ಭಾರತದ ರಾಷ್ಟ್ರ ರಾಜಧಾನಿ ದೆಹಲಿಯು 2023 ರ ಜಿ20 ಶೃಂಗಸಭೆಗೆ ವಿಶ್ವ ನಾಯಕರನ್ನು ಸ್ವಾಗತಿಸಲು ಸಿದ್ಧವಾಗಿದೆ. ಶುಕ್ರವಾರ ಯುಎಸ್ ಅಧ್ಯಕ್ಷ ಜೋ ಬೈಡೆನ್ ಆಗಮನದ ಬಳಿಕ ಬೈಡೆನ್ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವಿನ ದ್ವಿಪಕ್ಷೀಯ ಚರ್ಚೆಗಳು ನಡೆಯಲಿದೆ. ಜಿ20 ಶೃಂಗಸಭೆಯ ಅಧಿಕೃತ ಅಧಿವೇಶನಗಳು ಸೆಪ್ಟೆಂಬರ್ 9 ಮತ್ತು 10, 2023 ರಂದು ನವದೆಹಲಿಯಲ್ಲಿ ಪ್ರಗತಿ ಮೈದಾನದಲ್ಲಿ ಪ್ರಾರಂಭವಾಗುತ್ತವೆ. ಜಿ20ಯಲ್ಲಿ ಭಾರತದ ಅಧ್ಯಕ್ಷತೆಯು ಭವಿಷ್ಯದ ಬೆಳವಣಿಗೆಗೆ ಪ್ರಮುಖ ಪಾತ್ರವಹಿಸುವ ನಿರೀಕ್ಷೆಯಿದೆ.
ರಿಯಲ್ ಎಸ್ಟೇಟ್ ವಲಯವು ಎಫ್‌ಡಿಐ ಒಳಹರಿವಿನ ನಿರೀಕ್ಷೆಯನ್ನು ಹೊಂದಿದೆ. ಆದರೆ ಕೃಷಿ ಮಾರುಕಟ್ಟೆಯು ರೈತರನ್ನು ಉತ್ತೇಜಿಸುವ ನೀತಿಗಳ ನಿರೀಕ್ಷೆಯನ್ನು ಹೊಂದಿದೆ. ಇದಲ್ಲದೆ, ಶೈಕ್ಷಣಿಕ ಅಸಮಾನತೆಗಳನ್ನು ನಿಗ್ರಹಿಸಲು ಮೂಲಸೌಕರ್ಯ, ತಂತ್ರಜ್ಞಾನ ಮತ್ತು ಶಿಕ್ಷಕರ ತರಬೇತಿಯಲ್ಲಿ ಹೂಡಿಕೆಯನ್ನು ಹೆಚ್ಚಿಸಲು ಶಿಕ್ಷಣ ಕ್ಷೇತ್ರವು ನಿರೀಕ್ಷಿಸುತ್ತಿದೆ.

ರಿಯಲ್ ಎಸ್ಟೇಟ್ ಕ್ಷೇತ್ರ ಹೇಗಿದೆ?
"ಜಿ20 ಶೃಂಗಸಭೆಯು ಭಾರತದ ರಿಯಲ್ ಎಸ್ಟೇಟ್ ಮಾರುಕಟ್ಟೆಯ ಮೇಲೆ ದೊಡ್ಡ ಪ್ರಭಾವವನ್ನು ಬೀರುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ತಂತ್ರಜ್ಞಾನವು ಆಳವಾಗಿ ಬದಲಾವಣೆಯಾಗುತ್ತಿದೆ. ಎಜುಕೇಷನ್ ಟೆಕ್ ಅಥವಾ ಆರೋಗ್ಯ ವಲಯ ಮಾತ್ರವಲ್ಲದೆ ಕಾರ್ಪೊರೇಟ್ ಮತ್ತು ರಿಯಲ್ ಎಸ್ಟೇಟ್ ಉದ್ಯಮಗಳಲ್ಲಿಯೂ ತಂತ್ರಜ್ಞಾನವು ಹಲವಾರು ಬದಲಾವಣೆಗಳನ್ನು ತಂದಿದೆ," ಎಂದು ಇನ್ಕ್ಯುಸ್ಪೇಜ್ ಸ್ಥಾಪಕ ಮತ್ತು ಸಿಇಒ ಸಂಜಯ್ ಚೌಧರಿ ಹೇಳಿದರು.
"ತಂತ್ರಜ್ಞಾನವು ಸಾಂಪ್ರದಾಯಿಕ ಕೆಲಸದ ಸ್ಥಳಗಳ ಸಾಂಪ್ರದಾಯಿಕ ಮಾದರಿಯನ್ನು ಬದಲಿಸುತ್ತಿದೆ. ತಂತ್ರಜ್ಞಾನವು ಅನುಕೂಲಕಾರಿಯಾಗಿದೆ. ಅಭಿವೃದ್ಧಿಯು ವಿಶ್ವಾದ್ಯಂತ ಚರ್ಚೆಯ ಪ್ರಮುಖ ಕ್ಷೇತ್ರವಾಗಿದೆ. ಜಿ20 ಶೃಂಗಸಭೆ 2023 ತಾಂತ್ರಿಕ ಪ್ರಗತಿಗಳು ಮತ್ತು ಆರ್ಥಿಕ ಬೆಳವಣಿಗೆಗೆ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ನಾವು ನಂಬುತ್ತೇವೆ. ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಎಫ್‌ಡಿಐ ಒಳಹರಿವು ನಿರೀಕ್ಷೆಯಿದೆ," ಎಂದು ಸಂಜಯ್ ಚೌಧರಿ ತಿಳಿಸಿದರು.
ಕೃಷಿ ಕ್ಷೇತ್ರದ ನಿರೀಕ್ಷೆಗಳೇನು?
"ಕೃಷಿ ಕ್ಷೇತ್ರದಲ್ಲಿ ಕಂಪನಿಗಳು ಬೆಳವಣಿಗೆಯನ್ನು ಕಾಣುತ್ತಿದೆ. ಸುಸ್ಥಿರ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವ ಜಾಗತಿಕ ಪ್ರಯತ್ನಗಳ ವಿಷಯದಲ್ಲಿ ಚರ್ಚೆಯನ್ನು ನಾವು ಶೃಂಗಸಭೆಯಿಂದ ನಿರೀಕ್ಷಿಸುತ್ತೇವೆ. ಸುಸ್ಥಿರ ಕೃಷಿಯನ್ನು ಉತ್ತೇಜಿಸುವ ನೀತಿಗಳಿಗೆ ರಾಷ್ಟ್ರಗಳು ಬದ್ಧವಾಗಿವೆ. ಪರಿಸರ ಸ್ನೇಹಿ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವಲ್ಲಿ ರೈತರನ್ನು ಪ್ರೋತ್ಸಾಹಿಸುವುದು ಮತ್ತು ಬೆಂಬಲಿಸುವ ನೀತಿಗಳ ಬಗ್ಗೆ ಚರ್ಚೆ ನಡೆಯುವ ನಿರೀಕ್ಷೆಯಿದೆ," ಎಂದು ಐಪಿಎಲ್ ಬಯೋಲಾಜಿಕಲ್ಸ್ ಅಧ್ಯಕ್ಷ ಹರ್ಷವರ್ಧನ್ ಭಾಗಚಂಡಕ ಹೇಳಿದರು.
"ಹಸಿರು ಉತ್ಪನ್ನಗಳಿಗೆ ಮಾರುಕಟ್ಟೆ ಉತ್ತೇಜನ ನೀಡುವ ಬಗ್ಗೆ ಚರ್ಚೆಗಳನ್ನು ಎದುರು ನೋಡುತ್ತಿದೆ. ಜೈವಿಕ ಆಧಾರಿತ ಪೋಷಣೆ ಮತ್ತು ಕೀಟನಾಶಕಗಳ ಬಳಕೆ ಉತ್ತೇಜನ ನೀಡುವ ನೀತಿಗಳ ಅಳವಡಿಕೆಗೆ ಚಾಲನೆ ನೀಡಬಹುದು. ಜೈವಿಕ ಉತ್ಪನ್ನಗಳನ್ನು ಅಳವಡಿಸಿಕೊಳ್ಳುವ ರೈತರಿಗೆ ಕಾರ್ಬನ್ ಕ್ರೆಡಿಟ್ ಹಣಗಳಿಕೆಯನ್ನು ತ್ವರಿತವಾಗಿ ಪತ್ತೆಹಚ್ಚುವುದು ಅತ್ಯುನ್ನತವಾಗಿದೆ ಎಂದು ನಾನು ನಂಬುತ್ತೇನೆ. ಜಿ20 ರಾಷ್ಟ್ರಗಳು ಈ ಪ್ರಕ್ರಿಯೆಯನ್ನು ಸರಳಗೊಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ," ಎಂದು ಹರ್ಷವರ್ಧನ್ ಭಾಗಚಂಡಕ ತಿಳಿಸಿದರು.
ಶಿಕ್ಷಣ ಕ್ಷೇತ್ರದ ನಿರೀಕ್ಷೆಗಳೇನು?
"ವಿಶ್ವಾದ್ಯಂತ ಶಿಕ್ಷಣ ಕ್ಷೇತ್ರವು ಉದ್ಯಮವಾಗಿದ್ದು, ಈ ಕ್ಷೇತ್ರವು ಜಿ20 ಶೃಂಗಸಭೆಯಿಂದ ಹಲವಾರು ನಿರೀಕ್ಷೆಗಳನ್ನು ಹೊಂದಿದೆ. ಶೈಕ್ಷಣಿಕ ಮೂಲಸೌಕರ್ಯ, ತಂತ್ರಜ್ಞಾನ ಮತ್ತು ಶಿಕ್ಷಕರ ತರಬೇತಿಯಲ್ಲಿ ಹೆಚ್ಚಿನ ಹೂಡಿಕೆಗೆ ಸದಸ್ಯ ರಾಷ್ಟ್ರಗಳು ಬದ್ಧವಾಗಿರುತ್ತವೆ ಎಂಬುವುದನ್ನು ಸಾಬೀತುಪಡಿಸುವುದು ನಮ್ಮ ಆಶಯವಾಗಿದೆ. ಅಸಮಾನತೆಗಳು ಮತ್ತು ಭವಿಷ್ಯದ ಸವಾಲುಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವುದು ಕೂಡಾ ಮುಖ್ಯವಾಗಿದೆ. ಹೆಚ್ಚುವರಿಯಾಗಿ, ಹೊಸತನವನ್ನು ಹೆಚ್ಚಿಸಲು ಮತ್ತು ಜಾಗತಿಕವಾಗಿ ಶೈಕ್ಷಣಿಕ ಗುಣಮಟ್ಟವನ್ನು ಸುಧಾರಿಸಲು ಅಂತರರಾಷ್ಟ್ರೀಯ ಸಹಯೋಗದ ನಿರೀಕ್ಷೆಯಿದೆ," ಎಂದು ಕೆಎಲ್ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಕೋನೇರು ಸತ್ಯನಾರಾಯಣ ಹೇಳಿದರು.
"ಡಿಜಿಟಲ್ ಯುಗಕ್ಕೆ ವಿದ್ಯಾರ್ಥಿಗಳು ಉತ್ತಮವಾಗಿ ಸಿದ್ಧರಾಗಿರುವುದನ್ನು ಖಚಿತಪಡಿಸಿಕೊಳ್ಳಲು ಶೃಂಗಸಭೆಯು ಡಿಜಿಟಲ್ ಸಾಕ್ಷರತಾ ಉಪಕ್ರಮಗಳಿಗೆ ಆದ್ಯತೆ ನೀಡುತ್ತದೆ ಎಂದು ನಿರೀಕ್ಷಿಸುತ್ತೇವೆ. ಎಲ್ಲರಿಗೂ ಗುಣಮಟ್ಟದ ಶಿಕ್ಷಣದ ಮೇಲೆ ಕೇಂದ್ರೀಕರಿಸುವ ಅಗತ್ಯವಿದೆ. ಕೊನೆಯದಾಗಿ, ಗುಣಮಟ್ಟ ಮತ್ತು ಫಲಿತಾಂಶಗಳಲ್ಲಿನ ಅಸಮಾನತೆಗಳನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಣದಲ್ಲಿ ಒಳಗೊಳ್ಳುವಿಕೆ ಮತ್ತು ಸಮಾನತೆಗೆ ಒತ್ತು ನೀಡುವ ನಿರೀಕ್ಷೆಯಿದೆ," ಎಂದು ಕೂಡಾ ಕೋನೇರು ಸತ್ಯನಾರಾಯಣ ತಿಳಿಸಿದರು.
More From GoodReturns

Credit Score: ಸಾಲ ಪಡೆಯಲಷ್ಟೇ ಅಲ್ಲ, ಬ್ಯಾಂಕ್ ಉದ್ಯೋಗಕ್ಕೂ ಬೇಕಿದೆ ಕ್ರೆಡಿಟ್ ಸ್ಕೋರ್; ಈ ಬಗ್ಗೆ ತಿಳಿಯಿರಿ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Ballari Airport: ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಈ ವಿಚಾರಕ್ಕೆ ಅಡ್ಡಿಯಾಗ್ತಿದ್ಯಾ-ಏನದು ಹೊಸ ವಿಚಾರ ತಿಳಿಯಿರಿ

Bank Holiday: ನಾಳೆ ಕರ್ನಾಟಕದಲ್ಲಿ ಬ್ಯಾಂಕ್ ತೆರೆದಿರುತ್ತೋ, ಇಲ್ಲವೋ? ಸ್ಪಷ್ಟ ಮಾಹಿತಿ ತಿಳಿಯಿರಿ

Silver Price Today: ಬೆಳ್ಳಿ ದರದಲ್ಲಿ ಇಂದು 5,000 ಕುಸಿತ; ಭಾರತದಲ್ಲಿ ಇಂದಿನ ಬೆಲೆ ತಿಳಿಯಿರಿ

LPG Crisis Bengaluru: ಕೋಳಿ ವ್ಯಾಪಾರಕ್ಕೂ ತಟ್ಟಿದ LPG ಕೊರತೆ ಬಿಸಿ; ಬೆಂಗಳೂರಲ್ಲಿ ಮಾರಾಟ ಭಾರಿ ಕುಸಿತ

Bengaluru: ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿಲ್ಲ; ಈ ರಸ್ತೆಯ ವ್ಯಾಪಾರಿಗಳಿಗೆ ದೊಡ್ಡ ಸಂಕಷ್ಟ

Eid-ul-Fitr 2026: ರಂಜಾನ್ ಹಬ್ಬ ಇಂದೋ, ನಾಳೆಯೋ; ಕೇರಳದಲ್ಲಿ ಮಾತ್ರ ಇಂದು ಆಚರಣೆ ಯಾಕೆ?

Oil Price Tension: ಮದ್ಯಪ್ರಾಚ್ಯ ಉದ್ವಿಗ್ನತೆ ನಡುವೆ ತೈಲ ಮಾರುಕಟ್ಟೆ ತಲ್ಲಣ, ಭಾರತಕ್ಕೆ ಸವಾಲು; ಎಚ್ಚರಿಕೆ ಸೂಚನೆ

Petrol Price Hike: ಪ್ರೀಮಿಯಂ ಪೆಟ್ರೋಲ್ ದರ ಏರಿಕೆ-ಲೀಟರ್ಗೆ 2 ಹೆಚ್ಚಳ, ಸಾಮಾನ್ಯ ಇಂಧನ ದರ ಸ್ಥಿರ



Click it and Unblock the Notifications