ಭಾರತೀಯರು ಚಿನ್ನ ಪ್ರಿಯರು. ಅದೇ ಕಾರಣದಿಂದ ಹೆಚ್ಚಿನವರು ಅಮೂಲ್ಯ ಲೋಹಗಳ ಮೇಲೆ ನಿರಂತರ ಹೂಡಿಕೆ ಮಾಡುತ್ತಲೇ ಇರುತ್ತಾರೆ. ಇದೀಗ ಮಾರ್ಚ್ 13 ರಂದು ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಕೊಂಚ ಮಟ್ಟಿಗೆ ಏರಿಳಿತಗಳು ಕಂಡಿದೆ. ಶುಕ್ರವಾರ MCX ವಹಿವಾಟು ಆರಂಭವಾಗುತ್ತಿದ್ದಂತೆ MCX ಚಿನ್ನ ಮತ್ತು ಬೆಳ್ಳಿ ದರಗಳು ಇಳಿಕೆ ಕಂಡವು. ಈ ಮಧ್ಯೆ ಸ್ಪಾಟ್ ಚಿನ್ನದ ದರ ಕೂಡಾ ಪ್ರತೀ ಔನ್ಸ್‌ಗೆ ಸುಮಾರು $5,110 ಕ್ಕೆ ಏರಿಕೆ ಕಂಡಿತು. ಇನ್ನು ಸ್ಪಾಟ್ ಬೆಳ್ಳಿ ದರ ಪ್ರತೀ ಔನ್ಸ್‌ಗೆ 1% ಏರಿಕೆ ಕಂಡು, $85 ಕ್ಕೆ ತಲುಪಿದೆ. ಇನ್ನು ಭಾರತದಲ್ಲಿ ಚಿನ್ನ, ಬೆಳ್ಳಿ ದರ (Gold-Silver Rate) ಎರಡೂ ಇಳಿಕೆ ಕಂಡಿದ್ದು, ಬಂಗಾರ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಂತಾಗಿದೆ.

ಬೆಂಗಳೂರಿನಲ್ಲಿ ಹೇಗಿದೆ ಚಿನ್ನದ ದರ?
ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆ ಸ್ವಲ್ಪ ಮಟ್ಟಿಗೆ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಇಂದು 24K ಚಿನ್ನದ 1 ಗ್ರಾಂ ಬೆಲೆ 16,124 ರೂ. ಆಗಿದ್ದು, 22K ಚಿನ್ನದ ಬೆಲೆ 14,780 ರೂ. ಆಗಿದೆ. ಇನ್ನು 18K ಚಿನ್ನದ ಬೆಲೆ 12,093 ರೂ. ತಲುಪಿದ್ದು, ನಿನ್ನೆಗಿಂತ ಇಂದು ಸ್ವಲ್ಪ ಇಳಿಕೆಯಾಗಿದೆ.
ಇನ್ನು ಕಚ್ಚಾ ತೈಲದ ಸಾಗಾಟದಲ್ಲಿ ಒತ್ತಡ ಆರಂಭವಾಗಿದ್ದು, ಬ್ರೆಂಟ್ ಕಚ್ಚಾ ತೈಲವು ಬ್ಯಾರೆಲ್‌ಗೆ $100 ಡಾಲರ್‌ಗಿಂತ ಹೆಚ್ಚು ಬೆಲೆಯಲ್ಲಿ ಮತ್ತು US WTI ಪ್ರತೀ ಬ್ಯಾರೆಲ್‌ಗೆ $95 ಕ್ಕಿಂತ ಏರಿಕೆಯಲ್ಲಿ ವಹಿವಾಟು ನಡೆಸುತ್ತಿದೆ.


Click it and Unblock the Notifications