ಅಧ್ಯಯನ ಮಾಡಿದರು. ಮುಂಬೈನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಐದು ವರ್ಷಗಳ BLS ಮತ್ತು LLB ಕೋರ್ಸ್ ಅಧ್ಯಯನ ಮಾಡಿದರು. ಅಲ್ಲದೆ ತನ್ನ ಉದ್ಯಮಿಯಾಗಲು ಪೂರಕ ಎನ್ನುವಂತೆ ಕಾರ್ಪೋರೇಟ್ ಕಾನೂನಿನಲ್ಲಿ ಪದವಿ ಪಡೆದರು. ಈ ಮೂಲಕ ಅವರು ಕಾನೂನು ಚೌಕಟ್ಟಿನಲ್ಲಿ ಇದ್ದುಕೊಂಡು ಉದ್ಯಮ ಉದ್ಯಮಿಯಾಗುವುದು ಹೇಗೆ ಎನ್ನುವ ನಿಟ್ಟಿನಲ್ಲಿ ಉತ್ತಮ ಜ್ಞಾನ ಪಡೆದುಕೊಂಡರು.

2014 ರಲ್ಲಿ ತನ್ನ ಕಾನೂನು ಕೋರ್ಸ್ ಅನ್ನು ಪೂರ್ಣಗೊಳಿಸಿ, ಮುಂದಿನ 3.5 ವರ್ಷಗಳ ಕಾಲ ಭಾರತದ ಕೆಲವು ಉನ್ನತ ಕಾನೂನು ಸಂಸ್ಥೆಗಳೊಂದಿಗೆ ಕೆಲಸ ಮಾಡಿದರು. 2018ರ ತನ್ನ ಫ್ಯಾಮಿಲಿ ಕಚೇರಿಯ ಮೇಲ್ಛಾವಣಿಯಲ್ಲಿ ಮೈಕ್ರೋಗ್ರೀನ್‌ಗಳನ್ನು ಬೆಳೆಸುವ ಮೂಲಕ ಕೃಷಿ ಜೀವನ ಆರಂಭಿಸಿದ್ದರು. ಸುಮಾರು 25-30 ವಿಧದ ಮೈಕ್ರೋಗ್ರೀನ್‌ಗಳನ್ನು ಸಲೋಟಾ ಅವರು ಬೆಳೆಸಿದರು. ಹೀಗೆ ಬೆಳೆಸಿದ ಮೈಕ್ರೋಗ್ರೀನ್‌ಗಳನ್ನು ಅವರು ದೊಡ್ಡ ದೊಡ್ಡ ಹೊಟೇಲ್‌ಗಳಿಗೆ ಪೂರೈಸುವ ಮೂಲಕ ಲಾಭ ಗಳಿಸಿದರು.
2019ರಲ್ಲಿ ಬದಲಾದ ಅದೃಷ್ಟ
2019ರಲ್ಲಿ ಸಲೋಟಾ ಅವರು ಪತಿ ವಿಮಲ್ ಜೊತೆ ಮೆಕ್ಸಿಕೋ ಹಾಗೂ ಯುರೋಪ್‌ಗೆ ಪ್ರಯಾಣಿಸಿ ಕೃಷಿ ಆವಿಷ್ಕಾರಗಳ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಿದರು. ಅಲ್ಲಿ ಅವರು ರಾಸ್ಬೆರಿ ಹಾಗೂ ಬೆರಿ ಹಣ್ಣುಗಳ ಸಾಕಣೆ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಿದರು. ಹೀಗೆ ಅಲ್ಲಿ ಗಮನಿಸಿದ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಭಾರತದಲ್ಲೂ ಕೂಡ ರಾಸ್ಬೆರಿ ಹಾಗೂ ಬ್ಲೂಬೆರ್ರಿ ಹಣ್ಣುಗಳನ್ನು ಬೆಳೆಸುವ ಇಚ್ಛೆ ವ್ಯಕ್ತಪಡಿಸಿದರು. ಬ್ಲೂಬೆರ್ರಿ ಮತ್ತು ರಾಸ್ಪ್ಬೆರಿ ಹಣ್ಣುಗಳನ್ನು ಸೂಪರ್ಫುಡ್ ಎಂದು ಕರೆಯಲಾಗುತ್ತದೆ. ಬೆರ್ರಿ ಹಣ್ಣುಗಳು ಫೈಬರ್ ಮತ್ತು ಅತ್ಯುತ್ತಮ ನಿರೋಧಕ ಕೂಡ ಗುಣಗಳನ್ನು ಹೊಂದಿದೆ. ಅಲ್ಲದೆ ರಕ್ತದೊತ್ತಡವನ್ನು ಕಡಿಮೆ ಮಾಡಲು ಮತ್ತು ಹೃದ್ರೋಗವನ್ನು ತಡೆಯಲು ಸಹಾಯ ಮಾಡುತ್ತದೆ. ಆರೋಗ್ಯ ಪ್ರಜ್ಞೆಯ ಗ್ರಾಹಕರಿಂದ ಹೆಚ್ಚಿನ ಬೇಡಿಕೆಯನ್ನು ಹೊಂದಿದೆ. ಆದರೆ ಭಾರತವು ಬ್ಲೂಬೆರ್ರಿ ವಿಶ್ವದ ಅಗ್ರ ಆಮದುದಾರರಲ್ಲಿ ಒಂದಾಗಿದ್ದು, ಹಾಗಾಗಿ ಅವುಗಳನ್ನು ಇಲ್ಲೇ ಬೆಳೆಸಲು ನಿರ್ಧರಿಸಿದರು. ಆದರೆ ಈ ಎರಡೂ ಹಣ್ಣುಗಳನ್ನು ಬೆಳೆಸಲು ಶೀತ ವಾತಾವರಣ ಅಗತ್ಯವಿರುವುದನ್ನು ದಂಪತಿ ಗಮನಿಸಿಕೊಂಡರು. ಹಾಗಾಗಿ 2020ರಲ್ಲಿ ಭಾರತೀಯ ಹವಾಮಾನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಸಸ್ಯಗಳನ್ನು ವಿದೇಶದಿಂದ ಆಮದು ಮಾಡಿಕೊಂಡರು. 2021 ರಲ್ಲಿ ಮೊದಲ ಇಳುವರಿಯನ್ನು ಕೊಯ್ಲು ಮಾಡಿಕೊಂಡರು. ಇಲ್ಲಿ ಬಂದ ಫಸಲುಗಳನ್ನು ಸ್ಟಾರ್ ಬಜಾರ್‌ಗೆ ಮಾರಾಟ ಮಾಡಿದರು. ಅಲ್ಲದೆ ಒಂದು ವರ್ಷದೊಳಗೆ ಫಸಲು ಬಂದಿದ್ದು, ಅದನ್ನು ದೊಡ್ಡ ಪ್ರಮಾಣದಲ್ಲಿ ಮಾಡಬಹುದು ಎಂಬ ವಿಶ್ವಾಸ ದಂಪತಿಗೆ ಬಂದಿತು. ಅದರಂತೆ ಮಹಾರಾಷ್ಟ್ರದ ಪುಣೆಯ ತಾಲೇಗಾಂವ್‌ನಲ್ಲಿ ರೈತರಿಂದ 20 ಎಕರೆ ಭೂಮಿಯನ್ನು ಗುತ್ತಿಗೆಗೆ ತೆಗೆದುಕೊಂಡು ಅದಕ್ಕೆ ಫಾರ್ಮ್ 2 ಫ್ಯಾಮ್ ಎಂದು ಹೆಸರಿಟ್ಟರು. ಮುಂದಿನ ಅವಧಿಯಲ್ಲಿ ಬರೊಬ್ಬರಿ 1.35 ಟನ್ ಫಸಲಿನ ನಿರೀಕ್ಷೆಯಲ್ಲಿರುವ ಸಲೋಟಾ ಅವರಿಗೆ ತಾನು ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಖುಷಿ ಇದೆ.
ಮಹಿಳೆಯರೇ ಮೇಲುಗೈ
ಇನ್ನು 20 ಎಕ್ಕರೆ ಪ್ರದೇಶದಲ್ಲಿರುವ ಈ ಫಾರ್ಮ್ ಅನ್ನು ಕೇವಲ ಮಹಿಳೆಯೊಬ್ಬರೇ ಮುನ್ನಡೆಸುತ್ತಿಲ್ಲ. ಬದಲಾಗಿ ಇಲ್ಲಿ ಸುಮಾರು 75 ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದು, ಹೆಚ್ಚಿನವರು ಮಹಿಳೆಯರೇ ಆಗಿದ್ದಾರೆ. ಈ ಮೂಲಕ ಅವರು ಮಹಿಳಾ ಸ್ವಾವಲಂಬನೆ ವಿಚಾರದಲ್ಲಿ ಕೂಡ ತನ್ನದೇ ಆದ ಕೊಡುಗೆ ನೀಡಿದ್ದಾರೆ. ಇನ್ನು ಸ್ಟಾರ್ ಬಜಾರ್, ಕಿಸಾನ್‌ಕನೆಕ್ಟ್, ರಿಲಯನ್ಸ್ ರೀಟೇಲ್ ಮತ್ತು ನೇಚರ್ಸ್ ಬಾಸ್ಕೆಟ್ ಮುಂತಾದ ಆಫ್‌ಲೈನ್ ಸಂಸ್ಥೆಗೂ ಅವರು ತನ್ನ ಉತ್ಪನ್ನಗಳನ್ನು ಪೂರೈಸುತ್ತಿದ್ದು, ಅಧಿಕ ಲಾಭ ಪಡೆಯುತ್ತಿದ್ದಾರೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?



Click it and Unblock the Notifications