ಲಾರ್ಸನ್ ಮತ್ತು ಟರ್ಬೊ ಅಧ್ಯಕ್ಷ ಎಸ್.ಎನ್.ಸುಬ್ರಹ್ಮಣ್ಯ ಅವರು ನೌಕರರು ಭಾನುವಾರವೂ ಸೇರಿ ವಾರಕ್ಕೆ 90 ಗಂಟೆಗಳ ಕಾಲ ಕೆಲಸ ಮಾಡಲಿ ಎಂದಿರುವುದು ಕೆಲಸ-ಜೀವನದ ಸಮತೋಲನದ (life and work balance) ಚರ್ಚೆಗೆ ಮತ್ತಷ್ಟು ಕಿಚ್ಚು ಹೊತ್ತಿಸಿದೆ. ಅವರ ಹೇಳಿಕೆಯ ಬಗ್ಗೆ ವಾರಕ್ಕೆ 90 ಗಂಟೆಗಳ ಕೆಲಸ' ಎಂಬ ಹೇಳಿಕೆ ಬಗ್ಗೆಅನೇಕ ಗಣ್ಯರು ಕೂಡಾ ಪ್ರತಿಕ್ರಿಯಿಸಿದ್ದು ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿದ್ದಾರೆ. ಬಂಡವಾಳಶಾಹಿಗಳು ನೌಕರರನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದರ ಬಗ್ಗೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ.
ಕೌಂಟರ್ ಕೊಟ್ಟ ಗಣ್ಯರು
ಇವುಗಳಲ್ಲಿ ಸಕತ್ ಆಗಿ ಕೌಂಟರ್ ಕೊಟ್ಟಿರುವುದು ಬಜಾಜ್ ಆಟೋ ಮುಖ್ಯಸ್ಥರಾಗಿರುವ ರಾಜೀವ್ ಬಜಾಜ್. ಮೊದಲಿಗೆ ಬಾಸ್ ಗಳು ವಾರಕ್ಕೆ 90 ಗಂಟೆಗಳ ಕೆಲಸ ಮಾಡುವ ಮೂಲಕ ಸಾಧಿಸಿ ತೋರಿಸಬೇಕು ಎಂದಿದ್ದಾರೆ. ಹೇಳಿಕೆ ನೀಡುವುದು ಸುಲಭ. ಆದರೆ ಹೇಳಿದಂತೆ ನಡೆದುಕೊಳ್ಳುವುದು ಕಷ್ಟ. ಓಡಾಟದ ಸಮಯವನ್ನು ಲೆಕ್ಕ ಹಾಕಿದಾರೆ ಜನರು ಈಗಾಗಲೇ ದಿನಕ್ಕೆ೧೨ ಗಂಟೆಗೂ ಹೆಚ್ಚು ಕಾಲ ಕೆಲಸ ಮಾಡುತ್ತಾರೆ ಎಂದು ತಿರುಗೇಟು ನೀಡಿದ್ದಾರೆ.

ಸುಬ್ರಮಣಿಯನ್ ಅವರ ಹೇಳಿಕೆಗಳಿಗೆ ಪ್ರಮುಖ ಕೈಗಾರಿಕೋದ್ಯಮಿ ಮತ್ತು ಆರ್‌ಪಿಜಿ ಗ್ರೂಪ್ ಅಧ್ಯಕ್ಷ ಹರ್ಷ್ ಗೋಯೆಂಕಾರವರು, ಕೆಲಸ- ಜೀವನದ ಸಮತೋಲನವು ಒಂದು ಆಯ್ಕೆಯಲ್ಲ, ಅದು ಅಗತ್ಯ. ನಿಮ್ಮ ಕಲ್ಪನೆಯಂತೆ ಭಾನುವಾರವನ್ನು "ಸನ್-ಡ್ಯೂಟಿ" ಎಂದು ಹೆಸರು ಬದಲಿಸಬಹುದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಇಂತಹ ನಿರ್ಧಾರಗಳು ಯಶಸ್ಸಿಗೆ ಅಲ್ಲ, ವಿನಾಶಕ್ಕೆ ಕಾರಣವಾಗುತ್ತವೆ ಎಂದು ಹೇಳಿರುವ ಅವರು "ವರ್ಕ್ ಸ್ಮಾರ್ಟ್ ನಾಟ್ ಸ್ಲೇವ್" ಎಂಬ ಹ್ಯಾಶ್‌ಟ್ಯಾಗ್ ಅನ್ನು ಕೂಡ ಸೇರಿಸಿದ್ದಾರೆ.
ಭಾರತದ ಮಾಜಿ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಈ ಹೇಳಿಕೆ ವಿರೋಧಿಸಿ ಮಾತನಾಡಿದ್ದು, " ವಿದ್ಯಾವಂತರು ಮತ್ತು ಹಿರಿಯ ಹುದ್ದೆಗಳನ್ನು ಹೊಂದಿರುವ ವ್ಯಕ್ತಿಗಳು ಉದ್ಯೋಗಿಗಳ ಮಾನಸಿಕ ಆರೋಗ್ಯ ಮತ್ತು ಸಮತೋಲನವನ್ನು ಕಡೆಗಣಿಸುವುದು ಮತ್ತು ಸಾರ್ವಜನಿಕವಾಗಿ ಲಿಂಗ ತಾರತಮ್ಯದ ಹೇಳಿಕೆಗಳನ್ನು ನೀಡುವುದು ನಿರಾಶಾದಾಯಕ ಮತ್ತು ಅರ್ಥವಾಗದ ಸಂಗತಿ" ಎಂದು ಹೇಳಿದ್ದಾರೆ
ನಟಿ ದೀಪಿಕಾ ಪಡುಕೋಣೆಯೂ " ಇಂತಹ ಉನ್ನತ ಸ್ಥಾನಗಳಲ್ಲಿ ಇರುವ ಜನರು ಇಂತಹ ಹೇಳಿಕೆಗಳನ್ನು ನೀಡುವುದು ಆಘಾತಕಾರಿ. ಮಾನಸಿಕ ಆರೋಗ್ಯ ಮುಖ್ಯ" ಎಂದು ಹ್ಯಾಶ್ಟ್ಯಾಗ್ ಹಾಕಿ ಪೋಸ್ಟ್ ಮಾಡಿದ್ದಾರೆ.
ನೆಟಿಜನ್‌ಗಳ ಪ್ರತಿಕ್ರಿಯೆ
2024 ರಲ್ಲಿ ನಡೆದ ಘಟನೆಯನ್ನು ತೆಗೆದುಕೊಂಡರೆ, ವಿಷಕಾರಿ ಕೆಲಸದ ಸಂಸ್ಕೃತಿಯಿಂದಾಗಿ 26 ವರ್ಷದ ಅನ್ನಾ ಸೆಬಾಸ್ಟಿಯನ್ ಪೆರೈಲ್ ಅವರ ದುರಂತ ಸಾವು " ಕೆಲಸ ಮತ್ತು ವೈಯಕ್ತಿಕ ಜೀವನವನ್ನು ಸಮತೋಲನಗೊಳಿಸುವ ಹೋರಾಟದ ಬಗ್ಗೆ ಭಾರತದಲ್ಲಿ ವ್ಯಾಪಕ ಚರ್ಚೆಗೆ ಹುಟ್ಟುಹಾಕಿತ್ತು.
ಈಗಲೂ ಕೂಡಾ ಉದ್ಯೋಗಿಗಳಿಗೆ ಕೆಲಸ-ಜೀವನ ಸಮತೋಲನ ಅಗತ್ಯವಿದೆ ಎಂಬುದನ್ನು ಒಪ್ಪಿಕೊಳ್ಳಲು ಬಂಡವಾಳಶಾಹಿಗಳು ಉನ್ನತ ಹುದ್ದೆಯಲ್ಲಿದ್ದವರು ಅನೇಕರು ನಿರಾಕರಿಸುತ್ತಾ ಬಂದಿದ್ದಾರೆ. ಉದ್ಯೋಗಿಗಳ ಬೇಡಿಕೆಗಳನ್ನು ನಿರ್ಲಕ್ಷಿಸುವುದರಿಂದ ಅವರ ಯೋಗಕ್ಷೇಮ ಮತ್ತು ಉತ್ಪಾದಕತೆಯ ಮೇಲೆ ಪರಿಣಾಮ ಬೀರುತ್ತದೆ ಎಂಬುವುದನ್ನು ಅರ್ಥಮಾಡಿಕೊಳ್ಳಲು ಸೋತಂತೆ ಕಾಣುತ್ತದೆ ಎಂದು ನೆಟ್ತಿಗರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಒಬ್ಬ ನೆಟ್ಟಿಗನು ವ್ಯಂಗ್ಯವಾಗಿ, "ಉದ್ಯೋಗಿಗಳು ಎಷ್ಟು ಸಮಯದವರೆಗೆ ಪರದೆಗಳು ಮತ್ತು ಡೇಟಾ ನಿರ್ವಾಹಕರನ್ನು ನೋಡುತ್ತಿರಬಹುದು?" ಎಂದು ಕಾಮೆಂಟ್ ಮಾಡಿದ್ದಾರೆ.
ಮತ್ತೋರ್ವ ನೇರವಾಗಿ ಪ್ರಶ್ನಿಸಿದ್ದು "ನೀವು ಏಕೆ ಬದುಕುತ್ತಿದ್ದೀರಿ? ಈ ಕೆಲಸದ ರಾಶಿಯೊಂದಿಗೆ ಜೀವಿಸಿ.'" ಎಂದು ಹೇಳಿದ್ದಾರೆ. ಇನ್ನು ಕೆಲವರು ಸುಬ್ರಮಣಿಯನ್ ಅವರ ಹೇಳಿಕೆಯೂ" ಲಿಂಗ ತಾರತಮ್ಯದ ಮತ್ತು ಕುಟುಂಬ ವಿರೋಧಿ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ" ಎಂದು ಹೇಳಿದ್ದಾರೆ.
ಮತ್ತೋರ್ವ ನೆಟ್ಟಿಗ" ಎಲ್ & ಟಿ ಅಧ್ಯಕ್ಷ ಸುಬ್ರಹ್ಮಣ್ಯನ್ ಅವರ ವೇತನವು ಎಲ್ & ಟಿ ಉದ್ಯೋಗಿಗಳ ಸರಾಸರಿ ವೇತನದ 534.57 ಪಟ್ಟು ಹೆಚ್ಚಾಗಿದೆ. ನನಗೆ ವರ್ಷಕ್ಕೆ 56 ಕೋಟಿ ಮತ್ತು ಲಾರ್ಸೆನ್ ಮತ್ತು ಟೂಬ್ರೊ ಅಧ್ಯಕ್ಷರಂತಹ ಎಲ್ಲಾ ಸವಲತ್ತುಗಳನ್ನು ಪಾವತಿಸಿದರೆ, ಭಾನುವಾರವನ್ನು ಮರೆತುಬಿಡಿ, ನಾನು ಕೆಲಸ ಮಾಡಲು ವಾರದಲ್ಲಿ 7 ದಿನಗಳಿಗಿಂತ ಹೆಚ್ಚು ದಿನಗಳನ್ನು ಆವಿಷ್ಕರಿಸುತ್ತೇನೆ" ಎಂದು ವ್ಯಂಗವಾಡಿದ್ದಾರೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ



Click it and Unblock the Notifications