ನವದೆಹಲಿ, ಏಪ್ರಿಲ್ 4: ಮಾರುಕಟ್ಟೆಯಲ್ಲಿ ಅನೇಕ ವಿಧದ ಆರೋಗ್ಯ ಪಾನೀಯಗಳು (ಹೆಲ್ತ್ ಡ್ರಿಂಕ್ಸ್) ಜನಪ್ರಿಯವಾಗಿವೆ. ಆದರೆ ಈ ಉತ್ಪನ್ನಗಳು ಹಲವಾರು ಆರೋಗ್ಯ ಪ್ರಯೋಜನಗಳನ್ನು ಭರವಸೆ ನೀಡುತ್ತವೆಯಾದರೂ, ಅವು ಎಷ್ಟರ ಮಟ್ಟಿಗೆ ಆರೋಗ್ಯಕರ ಎಂಬುವುದರ ಬಗ್ಗೆ ಯಾವುದೇ ಖಚಿತತೆ ಇಲ್ಲ.
ಹೀಗಾಗಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಎಲ್ಲಾ ಇ-ಕಾಮರ್ಸ್ ಕಂಪನಿಗಳಿಗೆ ತಮ್ಮ ವೆಬ್‌ಸೈಟ್‌ಗಳಲ್ಲಿ ಮಾರಾಟವಾಗುತ್ತಿರುವ ಆಹಾರ ಉತ್ಪನ್ನಗಳಿಗೆ, ಸೂಕ್ತ ವರ್ಗೀಕರಣದಡಿಯಲ್ಲಿ ಮತ್ತು ಸರಿಯಾದ ಲೇಬಲಿಂಗ್ ಮಾಡಿರುವ ಬಗ್ಗೆ ಖಚಿತಪಡಿಸಿಕೊಳ್ಳುವಂತೆ ನಿರ್ದೇಶನವನ್ನು ನೀಡಿದೆ.

ಈ ಆರೋಗ್ಯ ಪಾನೀಯಗಳು ಡೈರಿ-ಆಧಾರಿತ, ಏಕದಳ ಧಾನ್ಯ -ಆಧಾರಿತ (cereal-based) ಅಥವಾ ಮಾಲ್ಟ್-ಆಧಾರಿತ ಪಾನೀಯಗಳನ್ನು "ಆರೋಗ್ಯ ಪಾನೀಯಗಳು" ಅಥವಾ "ಎನರ್ಜಿ ಡ್ರಿಂಕ್ಸ್" ಎಂದು ಉಲ್ಲೇಖಿಸುವುದರ ವಿರುದ್ಧ ಎಫ್‌ಎಸ್‌ಎಸ್‌ಎಐ ಈ ನಿರ್ದಿಷ್ಟ ಸಲಹೆ ನೀಡಿದೆ. ಮಾಲ್ಟ್ ಆಧಾರಿತ ಪಾನೀಯಗಳನ್ನು 'ಆರೋಗ್ಯ ಪಾನೀಯ ಅಥವಾ ಶಕ್ತಿ ಪಾನೀಯ' ಎಂದು ದೇಶದ ಕಾನೂನಿನ ಒಳಗೆ ಉಲ್ಲೇಖಿಸುವಂತಿಲ್ಲ
ಎಫ್‌ಎಸ್‌ಎಸ್‌ಎಐ 'ಹೆಲ್ತ್ ಡ್ರಿಂಕ್' ಪದವನ್ನು ಎಫ್‌ಎಸ್‌ಎಸ್ ಕಾಯಿದೆ 2006 ಅಥವಾ ಅದರ ಅಡಿಯಲ್ಲಿ ಮಾಡಿದ ನಿಯಮಗಳು/ನಿಯಮಗಳ ಅಡಿಯಲ್ಲಿ ಎಲ್ಲಿಯೂ ವ್ಯಾಖ್ಯಾನಿಸಲಾಗಿಲ್ಲ ಅಥವಾ ಪ್ರಮಾಣೀಕರಿಸಲಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಆದ್ದರಿಂದ, FSSAI ಎಲ್ಲಾ ಇ-ಕಾಮರ್ಸ್ FBO ಗಳಿಗೆ ತಮ್ಮ ವೆಬ್‌ಸೈಟ್‌ಗಳಲ್ಲಿ 'ಹೆಲ್ತ್ ಡ್ರಿಂಕ್ಸ್ / ಎನರ್ಜಿ ಡ್ರಿಂಕ್ಸ್' ವರ್ಗದಿಂದ ಅಂತಹ ಪಾನೀಯಗಳನ್ನು ತೆಗೆದುಹಾಕುವ ಅಥವಾ ಡಿ-ಲಿಂಕ್ ಮಾಡುವ ಮೂಲಕ ಈ ತಪ್ಪು ವರ್ಗೀಕರಣವನ್ನು ತ್ವರಿತವಾಗಿ ಸರಿಪಡಿಸಲು ಸಲಹೆ ನೀಡಿದೆ
ಫುಡ್ ಕ್ಯಾಟಗರಿ ಸಿಸ್ಟಂ (FCS) 14.1.4.1 ಮತ್ತು 14.1.4.2 ಕಾಯ್ದೆಯಲ್ಲಿ (ಕಾರ್ಬೊನೇಟೆಡ್ ಮತ್ತು ಕಾರ್ಬೊನೇಟೆಡ್ ಅಲ್ಲದ ನೀರು-ಆಧಾರಿತ ಸುವಾಸನೆಯ ಪಾನೀಯಗಳು) ಅಡಿಯಲ್ಲಿ ಪ್ರಮಾಣೀಕರಿಸಿದ ಉತ್ಪನ್ನಗಳ ಅಡಿಯಲ್ಲಿ ಪರವಾನಗಿ ಪಡೆದ ಉತ್ಪನ್ನಗಳ ಮೇಲೆ ಮಾತ್ರ - 'ಎನರ್ಜಿ' ಪಾನೀಯಗಳು ಎಂಬ ಪದವನ್ನು ಬಳಸಲು ಅನುಮತಿಸಲಾಗಿದೆ ಎಂದು FSSAI ಹೇಳಿದೆ. ಹೀಗಾಗಿ "ಎನರ್ಜಿ ಡ್ರಿಂಕ್ಸ್" ಬಳಕೆಯನ್ನು ನಿರ್ದಿಷ್ಟಪಡಿಸಿದ ಮಾನದಂಡದೊಳಗೆ ಬರುವ ಉತ್ಪನ್ನಗಳಿಗೆ ಮಾತ್ರ ಅನುಮತಿಸಲಾಗಿದೆ.
ಪಾನೀಯದಲ್ಲಿರುವ ತಪ್ಪಾದ ವ್ಯಾಖ್ಯಾನವು ಗ್ರಾಹಕರಿಗೆ ತಪ್ಪುದಾರಿಗೆಳೆಯಬಹುದು ಹೀಗಾಗಿ, FSSAI ಇಂತಹ ತಪ್ಪಾಗಿ ಲೆಬಲಿಂಗ್ ಮಾಡಿರುವ ಆಹಾರ ಉತ್ಪನ್ನಗಳನ್ನು ತತಕ್ಷಣವೇ ಸರಿಪಡಿಸಲು ಇ-ಕಾಮರ್ಸ್ ನಿರ್ದೇಶನ ನೀಡಿದೆ. ಇಂತಹ ಪಾನೀಯಗಳನ್ನು "ಆರೋಗ್ಯ ಪಾನೀಯಗಳು / ಎನರ್ಜಿ ಡ್ರಿಂಕ್ಸ್ ಪಾನೀಯಗಳು " ವರ್ಗದಿಂದ ತೆಗೆದುಹಾಕಬೇಕು ಅಥವಾ ಡಿ-ಲಿಂಕ್ ಮಾಡಬೇಕು ಎಂದು ಸೂಚಿಸಿದೆ.
ಗಮನಾರ್ಹವಾಗಿ, ಪೆಪ್ಸಿಕೋ, ಕೋಕಾ-ಕೋಲಾ ಮತ್ತು ಹೆಲ್‌ನಂತಹ ಕಂಪನಿಗಳು ಹಾಗೂ ರೆಡ್ ಬುಲ್ ಮತ್ತು ಮಾನ್‌ಸ್ಟರ್‌ನಂತಹ ಜಾಗತಿಕ ವರ್ಗದ ಕಂಪನಿಗಳು ಕೈಗೆಟಕುವ ಬೆಲೆಯಲ್ಲಿ ಎನರ್ಜಿ ಡ್ರಿಂಕ್ಸ್ ಹೆಸರಿನಲ್ಲಿ ಪಾನೀಯಗಳನ್ನು ಮಾರಾಟ ಮಾಡುತ್ತಿದೆ . ಇವುಗಳು ತಮ್ಮ ಕಡಿಮೆ ಬೆಲೆ ಹಾಗೂ ಆಕರ್ಷಕ ಪ್ಯಾಕೆಂಜಿಂಗ್ ನಿಂದ ಜನಪ್ರಿಯತೆಯನ್ನು ಗಳಿಸಿದ್ದು, ಪುಟ್ಟ ಪುಟ್ಟ ಕಿರಾಣಿ ಅಂಗಡಿಗಳಲ್ಲಿ ವ್ಯಾಪಕವಾಗಿ ಲಭ್ಯವಿದೆ. ಆದರೂ, ಎನರ್ಜಿ ಡ್ರಿಂಕ್ಸ್ ಗಳ ಹೆಚ್ಚುತ್ತಿರುವ ಬಳಕೆ, ವಿಶೇಷವಾಗಿ ಯುವಜನರಲ್ಲಿ, ಅದರಲ್ಲೂ ಮಿತಿಮೀರಿದ ಸೇವನೆ ಸಂಭಾವ್ಯವಾಗಿ ಆರೋಗ್ಯ್ ಮೇಲೆ ಪರಿಣಾಮಗಳು ಉಂಟುಮಾಡುತ್ತಿರುವುದು ನಿಜಕ್ಕೂ ಕಳವಳಕಾರಿಯಾಗಿದೆ.


Click it and Unblock the Notifications