ಇತ್ತೀಚೆಗೆ ಚಿನ್ನಾಭರಣಗಳ ಖರೀದಿ (Gold Buying) ಪ್ರಮಾಣದಲ್ಲಿ ಸ್ವಲ್ಪ ಏರಿಕೆ ಕಂಡಿದೆ. ಇದಕ್ಕೆ ಮುಖ್ಯ ಕಾರಣ ಬೆಲೆ ಇಳಿಕೆ. ಆದರೆ ಚಿನ್ನಾಭರಣದ ಮೇಲೆ ಹೂಡಿಕೆ ಮಾಡುವಾಗ, ಖರೀದಿ ಮಾಡುವಾಗ ಕೆಲವು ಮಾನದಂಡಗಳನ್ನು ಫಾಲೋ ಮಾಡಬೇಕು. ಇಲ್ಲದಿದ್ರೆ ದೊಡ್ಡ ಸಮಸ್ಯೆಗೆ ಸಿಲುಕಬಹುದು. ಕೆಲವು ಚಿನ್ನಾಭರಣಗಳನ್ನು ಕ್ಯಾಶ್, ಆನ್‌ಲೈನ್ ಪೇಮೆಂಟ್, ಕ್ರೆಡಿಟ್ ಕಾರ್ಡ್ (Credit Card) ಮೂಲಕ ಖರೀದಿಸುತ್ತಾರೆ.

ಆದ್ರೆ ಕ್ರೆಡಿಟ್ ಕಾರ್ಡ್‌ನಲ್ಲಿ, ಆನ್‌ಲೈನ್‌ನಲ್ಲಿ ಚಿನ್ನಾಭರಣಗಳನ್ನು ಖರೀದಿಸುವಾಗ ಕೆಲವು ನಿಯಮಗಳನ್ನು ಪಾಲಿಸುವುದು ಕಡ್ಡಾಯ. ಇಲ್ಲದಿದ್ರೆ ದೊಡ್ಡ ಸಮಸ್ಯೆಗೆ ನೀವು ಸಿಕ್ಕಿಬೀಳಬಹುದು ಎಚ್ಚರ.
ಹೌದು, ಚಿನ್ನಾಭರಣಗಳನ್ನು ಖರೀದಿಸುವಾಗ ಆನ್‌ಲೈನ್ ಮೂಲಕವೋ, ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸುತ್ತಾರೆ. ಆದರೆ ಕಾಲಾನಂತರದಲ್ಲಿ ಚಿನ್ನ ಹೇಗೆ ಖರೀದಿಸಿದ್ದು ಎಂಬುದರ ನೆನಪೇ ಇರುವುದಿಲ್ಲ. ಅದಕ್ಕಾಗಿ ಚಿನ್ನ, ವ್ಯಾಪಾರದಂತಹ ವಹಿವಾಟುಗಳ ಸಮಯದಲ್ಲಿ ಭಾರೀ ಎಚ್ಚರವಹಿಸಬೇಕು.
ಬೆಂಗಳೂರು ವ್ಯಕ್ತಿಗೆ ಸಂಕಷ್ಟ:
ಚಿನ್ನ ಖರೀದಿ ವೇಳೆ ಮಾಡಿದ ಯಡವಟ್ಟಿನಿಂದ ಬೆಂಗಳೂರಿನ ವ್ಯಕ್ತಿಯೊಬ್ಬರು ಸಿಕ್ಕಿಬಿದ್ದಿದ್ದಾರೆ. 2019ರ ನವೆಂಬರ್ 14ರಂದು ಬೆಂಗಳೂರಿನ ವ್ಯಕ್ತಿಯೊಬ್ಬರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ 1.65 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳು ಪತ್ತೆಯಾಗಿತ್ತು. ಆಭರಣಗಳ ಖರೀದಿಗೆ ಸಂಬಂಧಿಸಿದಂತೆ ಸೂಕ್ತ ದಾಖಲೆಗಳನ್ನು ಒದಗಿಸಲು ವಿಫಲರಾದ ಕಾರಣ, ಅಧಿಕಾರಿಗಳು ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದರು.
ವಶಪಡಿಸಿಕೊಂಡ ಚಿನ್ನವನ್ನು ಆ ವ್ಯಕ್ತಿ ಹೆಂಡತಿಯದ್ದು ಎಂದು ಹೇಳಲಾಗಿದ್ದು, ಬ್ಯಾಂಕ್ ಮತ್ತು ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಲಾಗಿದೆ ಎಂದು ವಾದ ಮಾಡಿದ್ದರು. ವಶಪಡಿಸಿಕೊಂಡ ಆಭರಣಗಳಿಗೂ, ಅಲ್ಲಿ ಕೊಟ್ಟ ಬಿಲ್‌ಗಳಿಗೂ ಯಾವುದೇ ಹೊಂದಿಕೆಯಾಗದೇ ಇರುವುದರಿಂದ ವಶಪಡಿಸಿಕೊಂಡಿದ್ದೇವೆ ಎಂದು ಹೇಳಿದ್ದರು. ಅಷ್ಟೇ ಅಲ್ಲದೇ ವಶಪಡಿಸಿಕೊಂಡ ಚಿನ್ನದ ಮೌಲ್ಯವನ್ನು ಅವರ ತೆರಿಗೆಯ ಆದಾಯಕ್ಕೆ ಸೇರಿಸಿ ಹೆಚ್ಚುವರಿ ತೆರಿಗೆಯನ್ನೂ ವಿಧಿಸಲಾಯಿತು.
ಆದರೆ ಆಕ್ರೋಶಗೊಂಡ ವ್ಯಕ್ತಿ ಅಧಿಕಾರಿಗಳ ಈ ನಿರ್ಧಾರದ ವಿರುದ್ಧ ಆದಾಯ ತೆರಿಗೆ ಆಯುಕ್ತರಿಗೆ ಮೇಲ್ಮನವಿ ಸಲ್ಲಿಸಿದರು. ಈ ಮನವಿಗೆ ಸ್ಪಂದಿಸಿ, 2025ರ ಸೆಪ್ಟೆಂಬರ್ 11ರಂದು ಐಟಿಎಟಿ ತೀರ್ಪು ಪ್ರಕಟಿಸಿತು. ಆ ಆಭರಣಗಳನ್ನು ಈಗಾಗಲೇ ವ್ಯಕ್ತಿಯ ಪತ್ನಿಯ ಆದಾಯ ತೆರಿಗೆ ರಿಟರ್ನ್‌ನಲ್ಲಿ ತೋರಿಸಲಾಗಿದೆ ಎಂದು ನ್ಯಾಯಮಂಡಳಿ ವಿಚಾರಣೆಯ ಸಮಯದಲ್ಲಿ ಪತ್ತೆ ಮಾಡಿದೆ. ಆದ್ದರಿಂದ, ಅದೇ ಆಸ್ತಿಯ ಮೇಲೆ ಮತ್ತೊಮ್ಮೆ ತೆರಿಗೆ ವಿಧಿಸುವುದು ಸರಿಯಲ್ಲ, ಒಂದೇ ಆಸ್ತಿಯ ಮೇಲೆ ಎರಡು ಬಾರಿ ತೆರಿಗೆ ವಿಧಿಸುವುದು ಅನ್ಯಾಯ ಎಂದು ಹೇಳಿಕೆ ನೀಡಿತ್ತು.
ಸರಿಯಾದ ಬಿಲ್ ಕಡ್ಡಾಯ:
ಈ ಎಲ್ಲಾ ಬೆಳವಣಿಗೆಗಳ ನಂತರ ಹೆಚ್ಚಿನ ಮೌಲ್ಯದ ವಸ್ತುಗಳನ್ನು ಖರೀದಿ ಮಾಡುವಾಗ ಸರಿಯಾದ ಬಿಲ್‌ಗಳು, ದಾಖಲೆಗಳನ್ನು ತೆಗೆದುಕೊಳ್ಳಬೇಕು ಎಂದು ಚಾರ್ಟರ್ಡ್ ಅಕೌಂಟೆಂಟ್ ಒಬ್ಬರು ಹೇಳುತ್ತಾರೆ. ಅದರಲ್ಲೂ ಚಿನ್ನಾಭರಣ, ಕ್ರೆಡಿಟ್ ಕಾರ್ಡ್ ಅಥವಾ ಆನ್‌ಲೈನ್ ಮೂಲಕ ಖರೀದಿಸಿದರೂ ಅದರ ಬಿಲ್‌ಗಳನ್ನು ಇಟ್ಟುಕೊಳ್ಳಬೇಕು.
ಮನೆಯಲ್ಲಿ ಚಿನ್ನ ಇಟ್ಟುಕೊಳ್ಳುವುದು ತಪ್ಪಲ್ಲ, ಆದ್ರೆ ಪ್ರತಿಯೊಂದರ ದಾಖಲೆ ಇಟ್ಟುಕೊಳ್ಳುವುದು ಮುಖ್ಯ. ಅತಿಯಾದ ಚಿನ್ನ ಇದ್ದರೂ ಅದು ಎಲ್ಲಿಂದ ಬಂತು, ಪರಂಪರೆಯಿಂದ ಬಂದಿದ್ದಾ? ಯಾರಾದರೂ ಗಿಫ್ಟ್ ಕೊಟ್ಟಿದ್ದಾ? ನಿಮ್ಮ ಆದಾಯದಲ್ಲಿ ಖರೀದಿ ಮಾಡಿದ್ದಾ? ಈ ಎಲ್ಲಾ ದಾಖಲೆಗಳನ್ನು ನೀಡುವುದು ಮುಖ್ಯ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?



Click it and Unblock the Notifications