ಭಾರತದಲ್ಲಿ ಚಿನ್ನ-ಬೆಳ್ಳಿ (Gold-Silver) ಪ್ರಿಯರು ಬಹಳಷ್ಟು ಇದ್ದಾರೆ. ಅದಕ್ಕಾಗಿಯೇ ಇತ್ತೀಚೆಗೆ ಚಿನ್ನ ಬೆಲೆ ಕೂಡಾ ಏರಿಕೆಯಾಗುತ್ತಿದೆ. ಡಿಸೆಂಬರ್, ಜನವರಿ ತಿಂಗಳಲ್ಲಿ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇದೀಗ ಫೆಬ್ರವರಿ ಆರಂಭದಿಂದಲೂ ಭಾರೀ ಇಳಿಕೆಯಾಗುತ್ತಿದೆ. ಇದೀಗ ಚಿನ್ನದ ಬೆಲೆ ಇಂದೂ (ಫೆ.17) ಭಾರೀ ಇಳಿಕೆಯಾಗಿದೆ. 22 ಕ್ಯಾರಟ್ ಚಿನ್ನದ 10 ಗ್ರಾಂ ಬೆಲೆ 1,56,440 ರೂ. ಆಗಿದ್ದು, ಈ ವಾರದ ಆರಂಭದಿಂದಲೇ ಕುಸಿತ ಕಂಡಿದೆ.

ಇತ್ತೀಚೆಗೆ ದಿನ ಹೋದಂತೆ ಚಿನ್ನದ ಬೆಲೆ ಭಾರೀ ಇಳಿಕೆಯಾಗುತ್ತಿದೆ (Gold Drops). ಈ ಮಧ್ಯೆ ಹೂಡಿಕೆದಾರರು ಕೂಡಾ ಚಿನ್ನದ ಬೆಲೆ ಮತ್ತಷ್ಟು ಇಳಿಕೆಯಾಗುತ್ತಾ? ಚಿನ್ನದ ಬೆಲೆ 1 ಲಕ್ಷಕ್ಕೆ ತಲುಪುತ್ತಾ ಎಂಬ ಕುತೂಹಲದಲ್ಲಿದ್ದಾರೆ. ಇದೀಗ ಚಿನ್ನದ ಬೆಲೆ ಬಗ್ಗೆ ಆರ್ಥಿಕ ತಜ್ಞರು ಸ್ಫೋಟಕ ಭವಿಷ್ಯ (Gold Outlook) ನುಡಿದಿದ್ದಾರೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
ಇಳಿಕೆ ಕಂಡ ಚಿನ್ನ!
ಈ ವರ್ಷದ ಜನವರಿಯಲ್ಲಿ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದ್ದ ಬಂಗಾರದ ಬೆಲೆಗಳು ಈಗ ಗಣನೀಯವಾಗಿ ಇಳಿಕೆ ಕಾಣುತ್ತಿದೆ. MCX ನ್ಲಲಿ 10 ಗ್ರಾಂ ಚಿನ್ನದ ದರ 1,80,779 ರೂ. ತಲುಪಿತ್ತು. ಆದರೆ ಇದೀಗ ಈ ಬೆಲೆ 1,54,000-1,56,000 ರೂ.ನ ಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿದೆ. ಇದೀಗ ಇಂದು (ಫೆ.17) 24 ಕ್ಯಾರಟ್ ಚಿನ್ನದ ಬೆಲೆ ಗ್ರಾಂಗೆ 15,491 ರೂ. ತಲುಪಿದ್ದು, 10 ಗ್ರಾಂ ಗೆ 1,54,910 ರೂ. ಆಗಿದೆ.
ಶೀಘ್ರದಲ್ಲೇ 1 ಲಕ್ಷಕ್ಕೆ ಇಳಿಯುತ್ತಾ ಚಿನ್ನದ ಬೆಲೆ?
ಇದೀಗ ಚಿನ್ನದ ಬೆಲೆ ಇಳಿಕೆಯಾಗುತ್ತಿದ್ದಂತೆ ಕೆಲವು ತಜ್ಞರು ಚಿನ್ನದ ಬೆಲೆ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಆ ಪ್ರಕಾರ ಕೆಲವು ಹೌದು, ಶೀಘ್ರದಲ್ಲೇ ಚಿನ್ನದ ಬೆಲೆ 1 ಲಕ್ಷಕ್ಕೆ ಇಳಿಯಬಹುದು ಎಂದು ಹೇಳಿದ್ದಾರೆ. PACE 360 ನ ಅಮಿತ್ ಗೋಯಲ್ ಅವರು ಈ ಕುರಿತು ಮಾತನಾಡಿದ್ದು, ರಷ್ಯಾ ಡಾಲರ್ ವಹಿವಾಟಿಗೆ ಮರಳುವ ಸಾಧ್ಯತೆಯಿಂದಾಗಿ, ಡಿ-ಡಾಲರೈಸೇಶನ್ ಚಳುವಳಿ ದುರ್ಬಲಗೊಳ್ಳಬಹುದು. ಇದರಿಂದ ಬಂಗಾರದ ಬೆಲೆ ಮೇಲೆ ಪರಿಣಾಮ ಬಿದ್ದು, ಬೇಡಿಕೆ ಕಡಿಮೆಯಾಗಲಿದೆ. ಅಲ್ಲದೇ ಭಾರತದಲ್ಲೂ 10 ಗ್ರಾಂಗೆ 1 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಇಳಿಯಬಹುದು ಎಂದು ಹೇಳಿದ್ದಾರೆ.
ಇನ್ನೂ ಕೆಲವು ತಜ್ಞರು ಈ ಮಾತನ್ನು ಒಪ್ಪುತ್ತಿಲ್ಲ. ಬದಲಿಗೆ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಗಳು ಭಾರೀ ಏರಿಕೆಯಾಗಬಹುದು ಎಂದು ಹೇಳಿದ್ದಾರೆ. ಅದರಲ್ಲೂ ಜೆಪಿ ಮಾರ್ಗನ್ ಮತ್ತು ಗೋಲ್ಡ್‌ಮ್ಯಾನ್ ಸಚ್‌ನಂತಹ ಅಂತರಾಷ್ಟ್ರೀಯ ಸಂಸ್ಥೆಗಳು 2026ರ ಅಂತ್ಯದ ವೇಳೆಗೆ $5,000-$5,400 ಕ್ಕೆ ಏರಿಕೆಯಾಗಬಹುದು ಹೇಳಿವೆ. ಇನ್ನು ಭಾರತದಲ್ಲಿ ಕೇಂದ್ರ ಬ್ಯಾಂಕುಗಳು, ಬೇಡಿಕೆ ಹೆಚ್ಚಾಗಿದ್ದರಿಂದ ಬೆಲೆಗಳು ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಸದ್ಯ ಇದು ಆರ್ಥಿಕ ತಜ್ಞರ ಊಹೆಯಾಗಿದ್ದು, ಮುಂದಿನ ದಿನಗಳಲ್ಲಿ ಮಾರುಕಟ್ಟೆ ಏರಿಳಿತಗಳಿಗೆ ಅನುಗುಣವಾಗಿ, ಚಿನ್ನ-ಬೆಳ್ಳಿ ದರದಲ್ಲಿ ವ್ಯತ್ಯಾಸಗಳಾಗುತ್ತದೆ.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications