ನೋಯೆಲ್ ಟಾಟಾ ಕೈಯಲ್ಲಿ ಟಾಟಾ ಗ್ರೂಪ್‌ ಭವಿಷ್ಯ : ಯಾರಿವರು?

ಟಾಟಾ ಗ್ರೂಪ್ ನ ಮಾಜಿ ಗೌರವಾಧ್ಯಕ್ಷ ರತನ್ ಟಾಟಾ ಅವರು ತಮ್ಮ 86 ನೇ ವಯಸ್ಸಿನಲ್ಲಿ 2024ರ ಅಕ್ಟೋಬರ್ 9ರಂದು ನಿಧನರಾಗಿದ್ದು ಇವರ ಉತ್ತರಾಧಿಕಾರಿಯಾಗಿ 67 ವರ್ಷದ ನೋಯೆಲ್ ಟಾಟಾ ಅವರನ್ನು ನೇಮಿಸಲಾಗಿದೆ.

ದಿವಂಗತ ರತನ್ ಟಾಟಾ ಅವರ ಮಲ ಸಹೋದರ ನೋಯೆಲ್ ಟಾಟಾ ಅವರು ಟಾಟಾ ಟ್ರಸ್ಟ್‌ನ ಮುಂದಿನ ಅಧ್ಯಕ್ಷರಾಗಲಿದ್ದಾರೆ. ಶುಕ್ರವಾರ ನಡೆದ ಟಾಟಾ ಟ್ರಸ್ಟ್ ಸಭೆಯಲ್ಲಿ ಸರ್ವಾನುಮತದಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಟಾಟಾ ಟ್ರಸ್ಟ್ ತುರ್ತಾಗಿ ಎರಡು ಸಭೆಗಳನ್ನು ನಡೆಸಿತ್ತು. ಒಂದು ಸಭೆಯಲ್ಲಿ ದಿವಂಗತರಾದ ರತನ್ ಟಾಟಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗಿದ್ದರೆ, ಮತ್ತೊಂದು ಟಾಟಾ ಟ್ರಸ್ಟ್ ಅಧ್ಯಕ್ಷರ ನೇಮಕಾತಿ ವಿಚಾರದಲ್ಲಿ ಚರ್ಚೆ ನಡೆದು ಟಾಟಾ ಟ್ರಸ್ಟ್‌ನ ಹೊಸ ಅಧ್ಯಕ್ಷರಾಗಿ ನೋಯೆಲ್ ಟಾಟಾ ಅವರ ಹೆಸರನ್ನು ಅಂತಿಮಗೊಳಿಸಲಾಯಿತು.

ನೋಯೆಲ್ ಟಾಟಾ ಕೈಯಲ್ಲಿ ಟಾಟಾ ಗ್ರೂಪ್‌ ಭವಿಷ್ಯ

ರತನ್ ಟಾಟಾ ಅವರ ನಿಧನದ ನಂತರ, ಟಾಟಾ ಪರಂಪರೆಯನ್ನು ಮುನ್ನಡೆಸುವವರು ಯಾರು ಎಂಬ ಪ್ರಶ್ನೆಗೆ ಉತ್ತರ ದೊರಕ್ಕಿದ್ದು ಸದ್ಯ ನೋಯೆಲ್ ಟಾಟಾ ಹೆಸರು ಕೇಳಿದೊಡನೆ ಇವರು ಯಾರು, ರತನ್ ಟಾಟಾ ಹಾಗೂ ನೋಯೆಲ್ ಟಾಟಾ ನಡುವೆ ನಂಟೇನು? ಅವರ ಉದ್ಯಮಗಳೇನು ಹೀಗೆ ಹಲವು ಸರಣಿ ಪ್ರಶ್ನೆಗಳು ಎಲ್ಲರ ಮನದೊಳಗೆ ಕಾಡತೊಡಗುತ್ತವೆ.

ನೋಯೆಲ್ ಟಾಟಾ ಅವರು ರತನ್ ಟಾಟಾ ಅವರ ತಂದೆ ನವಾಲ್ ಟಾಟಾ ಅವರ ಎರಡನೇ ಪತ್ನಿ ಸಿಮೋನ್ ಟಾಟಾ ಅವರ ಪುತ್ರ. ರತನ್ ಟಾಟಾ ಅವರ ಮಲ ಸಹೋದರರಗಿರುವ ನೋಯೆಲ್ ರತನ್ ಟಾಟಾ ಟ್ರಸ್ಟ್ ಮತ್ತು ದೊರಾಬ್ಜಿ ಟಾಟಾ ಟ್ರಸ್ಟ್‌ನ ಮಂಡಳಿಗಳಲ್ಲಿ ಟ್ರಸ್ಟಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸುಮಾರು ನಾಲ್ಕು ದಶಕಗಳಿಂದ ಈ ಗ್ರೂಪ್ ನೊಂದಿಗೆ ಸಂಬಂಧ ಹೊಂದಿದ್ದಾರೆ. ಟಾಟಾ ಗ್ರೂಪ್ ನ ಹಿಡುವಳಿ ಕಂಪನಿಯಾದ ಟಾಟಾ ಸನ್ಸ್ ನಲ್ಲಿ 66 % ಪಾಲನ್ನು ಹೊಂದಿರುವ ಟಾಟಾ ಟ್ರಸ್ಟ್ , ಟಾಟಾ ಗ್ರೂಪ್ ನ ಆಡಳಿತದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.

ಟಾಟಾ ಗ್ರೂಪ್‌ನಲ್ಲಿ ನೋಯೆಲ್ ಟಾಟಾ ವಿಭಿನ್ನ ಪಾತ್ರಗಳನ್ನು ಹೊಂದಿದ್ದಾರೆ. ಅವರು ಟ್ರೆಂಟ್, ವೋಲ್ಟಾಸ್, ಟಾಟಾ ಇನ್ವೆಸ್ಟ್‌ಮೆಂಟ್ ಕಾರ್ಪೊರೇಷನ್ ಮತ್ತು ಟಾಟಾ ಇಂಟರ್‌ನ್ಯಾಶನಲ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದಲ್ಲದೆ, ಅವರು ಟಾಟಾ ಸ್ಟೀಲ್ ಮತ್ತು ಟೈಟಾನ್‌ನಲ್ಲಿ ಉಪಾಧ್ಯಕ್ಷ ಹುದ್ದೆಯನ್ನು ಹೊಂದಿದ್ದಾರೆ. ಇದು ವಿವಿಧ ಪೋರ್ಟ್‌ಫೋಲಿಯೊ ಗ್ರೂಪ್ ಗಳಲ್ಲಿ ಅವರ ಗಮನಾರ್ಹ ಉಪಸ್ಥಿತಿಯನ್ನು ತೋರಿಸುತ್ತದೆ, ಇದು ಟಾಟಾ ಟ್ರಸ್ಟ್‌ಗಳನ್ನು ನಡೆಸುವಲ್ಲಿ ಅವರ ಶಕ್ತಿಯನ್ನು ತೋರಿಸುತ್ತದೆ.

ಡಿಸೆಂಬರ್ 1957 ರಲ್ಲಿ ಜನಿಸಿದ ನೋಯೆಲ್ ಟಾಟಾ ಅವರು ತಮ್ಮ ಮಲ ಸಹೋದರ ರತನ್ ಟಾಟಾ ಅವರಿಗಿಂತ ಇಪ್ಪತ್ತು ವರ್ಷ ಚಿಕ್ಕವರಾಗಿದ್ದಾರೆ. ನೋಯೆಲ್ ಟಾಟಾ ಅವರು ಸಸೆಕ್ಸ್ ವಿಶ್ವವಿದ್ಯಾನಿಲಯದಿಂದ (UK) ಪದವಿಯನ್ನು ಪಡೆದಿದ್ದು, INSEAD ನಲ್ಲಿ ಇಂಟರ್ನ್ಯಾಷನಲ್ ಎಕ್ಸಿಕ್ಯೂಟಿವ್ ಪ್ರೋಗ್ರಾಂ (IEP) ಅನ್ನು ಪೂರ್ಣಗೊಳಿಸಿದ್ದಾರೆ. ನೋಯೆಲ್ ಅವರು, ಸೈರಸ್ ಮಿಸ್ತ್ರಿ ಅವರ ಸಹೋದರಿಯಾಗಿರುವ ಮತ್ತು ಶಪೂರ್ಜಿ ಪಲ್ಲೋಂಜಿ ಮಿಸ್ತ್ರಿ ಅವರ ಮೊಮ್ಮಗಳು ಆಲೂ ಮಿಸ್ತ್ರಿ ಅವರನ್ನು ವಿವಾಹವಾದರು. ಈ ದಂಪತಿಗಳಿಗೆ ಲಿಯಾ(39) ಮಾಯಾ(೩೬) ಮತ್ತು ನೆವಿಲ್ಲೆ(೩೨) ಮೂವರು ಮಕ್ಕಳಿದ್ದಾರೆ. ಇವರು ಟಾಟಾ ಟ್ರಸ್ಟ್ ನ ಅಂಗಸಂಸ್ಥೆಗಳು ಸೇರಿದಂತೆ ಐದು ಪ್ರಮುಖ ಟ್ರಸ್ಟ್ ಗಳ ಟ್ರಸ್ಟಿಗಳಾಗಿ ಸೇರ್ಪಡೆಗೊಂಡಿದ್ದಾರೆ.

ನೋಯೆಲ್ ಅವರ ಕೊನೆಯ ಕಾರ್ಯನಿರ್ವಾಹಕ ಪಾತ್ರವು ಟಾಟಾ ಇಂಟರ್‌ನ್ಯಾಶನಲ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು, ಅಲ್ಲಿ ಅವರು ಕಂಪನಿಯ ಬೆಳವಣಿಗೆಯನ್ನು 2010 ಮತ್ತು 2021 ರ ವರೆಗೆ 500 ಡಾಲರ್ ಮಿಲಿಯನ್ ವಹಿವಾಟಿನಿಂದ 3 ಬಿಲಿಯನ್‌ ಡಾಲರ್ ವರೆಗೆ ಏರುವಂತೆ ನೋಡಿಕೊಂಡಿದ್ದರು. ಅದಕ್ಕೂ ಹಿಂದೆ, ಅವರು ಟ್ರೆಂಟ್ ಲಿಮಿಟೆಡ್ ನ್ನು ಮುನ್ನಡೆಸಿದರು, ಇದನ್ನು 1998 ರಲ್ಲಿ ಒಂದು ಮಳಿಗೆ ಕಾರ್ಯಾಚರಣೆಯಿಂದ ಬಹು ಸ್ವರೂಪಗಳಲ್ಲಿ 700 ಕ್ಕೂ ಹೆಚ್ಚು ಮಳಿಗೆಗಳಿಗೆ ಬೆಳೆಸಿದರು.

ಒಟ್ಟಾರೆ ಟಾಟಾ ಗ್ರೂಪ್‌ನಲ್ಲಿನ ನಾಯಕತ್ವದಲ್ಲಿನ ಈ ಬದಲಾವಣೆಯು ಟಾಟಾ ಗ್ರೂಪ್‌ ಭವಿಷ್ಯದಲ್ಲಿ ಹೊಸ ಅಧ್ಯಾಯವನ್ನು ಬರೆಯಲಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+