ಬೆಂಗಳೂರಿಗೆ (Bengaluru) ಹಲವಾರು ಯುವಕ-ಯುವತಿಯರು ಉದ್ಯೋಗ ಅರಸಿಕೊಂಡು ಬರುತ್ತಾರೆ. ಊರು ಬಿಟ್ಟು ಬೆಂಗಳೂರಿಗೆ ಬರುವಾಗ ಉಳಿದುಕೊಳ್ಳಲು ರೂಮ್ ಅಥವಾ ಪಿಜಿ ಕಂಡುಕೊಳ್ಳೋದು ಸಾಮಾನ್ಯ. ಆದರೆ ಇಲ್ಲಿಬ್ಬರು ಯುವತಿಯರು ಹೌಸಿಂಗ್ ಸೊಸೈಟಿಯ ಫ್ಲಾಟ್‌ನಲ್ಲಿ (Housing Society Flat) ಉಳಿದುಕೊಂಡಿದಕ್ಕಾಗಿ ಭಾರೀ ದಂಡ ಬಿದ್ದಿದೆ. ಸದ್ಯ ಈ ವಿಷಯ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಹೌಸಿಂಗ್ ಸೊಸೈಟಿ ಫ್ಲಾಟ್‌ನಲ್ಲಿ ಬಾಡಿಗೆಗೆ ಇದ್ದ ಬ್ಯಾಚುಲರ್‌ಗಳಿಗೆ ದೊಡ್ಡ ಮೊತ್ತದ ದಂಡ ವಿಧಿಸಲಾಗಿದೆ. ಅವರ ಫ್ಲಾಟ್‌ನಲ್ಲಿ ಇಬ್ಬರು ಯುವತಿಯರು ರಾತ್ರಿ ತಂಗಿದ ಕಾರಣಕ್ಕಾಗಿ ಈ ದಂಡ ಹಾಕಲಾಗಿದ್ದು, ಈ ಘಟನೆ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಅಲ್ಲದೇ ಪೋಸ್ಟ್‌ಗಳೂ ಕೂಡಾ ವೈರಲ್ ಆಗುತ್ತಿದೆ.
"ಬ್ಯಾಚುಲರ್‌ಗಳ ವಿರುದ್ಧ ಅನ್ಯಾಯದ ವರ್ತನೆ" ಎಂಬ ಟೈಟಲ್‌ನೊಂದಿಗೆ ರೆಡ್ಡಿಟ್ ಪೋಸ್ಟ್ ಭಾರೀ ವೈರಲ್ ಆಗಿದೆ. ಸೊಸೈಟಿಯು ವಿಧಿಸಿರುವ ದಂಡವನ್ನು ರೀಚೆಕ್ ಮಾಡಲು ಏನು ಮಾಡಬೇಕು ಅಂತಾನೂ ಇಲ್ಲಿ ಕೇಳಿದ್ದಾರೆ. ಅದಕ್ಕಾಗಿ ಸೋಷಿಯಲ್ ಮೀಡಿಯಾದ ಬಳಕೆದಾರರು ಹಲವು ರೀತಿಯಲ್ಲಿ ಸಲಹೆ ನೀಡಿದ್ದಾರೆ.
ಆಗಿದ್ದೇನು?
ಪೋಸ್ಟ್‌ನ ಪ್ರಕಾರ, ಅಕ್ಟೋಬರ್ 31 ರಂದು ಇಬ್ಬರು ಫ್ಲಾಟ್‌ಮೇಟ್‌ಗಳು ಅವರ ಫ್ಲಾಟ್‌ನಲ್ಲಿ ಇಬ್ಬರು ಹುಡುಗಿಯರಿಗೆ ಉಳಿಯಲು ಅವಕಾಶ ನೀಡಿದ್ದರಂತೆ. ಸೊಸೈಟಿ ನಿರ್ವಹಣೆ ಮಾಡುವವರು ಇದನ್ನು ಗಮನಿಸಿ, ಅದರ ಮರುದಿನ ಅಂದರೆ ನವೆಂಬರ್ 1 ರಂದು, ಬ್ಯಾಚುಲರ್‌ಗಳಿಗೆ ₹5,000 ದಂಡದ ಇನ್‌ವಾಯ್ಸ್ ನೀಡಿದ್ದಾರೆ ಎನ್ನಲಾಗಿದೆ. ಇನ್ನು ಇನ್‌ವಾಯ್ಸ್‌ನಲ್ಲಿ "2 Girls Stayed overnight on 31/10/2025" ಎಂದು ಬರೆದುಕೊಟ್ಟಿದ್ದಾರೆ.
ಸೊಸೈಟಿಯ ನಿಯಮ ಏನು?
ಸೊಸೈಟಿಯ ನಿಯಮದ ಪ್ರಕಾರ, ಬ್ಯಾಚುಲರ್‌ಗಳು ರಾತ್ರಿ ವೇಳೆ ತಮ್ಮ ಜೊತೆ ಕುಟುಂಬದವರನ್ನು ಹೊರತುಪಡಿಸಿ, ಇತರರನ್ನು ಉಳಿಸಿಕೊಳ್ಳಲು ಅವಕಾಶವಿಲ್ಲ. ಆದರೆ ಇದನ್ನು ಬ್ಯಾಚುಲರ್ಸ್ ಉಲ್ಲಂಘನೆ ಮಾಡಿದ್ದಕ್ಕಾಗಿ ಈ ದಂಡ ವಿಧಿಸಲಾಗಿದೆ. ಆದರೆ ಸೊಸೈಟಿ ಯಾವುದೇ ಎಚ್ಚರಿಕೆ ನೀಡದೇ ನೇರವಾಗಿ ದಂಡ ವಿಧಿಸಿರುವುದು ಆಕ್ರೋಶಕ್ಕೆ ಗುರಿಯಾಗಿದೆ.
ಆಕ್ಷೇಪ ವ್ಯಕ್ತಪಡಿಸಿದ ಬ್ಯಾಚುಲರ್ಸ್!
ಸರಿಯಾಗಿ ರೆಂಟ್, ಮೈಂಟೇನೆನ್ಸ್ ಚಾರ್ಜ್ ಪಾವತಿ ಮಾಡುತ್ತಿದ್ದರೂ, ಈ ರೀತಿ ದಂಡ ವಿಧಿಸುವುದು ಸರಿಯಲ್ಲ. "ಇದು ಮೊದಲ ಉಲ್ಲಂಘನೆ ಮತ್ತು ನನಗೆ ಯಾವುದೇ ವಾರ್ನಿಂಗ್ ಅನ್ನೂ ನೀಡಿಲ್ಲ. ಇದು ಸಣ್ಣ ವಿಷಯವೆಂದು ಗೊತ್ತಿದ್ದರೂ, ಕೀಳಾಗಿ ನಡೆಸಿಕೊಳ್ಳುವುದು ಸರಿ ಎನಿಸುತ್ತಿಲ್ಲ" ಎಂದು ಅವರು ಅಸಮಾಧಾನದಿಂದ ಹೇಳಿಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್
ಈ ಪೋಸ್ಟ್‌ಗೆ ಹಲವು ರೆಡ್ಡಿಟ್ ಬಳಕೆದಾರರು ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬರು, "ಸೊಸೈಟಿಗಳ ರಿಜಿಸ್ಟ್ರಾರ್‌ಗೆ ದೂರು ನೀಡಿ. ಆವಾಗ ನಿಮಗೆ ನ್ಯಾಯ ಸಿಗಬಹುದು." ಎಂದು ಸಲಹೆ ನೀಡಿದ್ದಾರೆ.
"ಆ ದಂಡವನ್ನು ಸಹಿ ಮಾಡಿ ಕಳುಹಿಸಲು ಕೇಳಿ, ನಂತರ ಅವರ ಪ್ರತಿಯೊಬ್ಬರ ವಿರುದ್ಧ ದೂರು ನೀಡಿ. ಅವರು ಜಿಎಸ್‌ಟಿ ವಿಧಿಸಲು ಸಾಧ್ಯವಿಲ್ಲ, ಅವರು ಮಾಡುತ್ತಿರುವುದು ಅಪರಾಧ" ಎಂದು ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
"ಈ ದಂಡ ಅರ್ಥಹೀನ. ಸೊಸೈಟಿಯು ಸ್ವತಃ ಓಯೋ ಹೋಟೆಲ್‌ನಂತೆ ವರ್ತಿಸುತ್ತಿದೆ" ಎಂದು ಒಬ್ಬರು ಅಭಿಪ್ರಾಯಪಟ್ಟಿದ್ದಾರೆ. ಆದರೂ, "ನೀವು ಇದನ್ನು ಕಾನೂನುಬದ್ಧವಾಗಿ ಹೋರಾಡಬಹುದು, ಆದರೆ ಇದಕ್ಕೆ ಅಂತ್ಯವಿಲ್ಲ. ಅಂತಿಮವಾಗಿ ಮನೆ ಮಾಲೀಕರು ನಿಮ್ಮನ್ನು ರೂಮ್ ಖಾಲಿ ಮಾಡುವಂತೆ ಮಾಡಬಹುದು" ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.


Click it and Unblock the Notifications