ಗೇಟ್ (GATE) 2025 ಪ್ರವೇಶ ಪತ್ರ ಇಂದು ಬಿಡುಗಡೆಯಾಗಿದೆ. ಈ ಕುರಿತು ಭಾರತೀಯ ಟೆಕ್ನಾಲಜಿ ಸಂಸ್ಥೆ ರೂರ್ಕಿ ಮಾಹಿತಿಯನ್ನ ನೀಡಿದೆ. ಗ್ರಾಜುಯೇಟ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಇಂಜಿನಿಯರಿಂಗ್‌ನ ಪ್ರವೇಶ ಪತ್ರವನ್ನು ಭಾರತೀಯ ಟೆಕ್ನಾಲಜಿ ಸಂಸ್ಥೆ ರೂರ್ಕಿ ಬಿಡುಗಡೆ ಮಾಡಿದೆ. ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಜನವರಿ 7ರಂದು ಸಂಸ್ಥೆ ಪ್ರವೇಶ ಪತ್ರವನ್ನ ಬಿಡುಗಡೆ ಮಾಡಿದೆ.
ಭಾರತೀಯ ಟೆಕ್ನಾಲಜಿ ಸಂಸ್ಥೆ ರೂರ್ಕಿ ಗ್ರಾಜುಯೇಟ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಇಂಜಿನಿಯರಿಂಗ್‌ನ (ಗೇಟ್) ಪ್ರವೇಶ ಪತ್ರವನ್ನ ತನ್ನ ಅಧಿಕೃತ ವೆಬ್‌ಸೈಟ್ ಆದ gate2025.iitr.ac.in GATEನಲ್ಲಿ ಬಿಡುಗಡೆ ಮಾಡಿದೆ. ಈ ಪ್ರವೇಶ ಪತ್ರವನ್ನ ಡೌನ್‌ಲೋಡ್ ಮಾಡಲು ನೀವು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿದ ನಂತರ ನೀವು ಹಾಲ್‌ಟಿಕೆಟ್ ಡೌನ್‌ಲೋಡ್ ಮಾಡಬಹುದು. ಇನ್ನು ಈ ಪರೀಕ್ಷೆ 2025ರ ಫೆಬ್ರವರಿ 1, 2, 15 ಮತ್ತು 16 ರಂದು ನಡೆಯಲಿದೆ. ಈ ಪರೀಕ್ಷೆಯು ಮೂರು ಗಂಟೆಗಳ ಕಾಲ ನಡೆಯಲಿದೆ.

ಗೇಟ್ 2025 ಪರೀಕ್ಷೆಯು ಒಟ್ಟು 30 ಪರೀಕ್ಷಾ ಪತ್ರಿಕೆಗಳಿಗೆ ನಡೆಲಾಗುತ್ತದೆ. ಹಾಗೆ ಒಬ್ಬ ಅಭ್ಯರ್ಥಿ ಒಂದು ಅಥವಾ ಎರಡು ಪರೀಕ್ಷೆಗಳನ್ನ ಮಾತ್ರ ಬರೆಯಬಹುದು. ಬೆಳಿಗ್ಗೆ ಪರೀಕ್ಷೆ ಅವಧಿ 9.30 ರಿಂದ ಮಧ್ಯಾಹ್ನ 12.30 ರವರೆಗೆ ಇರುತ್ತದೆ. ಹಾಗೆ ಮಧ್ಯಾಹ್ನದ ಪರೀಕ್ಷೆ ಅವಧಿ 2.30 ರಿಂದ ಸಂಜೆ 5.30 ರವರೆಗೆ ನಡೆಯಲಿದೆ. ಇನ್ನು ಪರೀಕ್ಷೆಗೆ ಹೋಗುವ ಅಭ್ಯರ್ಥಿಗಳು ಪ್ರವೇಶ ಪತ್ರಗಳ ಪ್ರತಿಯನ್ನ ತೆಗೆದುಕೊಂಡು ಹೋಗಬೇಕಾಗುತ್ತದೆ. ಇದರ ಜೊತೆಗೆ ಫೋಟೊ ID ಪ್ರೂಫ್‌ಗಳನ್ನ ತೆಗೆದುಕೊಂಡು ಹೋಗೇಕಾಗುತ್ತದೆ. ಅವಧಿ ಮೀರಿದ ಐಡಿಗಳನ್ನ ತೆಗೆದುಕೊಳ್ಳುವುದಿಲ್ಲ.
ಇನ್ನು ಪರೀಕ್ಷೆ ವೇಳೆ ಕ್ಯಾಲ್ಕುಲೇಟರ್, ವಾಚ್, ವ್ಯಾಲೆಟ್, ಮೊಬೈಲ್, ಬ್ಲೂಟುತ್, ಎಲೆಕ್ಟ್ರಾನಿಕ್ ಸಾಧನಗಳು, ಪುಸ್ತಕಗಳು, ಚಾರ್ಟ್‌ಗಳು ಪೌಚ್‌ಗಳು ಸೇರಿದಂತೆ ಯಾವದೇ ವಸ್ತುಗಳನ್ನ ಪರೀಕ್ಷೆ ಕೊಠಡಿಗೆ ತರುವಂತಿಲ್ಲ. ಈ ಎಲ್ಲವನ್ನ ನಿಷೇಧಿಸಲಾಗಿದೆ.
ಈ ಹಿಂದೆ ಐಐಟಿ ರೂರ್ಕಿ ಗೇಟ್ ಪ್ರವೇಶ ಪತ್ರವನ್ನ ಜನವರಿ 2ರಂದು ಬಿಡುಗಡೆ ಮಾಡುವುದಾಗಿ ಹೇಳಿತ್ತು. ಆದ್ರೆ ನಂತರ ಜನವರಿ 7ರಂದು ಬಿಡುಗಡೆ ಮಾಡುವುದಾಗಿ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಗೇಟ್ ಪ್ರವೇಶ ಪತ್ರವನ್ನ ಡೌನ್‌ಲೋಡ್ ಮಾಡುವುದು ಹೇಗೆ ಇಲ್ಲಿ ತಿಳಿಯಿರಿ
- ಅಧಿಕೃತ ಗೇಟ್ ವೆಬ್‌ಸೈಟ್ gate2025.iitr.ac.inಗೆ ಭೇಟಿ ನೀಡಿ
- ಹೋಮ್ ಪೇಜ್‌ನಲ್ಲಿ ಗೇಟ್ 2025 ಅಡ್ಮಿಟ್ ಕಾರ್ಡ್ ಲಿಂಕ್ ಮೇಲೆ ಕ್ಲಿಕ್ ಮಾಡಿ
- ನಂತರ ಅಗತ್ಯ ವಿವರಗಳ ಜೊತೆಗೆ ಲಗಿನ್ ಮಾಡಿ
- ಇದಾದ ಮೇಲೆ ಸಲ್ಲಸ ಬಟನ್ ಮೇಲೆ ಕ್ಲಿಕ್ ಮಾಡಿ
- ನಿಮ್ಮ ಪ್ರವೇಶ ಕಾರ್ಡ್ ವಿವರಗಳನ್ನ ಪರಿಶೀಲಿಸಿ, ನಂತರ ನಿಮ್ಮ ಪ್ರವೇಶ ಪತ್ರವನ್ನ ಡೌನ್‌ಲೋಡ್ ಮಾಡಿ.
ಅಭ್ಯರ್ಥಿಗಳು ಗೇಟ್ ಹಾಲ್ ಟಿಕೆಟ್ ಡೌನ್‌ಲೋಡಡ್ ಮಾಡಿದ ನಂತರ, ಅದರಲ್ಲಿ ಕೆಲವು ವ್ಯತ್ಯಾಸಗಳನ್ನು ಕಂಡುಕೊಂಡರೆ, ತಕ್ಷಣವೇ ಗೇಟ್ ಆಡಳಿತ ಮಂಡಳಿಯನ್ನು ಸಂಪರ್ಕಿಸಿ ಮತ್ತು ಪರೀಕ್ಷೆಯ ಪ್ರಾರಂಭದ ಮೊದಲು ಆ ಸಮಸ್ಯೆಯನ್ನ ಸರಿಪಡಿಸಿಕೊಳ್ಳಿ.
ಗೇಟ್ ಪರೀಕ್ಷೆಯಲ್ಲಿ
GATE 2025 ರಲ್ಲಿ 30 ರೀತಿಯ ಪರೀಕ್ಷಾ ಪ್ರಕಾರಗಳು ಇದರಲ್ಲಿ ಇರುತ್ತವೆ. ಬಹು ಆಯ್ಕೆಯ ಪ್ರಶ್ನೆಗಳು (MCQ), ಬಹು ಆಯ್ದ ಪ್ರಶ್ನೆಗಳು (MSQ), ಮತ್ತು ಸಂಖ್ಯಾತ್ಮಕ ಉತ್ತರ ಪ್ರಕಾರ (NAT) ಪ್ರಶ್ನೆಗಳು ಇರುತ್ತವೆ. ಇನ್ನು ಅಭ್ಯರ್ಥಿಗಳಿಗೆ ಒಂದು ಅಥವಾ ಎರಡು ಪರೀಕ್ಷೆಗಳನ್ನ ಬರೆಯುವ ಅವಕಾಶ ಇರುತ್ತದೆ.
ಪರೀಕ್ಷೆಗಳ ವಿವರ
| ದಿನಾಂಕ | ಬೆಳಿಗ್ಗೆ | ಮಧ್ಯಹ್ನ |
| ಫೆಬ್ರವರಿ 1 | CS1, AG, MA | CS2, NM, MT, TF, IN |
| ಫೆಬ್ರವರಿ 2 | ME, PE, AR | EE |
| ಫೆಬ್ರವರಿ 15 | CY, AE, DA, ES, PI | EC, GE, XH, BM, EY |
| ಫೆಬ್ರವರಿ 16 | CE1, GG, CH, PH, BT | CE2, ST, XE, XL, MN |


Click it and Unblock the Notifications