Gold Prediction: 2026 ರಲ್ಲಿ ಚಿನ್ನದ ಬೆಲೆ ಏರಿಕೆಯಾಗುತ್ತಾ? ಇಳಿಕೆಯಾಗುತ್ತಾ? ಗೋಲ್ಡ್‌ ಪ್ರಿಯರು ಓದಲೇಬೇಕಾದ ಸುದ್ದಿ

ಸುರಕ್ಷಿತ ಹೂಡಿಕೆಗಳಲ್ಲಿ (Safe Investment) ಒಂದಾದ ಚಿನ್ನದ ಬೆಲೆ ಇತ್ತೀಚೆಗೆ ಗಗನಕ್ಕೇರಿದೆ. ಜನಸಾಮಾನ್ಯರಂತೂ ಚಿನ್ನವನ್ನೂ ಮುಟ್ಟೋಕು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. ಚಿನ್ನದ ಬೆಲೆ (Gold Rate) ಇಂದಲ್ಲ, ನಾಳೆ ಕಮ್ಮಿಯಾಗಬಹುದು ಎಂದು ನಿರೀಕ್ಷೆಯಲ್ಲಿದ್ದವರಿಗೆ ದಿನ ಹೋದಂತೆ ನಿರಾಸೆಯೇ ಮೂಡಿಸುತ್ತಿದೆ. ಆದರೆ ಹಲವು ದಿನಗಳ ನಂತರ ಇಂದು ಚಿನ್ನ ಪ್ರಿಯರಿಗೆ ಗುಡ್‌ ನ್ಯೂಸ್‌ ಸಿಕ್ಕಿದೆ. ಚಿನ್ನದ ಬೆಲೆಯ ಕುಸಿತ ಇದೀಗ ಮತ್ತಷ್ಟು ಮುಂದುವರಿದಿದೆ. ಮಂಗಳವಾರ ಭಾರತೀಯ ಚಿನ್ನದ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 1,22,460 ರೂ.ಗೆ ಇಳಿದಿದೆ. ಇದೇ ವೇಳೆ ಬೆಳ್ಳಿ ದರವೂ ಸಹ ಇಳಿಕೆಯಾಗಿದ್ದು, ಪ್ರತಿ ಕೆ.ಜಿ.ಗೆ 1,51,00 ರೂ. ತಲುಪಿದೆ.

2026 ರಲ್ಲಿ ಚಿನ್ನದ ಬೆಲೆ ಏರಿಕೆಯಾಗುತ್ತಾ? ಇಳಿಕೆಯಾಗುತ್ತಾ?

ಇನ್ನು ಚಿನ್ನದ ಬೆಲೆ ಇತ್ತೀಚೆಗೆ ಭಾರೀ ಏರಿಕೆ ಕಂಡಿರುವುದರಿಂದ ಯಾವಾಗ ಇಳಿಕೆಯಾಗಬಹುದು ಎಂದು ಕಾತುರದಲ್ಲಿದ್ದಾರೆ. ಆದ್ರೆ ಚಿನ್ನದ ಬೆಲೆ ಇಳಿಕೆ ಪ್ರಮಾಣಕ್ಕಿಂತ, ಏರಿಕೆ ಪ್ರಮಾಣವೇ ಹೆಚ್ಚಾಗಿದೆ. ಅದರಲ್ಲೂ 2026 ರಲ್ಲಿ ಚಿನ್ನದ ಬೆಲೆ ಹೆಚ್ಚಾಗುತ್ತಾ? ಇಲ್ವಾ? ಎಂಬ ಪ್ರಶ್ನೆಯಲ್ಲಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ತಜ್ಞರ ಪ್ರಕಾರ, 2026ರಲ್ಲಿ ಚಿನ್ನದ ಬೆಲೆ 156,000 ರೂ. ದಾಟುವ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯದ ಬೆಲೆಗಳಲ್ಲಿ ಹೂಡಿಕೆ ಮಾಡುವುದು ಚಿನ್ನ ಖರೀದಿಗೆ ಉತ್ತಮ ಅವಕಾಶ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದು, ಹೂಡಿಕೆ ಮಾಡುವ ಮುನ್ನ ಮಾರುಕಟ್ಟೆ ಬೆಳವಣಿಗೆಗಳನ್ನು ಗಮನಿಸುವುದು ಕೂಡಾ ಮುಖ್ಯ.

ಅಕ್ಟೋಬರ್ 17ರಂದು 10 ಗ್ರಾಂ ಚಿನ್ನದ ಬೆಲೆ 132,770 ರೂ. ಇತ್ತು. ಆದರೆ ಇದೀಗ 10 ಗ್ರಾಂ ಚಿನ್ನದ ಬೆಲೆ ಭಾರತದಲ್ಲಿ 1,22,460 ರೂ. ಆಗಿದೆ. ಅಂದರೆ 10 ಸಾವಿರದವರೆಗೆ ಇಳಿಕೆ ಕಂಡಿದೆ. ಇದೇ ಅವಧಿಯಲ್ಲಿ ಬೆಳ್ಳಿ ದರದಲ್ಲಿ ಭಾರೀ ಇಳಿಕೆ ಕಂಡುಬಂದಿದೆ. ಆದರೆ ಕಳೆದ ಕೆಲವು ದಿನಗಳಲ್ಲಿ ಮಾತ್ರ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ.

2026ರಲ್ಲಿ ಏರಿಕೆಯಾಗುತ್ತಾ ಚಿನ್ನದ ಬೆಲೆ?
2026ರಲ್ಲಿ ಚಿನ್ನದ ಬೆಲೆ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ತಜ್ಞರು ಹೇಳುತ್ತಾರೆ. ವಿಶ್ವಾದ್ಯಂತ ಕೇಂದ್ರ ಬ್ಯಾಂಕ್‌ಗಳಿಂದ ಹೆಚ್ಚುತ್ತಿರುವ ಖರೀದಿ, ಹೂಡಿಕೆ ಮತ್ತು ಅಮೆರಿಕದ ಕೇಂದ್ರ ಬ್ಯಾಂಕ್ ಬಡ್ಡಿ ದರ ಕಡಿತಗೊಳಿಸುವ ನಿರ್ಧಾರಗಳು ಚಿನ್ನದ ಬೆಲೆ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ 2026ರಲ್ಲಿ ಚಿನ್ನದ ಬೆಲೆ 126,000 ರೂ.ನಿಂದ 156,000 ರೂ.ವರೆಗೆ ಏರಿಕೆ ಕಾಣಬಹುದು ಎಂದು ಚಿನ್ನದ ಬೆಲೆ ಬಗ್ಗೆ ವಿಶ್ಲೇಷಣೆ ಮಾಡುವ ತಜ್ಞರು ಅಂದಾಜಿಸಿದ್ದಾರೆ.

ಬ್ರೋಕರೇಜ್ ಹೌಸ್ ಎಚ್‌ಎಸ್‌ಬಿಸಿ, 10 ಗ್ರಾಂ ಚಿನ್ನದ ದರ 144,068 ರೂ. ತಲುಪುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಿದೆ. ಅದೇ ರೀತಿ ಗೋಲ್ಡ್‌ಮನ್ ಸ್ಯಾಚ್ಸ್ ಪ್ರಕಾರ, ಚಿನ್ನದ ಬೆಲೆ ಪ್ರತಿ ಔನ್ಸ್‌ಗೆ 4900 ಡಾಲರ್ ಅಥವಾ ಸುಮಾರು 153,000 ರೂ.ಗೆ ಏರಬಹುದು ಅಂದಾಜಿಸಿದೆ. ಕೆಲವರು ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತೆ ಎಂದು ಭವಿಷ್ಯ ನುಡಿದರೆ, ಇನ್ನೂ ಕೆಲವರು ಇಳಿಕೆಯಾಗಬಹುದು ಎಂದು ಹೇಳುತ್ತಿದ್ದಾರೆ. ಆದರೆ ಯಾವುದನ್ನೂ ನಿಖರವಾಗಿ ನಂಬಲು ಸಾಧ್ಯವಿಲ್ಲ.

ಇನ್ನು ತಜ್ಞರ ಪ್ರಕಾರ, ಚಿನ್ನದ ಬೆಲೆ 123,000 ರೂ.ಗಿಂತ ಕಡಿಮೆ ಇದ್ದರೆ, ಚಿನ್ನದ ಮೇಲೆ ಹೂಡಿಕೆ ಮಾಡುವುದು ಬೆಸ್‌ ಅಂತಾರೆ. ಆದರೆ ಚಿನ್ನದ ಮಾರುಕಟ್ಟೆ ಬಗ್ಗೆ ನಿರಂತವಾಗಿ ಪರಿಶೀಲಿಸುವುದು ಅಗತ್ಯ. ಆದ್ದರಿಂದ ಚಿನ್ನ ಖರೀದಿ ಅಥವಾ ಹೂಡಿಕೆ ಮಾಡುವ ಮುನ್ನ ಮಾರುಕಟ್ಟೆ ಬೆಳವಣಿಗೆಗಳನ್ನು ನೋಡುವುದು ಮುಖ್ಯ.

(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited (ಒಟ್ಟಾರೆ "ನಾವು" ಎಂದು ಕರೆಯಲಾಗುತ್ತದೆ) ಅವರ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+