ವಿಶ್ವದ ಟಾಪ್ 10 ಶ್ರೀಮಂತರ ಪಟ್ಟಿಯಿಂದ ಹೊರಬಿದ್ದ ಗೌತಮ್ ಅದಾನಿ: ಇಲ್ಲಿದೆ ಮಾಹಿತಿ

ಭಾರತದ ಶ್ರೀಮಂತ ವ್ಯಾಪಾರಿ ಗೌತಮ್ ಅದಾನಿ ಅವರು ವಿಶ್ವದ ಟಾಪ್ 10 ಶ್ರೀಮಂತರ ಪಟ್ಟಿಯಿಂದ ಹೊರಬಿದ್ದಿದ್ದಾರೆ. ಹಿಂಡನ್‌ಬರ್ಗ್‌ ವರದಿ ನಂತರ ಅವರ ಕಂಪನಿಗಳ ಷೇರು ಬೆಲೆಯು ಕುಸಿಯುತ್ತಿದೆ. ಶೀಘ್ರದಲ್ಲೇ ಏಷ್ಯಾದ ಶ್ರೀಮಂತರ ಪಟ್ಟಿಯಲ್ಲೂ ಹಿಂಬಡ್ತಿ ಹೊಂದಲಿದ್ದಾರೆ.

ನವದೆಹಲಿ, ಜನವರಿ 31: ವಿಶ್ವದ ಟಾಪ್ 10 ಶ್ರೀಮಂತರ ಪಟ್ಟಿಯಿಂದ ಭಾರತದ ವ್ಯಾಪಾರಿ ಗೌತಮ್ ಅದಾನಿ ಅವರು ಹೊರಬಿದ್ದಿದ್ದಾರೆ. ಅವರ ಮಾಲಿಕತ್ವದ ಸಂಘಟಿತ ಸಂಸ್ಥೆಯಲ್ಲಿನ ಷೇರುಗಳ ಬೆಲೆಗಳು ಕುಸಿಯುವುದು ಮುಂದುವರಿದರೆ ಶೀಘ್ರದಲ್ಲೇ ಏಷ್ಯಾದ ಶ್ರೀಮಂತರ ಪಟ್ಟಿಯಲ್ಲೂ ಹಿಂಬಡ್ತಿ ಹೊಂದಲಿದ್ದಾರೆ. ಭಾರತೀಯ ಉದ್ಯಮಿ ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನಲ್ಲಿ ನಾಲ್ಕನೇ ಸ್ಥಾನದಿಂದ 11 ನೇ ಸ್ಥಾನಕ್ಕೆ ಕುಸಿದಿದ್ದಾರೆ. ಕೇವಲ ಮೂರು ವ್ಯಾಪಾರದ ದಿನಗಳಲ್ಲಿ ಅವರ ವೈಯಕ್ತಿಕ ಸಂಪತ್ತು $34 ಶತಕೋಟಿ ನಷ್ಟವಾಗಿದೆ. ನಷ್ಟದ ಬಳಿಕ $84.4 ಶತಕೋಟಿ ಸಂಪತ್ತನ್ನು ಗೌತಮ್‌ ಅದಾನಿ ಹೊಂದಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಆಸ್ತಿಯ ಮೌಲ್ಯ $ 82.2 ಬಿಲಿಯನ್ ಆಗಿದೆ.

 ಮೂರು ದಿನಗಳಲ್ಲಿ ಎಷ್ಟು ನಷ್ಟ?

ಮೂರು ದಿನಗಳಲ್ಲಿ ಎಷ್ಟು ನಷ್ಟ?

ಅದಾನಿ ಗ್ರೂಪ್‌ನಲ್ಲಿ ಬರುವ ವಿವಿಧ ಕಂಪನಿಗಳ ಷೇರುಗಳು ಮೂರು ದಿನಗಳ ಮಾರಾಟದಲ್ಲಿ ಭಾರೀ ಕುಸಿತ ಕಂಡಿವೆ. ಅವರು $68 ಶತಕೋಟಿಗಿಂತ ಹೆಚ್ಚಿನ ಮಾರುಕಟ್ಟೆ ಮೌಲ್ಯವನ್ನು ನಷ್ಟ ಅನುಭವಿಸಿದ್ದಾರೆ. ಅಮೆರಿಕ ಮೂಲದ ಹಿಂಡೆನ್‌ಬರ್ಗ್ ವರದಿಯ ಪ್ರಕಟಣೆಯ ನಂತರ ಈ ಬೆಳವಣಿಗೆ ಸಂಭವಿಸಿದೆ. 'ಷೇರು ಮ್ಯಾನಿಪ್ಯುಲೇಷನ್ ಮತ್ತು ಲೆಕ್ಕಪತ್ರ ವಂಚನೆ'ಯ ಕುರಿತು ಹಿಂಡೆನ್‌ಬರ್ಗ್ ರಿಸರ್ಚ್‌ನ ವರದಿ ಆರೋಪಿಸಿದೆ. ಅದಾನಿ ಈಗ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಮೆಕ್ಸಿಕೋದ ಕಾರ್ಲೋಸ್ ಸ್ಲಿಮ್, ಗೂಗಲ್ ಸಹ-ಸಂಸ್ಥಾಪಕ ಸೆರ್ಗೆ ಬ್ರಿನ್ ಮತ್ತು ಮಾಜಿ ಮೈಕ್ರೋಸಾಫ್ಟ್ ಸಿಇಒ ಸ್ಟೀವ್ ಬಾಲ್ಮರ್ ಅವರಿಗಿಂತ ಕೆಳಗೆ ಕುಸಿದಿದ್ದಾರೆ.

 ಅನಾಹುತಕ್ಕೆ ಕಾರಣವಾದ ವರದಿ

ಅನಾಹುತಕ್ಕೆ ಕಾರಣವಾದ ವರದಿ

ಅಮೆರಿಕ ಮೂಲದ ಅಲ್ಪ ಮಾರಾಟಗಾರ ಕಂಪನಿ ಹಿಂಡೆನ್‌ಬರ್ಗ್ ರಿಸರ್ಚ್‌ನಿಂದ ಬಿಡುಗಡೆಯಾದ ವರದಿ ಇಷ್ಟೆಲ್ಲಾ ಅನುಹುತಕ್ಕೆ ಕಾರಣವಾಗಿದೆ. ಏಷ್ಯಾದ ಶ್ರೀಮಂತ ವ್ಯಕ್ತಿಯಾಗಿರುವ ಅದಾನಿ ಅವರು ತಮ್ಮ ಪ್ರಮುಖ ಸಂಸ್ಥೆಗಳಿಂದ $ 2.5 ಶತಕೋಟಿ ಈಕ್ವಿಟಿ ಮಾರಾಟವನ್ನು ಪೂರ್ಣಗೊಳಿಸಲು ಯತ್ನಿಸುತ್ತಿದ್ದಾರೆ. ಅದಾನಿ ಗ್ರೂಪ್ ಷೇರುಗಳಲ್ಲಿನ ಮಾರಾಟದಲ್ಲಿ ಮಂಗಳವಾರವೂ ಕುಸಿತ ಮುಂದುವರೆದಿದ್ದರಿಂದ ಈಕ್ವಿಟಿ ಮಾರಾಟವನ್ನು ಪೂರ್ಣಗೊಳಿಸಲು ಅವರಿಗೆ ಸಾಧ್ಯವಾಗುತ್ತಿಲ್ಲವೆಂದು ವರದಿಯಾಗಿದೆ.

 ಅದಾನಿ ಒಡೆತನದ ಟೋಟಲ್ ಗ್ಯಾಸ್‌ನಲ್ಲಿ ಭಾರೀ ನಷ್ಟ

ಅದಾನಿ ಒಡೆತನದ ಟೋಟಲ್ ಗ್ಯಾಸ್‌ನಲ್ಲಿ ಭಾರೀ ನಷ್ಟ

ಅದಾನಿ ಒಡೆತನದ ಟೋಟಲ್ ಗ್ಯಾಸ್ ಲಿಮಿಟೆಡ್‌ನ ದೈನಂದಿನ ಮಿತಿಯಲ್ಲಿ ಶೇ 10 ರಷ್ಟು ಕುಸಿದಿದೆ. ಇದು ಅದಾನಿ ಗ್ರೂಪ್‌ನ ಹೆಚ್ಚಿನ ಷೇರುಗಳಲ್ಲಿ ನಷ್ಟವನ್ನು ಉಂಟುಮಾಡಿದೆ. ಫ್ಲ್ಯಾಗ್‌ಶಿಪ್ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ಮುಂಬೈನಲ್ಲಿ ಆರಂಭಿಕ ವಹಿವಾಟಿನಲ್ಲಿ ಸುಮಾರು ಶೇ 2 ರಷ್ಟು ಏರಿಕೆಯಾಗಿದೆ. ಆದರೆ ಅದರ ಫಾಲೋ-ಆನ್ ಷೇರು ಮಾರಾಟಕ್ಕೆ ನಿಗದಿಪಡಿಸಿದ ಬೆಲೆಗಿಂತ ಕಡಿಮೆ ಇತ್ತು. ಹತ್ತಾರು ಸಂಘಟಿತ ಕಂಪನಿಗಳು ಸುಮಾರು $75 ಶತಕೋಟಿಯಷ್ಟು ಮಾರುಕಟ್ಟೆ ಮೌಲ್ಯವನ್ನು ಕಳೆದುಕೊಂಡಿವೆ. ಈಕ್ವಿಟಿ ಕೊಡುಗೆಯ ಒಟ್ಟಾರೆ ಚಂದಾದಾರಿಕೆಯು ಸೋಮವಾರದ ಅಂತ್ಯದ ವೇಳೆಗೆ ಕೇವಲ ಶೇ 3 ರಷ್ಟಿತ್ತು. ಅಬುಧಾಬಿಯ ರಾಜಮನೆತನದ ಪ್ರಮುಖ ಸದಸ್ಯರಿಂದ ನಿಯಂತ್ರಿಸಲ್ಪಡುವ ಇಂಟರ್‌ನ್ಯಾಶನಲ್ ಹೋಲ್ಡಿಂಗ್ ಕಂ IHC ಯಿಂದ $400 ಮಿಲಿಯನ್ ಹೂಡಿಕೆಯ ನಂತರವೂ ಪ್ರಸ್ತುತ ನಿಯಮಗಳ ಅಡಿಯಲ್ಲಿ ಸಾಕಷ್ಟು ಬೇಡಿಕೆಯಿದೆಯೇ ಎಂಬ ಬಗ್ಗೆ ವಿಶ್ಲೇಷಕರು ಶಂಕೆ ವ್ಯಕ್ತಪಡಿಸಿದ್ದಾರೆ.

 ಆರೋಪ ತಳ್ಳಿಹಾಕಿದ ಅದಾನಿ

ಆರೋಪ ತಳ್ಳಿಹಾಕಿದ ಅದಾನಿ

ಕಡಲಾಚೆಯ ದೇಶಗಳ ಕಾನೂನಿನ ವಿರುದ್ಧ ಗೌತಮ್ ಅದಾನಿಯವರ ಹಲವಾರು ಕಂಪನಿಗಳು ನಡೆದುಕೊಂಡಿವೆ ಎಂದು ಹಿಂಡೆನ್‌ಬರ್ಗ್‌ ಆರೋಪಿಸಿದೆ. ತನ್ನ ಅಭಿಪ್ರಾಯವನ್ನು ಸಾಬೀತುಪಡಿಸಲು ಕೆಲವು ಉದಾಹರಣೆಗಳನ್ನು ಹಿಂಡೆನ್‌ಬರ್ಗ್‌ ನೀಡಿದೆ. ವಜ್ರ ವ್ಯಾಪಾರ ಹಗರಣದಲ್ಲಿ ಗೌತಮ್ ಅದಾನಿ ಅವರ ಸೋದರ ಮಾವ ಸಮೀರ್ ವೋರಾ ಅವರನ್ನು ಒಳಗೊಂಡಿರುವ ಕಂದಾಯ ಗುಪ್ತಚರ ಇಲಾಖೆ (ಡಿಆರ್‌ಐ) ತನಿಖೆಯು ಅವುಗಳಲ್ಲಿ ಪ್ರಮುಖವಾಗಿದೆ. ಹಿಂಡೆನ್‌ಬರ್ಗ್‌ ಆರೋಪಗಳನ್ನು ತಳ್ಳಿಹಾಕಿರುವ ಅದಾನಿ ಗ್ರೂಪ್‌, ಇದು ಭಾರತದ ಮೇಲಿನ ವ್ಯವಸ್ಥಿತ ದಾಳಿ ಎಂದು ಹೇಳಿದೆ. ತಮ್ಮ ಕಂಪನಿಗಳು ಯಾವುದೇ ಸ್ಟಾಕ್‌ ಮ್ಯಾನುಪುಲೇಶನ್‌ ಹಾಗೂ ಮನಿ ಲಾಂಡರಿಂಗ್‌ ಮಾಡಿಲ್ಲವೆಂದು ಅದಾನಿ ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಹಿಂಡೆನ್‌ಬರ್ಗ್‌, ರಾಷ್ಟ್ರೀಯತೆಯನ್ನು ಬಳಸಿಕೊಂಡು ವಂಚನೆಗಳನ್ನು ಮುಚ್ಚಿ ಹಾಕಲು ಸಾಧ್ಯವಿಲ್ಲ. ನಮ್ಮ ಆರೋಪಗಳು ನಿಜವಾಗಿವೆ. ನಾನು ಕಾನೂನನ್ನು ಎದುರಿಸಲು ಸಿದ್ದರಿದ್ದೇವೆ ಎಂದು ತಿಳಿಸಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+