Gold Rate India: ಊಹೆಗೂ ಮೀರಿದ ಮಟ್ಟದಲ್ಲಿ ಚಿನ್ನದ ಬೆಲೆ ಏರಿಕೆ! ಮತ್ತೆ ಬಂಗಾರ ಪ್ರಿಯರಿಗೆ ಬಿಗ್‌ ಶಾಕ್‌

ಕಳೆದ ವಾರ ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಸ್ವಲ್ಪ ಇಳಿಕೆ ಕಂಡಿತ್ತು. ಆದ್ರೆ ಕಳೆದೆರಡು ದಿನಗಳಿಂದ ಚಿನ್ನದ ಬೆಲೆ ಮತ್ತೆ ಗಗನಕ್ಕೇರಿದೆ. ಚಿನ್ನದ ಬೆಲೆ ಇಳಿಕೆಯಾಗುತ್ತೆ ಎಂದು ನಿರೀಕ್ಷೆಯಲ್ಲಿದ್ದವರಿಗೆ ಶಾಕ್‌ ಕೊಟ್ಟಂತಾಗಿದೆ. ಇನ್ನು ಇಂದಿನ ಏರಿಕೆ ಪ್ರಮಾಣವನ್ನು ನೋಡಿದ್ರೆ, ಕಳೆದ ವಾರವಿಡೀ ಇಳಿಕೆಯಾದ ಪ್ರಮಾಣದಷ್ಟು ಇಂದು ಹೆಚ್ಚಳವಾಗಿದೆ. ಹಾಗಿದ್ರೆ ಇಂದು (ನ.11) ಭಾರತದಲ್ಲಿ ಚಿನ್ನದ ಬೆಲೆ (Gold Rate India) ಎಷ್ಟು ಏರಿಕೆಯಾಗಿದೆ ಗೊತ್ತಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಊಹೆಗೂ ಮೀರಿದ ಮಟ್ಟದಲ್ಲಿ ಚಿನ್ನದ ಬೆಲೆ ಏರಿಕೆ!

ಭಾರತದಲ್ಲಿ 24K ಚಿನ್ನದ ಬೆಲೆ ಎಷ್ಷಿದೆ?
24 ಕ್ಯಾರಟ್‌ ಚಿನ್ನ ಶುದ್ಧತೆಗೆ ಹೆಸರುವಾಸಿ. ಅದೇ ಕಾರಣದಿಂದ 24K ಚಿನ್ನದ ಬೆಲೆ ಕೂಡಾ ಹೆಚ್ಚಿರುತ್ತದೆ. ಇಂದು 24 ಕ್ಯಾರೆಟ್‌ ಚಿನ್ನದ 1 ಗ್ರಾಂ ಬೆಲೆ ₹12,628 ರೂ. ಆಗಿದ್ದು, ನಿನ್ನೆ ₹12,382 ರೂ ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ದಿಢೀರ್‌ ₹246 ರೂ. ಭಾರೀ ಹೆಚ್ಚಳವಾಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು ₹1,01,024 ರೂ. ಆಗಿದ್ದು, ನಿನ್ನೆ ₹99,056 ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಚಿನ್ನದ ಬೆಲೆ 1,968 ರೂ. ಹೆಚ್ಚಳವಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,26,280 ರೂ. ಆಗಿದ್ದು, ನಿನ್ನೆ 1,23,820 ರೂ. ಇತ್ತು. ನಿನ್ನೆಗಿಂತ 2,460 ರೂ ಏರಿಕೆ ಕಂಡಿದೆ. ಅದೇ ರೀತಿ 100 ಗ್ರಾಂ ಚಿನ್ನದ ಒಟ್ಟು ಬೆಲೆ ₹12,62,800 ರೂ. ಆಗಿದ್ದು, ನಿನ್ನೆ 12,38,200 ರೂ. ಇತ್ತು. ಈ ಮೂಲಕ ಒಂದೇ ದಿನದಲ್ಲಿ24,600 ರೂ.ನಷ್ಟು ಏರಿಕೆಯಾಗಿದೆ. ನಿನ್ನೆಯೂ ಬೆಲೆ ಏರಿಕೆಯಾಗಿದ್ದು, ಆದ್ರೆ ನಿನ್ನೆಗೆ ಹೋಲಿಸಿದ್ರೆ ಇಂದು ಅರ್ಧಪಟ್ಟು ಬೆಲೆ ಏರಿಕೆಯಾಗಿದೆ.

ಭಾರತದಲ್ಲಿ 22K ಚಿನ್ನದ ಬೆಲೆ ಎಷ್ಷಿದೆ?
ಇಂದು 22K ಚಿನ್ನದ 1 ಗ್ರಾಂ ಬೆಲೆಯಲ್ಲೂ ಇಂದು ಹೆಚ್ಚಳವಾಗಿದೆ. ಇಂದು ಚಿನ್ನದ ಬೆಲೆ 11,575 ರೂ. ಆಗಿದ್ದು, ನಿನ್ನೆ ₹11,350 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹225 ರೂ. ಹೆಚ್ಚಳ ಕಂಡುಬಂದಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 92,600 ರೂ. ಆಗಿದ್ದು, ನಿನ್ನೆ 90,800 ರೂ. ಇತ್ತು. ಒಂದೇ ದಿನದಲ್ಲಿ 1,800 ರೂ. ಹೆಚ್ಚಳವಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,15,750 ರೂ ಆಗಿದ್ದು, ನಿನ್ನೆ ₹1,13,500 ರೂ ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 2,250 ರೂ ಏರಿಕೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು 11,57,500 ರೂ. ಆಗಿದ್ದು, ನಿನ್ನೆ ₹11,35,000 ರೂ. ಇತ್ತು. ನಿನ್ನೆಗಿಂತ ಇಂದು ಒಂದೇ ದಿನದಲ್ಲಿ 22,500 ರೂ. ಏರಿಕೆ ಕಂಡಿದೆ.

ಭಾರತದಲ್ಲಿ 18K ಚಿನ್ನದ ಬೆಲೆ ಎಷ್ಷಿದೆ?
18K ಚಿನ್ನದ 1 ಗ್ರಾಂ ಬೆಲೆ ಇಂದು ₹9,471 ರೂ. ಆಗಿದ್ದು, ನಿನ್ನೆ 9,471 ರೂ. ಇತ್ತು. ನಿನ್ನೆಗಿಂತ ಇಂದು ಪ್ರತೀ ಗ್ರಾಂ ಚಿನ್ನದಲ್ಲಿ ದಿಢೀರ್‌ ಆಗಿ ₹184 ರೂ. ಹೆಚ್ಚಳವಾಗಿದೆ. 8 ಗ್ರಾಂ ಚಿನ್ನದ ಬೆಲೆ ಇಂದು ₹75,768 ರೂ. ಆಗಿದ್ದು, ನಿನ್ನೆ 74,296 ರೂ ಇತ್ತು. ನಿನ್ನೆಗಿಂತ ಇಂದು 1,472 ರೂ. ಏರಿಕೆ ಕಂಡಿದೆ. ಇನ್ನು 10 ಗ್ರಾಂ ಚಿನ್ನದ ಬೆಲೆ ಇಂದು 94,710 ರೂ. ಆಗಿದ್ದು, ನಿನ್ನೆ 92,870 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 1,840 ರೂ. ಏರಿಕೆಯಾಗಿದೆ. ಅದೇ ರೀತಿ 100 ಗ್ರಾಂ ಚಿನ್ನದ ಬೆಲೆ ಇಂದು 9,47,100 ರೂ. ಆಗಿದ್ದು, ಒಟ್ಟು 18,400 ರೂ. ಏರಿಕೆ ಕಂಡಿದೆ.

ಭಾರತದ ವಿವಿಧ ನಗರಗಳ ಚಿನ್ನದ ಬೆಲೆ ಎಷ್ಷಿದೆ?
ಚೆನ್ನೈ: 24K ರೂ. 12,764, 22K ರೂ. 11,700, 18K ರೂ. 9,750
ಮುಂಬೈ: 24K ರೂ. 12,628, 22K ರೂ. 11,575, 18K ರೂ. 9,471
ದೆಹಲಿ: 24K ರೂ. 12,643, 22K ರೂ. 11,590, 18K ರೂ. 9,486
ಕೋಲ್ಕತ್ತಾ: 24K ರೂ. 12,628, 22K ರೂ. 11,575, 18K ರೂ. 9,471
ಬೆಂಗಳೂರು: 24K ರೂ. 12,628, 22K ರೂ. 11,575, 18K ರೂ. 9,471
ಹೈದರಾಬಾದ್: 24K ರೂ. 12,628, 22K ರೂ. 11,575, 18K ರೂ. 9,471
ಕೇರಳ: 24K ರೂ. 12,628, 22K ರೂ. 11,575, 18K ರೂ. 9,471
ಪುಣೆ: 24K ರೂ. 12,628, 22K ರೂ. 11,575, 18K ರೂ. 9,471
ವಡೋದರಾ: 24K ರೂ. 12,633, 22K ರೂ. 11,580, 18K ರೂ. 9,476
ಅಹಮದಾಬಾದ್: 24K ರೂ. 12,633, 22K ರೂ. 11,580, 18K ರೂ. 9,476

ಬೆಳ್ಳಿ ಬೆಲೆ ಎಷ್ಷಿದೆ?
ಚಿನ್ನದ ಬೆಲೆ ಗಗನಕ್ಕೇರುತ್ತಿದ್ದಂತೆ, ಇತ್ತ ಬೆಳ್ಳಿ ಬೆಲೆ ಕೂಡಾ ನಿಧಾನಗತಿಯಲ್ಲಿ ಏರಿಕೆ ಕಾಣುತ್ತಿದೆ. ಇದೇ ರೀತಿ ಮುಂದುವರೆದರೆ ಬೆಳ್ಳಿ ಕೂಡಾ ದುಬಾರಿಯಾಗಬಹುದು ಎಂದು ಹೇಳಲಾಗುತ್ತಿದೆ. ಅಂದರೆ ಇಂದು ಒಂದು ಗ್ರಾಂ ಬೆಳ್ಳಿ ದರ ₹160 ರೂ. ಆಗಿದ್ದು, ನಿನ್ನೆ ₹157 ರೂ. ಆಗಿತ್ತು. ಈ ಮೂಲಕ ಒಂದೇ ದಿನದಲ್ಲಿ ₹3 ರೂ. ಏರಿಕೆ ಕಂಡಿದೆ. ಇನ್ನು 8 ಗ್ರಾಂ ಬೆಳ್ಳಿದರ ಇಂದು ₹1,280 ರೂ. ಆಗಿದ್ದು, ನಿನ್ನೆ ₹1,256 ರೂ. ಇತ್ತು. ಒಂದೇ ದಿನದಲ್ಲಿ ₹24 ರೂ. ಏರಿಕೆಯಾಗಿದೆ. ಹಾಗೆಯೇ 10 ಗ್ರಾಂ ಬೆಳ್ಳಿದರ ಇಂದು 1,600 ರೂ. ಆಗಿದ್ದು, ನಿನ್ನೆ 1,570 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹30 ರೂ. ಹೆಚ್ಚಳವಾಗಿದೆ. ಅದೇ ರೀತಿ 100 ಗ್ರಾಂ ಬೆಳ್ಳಿ ಬೆಲೆ ಇಂದು 16,000 ರೂ. ಆಗಿದ್ದು, ನಿನ್ನೆ 15,700 ರೂ. ಆಗಿತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹300 ರೂ ಏರಿಕೆ ಕಂಡಿದೆ.

ಸ್ಪಾಟ್‌ ಗೋಲ್ಡ್‌ ವಿವರ:
ನವೆಂಬರ್‌ 11ರ ರಾಯಿಟರ್ಸ್‌ ವರದಿ ಪ್ರಕಾರ, ಡಿಸೆಂಬರ್‌ನಲ್ಲಿ ಮತ್ತೊಂದು ಯುಎಸ್‌ ಫೆಡರಲ್‌ ರಿಸರ್ವ್‌ ಬಡ್ಡಿದರ ಕಡಿತದ ನಿರೀಕ್ಷೆ ಇರುವುದರಿಂದ ಮತ್ತು ಯುಎಸ್‌ ಸರ್ಕಾರದ ಸ್ಥಗಿತ ಮುಕ್ತಾಯಗೊಳ್ಳುವ ಸಾಧ್ಯತೆ ಇರುವುದರಿಂದ ಮಂಗಳವಾರ ಚಿನ್ನದ ಬೆಲೆ ಮೂರು ವಾರಗಳ ನಂತರ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿದೆ.

ಜಿಎಂಟಿ 0314 ರ ವೇಳೆಗೆ ಸ್ಪಾಟ್‌ ಚಿನ್ನವು ಪ್ರತೀ ಔನ್ಸ್‌ಗೆ 0.7% ಏರಿಕೆಯಾಗಿದ್ದು, $4,142.83 ಕ್ಕೆ ತಲುಪಿದೆ. ಇದು ಅಕ್ಟೋಬರ್‌ 24 ರ ನಂತರದ ಗರಿಷ್ಠ ಏರಿಕೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+