ನವದೆಹಲಿ, ಮೇ 17: ಒಂದು ಕಾಲದಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಕೇವಲ ಎರಡೂವರೆ ವರ್ಷದಲ್ಲಿ ಎಷ್ಟು ಸಂಪಾದಿಸಬಹುದು? ಅಬ್ಬಾಬ್ಬ ಎಂದರೆ ಒಂದೆರಡು ಕೋಟಿ. ಆದರೆ ಇಂದು ಯೂಟ್ಯೂಬರ್ ಹಾಗೂ ಇಬ್ಬರು ಪತ್ನಿಯ ಮುದ್ದಿನ ಗಂಡನಾಗಿರುವ ಹರ್ಯಾಣ ಮೂಲದ ವ್ಯಕ್ತಿಯ ಆಸ್ತಿ ಸಂಪಾದನೆ ಹಾಗೂ ಜೀವನ ಕಥೆ ಹುಬ್ಬೇರಿಸುವಂತೆ ಮಾಡುತ್ತದೆ.
ಹೌದು ಯೂಟ್ಯೂಬರ್ ಆಗಿರುವ ಅರ್ಮಾನ್ ಮಲಿಕ್ ಅವರ ಜೀವನ ಶೈಲಿಯನ್ನು ಬೆರಗುಗೊಳಿಸುವಂತಿದೆ. ಒಂದು ಕಾಲದಲ್ಲಿ ಮೆಕ್ಯಾ ನಿಕ್ ಆಗಿ ಕೆಲಸಮಾಡುತ್ತಿದ್ದ ಅರ್ಮಾನ್ ಪ್ರಸ್ತುತ 10 ಫ್ಲಾಟ್ ಗಳ ಒಡೆಯರಾಗಿದ್ದಾರೆ. ಇದು ಕೇವಲ ಕೇವಲ ಎರಡೂವರೆ ವರ್ಷಗಳಲ್ಲಿ ಅವರು ಯೂಟ್ಯೂಬ್ ಮೂಲಕ ಸಂಪಾದಿಸಿರುವುದು ಅತ್ಯಂತ ಅಚ್ಚರಿಯ ಸಂಗತಿಯೇ ಸರಿ.

ಸಿದ್ಧಾರ್ಥ್ ಕಾನನ್ ಅವರ ಪಾಡ್ ಕಾಸ್ಟ್ ನಲ್ಲಿ ಭಾಗವಹಿಸಿದ್ದ, ಅರ್ಮಾನ್, ಮತ್ತು ಅವರ ಇಬ್ಬರು ಪತ್ನಿಯರಾದ ಕೃತಿಕಾ ಮತ್ತು ಪಾಯಲ್ ತಮ್ಮ ಜೀವನದ ಹಲವು ರಹಸ್ಯಗಳನ್ನು ಬಹಿರಂಗಗೊಳಿಸಿದ್ದಾರೆ. ಬಡತನದಿಂದ ಕೂಡಿದ ಬಾಲ್ಯ, ಹೋರಾಟದ ದಿನಗಳು, ಎಂಟನೇ ತರಗತಿಯಲ್ಲಿ ಎರಡು ಬಾರಿ ಅನುತ್ತೀರ್ಣನಾಗಿರುವುದು, ಮೆಕ್ಯಾನಿಕ್ ವೃತ್ತಿ, ಉತ್ತಮ ಶೈಕ್ಷಣಿಕ ಅರ್ಹತೆ ಹಾಗೂ ಉತ್ತಮ ಉದ್ಯೋಗ ಇಲ್ಲದ ಮಗನಿಗೆ ಮದುವೆಯಾಗಲು ಹೆಣ್ಣು ಸಿಕ್ಕಿತೇ ಎಂಬ ಅವರ ತಾಯಿಯ ಆತಂಕಗಳು, ಹೀಗೆ ಎಲ್ಲ ಏಳು ಬೀಳುಗಳನ್ನು ಎದುರಿಸಿ ಅರ್ಮಾನ್ ತನ್ನ ಹಾದಿಯನ್ನು ಸ್ವಂತ ರೂಪಿಸಿಕೊಂಡಿದ್ದಾರೆ ಎಂದರೆ ತಪ್ಪಾಗಲಾರದು.
ಪಾಡ್ ಕಾಸ್ಟ್ ನಲ್ಲಿ ಅವರ ನಿವ್ವಳ ಮೌಲ್ಯದ ಬಗ್ಗೆ ಪ್ರಶ್ನಿಸಿದಾಗ, ಅರ್ಮಾನ್ 100-200 ಕೋಟಿ ರೂ.ಗಳ ನಡುವೆ ಅಂದಾಜು ಮಾಡಿದ್ದಾರೆ. ಬಡತನದಿಂದ ಸಿರಿವಂತಿಕೆಯ ಕಡೆ ಜೀವನ ರೂಪಿಸಿಕೊಂಡ ಅವರು, ಇಂದು 10 ಫ್ಲಾಟ್‌ಗಳನ್ನು ಹೊಂದಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.. ಅವುಗಳಲ್ಲಿ ನಾಲ್ಕು ಅವರ ಇಬ್ಬರು ಹೆಂಡತಿಯರು ಮತ್ತು ನಾಲ್ಕು ಮಕ್ಕಳಿಗಾಗಿ ಇದ್ದರೆ, ಆದರೆ ಉಳಿದ ಆರು ಅವರ ಜೊತೆ ಇರುವ ಟೀಂ ಮತ್ತು ಸಿಬ್ಬಂದಿಗಳಿಗಾಗಿ ಹಂಚಿದ್ದಾರೆ. ಸಂಪೂರ್ಣ ಸುಸಜ್ಜಿತ ಸ್ಟುಡಿಯೊದ ಜೊತೆ ಆರು ಎಡಿಟರ್ಸ್, ಇಬ್ಬರು ಚಾಲಕರು, ಒಂಬತ್ತು ಸಹಾಯಕರು ಒಳಗೊಂಡ ತಂಡವು ಅರ್ಮಾನ್‌ನ ಸಾಮ್ರಾಜ್ಯಕ್ಕೆ ಹಾಗೂ ಅವರ ಯಶಸ್ಸಿಗೆ ಸಾಕ್ಷಿಯಾಗಿದೆ.
ಅರ್ಮಾನ್ ಚಿಕ್ಕ ವಯಸ್ಸಿನಲ್ಲೇ ತನ್ನ ಹೆತ್ತವರನ್ನು ಕಳೆದುಕೊಂಡಿದ್ದು, ಇದರ ನೋವಿದ್ದರೂ ಇಂದು ಅವರು ತಮ್ಮ ತನ್ನ ಸಿಬ್ಬಂದಿ ವರ್ಗವನ್ನು ತಮ್ಮ ಕುಟುಂಬವೆಂದು ಪರಿಗಣಿಸುತ್ತಾನೆ. ತನ್ನೊಂದಿಗೆ ಕೆಲಸಮಾಡುವ ಸಿಬ್ಬಂದಿಗಳು ಎಂದಿಗೂ ಕೆಲಸ ಬಿಟ್ಟು ಹೋಗಲು ಸಾಧ್ಯವಾಗದಂತಹ ಅತ್ಯುತ್ತಮ ಜೀವನಶೈಲಿಯನ್ನು ನೀಡಬೇಕು ಎಂಬುವುದು ಅವರ ಬಯಕೆಯಾಗಿದೆ. ಅವರ ಸಿಬ್ಬಂದಿ ವರ್ಗವೂ ಹೋಳಿ-ದೀಪಾವಳಿಯಲ್ಲೂ ಅವರ ಮನೆಗೆ ಹೋಗುವುದಿಲ್ಲ ಎನ್ನುವ ಅವರು ತಂಡಕ್ಕೆ ಅವರೊಂದಿಗೆ ಹಾಗೂ ಅವರಿಗೆ ತಂಡದೊಂದಿಗೆ ಇರುವ ಪ್ರೀತಿಯನ್ನು ತೋರಿಸುತ್ತದೆ.
ಕೋವಿಡ್ ಸಮಯದಲ್ಲಿ ತನ್ನ ಬಳಿ ಏನೂ ಇರಲಿಲ್ಲ. ಆ ವೇಳೆ ಟಿಕ್- ಟಾಕ್ ನಿಂದ ತಿಂಗಳಿಗೆ ಎರಡೂವರೆ ಲಕ್ಷ ರೂಪಾಯಿ ಸಂಪಾದಿಸುತ್ತಿದ್ದೆ . ಇದರ ನಂತರ, ನಿಧಾನವಾಗಿ ಸಾಮಾಜಿಕ ಜಾಲತಾಣದ ವಿಷಯಗಳನ್ನು ಅರಿಯುತ್ತಾ ಎರಡೂವರೆ ವರ್ಷಗಳಲ್ಲಿ ಯೂಟ್ಯೂಬ್ ನಿಂದ ಅಪಾರ ಹಣ ಗಳಿಸಿದ್ದಾರೆ ಎನ್ನುತ್ತಾರೆ ಅರ್ಮಾನ್.


Click it and Unblock the Notifications