ಭಾರತದಲ್ಲಿ ಚಿನ್ನ ಬೆಳ್ಳಿ ಗ್ರಾಹಕರಿಗೆ ಸದ್ಯಕ್ಕೆ ಸಿಹಿ ಸುದ್ದಿ ಸಿಕ್ಕಿದೆ. ಬಹುದಿನಗಳಿಂದ ಏರಿಕೆಗೊಳ್ತಾನೆ ಇದ್ದ ಚಿನ್ನ, ಬೆಳ್ಳಿ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ.
ಮಂಗಳವಾರ, ನವೆಂಬರ್ 12ರಂದು ಭಾರತದಲ್ಲಿ ಬಂಗಾರದ ಬೆಲೆ ಕುಸಿದಿದೆ. ಹೂಡೆಕೆದಾರರು US ಆರ್ಥಿಕ ಡೆಟಾ ಮತ್ತು ಫೆಡರಲ್ ಅಧಿಕಾರಿಗಳಿಂದ ಬಡ್ಡಿ ದರದ ಬಗೆಗಿಗ ಹೆಚ್ಚಿನ ಕಮೆಂಟ್‌ಗಳನ್ನ ನಿರೀಕ್ಷೆ ಇಟ್ಟುಕೊಂಡಿದ್ದರು. ಹೀಗಾಗಿ ಭಾರತದಲ್ಲಿ ಬಂಗಾರ ತೀವ್ರವಾಗಿ ಕುಸಿತಕಂಡಿದೆ. ಇನ್ನು ಈ ವಾರದ ಮತ್ತು ನಂತರದ ಮಾರುಕಟ್ಟೆಯ ಗಮನವು ಅಕ್ಟೋಬರ್ ಗ್ರಾಹಕ ಬೆಲೆ ಸೂಚ್ಯಾಂಕ ಡೆಟಾ, ನಿರ್ಮಾಪಕ ಬೆಲೆ ಸೂಚ್ಯಾಂಕ, ಚಿಲ್ಲರೆ ಮಾರಾಟ ಮತ್ತು ಕೈಗಾರಿಕಾ ಉತ್ಪಾದನೆಗಳ ಮೇಲೆ ಇರಲಿದೆ. ಜೊತೆಗೆ ಅಧ್ಯಕ್ಷ ಜೆರೋಮ್ ಪೋವೆಲ್ ಸೇರಿದಂತೆ ಯುಎಸ್ ಸೆಂಟ್ರಲ್ ಬ್ಯಾಂಕ್‌ನ ಅಧಿಕಾರಿಗಳು ಈ ವಾರ ಒಂದಷ್ಟು ಟೀಕೆಗಳಿಗೆ ಗುರಿಯಾಗಿದ್ದಾರೆ ಎನ್ನಲಾಗ್ತಿದೆ. ಹೀಗಾಗಿ ಚಿನ್ನದ ಬೆಲೆಯಲ್ಲೂ ಕೂಡ ಒಂದಿಷ್ಟು ಬದಲಾವಣೆಗಳಾಗಿವೆ. ಅಲ್ಲದೆ ಇದು ಚಿನ್ನದ ಬೆಲೆಯನ್ನು ಅಸ್ಥಿರವಾಗಿಡಲು ನೀರಿಕ್ಷಿಸಬಹುದಾಗಿದೆ.

ಭಾರತದಲ್ಲಿ ಇಂದಿನ ಬಂಗಾರದ ಬೆಲೆ
ಭಾರತದಲ್ಲಿ ಇಂದು 22ಕ್ಯಾರಟ್‌ನ ಪ್ರತಿ ಗ್ರಾಂ ಚಿನ್ನದ ಬೆಲೆ 7,085 ಇದೆ. ಹಾಗೆ 24ಕ್ಯಾರಟ್‌ನ ಪ್ರತೀ ಗ್ರಾಂ ಚಿನ್ನದ ಬೆಲೆ 7,729 ಇದೆ. ಹಾಗೆ ಭಾರತದಲ್ಲಿ 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 70,850 ಇದೆ. ಆದ್ರೆ ಸೋಮವಾರ ಒಟ್ಟು ಪ್ರತೀ 10 ಗ್ರಾಂಗೆ 72,200 ರೂ. ಇದ್ದ ಚಿನ್ನದ ಬೆಲೆ 1,350 ರೂಗಳಷ್ಟು ಇಳಿಕೆಯಾಗಿದೆ. ನಿನ್ನೆ 7,22,000 ಇದ್ದ ಪ್ರತೀ 100 ಗ್ರಾಂನ ೨೨ ಕ್ಯಾರೆಟ್ ಚಿನ್ನದ ಬೆಲೆ ಇಂದು 13,500 ರೂಗಳಷ್ಟು ಇಳಿಕೆಕಂಡು, 7,08,500 ರೂಪಾಯಿ ಆಗಿದೆ.
ಭಾರತದಲ್ಲಿ ಸೋಮವಾರ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 78760 ಇತ್ತು, ಇಂದು 77290 ಕ್ಕೆ 1,470 ರಷ್ಟು ಕಡಿಮೆಯಾಗಿದೆ. ಹಾಗೆಯೇ ನಿನ್ನೆ 24 ಕ್ಯಾರೆಟ್ ನ 100 ಗ್ರಾಂಗೆ 787,600 ಇದ್ದ ಚಿನ್ನದ ಬೆಲೆ ಇಂದು 14,700 ಇಳಿಕೆಯಾಗಿ 772,900 ರೂಪಾಯಿಗಳಿಗೆ ತಲುಪಿದೆ.
ಹಾಗೆ ಪ್ರತೀ 10ಗ್ರಾಂನ 18 ಕ್ಯಾರಟ್‌ಗೆ ಸೋಮವಾರ 59,070 ಚಿನ್ನದ ಬೆಲೆ ಇಂದು 1,100 ರೂಗಳಷ್ಟು ಇಳಿಕೆಯಾಗಿ 57,970 ಆಗಿದೆ. ಜೊತೆಗೆ ನಿನ್ನೆ 5,90,70 ಇದ್ದ 100 ಗ್ರಾಂನ 18 ಕ್ಯಾರಟ್‌ನ ಚಿನ್ನದ ಬೆಲೆ 11,000 ಗಳಷ್ಟು ಇಳಿಕೆಕಂಡು 5,79,700 ಆಗಿದೆ.
ಇಂದಿನ ಬಂಗಾರದ ಬೆಲೆ
ಈ ಹಿಂದೆ ಅಕ್ಟೋಬರ್ ೧೦ರಂದು ಕುಸಿತ ಕಂಡಿತ್ತು ಅದಾದ ನಂತರ, ಮಂಗಳವಾರ ೦೪೩೬ ಜಿಎಮ್‌ಟಿಯಲ್ಲಿ ೦.೧ರಷ್ಟು ಚಿನ್ನ ಕುಸಿತಕಂಡಿದೆ. ಅಂದರೆ $೨೬೧೭.೧೫ ಇಂದ $೨೬೧೭.೧೫ಕ್ಕೆ ಕುಸಿತ ಕಂಡಿದೆ. ಇದು ಒಂದು ತಿಂಗಳಿನಲ್ಲಿ ಕನಿಷ್ಠ ಮಟ್ಟಕ್ಕೆ ಹತ್ತಿರದಲ್ಲಿದೆ ಎನ್ನಲಾಗ್ತಿದೆ. ಇನ್ನು ರಾಯಿಟರ್ಸ್ ವರದಿ ಪ್ರಕಾರ ಯುಎಸ್‌ನ ಚಿನ್ನದ ಬೆಲೆ ೦.೨ ರಷ್ಟು ಏರಿಕೆಯಾಗಿ $೨೬೨೩ಕ್ಕೆ ತಲುಪಿದೆ ಎನ್ನಲಾಗ್ತಿದೆ. ಹಾಗೆ ಸ್ಪಾಟ್ ಚಿನ್ನವು $೨೬೧೦ ಬೆಂಬಲ ಮಟ್ಟವನ್ನು ಮತ್ತೆ ಪರೀಕ್ಷೆ ಮಾಡುತ್ತದೆ ಎಂದು ರಾಯಿಟರ್ಸ್‌ನ ತಾಂತ್ರಿಕ ವಿಶ್ಲೇಷಕ ವಾಂಗ್ ಟಾವೊ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಆ ಮಟ್ಟಕ್ಕಿಂತ ಕೆಳಗಿನ ಉಲ್ಲಂಘನೆಯು ಅಂದರೆ $೨೫೬೬-$೨,೫೮೮ಗೆ ಕಾರಣವಾಗಬಹುದು ಎಂದಿದ್ದಾರೆ. ಪಲ್ಲಾಡಿಯಮ್ ಶೇಕಡಾ 1 ರಷ್ಟು ಇಳಿಕೆಯಾಗಿದ್ದು, $971.07 ಆಗಿದೆ. ಇನ್ನು ಪ್ಲಾಟಿನಂ ಶೇಕಡಾ 0.9 ರಷ್ಟು ಇಳಿಮುಖವಾಗಿದ್ದು, 956.45 ಡಾಲರ್‌ಗೆ ತಲುಪಿದೆ. ಇತ್ತ ಸ್ಪಾಟ್ ಬೆಳ್ಳಿ ಶೇಕಡಾ 0.4 ರಷ್ಟು ಕುಸಿದು 30.57 ಡಾಲರ್ಗೆ ಆಗಿದೆ.
ಭಾರತದಲ್ಲಿ ಇಂದಿನ ಬೆಳ್ಳಿ ಬೆಲೆ
ಭಾರತದಲ್ಲಿ ಬೆಳ್ಳಿ ಬೆಲೆ ಪ್ರತಿ ಕೆಜಿಗೆ 91,000 ರೂ ಮತ್ತು ಕೆಜಿಗೆ 91 ರೂಪಾಯಿ ಆಗಿದೆ. ಇನ್ನು ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 100 ರು ಕುಸಿತ ಕಂಡು 9,100ರೂಪಾಯಿ ಆಗಿದೆ. ಹಾಗೂ ಬೆಳ್ಳಿ 10 ಗ್ರಾಂಗೆ 100 ರು ಇಳಿಕೆಯಾಗಿ 91,000ರು ಇಳಿಮುಖವಾಗಿದೆ.
ಆದ್ರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಏರಿಕೆಯನ್ನ ಕಾಣಬಹುದು. ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ದಿನದ ಮಟ್ಟಿಗೆ ಸ್ವಲ್ಪ ಕಡಿಮೆಯಾಗಿವೆ ಎನ್ನಬಹುದು. ಹಾಗೆ ನಿರ್ಮಲ್ ಬ್ಯಾಂಗ್ ಸೆಕ್ಯುರಿಟೀಸ್ ಪ್ರೈವೇಟ್ ಲಿಮಿಟೆಡ್ನ ತಾಂತ್ರಿಕ ಸಂಶೋಧನಾ ವಿಶ್ಲೇಷಕರು ಹೇಳಿರುವ ಪ್ರಕಾರ ಟ್ರಂಪ್ ಅವರ ವ್ಯಾಪಾರ ಸುಂಕಗಳು ಮತ್ತು ದೃಢವಾದ ಯುಎಸ್ ಆರ್ಥಿಕ ಬೆಳವಣಿಗೆಗೆ ಸಂಬಂಧಿಸಿದ ಹೆಚ್ಚಿನ ಲಾಭಗಳನ್ನು ಮಾರುಕಟ್ಟೆಗಳು ನಿರೀಕ್ಷಿಸುತ್ತಿರುವುದರಿಂದ ಡಾಲರ್ನ ಮಾಪಕವು ಒಂದು ವರ್ಷದಲ್ಲಿ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ ಎಂದಿದ್ದಾರೆ .
ಇಂದಿನ ಚಿನ್ನದ ಬೆಲೆ ಏರಿಕೆ
ಈ ವಾರದ ಕೊನೆಯಲ್ಲಿ ಅಕ್ಟೋಬರ್ ಗ್ರಾಹಕ ಬೆಲೆ ಸೂಚ್ಯಂಕ ದತ್ತಾಂಶ ಹಾಗೂ ಉತ್ಪಾದಕ ಬೆಲೆ ಸೂಚ್ಯಂಕ, ಚಿಲ್ಲರೆ ಮಾರಾಟ ಮತ್ತು ಕೈಗಾರಿಕಾ ಉತ್ಪಾದನೆಯ ಮೇಲೆ ಮಾರುಕಟ್ಟೆ ಗಮನ ಹರಿಸಲಾಗುವುದು. ಅಧ್ಯಕ್ಷ ಜೆರೋಮ್ ಪೊವೆಲ್ ಸೇರಿದಂತೆ ಯುಎಸ್ ಕೇಂದ್ರ ಬ್ಯಾಂಕ್ ಅಧಿಕಾರಿಗಳ ಗುಂಪು ಈ ವಾರ ಮಾತನಾಡಲಿದೆ. ಮೋತಿಲಾಲ್ ಓಸ್ವಾಲ್ನ ಸಂಶೋಧನಾ ವಿಶ್ಲೇಷಕರು ಹೇಳಿರುವ ಪ್ರಕಾರ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನವು 75,000-76,000 ರ ನಡುವೆ ವಹಿವಾಟು ನಡೆಸುವ ನಿರೀಕ್ಷೆಯಿದೆ ಎಂದಿದ್ದಾರೆ.
ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರ ಗೆಲುವು ಡೋ ಜೋನ್ಸ್ ಐಎ ಸೂಚ್ಯಂಕವನ್ನು ಏರುವಂತೆ ಮಾಡಿದ್ದರಿಂದ ಚಿನ್ನದ ಬೆಲೆಗಳು ಸಾರ್ವಕಾಲಿಕ ದಾಖಲೆಯ ಗರಿಷ್ಠ ಮಟ್ಟದಿಂದ ಹಿಂದೆ ಸರಿದಿವೆ. ಬಲವಾದ ಯುಎಸ್ ಡಾಲರ್ ಮತ್ತು ಹೆಚ್ಚುತ್ತಿರುವ ಖಜಾನೆ ಇಳುವರಿ ಕೂಡ ಕುಸಿತಕ್ಕೆ ಕಾರಣವಾಗಿದೆ. ಇದು ಈಗ ಟ್ರಾಯ್ ಔನ್ಸ್ಗೆ 2,700 ಡಾಲರ್ಗಿಂತ ಕಡಿಮೆಯಾಗಿದೆ.


Click it and Unblock the Notifications