ಸ್ವರ್ಣ ಭವಿಷ್ಯ ನಿಮ್ಮದಾಗಿಸಿ: ನಿವೃತ್ತಿ ಯೋಜನೆಗೆ ಚಿನ್ನದ ಮೆರುಗು ನೀಡಿ

ಇಂದು ನಮ್ಮ ಬಳಿ ದೈಹಿಕ ಶಕ್ತಿ ಇದೆ , ದುಡಿಯುತ್ತೇವೆ ಅದರಂತೆ ಬದುಕುತ್ತೇವೆ ಆದರೆ 20-30 ವರ್ಷ ಕಳೆದರೆ ಕೈ ಕಾಲಿನ ಶಕ್ತಿ ಉಡುಗಿರುತ್ತದೆ. ನಿವೃತ್ತ ಜೀವನದ ಕಡೆ ಹೆಜ್ಜೆ ಹಾಕಿರುತ್ತೇವೆ. ಕೆಲವರು ನಿವೃತ್ತಿಗಾಗಿ ಹೂಡಿಕೆ ಮಾಡಿ ಒಂದಷ್ಟು ಯೋಜನೆಗಳನ್ನು ಹಾಕಿಕೊಂಡಿದ್ದರೆ ಇನ್ನು ಕೆಲವರು ಮುಂದೆ ಸಮಯ ಬಂದಾಗ ನೋಡಿದರಾಯಿತು ಎಂಬ ಅಲೋಚನೆಗಳನ್ನು ಹೊಂದಿರುತ್ತರೆ. ಈಗ ನಾವು ಮೊದಲನೇ ವರ್ಗವನ್ನು ತೆಗೆದುಕೊಂಡರೆ ಈ ವರ್ಗದ ಜನ ಹೆಚ್ಚಾಗಿ ತಮ್ಮ ನಿವೃತ್ತಿ ಯೋಜನೆಗಳಿಗೆ ಸ್ಟಾಕ್ ಗಳು, ಬಾಂಡ್ ಗಳು ಮ್ಯೂಚುವಲ್ ಫಂಡ್ ಗಳು ಮತ್ತು ರಿಯಲ್ ಎಸ್ಟೇಟ್ ಗಳ ಮೇಲೆ ಹೂಡಿಕೆ ಮಾಡಿಕೊಂಡಿರುತ್ತಾರೆ.

ಆದ್ರೆ ಇದರ ಜೊತೆಗೆ ವಿಶ್ವಾಸಾರ್ಹವಾದ ಒಂದು ಆಸ್ತಿ ವರ್ಗವಿದೆ. ಇದರ ಬಗ್ಗೆ ಹೆಚ್ಚಿನ ಜನ ತಮ್ಮ ಗಮನಹರಿಸುವುದಿಲ್ಲ. ವಿಶೇಷವಾಗಿ ಇದು ಆರ್ಥಿಕ ಅನಿಶ್ಚಿತತೆ ಮತ್ತು ಹಣದುಬ್ಬರದ ಸಮಯದಲ್ಲಿ ನಮ್ಮ ಕೈ ಹಿಡಿಯುತ್ತದೆ. ಹೌದು ಮಹಿಳೆಯರ ಅಚ್ಚುಮೆಚ್ಚಿನ ಆಸ್ತಿಯಾಗಿರುವ ಚಿನ್ನ ವಿಶ್ವಾಸಕ್ಕೆ ಅರ್ಹವಾದ ಸಂಪತ್ತು ಆಗಿದೆ. ಚಿನ್ನದ ಬಗ್ಗೆ ಇರುವ ನಂಬಿಕೆ ಇಂದು ನಿನ್ನೆಯದಲ್ಲ. ನೂರಾರು ವರ್ಷಗಳಿಂದ ಚಿನ್ನ ಸುರಕ್ಷಿತ, ನಂಬಿಕಾರ್ಹ ಎಂಬ ಖ್ಯಾತಿಯನ್ನು ಗಳಿಸಿದೆ. ಭಾರತದಲ್ಲಿ ಚಿನ್ನದ ಪಾತ್ರವು ಮಹತ್ವದ್ದಾಗಿದ್ದು ಅದರಲ್ಲೂ ನಿವೃತ್ತಿಯ ಸಮಯದಲ್ಲಿ ಭವಿಷ್ಯವನ್ನು ಸುರಕ್ಷಿತವಾಗಿರಿಸಲು ಇದು ನಿರ್ಣಾಯಕವೆಂದು ಪರಿಗಣಿಸಲಾಗಿದೆ. ಹಾಗೆಂದು ನೇರವಾಗಿ ಸ್ವರ್ಣದ ಮೇಲೆ ಹೂಡಿಕೆ ಮಾಡಬೇಕಿಲ್ಲ. ಇದರಲ್ಲೂ ಹಲವು ವಿಧಗಳಿವೆ.

ಬಂಗಾರದಂತಹ ನಿವೃತ್ತಿಗೆ ಚಿನ್ನದ ಮೇಲೆ ಹೂಡಿಕೆ ಮಾಡಿ

ಬಂಗಾರವನ್ನು ಸುರಕ್ಷಿತ ಹೂಡಿಕೆಯ ಆಯ್ಕೆ ಎಂದು ಏಕೆ ಪರಿಗಣಿಸಲಾಗುತ್ತದೆ ಮತ್ತು ಭಾರತದಲ್ಲಿ ಹೊಸ ಚಿನ್ನದ ಹೂಡಿಕೆಯ ಆಯ್ಕೆಗಳು ಯಾವುದು ಎನ್ನುವುದು ಮುಂದೆ ನೋಡೋಣ.

ನಿವೃತ್ತಿ ಯೋಜನೆಯಲ್ಲಿ ಚಿನ್ನದ ಮಹತ್ವ

ಸಂರಕ್ಷಣೆ : ಚಿನ್ನ ಕಾಗದದ ಕರೆನ್ಸಿಗಳಂತಲ್ಲ. ಇದರ ಮೌಲ್ಯವು ಸರ್ಕಾರ ಅಥವಾ ಯಾವುದೇ ಕೇಂದ್ರ ಬ್ಯಾಂಕ್‌ ನಿರ್ಹ್ದರಿಸುವುದಿಲ್ಲ. ನಾವು ಆರ್ಥಿಕ ಇತಿಹಾಸವನ್ನು ಗಮನಿಸುವುದಾದರೆ ಚಿನ್ನವು ಹಣದುಬ್ಬರಕ್ಕೆ ಸೆಡ್ಡುಹೊಡೆಯುತ್ತದೆ ಮತ್ತು ಕಾಲಾನಂತರದಲ್ಲಿ ಕರಗುವುದಿಲ್ಲ ಎಂದು ಸೂಚಿಸುತ್ತದೆ. ಆದ್ದರಿಂದ, ಚಿನ್ನದ ಹೂಡಿಕೆಯು ಅನೇಕ ನಿವೃತ್ತರಿಗೆ ಹಣದುಬ್ಬರದ ನಡುವೆ ಬದುಕಲು ಸಹಾಯ ಮಾಡುತ್ತದೆ. ಇದು ಅವರ ಉಳಿತಾಯ ಮತ್ತು ಸ್ಥಿರ-ಆದಾಯದ ಹೂಡಿಕೆಗಳ ಮೇಲೆ ಪರಿಣಾಮ ಬೀರುತ್ತದೆ.

ವೈವಿಧ್ಯತೆ: ಚಿನ್ನವು ಷೇರುಗಳು, ಬಾಂಡ್‌ಗಳು ಮತ್ತು ಇತರ ಸಾಂಪ್ರದಾಯಿಕ ಹೂಡಿಕೆಗಳಿಂದ ಭಿನ್ನವಾದ ಆಸ್ತಿ ವರ್ಗವಾಗಿದೆ. ನಿಮ್ಮ ಪೋರ್ಟ್‌ಫೋಲಿಯೋದಲ್ಲಿ ಚಿನ್ನವನ್ನು ಸೇರಿಸುವುದರಿಂದ ಅದು ವೈವಿಧ್ಯಮಯವಾಗುತ್ತದೆ. ಸ್ಟಾಕ್ ಮಾರುಕಟ್ಟೆಯ ಕುಸಿತ ಅಥವಾ ಅಪಾಯವನ್ನು ಸಮತೋಲನಗೊಳಿಸುವ ಸಂದರ್ಭದಲ್ಲಿ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಚಿನ್ನದ ಹೂಡಿಕೆಯು ಲಾಭದಾಯಕ ಎಂದು ಸಾಬೀತಾಗಿದೆ.

ಲಿಕ್ವಿಡಿಟಿ: ಚಿನ್ನವು ವಿಶ್ವದ ಅತ್ಯಂತ ದ್ರವ ಆಸ್ತಿಗಳಲ್ಲಿ ಒಂದಾಗಿದೆ. ನಿಮಗೆ ತುರ್ತು ಅಗತ್ಯವಿದ್ದಾಗ, ಚಿನ್ನವನ್ನು ಸುಲಭವಾಗಿ ನಗದಿಗೆ ಪರಿವರ್ತಿಸಬಹುದು. ಭೌತಿಕ ಚಿನ್ನವನ್ನು ಆಭರಣ ಮಳಿಗೆಗಳಲ್ಲಿ ಅಥವಾ ಚಿನ್ನದ ಖರೀದಿದಾರರಿಂದ ಮಾರಾಟ ಮಾಡಬಹುದು. ಆದ್ದರಿಂದ, ನಿವೃತ್ತರು ನಿವೃತ್ತಿಯ ನಂತರ ಅಗತ್ಯವಿರುವ ಸಮಯದಲ್ಲಿ ಚಿನ್ನ ಕೈಹಿಡಿಯುತ್ತದೆ.

ಮಾರುಕಟ್ಟೆ ದಕ್ಷತೆ: ಚಿನ್ನದ ಮಾರುಕಟ್ಟೆ ವಿಶ್ವದ ಅತ್ಯಂತ ದೊಡ್ಡ ಮತ್ತು ದ್ರವ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಇದರರ್ಥ ಯಾವಾಗಲೂ ಖರೀದಿದಾರರು ಮತ್ತು ಮಾರಾಟಗಾರರು ಇರುತ್ತಾರೆ.

ಸೇಫ್ ಹೆವೆನ್: ರಾಜಕೀಯ ಅಸ್ಥಿರತೆ, ಆರ್ಥಿಕ ಕುಸಿತಗಳು ಅಥವಾ ಆರ್ಥಿಕ ಬಿಕ್ಕಟ್ಟುಗಳ ಸಂದರ್ಭದಲ್ಲಿ ಚಿನ್ನವು ಸಾಂಪ್ರದಾಯಿಕವಾಗಿ ಉತ್ತಮ "ಸುರಕ್ಷಿತ ಸ್ವರ್ಗ" ಹೂಡಿಕೆಯಾಗಿದೆ. ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ, ವಿಶೇಷವಾಗಿ ಸ್ಟಾಕ್ ಮಾರುಕಟ್ಟೆಯು ಕುಸಿಯುತ್ತಿರುವಾಗ ಮತ್ತು ಕರೆನ್ಸಿಗಳು ಕುಸಿಯುತ್ತಿರುವಾಗ, ಚಿನ್ನದ ಮಾರುಕಟ್ಟೆ ಏರುತ್ತದೆ. ಬಂಗಾರದ ಮಾರುಕಟ್ಟೆಯ ಒತ್ತಡದಿಂದ ಸುಲಭವಾಗಿ ಪ್ರಭಾವಿತವಾಗುವುದಿಲ್ಲ. ಆದ್ದರಿಂದ ನಿವೃತ್ತಿ ಹೊಂದಿದವರಿಗೆ ಚಿನ್ನವು ಮನಸ್ಸಿನ ಶಾಂತಿ ಮತ್ತು ಭದ್ರತೆಯನ್ನು ನೀಡುತ್ತದೆ.

ಅಂತರರಾಷ್ಟ್ರೀಯ ಮಾನ್ಯತೆ: ಚಿನ್ನವು ವಿಶ್ವದಾದ್ಯಂತ ಗುರುತಿಸಲ್ಪಟ್ಟ ಮತ್ತು ಸ್ವೀಕರಿಸಲ್ಪಟ್ಟ ಮೌಲ್ಯವನ್ನು ಹೊಂದಿದೆ.

ಚಿನ್ನವು ಸಾಂಪ್ರದಾಯಿಕವಾಗಿ ದೀರ್ಘಾವಧಿಯ ಮೌಲ್ಯವನ್ನು ಹೊಂದಿರುವ ಆಸ್ತಿಯಾಗಿದೆ. ಚಿನ್ನದ ಮೇಲಿನ ಹೂಡಿಕೆ ಮಾಡಿದ್ರೆ ಕೆಲವು ದಿನಗಳಲ್ಲಿ ಲಾಭ ಸಿಗುತ್ತದೆ ಎನ್ನುವುದು ಬಿಟ್ಟುಬಿಡಬೇಕು. ಚಿನ್ನವು ಲಾಭಾಂಶ ಇಳುವರಿ ಅಥವಾ ಬಡ್ಡಿ ಪಾವತಿಗಳ ರೂಪದಲ್ಲಿ ಆದಾಯವನ್ನು ನೀಡುವುದಿಲ್ಲ. ಚಿನ್ನದ ಬೆಲೆ ಅಲ್ಪಾವಧಿಯಲ್ಲಿ ಏರಿಳಿತಗೊಳ್ಳತ್ತದೆ. ಆದರೆ ದೀರ್ಘಾವಧಿಯಲ್ಲಿ ನೋಡಿದಾಗ ಇದರ ಲಾಭ ಅಧಿಕವಾಗಿಯೇ ಇರುತ್ತದೆ. ಉದಾಹರಣೆಗೆ, ಕಳೆದ ಹತ್ತು (2010-2020),ವರ್ಷಗಳಲ್ಲಿ ಚಿನ್ನದ ಬೆಲೆಗಳನ್ನು ಗಮನಿಸೋಣ. ಭಾರತದಲ್ಲಿ 2010 ರಲ್ಲಿ 10 ಗ್ರಾಂಗೆ ಸುಮಾರು ₹ 18,000 ಇದ್ದದ್ದು 2020 ರ ವೇಳೆಗೆ 10 ಗ್ರಾಂಗೆ ₹ 49,000 ಕ್ಕಿಂತ ಹೆಚ್ಚಾಗಿದೆ. ಚಿನ್ನದ ಬೆಲೆಯು ನಾಟಕೀಯ ರೀತಿಯಲ್ಲಿ ಹೆಚ್ಚಾಗುತ್ತಲೇ ಇದೆ. ಹೀಗಾಗಿ ಇದು ದೀರ್ಘಾವಧಿಯ ಹೂಡಿಕೆಯ ಲಾಭವಾಗಿದೆ.

ವೃತ್ತಿಗಾಗಿ ಚಿನ್ನದಲ್ಲಿ ಹೂಡಿಕೆ ಮಾಡಲು ಇರುವ ಮಾರ್ಗಗಳು

ನಿವೃತ್ತಿ ಯೋಜನೆಯಲ್ಲಿ ಚಿನ್ನವು ಯಾವಾಗಲೂ ಮೂಲಭೂತ ಅಂಶವಾಗಿದೆ. ನಾಣ್ಯಗಳು, ಬಾರ್‌ಗಳು ಮತ್ತು ಆಭರಣಗಳ ಮೂಲಕ ಭೌತಿಕ ಚಿನ್ನವನ್ನು ನೀವು ಖರೀದಿಸಬಹುದು. ಚಿನ್ನದ ಮ್ಯೂಚುಯಲ್ ಫಂಡ್‌ಗಳು: ಹೂಡಿಕೆದಾರರು ಚಿನ್ನದ ಇಟಿಎಫ್‌ಗಳು ಅಥವಾ ಚಿನ್ನದ ಗಣಿಗಾರಿಕೆ ಷೇರುಗಳಲ್ಲಿ ಹೂಡಿಕೆ ಮಾಡಲು ಹಣವನ್ನು ಸಂಗ್ರಹಿಸುವ ಮ್ಯೂಚುವಲ್ ಫಂಡ್‌ಗಳ ಮೂಲಕವೂ ಚಿನ್ನದಲ್ಲಿ ಹೂಡಿಕೆ ಮಾಡಬಹುದು. ಚಿನ್ನದ ಇಟಿಎಫ್‌ಗಳು (Exchange-Traded Funds) ಹೂಡಿಕೆದಾರರಿಗೆ ಭೌತಿಕ ಚಿನ್ನವನ್ನು ಸಂಗ್ರಹಿಸುವ ಬದಲು ಕಾಗದದ ರೂಪದಲ್ಲಿ ಚಿನ್ನವನ್ನು ಖರೀದಿಸಲು ಅನುವು ಮಾಡಿಕೊಡುತ್ತದೆ. ಸರ್ಕಾರದಿಂದ ಬೆಂಬಲಿತವಾಗಿರುವ ಗೋಲ್ಡ್ ಬಾಂಡ್‌ಗಳ ಮೇಲೂ ಹೂಡಿಕೆ ಮಾಡಬಹುದು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+