ಬೆಂಗಳೂರಿಗರು ಚಿನ್ನ ಪ್ರಿಯರು (Bengaluru Gold). ಬಹುತೇಕರು ಚಿನ್ನದ ಮೇಲಿನ ಹೂಡಿಕೆ ಸುರಕ್ಷಿತ ಆಸ್ತಿ ಅಂದುಕೊಂಡಿರುತ್ತಾರೆ. ಆದ್ರೆ ಏನ್ ಮಾಡೋದು, ಇತ್ತೀಚೆಗೆ ಬೆಲೆ ಏರಿಕೆಯಿಂದ ಕೆಲವರಂತೂ ಹೂಡಿಕೆ ಮಾಡೋದನ್ನೇ ನಿಲ್ಲಿಸಿಬಿಟ್ಟಿದ್ದಾರೆ. ಅಯ್ಯೋ, ಏನಪ್ಪಾ ಇದು ದರ ಎಂಬಂತಾಗಿದೆ ಇಂದಿನ ಚಿನ್ನದ ಪರಿಸ್ಥಿತಿ. ಇಂದೂ ಕೂಡಾ ಬೆಂಗಳೂರಿನಲ್ಲಿ ಚಿನ್ನದ ಬೆಲೆ ಭಾರೀ ಏರಿಕೆ ಕಂಡಿದೆ. ಹಾಗಿದ್ರೆ ಎಷ್ಟು ಏರಿಕೆಯಾಗಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರಿನಲ್ಲಿ 24K ಚಿನ್ನದ ಬೆಲೆ ಎಷ್ಟಿದೆ?
ಬೆಂಗಳೂರಿನಲ್ಲಿ ಇಂದು 24K ಚಿನ್ನದ 1 ಗ್ರಾಂ ಬೆಲೆ ₹13,538 ರೂ. ಆಗಿದ್ದು, ನಿನ್ನೆ ₹13,391 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಪ್ರತೀ ಗ್ರಾಂ ಚಿನ್ನದ ಬೆಲೆಯಲ್ಲಿ ₹147 ರೂ. ಹೆಚ್ಚಳವಾಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ದರ ಇಂದು ₹1,08,304 ರೂ. ಆಗಿದ್ದು, ನಿನ್ನೆ ₹1,07,128 ರೂ. ಇತ್ತು. ನಿನ್ನೆಗಿಂತ ಇಂದು 1,176 ರೂ. ಹೆಚ್ಚಳವಾಗಿದೆ. ಹಾಗೆಯೇ 10 ಗ್ರಾಂ ಚಿನ್ನದ ದರ ಇಂದು ₹1,35,380 ರೂ. ಆಗಿದ್ದು, ನಿನ್ನೆ ₹1,33,910 ರೂ. ಇತ್ತು. ನಿನ್ನೆಗಿಂತ ಇಂದು 1,470 ರೂ. ಹೆಚ್ಚಳವಾಗಿದೆ. ಹಾಗೆಯೇ 100 ಗ್ರಾಂ ಚಿನ್ನದ ದರ ₹13,53,800 ರೂ. ಆಗಿದ್ದು, ಒಟ್ಟು ₹14,700 ರೂ. ಹೆಚ್ಚಳ ಕಂಡಿದೆ.
ಬೆಂಗಳೂರಿನಲ್ಲಿ 22K ಚಿನ್ನದ ಬೆಲೆ ಎಷ್ಟಿದೆ?
22K ಚಿನ್ನದ 1 ಗ್ರಾಂ ಬೆಲೆ ಇಂದು ₹12,410 ರೂ. ಆಗಿದೆ. ನಿನ್ನೆ ₹12,275 ರೂ. ಇತ್ತು. ಪ್ರತೀ ಗ್ರಾಂನಲ್ಲಿ ಇಂದು ಒಟ್ಟು ₹135 ರೂ. ಹೆಚ್ಚಳವಾಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ದರ ಇಂದು ₹99,280 ರೂ. ಆಗಿದ್ದು, ನಿನ್ನೆ ₹98,200 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 1,080 ರೂ. ಹೆಚ್ಚಳ ಕಂಡಿದೆ. 10 ಗ್ರಾಂ ಚಿನ್ನದ ದರ ಇಂದು ₹1,24,100 ರೂ. ಆಗಿದ್ದು, ನಿನ್ನೆ ₹1,22,750 ರೂ. ಇತ್ತು. ಒಟ್ಟು 1,350 ರೂ. ಏರಿಕೆಯಾಗಿದೆ. 100 ಗ್ರಾಂ ಚಿನ್ನದ ದರ ಇಂದು ₹12,41,000 ರೂ. ಆಗಿದ್ದು, ನಿನ್ನೆ ₹12,27,500 ರೂ. ಇತ್ತು. ನಿನ್ನೆಗಿಂತ ಇಂದು ₹13,500 ರೂ. ಏರಿಕೆ ಕಂಡಿದೆ.
ಬೆಂಗಳೂರಿನಲ್ಲಿ 18K ಚಿನ್ನದ ಬೆಲೆ ಎಷ್ಟಿದೆ?
ಬೆಂಗಳೂರಿನಲ್ಲಿ ಇಂದು 18K ಚಿನ್ನದ 1 ಗ್ರಾಂ ₹10,154 ರೂ. ಆಗಿದ್ದು, ನಿನ್ನೆ ₹10,043 ರೂ. ಇತ್ತು. ನಿನ್ನೆಗಿಂತ ಇಂದು ₹111 ರೂ. ಹೆಚ್ಚಳವಾಗಿದೆ. ಹಾಗೆಯೇ 8 ಗ್ರಾಂ ಚಿನ್ನದ ದರ ಇಂದು ₹81,232 ರೂ. ಆಗಿದ್ದು, ನಿನ್ನೆ ₹80,344 ಇತ್ತು. ನಿನ್ನೆಗಿಂತ ಇಂದು ₹888 ರೂ. ಹೆಚ್ಚಳವಾಗಿದೆ. ಅದೇ ರೀತಿ 10 ಗ್ರಾಂ ಚಿನ್ನದ ದರ ₹1,01,540 ರೂ. ಆಗಿದ್ದು, 100 ಗ್ರಾಂ ಚಿನ್ನದ ದರ ₹10,15,400 ರೂ. ಆಗಿದೆ.
ಬೆಂಗಳೂರಿನಲ್ಲಿ ಬೆಳ್ಳಿ ದರ:
ಚಿನ್ನದ ಬೆಲೆಯಂತೇ ಬೆಳ್ಳಿ ಬೆಲೆಯೂ ಇಂದು ಗಗನಕ್ಕೇರಿದೆ. ಅಂದರೆ ನಿನ್ನೆ ಒಂದು ಗ್ರಾಂ ಬೆಳ್ಳಿ ದರ ಇಂದು ₹203 ರೂ. ಆಗಿದ್ದು, ನಿನ್ನೆಗಿಂತ ಒಟ್ಟು ₹5 ರೂ. ಹೆಚ್ಚಳವಾಗಿದೆ. ಅದೇ ರೀತಿ 8 ಗ್ರಾಂ ಬೆಳ್ಳಿ ದರ ₹1,624 ರೂ. ಆಗಿದ್ದು, ನಿನ್ನೆ ₹1,584 ರೂ. ಇತ್ತು. ಒಟ್ಟು ₹40 ರೂ. ಹೆಚ್ಚಳ ಕಂಡಿದೆ. ಇನ್ನು 10 ಗ್ರಾಂ ಬೆಳ್ಳಿ ದರ ₹2,030 ರೂ., 100 ಗ್ರಾಂ ಬೆಳ್ಳಿ ಬೆಲೆ ₹20,300 ರೂ., 1000 ಗ್ರಾಂ ಬೆಳ್ಳಿ ದರ ₹2,03,000 ರೂ. ಆಗಿದೆ.


Click it and Unblock the Notifications