ಬೆಂಗಳೂರಿನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಮತ್ತೆ ಏರಿಕೆಯಾಗಿದೆ. ಮತ್ತೆ ಇಳಿಕೆಯಾಗಬಹುದು ಎಂದು ನಿರೀಕ್ಷೆಯಲ್ಲಿದ್ದ ಆಭರಣಪ್ರಿಯರಿಗೆ ನಿರಾಸೆಯಾಗಿದೆ. ಇಂದೂ ಕೂಡ ಚಿನ್ನದ ಬೆಲೆ ಏರಿಕೆಯಾಗಿದೆ. ಹಾಗೆ ನಿನ್ನೆ ಯಥಾಸ್ಥಿತಿಯಲ್ಲಿದ್ದ ಬೆಳ್ಳಿ ಬೆಲೆ ಇಂದು ಏರಿಕೆಯಾಗಿದೆ.
ಈ ವರ್ಷ ಚಿನ್ನದ ದರ ಏರಿಕೆಯಾಗುವ ನಿರೀಕ್ಷೆ ಇದೆ. ಯುಸ್ ಡಾಲರ್ ಕೂಡ ಸುರಕ್ಷಿತ ಸ್ಥಾನ ಕಾಯದುಕೊಂಡಿದ್ದು, ಇದರ ಬಲವರ್ಧನೆಯಿಂದಾಗಿ ಚಿನ್ನ ದ ದರ ಏರಿಕೆಯನ್ನ ಕಾಣ್ತಿದೆ. ಹಾಗೆ ಟ್ರಂಪ್ ಅವರ ಉದ್ದೇಶಿತ ನೀತಿ ಬದಲಾವಣೆಗಳು ಆರ್ಥಿಕ ಮತ್ತು ಬಡ್ಡಿ ದರದ ದೃಷ್ಟಿಕೋನ ಪರಿಣಾಮ ಬೀರುವ ಸಾದ್ಯತೆ ಇದೆ. ಇನ್ನು ಈ ವಾರ ಬುಲಿಯನ್ 1.6%ರಷ್ಟು ಏರಿಕೆಯಾಗಿದೆ. ಹಾಗೆ ಈ ವಾರ ಬೆಳ್ಳಿ, ಪ್ಲಾಟಿನಂ, ಪಲ್ಲಾಡಿಯಂಗಳು ಏರಿಕೆಯಾಗುವ ನಿರೀಕ್ಷೆ ಇದೆ. ಹಾಗೆ ಈ 2025ರಲ್ಲಿ ಹಳದಿ ಲೋಹಗಳು ಏರಿಕೆ ಕಾಣುವ ನಿರೀಕ್ಷೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಚಿನ್ನದ ದರಗಳು
ಜನವರಿ 3 ರಂದು, ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆಯಾಗಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 800ರೂ. ಏರಿಕೆಯಾಗಿ 72,600ರೂ. ಆಗಿದೆ. ಮತ್ತು 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 870ರೂ. ಏರಿಕೆಯಾಗಿ 79,200ರೂ. ಆಗಿದೆ. ಬೆಂಗಳೂರಿನಲ್ಲಿ 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 650 ರೂ. ಏರಿಕೆಯಾಗಿ 59,400ರೂ. ಆಗಿದೆ.
ಹಾಗೆ 22 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 8,000ರೂ. ಏರಿಕೆಯಾಗಿ 7,26,000ರೂ. ಆಗಿದೆ. ಮತ್ತು 24 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 8,700ರೂ. ಏರಿಕೆಯಾಗಿ 7,92,000ರೂ. ಆಗಿದೆ.
18 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 6,500 ಏರಿಕೆಯಾಗಿ 5,94,000ರೂ. ಆಗಿದೆ.
ಬೆಂಗಳೂರಿನಲ್ಲಿ ಬೆಳ್ಳಿ ದರಗಳು
ಇಂದು ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಏರಿಕೆಯಾಗಿದೆ. ಪ್ರಸ್ತುತ, ಬೆಂಗಳೂರಿನಲ್ಲಿ 1 ಗ್ರಾಂ ಚಿನ್ನದ ಬೆಲೆ 200 ರೂ ಏರಿಕೆಯಾಗಿ 9,250ರೂ ಇದೆ. ಹಾಗೆ 1 ಕಿಲೋ ಗ್ರಾಂ ಬೆಳ್ಳಿ ಬೆಲೆ 2,000 ರೂ ಏರಿಕೆಯಾಗಿ 92,500ರೂ. ಇದೆ. ನಿನ್ನೆ ಸ್ಥಿರವಗಿದ್ದ ಬೆಳ್ಳಿ ಬೆಲೆ ಇಂದು ಏರಿಕೆಯಾಗಿದೆ.
ಭಾರತದ ಕೆಲವು ಮೆಟ್ರೋಪಾಲಿಟನ್ ನಗರಗಳಲ್ಲಿನ ಚಿನ್ನದ ಬೆಲೆಗಳ ವಿವರ:
| ನಗರಗಳು | 24 ಕ್ಯಾರೆಟ್ | 22 ಕ್ಯಾರೆಟ್ |
| ದೆಹಲಿ | 79,350 | 72,750 |
| ಮುಂಬೈ | 79,200 | 72,600 |
| ಚೆನ್ನೈ | 79,200 | 72,600 |
| ಕೋಲ್ಕತ್ತಾ | 79,200 | 72,600 |
ಸ್ಪಾಟ್ ಚಿನ್ನದ ಭವಿಷ್ಯ
ಸ್ಪಾಟ್ ಚಿನ್ನದ ಬೆಲೆ ಏರಿಕೆಯಾಗುವ ನಿರೀಕ್ಷೆ ಇದೆ. ಯುಎಸ್ ಡಾಲರ್ ಏರಿಕೆಯಿಂದಾಗಿ ಇದು ಸ್ಪಾಟ್ ಚಿನ್ನದ ಮೇಲೆ ಹೆಚ್ಚು ಪ್ರಭಾವ ಬೀರಲಿದೆ. ಇನ್ನು ವರದಿ ಪ್ರಕಾರ 0257 GMTಯಲ್ಲಿ ಸ್ಪಾಟ್ ಚಿನ್ನದ ಬೆಲೆಯು ಪ್ರತಿ ಔನ್ಸ್‌ಗೆ 0.2%ರಷ್ಟು ಏರಿಕೆಯಾಗಿ 2,661.19 ಡಾಲರ್ ತಲುಪಿದೆ. ಈ ವಾರ ಬುಲಿಯನ್ 1.6%ರಷ್ಟು ಏರಿಕೆಯಾಗಿದೆ. ಇತ್ತ ಸ್ಪಾಟ್ ಬೆಳ್ಳಿ ಪ್ರತಿ ಔನ್ಸ್‌ಗೆ 29.58 USDನಲ್ಲಿ ಸ್ಥಿರವಾಗಿದೆ. ಪ್ಲಾಟಿನಮ್ ಬೆಲೆಯು ಪ್ರತಿ ಔನ್ಸ್‌ಗೆ 0.4%ರಷ್ಟು ಏರಿಕೆಯಾಗಿ 926.95 ಡಾಲರ್ ತಲುಪಿದೆ. ಪಲ್ಲಾಡಿಯಂ ಬೆಲೆಯು ಪ್ರತಿ ಔನ್ಸ್‌ಗೆ 0.2%ರಷ್ಟು ಏರಿಕೆಯಾಗಿ 913.18ಡಾಲರ್ ತಲುಪಿದೆ ಮುಂಬರುವ ವರ್ಷದಲ್ಲಿ ಚಿನ್ನದ ಬೆಲೆಯಲ್ಲಿ ಸಾಕಷ್ಟು ಏರಿಳಿತಗಳು ಉಂಟಾಗಲಿದೆ ಎನ್ನಲಾಗ್ತಿದೆ.
MCX ಗೋಲ್ಡ್ ಔಟ್‌ಲುಕ್
ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX), ಫೆಬ್ರವರಿ 5, 2025 ರ ವಿತರಣೆಯ ಚಿನ್ನದ ಭವಿಷ್ಯ ನೋಡೋದಾದ್ರೆ, 10 ಗ್ರಾಂ ಚಿನ್ನಕ್ಕೆ 0.23%ನಷ್ಟು ಏರಿಕೆಯಾಗಿ 77,898ರೂ. ಆಗಿದೆ. ಅದೇ ರೀತಿ, ಮಾರ್ಚ್ 5, 2025ರ ಬೆಳ್ಳಿ ಭವಿಷ್ಯವು 0.13%ನಷ್ಟು ಏರಿಕೆಯಾಗಿ 89,291ರೂಪಾಯಿ ವಹಿವಾಟು ನಡೆಸುತ್ತಿದೆ. ಜಾಗತಿಕ ಬೇಡಿಕೆ, ಬಡ್ಡಿ ದರಗಳು, ಕರೆನ್ಸಿ ವಿನಿಮಯ ದರಗಳು, ಸರ್ಕಾರಿ ನೀತಿಗಳು ಮತ್ತು ಜಾಗತಿಕ ಘಟನೆಗಳಂತಹ ದೇಶೀಯ ಮತ್ತು ಅಂತರರಾಷ್ಟ್ರೀಯ ಎರಡೂ ಅಸ್ಥಿರಗಳಿಂದ ಚಿನ್ನದ ಬೆಲೆಗಳು ಹೆಚ್ಚು ಪರಿಣಾಮ ಬೀರಬಹುದು.
ಇನ್ನು ಕಳೆದ ತಿಂಗಳು, ಯುಎಸ್ ಸೆಂಟ್ರಲ್ ಬ್ಯಾಂಕ್ ಮೂರನೇ ಸತತ ದರ ಕಡಿತದ ವರದಿಯನ್ನ ನೀಡಿತ್ತು ಆದರೆ ಈಗ 2025 ರಲ್ಲಿ ಕೇವಲ ಎರಡು ಕಡಿತಗಳನ್ನು ಯೋಜಿಸಿದೆ. ಹಾಗೆ ಮಾರುಕಟ್ಟೆಗಳು ಈಗ US ಉದ್ಯೋಗಾವಕಾಶಗಳ ಡೇಟಾ, ADP ಉದ್ಯೋಗ ವರದಿ, ಫೆಡ್ ಸಭೆ ಮತ್ತು ಉದ್ಯೋಗದ ವರದಿ, ಮುಂದಿನ ವಾರದ ಎಲ್ಲಾ ಮುಂದಿನ ನಿರ್ದೇಶನಕ್ಕಾಗಿ ಕಾಯುತ್ತಿವೆ.
ಹಾಗೆ ಚಿನ್ನದ ವ್ಯಾಪಾರ ಚಟುವಟಿಕೆಯು ಈ ವರ್ಷಾಂತ್ಯದಲ್ಲಿ ಶಾಂತವಾಗಿ ಉಳಿಯುವ ನಿರೀಕ್ಷೆಯಿದೆ. ಇನ್ನು ಇಂದು ಚಿನ್ನದ ಬೆಲೆಗಳು ರಜೆದಿನಗಳು ಇರುವುದರಿಂದ ಹೆಚ್ಚಿನ ವಹಿವಾಟನ್ನ ನಿರೀಕ್ಷಿಸಲಾಗಿದೆ. ಇದರ ಜೊತೆಗೆ ಚಿನ್ನ, ಬೆಳ್ಳಿ ಎರಡೂ ಲೋಹಗಳು ಹೆಚ್ಚಿನ ಪ್ರಮಾಣದಲ್ಲಿ ವ್ಯಾಪಾರ ಮಾಡುತ್ತವೆ ಎಂಬ ನಿರೀಕ್ಷೆ ಇದೆ. ಬಂಗಾರ ಬೆಲೆಗಳು ಮತ್ತು ಬೆಳ್ಳಿ ದರಗಳು ಜಾಗತಿಕ ಮತ್ತು ಸ್ಥಳೀಯ ಕಾರಕಗಳ ಸಂಯೋಜನೆಯಿಂದ ಪರಿಣಾಮಗೊಳುತ್ತವೆ. ವಿಶ್ವಾದ್ಯಾಂತ ಬೇಡಿಕೆ, ವಿನಿಮಯ ದರಗಳು, ಬಡ್ಡಿ ದರಗಳು, ಸರ್ಕಾರದ ನೀತಿಗಳು ಮತ್ತು ಜಾಗತಿಕ ಘಟನೆಗಳು ಅವುಗಳ ಮೌಲ್ಯವನ್ನು ಬಹುಮಟ್ಟಿಗೆ ಪ್ರಭಾವಿತ ಮಾಡಬಹುದು.
ಬುಲಿಯನ್ ಅನ್ನು ಹಣದುಬ್ಬರ ಮತ್ತು ಪ್ರಕ್ಷುಬ್ಧತೆಯ ವಿರುದ್ಧ ಹೆಡ್ಜ್ ಎಂದು ಪರಿಗಣಿಸಲಾಗುತ್ತದೆ. ಆದರೆ ಹೆಚ್ಚಿನ ದರಗಳು ಇಳುವರಿ ರಹಿತ ಆಸ್ತಿಯ ಮನವಿಯನ್ನು ಕಡಿಮೆ ಮಾಡುತ್ತದೆ. ಈ ವಾರ ಬುಲಿಯನ್ 1.6%ರಷ್ಟು ಏರಿಕೆಯಾಗಿದೆ.


Click it and Unblock the Notifications