ಜೂನ್ 9, ಭಾರತದಲ್ಲಿ ಚಿನ್ನದ ಬೆಲೆ: ಅಂತೂ ಇಂತೂ ಜೂನ್ ಎರಡನೇ ವಾರದಲ್ಲಿ ಚಿನ್ನದ ಬೆಲೆ ಇಳಿಕೆಯಾಯ್ತು. ಜೂನ್ ಮೊದಲ ವಾರದಲ್ಲಿ ಕೊಂಚವೂ ಇಳಿಕೆ ನೋಡಿರದ ಬಂಗಾರ ಇಂದು, ಚಿನ್ನಪ್ರಿಯರ ಮೊಗದಲ್ಲಿ ನಗು ತರಿಸಿದೆ. ಬೆಲೆಯಲ್ಲಿ ಇಳಿಕೆಯನ್ನೇ ನೋಡಿರದ ಮಂದಿ ಕಳೆದ, ಮೂರು ದಿನಗಳಿಂದ ಖುಷಿ ಪಡುವಂತಹ ಬೆಳವಣಿಗೆಯಾಗಿದೆ. ಕಳೆದ ವಾರದಲ್ಲೇ 20 ಸಾವಿರಕ್ಕೂ ಹೆಚ್ಚು ಬೆಲೆ ಏರಿಕೆ ನೋಡಿದ್ದ ಬಂಗಾರ, ಈ ವಾರದಲ್ಲಿ ಅಷ್ಟೆ ಪ್ರಮಾಣದಲ್ಲಿ ಇಳಿಯುತ್ತಾ ಎಂಬುದು ಚಿನ್ನಪ್ರಿಯರ ನಿರೀಕ್ಷೆಯಾಗಿದೆ.

ಇದು ಹೂಡಿಕೆದಾರರು ಹಾಗೂ ಚಿನ್ನ ಖರೀದಿದಾರರಿಗೂ ಬಹಳ ದೊಡ್ಡ ಖುಷಿಸುದ್ದಿ ಎನ್ನಬಹುದಾಗಿದೆ. ಚಿನ್ನದ ಬೆಲೆ ಕೇಳಿದರೆ ಕೈ ಸುಡುವಂತಹ ಕಾಲದಲ್ಲಿ, ಬೆಲೆಯಲ್ಲಿ ಒಂದು ರೂಪಾಯಿ ಇಳಿಕೆಯಾದರೂ ಅದು ದೊಡ್ಡ ಸುದ್ದಿಯೇ. ಏಕೆಂದರೆ ಜಾಗತಿಕವಾಗಿ ನೋಡಿದಾಗ ಚಿನ್ನದ ಬೆಲೆಯ ಒಂದೊಂದು ರೂಪಾಯಿಯ ಏರಿಕೆ-ಇಳಿಕೆಯೂ ದೊಡ್ಡ ಬದಲಾವಣೆಯಾಗುತ್ತದೆ. ಜಾಗತಿಕ ಮಾರುಕಟ್ಟೆಯ ಸನ್ನಿವೇಷದಲ್ಲಿ ಚಿನ್ನವು ದೊಡ್ಡ ಹೂಡಿಕೆಯ ಸಾಧನವಾಗಿದೆ. ಹೀಗಾಗಿ ಇಳಿಕೆ-ಏರಿಕೆಯು ದೊಡ್ಡ ಸುದ್ದಿಯಾಗಿರುತ್ತದೆ. ಹಾಗಾದರೆ ಇಂದು ಬೆಲೆಯಲ್ಲಿ ಎಷ್ಟು ಇಳಿಕೆಯಾಗಿದೆ ಎಂದು ನೋಡುವುದಾದರೆ..
ಭಾರತದಲ್ಲಿ 24 ಕ್ಯಾರಟ್ ಚಿನ್ನದ ಬೆಲೆ:
1 ಗ್ರಾಂ ಚಿನ್ನ: ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಇಂದು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು, ₹9,769 ಆಗಿದೆ. ನಿನ್ನೆ ಇದರ ಬೆಲೆ ₹9,797 ಆಗಿದ್ದು ನಿನ್ನೆಗಿಂತ ಇಂದು, ₹28 ಇಳಿಕೆಯಾಗಿದೆ.
10 ಗ್ರಾಂ ಚಿನ್ನ: 24 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆಯು, ₹97,690 ಆಗಿದೆ. ನಿನ್ನೆ ಇದರ ಬೆಲೆ ₹97,970 ಆಗಿದ್ದು ನಿನ್ನೆಗಿಂತ ಇಂದು, ₹280 ಇಳಿಕೆಯಾಗಿದೆ.
100 ಗ್ರಾಂ ಚಿನ್ನ: 24 ಕ್ಯಾರಟ್‌ನ 100 ಗ್ರಾಂ ಚಿನ್ನದ ಬೆಲೆಯು, ₹9,76,900 ಆಗಿದೆ. ನಿನ್ನೆ ಇದರ ಬೆಲೆ ₹9,79,700 ಆಗಿದ್ದು ನಿನ್ನೆಗಿಂತ ಇಂದು, ₹2,800 ಇಳಿಕೆಯಾಗಿದೆ.
ಭಾರತದಲ್ಲಿ 22 ಕ್ಯಾರಟ್ ಚಿನ್ನದ ಬೆಲೆ:
1 ಗ್ರಾಂ ಚಿನ್ನ: ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಇಂದು 22 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು, ₹8,955 ಆಗಿದೆ. ನಿನ್ನೆ ಇದರ ಬೆಲೆ ₹8,980 ಆಗಿದ್ದು ನಿನ್ನೆಗಿಂತ ಇಂದು, ₹25 ಇಳಿಕೆಯಾಗಿದೆ.
10 ಗ್ರಾಂ ಚಿನ್ನ: 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆಯು, ₹89,550 ಆಗಿದೆ. ನಿನ್ನೆ ಇದರ ಬೆಲೆ ₹89,800 ಆಗಿದ್ದು ನಿನ್ನೆಗಿಂತ ಇಂದು, ₹250 ಇಳಿಕೆಯಾಗಿದೆ.
100 ಗ್ರಾಂ ಚಿನ್ನ: 22 ಕ್ಯಾರಟ್‌ನ 100 ಗ್ರಾಂ ಚಿನ್ನದ ಬೆಲೆಯು, ₹8,95,500 ಆಗಿದೆ. ನಿನ್ನೆ ಇದರ ಬೆಲೆ ₹8,98,000 ಆಗಿದ್ದು ನಿನ್ನೆಗಿಂತ ಇಂದು ₹2,500 ಇಳಿಕೆಯಾಗಿದೆ.
ಭಾರತದಲ್ಲಿ 18 ಕ್ಯಾರಟ್ ಚಿನ್ನದ ಬೆಲೆ:
1 ಗ್ರಾಂ ಚಿನ್ನ: ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಇಂದು 18 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹7,327 ಆಗಿದೆ. ನಿನ್ನೆ ಇದರ ಬೆಲೆ ₹7,348 ಆಗಿದ್ದು ನಿನ್ನೆಗಿಂತ ಇಂದು, 21 ಇಳಿಕೆಯಾಗಿದೆ.
10 ಗ್ರಾಂ ಚಿನ್ನ: 18 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆಯು, ₹73,270 ಆಗಿದೆ. ನಿನ್ನೆ ಇದರ ಬೆಲೆ ₹73,480 ಆಗಿದ್ದು ನಿನ್ನೆಗಿಂತ ಇಂದು, 210 ರೂ. ಇಳಿಕೆಯಾಗಿದೆ.
100 ಗ್ರಾಂ ಚಿನ್ನ: 18 ಕ್ಯಾರಟ್‌ನ 100 ಗ್ರಾಂ ಚಿನ್ನದ ಬೆಲೆಯು, ₹7,32,700 ಆಗಿದೆ. ನಿನ್ನೆ ಇದರ ಬೆಲೆ ₹7,34,800 ಆಗಿದ್ದು ನಿನ್ನೆಗಿಂತ ಇಂದು, 2,100 ರೂ. ಇಳಿಕೆಯಾಗಿದೆ.
ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ (1 ಗ್ರಾಂ)
ಚೆನ್ನೈ: ಚೆನ್ನೈನಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,769 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹8,955 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,365 ಆಗಿದೆ.
ಮುಂಬೈ: ಮುಂಬೈನಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,769 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹8,955 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,327 ಆಗಿದೆ.
ದೆಹಲಿ: ದೆಹಲಿಯಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,784 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹8,970 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,339 ಆಗಿದೆ.
ಕೋಲ್ಕತಾ: ಕೋಲ್ಕತ್ತಾದಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,769 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹8,955 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,327 ಆಗಿದೆ.
ಬೆಂಗಳೂರು: ಬೆಂಗಳೂರಿನಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,769 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹8,955 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,327 ಆಗಿದೆ.
ಹೈದರಾಬಾದ್: ಹೈದರಾಬಾದ್‌ನಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,769 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹8,955 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,327 ಆಗಿದೆ.
ಕೇರಳ: ಕೇರಳದಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,769 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹8,955 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,327 ಆಗಿದೆ.
ಪುಣೆ: ಪುಣೆಯಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,769 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹8,955 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,327 ಆಗಿದೆ.
ಬರೋಡಾ: ಬರೋಡಾದಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,802 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹8,960 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,331 ಆಗಿದೆ.
ಅಹಮದಾಬಾದ್: ಅಹಮದಾಬಾದ್‌ನಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,802 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹8,960 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,331 ಆಗಿದೆ.
ಭಾರತದಲ್ಲಿ ಇಂದು ಬೆಳ್ಳಿ ಬೆಲೆ:
ಇನ್ನು ಭಾರತದಲ್ಲಿ ಬೆಳ್ಳಿ ಬೆಲೆಯಲ್ಲೂ ಯಾವುದೇ ಇಳಿಕೆಯಾಗಲಿ, ಏರಿಕೆಯಾಗಲೀ ಆಗಿಲ್ಲ. ಅಂದರೆ ಪ್ರತಿ ಗ್ರಾಂ ಬೆಳ್ಳಿಗೆ ₹107 ಇದೆ. ಪ್ರತಿ ಹತ್ತು ಗ್ರಾಂ ಬೆಳ್ಳಿ ಬೆಲೆಗೆ ₹1,070 ಆಗಿದೆ. ಹಾಗೆಯೇ ಪ್ರತಿ 100 ಗ್ರಾಂ ಬೆಳ್ಳಿಗೆ ₹10,700 ಆಗಿದ್ದು, ಒಂದು ಕೆ.ಜಿ ಬೆಳ್ಳಿಗೆ ₹1,07,000 ಆಗಿದೆ. ಬೆಳ್ಳಿ ಬೆಲೆಯಲ್ಲೂ ಯಾವುದೇ ಬದಲಾವಣೆಯಾಗಿಲ್ಲ.
ಸ್ಪಾಟ್ ಗೋಲ್ಡ್ ವಿವರ:
ಜೂನ್ 9, 2025 ರಂದು ಜಾಗತಿಕ ಚಿನ್ನದ ಬೆಲೆ ಸ್ವಲ್ಪ ಕಡಿಮೆಯಾಯಿತು. ರಾಯಿಟರ್ಸ್ ವರದಿಯ ಪ್ರಕಾರ, ಸ್ಪಾಟ್ ಚಿನ್ನದ ಬೆಲೆ 0.1% ಇಳಿದು ಔನ್ಸ್ ಗೆ $3,310.68ಕ್ಕೆ ಬಂತು. ಹಾಗೆಯೇ, ಯು.ಎಸ್. ಗೋಲ್ಡ್ ಫ್ಯೂಚರ್ಸ್ 0.5% ಕುಳಿತು $3,330.10ಕ್ಕೆ ತಲುಪಿತು. ಈ ಕಡಿತದ ಹಿಂದೆ ಮುಖ್ಯ ಕಾರಣವೆಂದರೆ ಲಂಡನ್ನಿನಲ್ಲಿ ನಡೆಯಲಿರುವ ಅಮೆರಿಕಾ ಮತ್ತು ಚೀನಾದ ವ್ಯಾಪಾರ ಮಾತುಕತೆಗಳ ಬಗ್ಗೆ ಸಕಾರಾತ್ಮಕ ನಿರೀಕ್ಷೆಗಳು. ಇದರಿಂದ ಹೂಡಿಕೆದಾರರು ಭದ್ರತೆಗಾಗಿ ಚಿನ್ನವನ್ನು ಖರೀದಿಸುವ ದರ ಕಡಿಮೆ ಮಾಡುತ್ತಿದ್ದಾರೆ.
ಹೂಡಿಕೆಯ ಸಾಧನವಾಗಿರುವ ಚಿನ್ನ:
ಹೂಡಿಕೆಯ ಸಾಧನವಾಗಿರುವ ಚಿನ್ನವು ಭಾರತದಲ್ಲಿ ಹಲವು ರೀತಿಯ ಮಹತ್ವದ ಸ್ಥಾನ ಪಡೆದುಕೊಂಡಿದೆ. ಮಹಿಳೆಯರಿಗೆ ಒಡವೆ ರೂಪದಲ್ಲಿ ಇದು ಖುಷಿ ನೀಡುತ್ತದೆ. ಹಾಗೆಯೇ ಪ್ರತಿಷ್ಠೆಯ ಸಂಕೇತವಾಗಿ ಗೌರವ ತಂದುಕೊಡುತ್ತದೆ. ಇನ್ನು ಕಷ್ಟ ಅಂತ ಬಂದಾಗ ಆರ್ಥಿಕ ಸಹಾಯ ಮಾಡುವ ಮಿತ್ರನಾಗಿರುತ್ತದೆ. ಹೂಡಿಕೆಯ ರೂಪದಲ್ಲಿ ನೋಡುವುದಾದರೆ, ಚಿನ್ನವು ಭವಿಷ್ಯದ ದೊಡ್ಡ ಸಂಪತ್ತಾಗಿ ಪಾತ್ರ ನಿರ್ವಹಿಸುತ್ತದೆ. ಒಂದೇ ಲೋಹ ಹಲವು ರೀತಿಯಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಹೀಗಾಗಿಯೇ ಭಾರತದಲ್ಲಿ ಚಿನ್ನಕ್ಕೆ ಒಂದು ಮಹತ್ವದ ಸ್ಥಾನವಿದೆ. ಚಿನ್ನವನ್ನು ಪೂಜೆ-ಪುನಸ್ಕಾರ, ಮದುವೆ-ಸಮಾರಂಭಗಳಲ್ಲಿ ಇರಿಸದೇ ಏನೂ ನೆರವೇರುವುದಿಲ್ಲ. ಅದರಲ್ಲೂ ಮಹಿಳೆಯರಿಗೆ ಚಿನ್ನವೆಂದರೆ ಅಚ್ಚು-ಮೆಚ್ಚು. ಏನು ಕೊಟ್ಟರೂ ಮನಸೋಲದ ನಾರಿಯರಿಗೆ ಚಿನ್ನವೇ ದೊಡ್ಡ ಮಟ್ಟದ ಉಡುಗೊರೆ. ಅವರಿಗೆ ಚಿನ್ನವೇ ಭೂಷಣ.
ಚಿನ್ನದ ಬೆಲೆ ಏರಿಕೆ-ಇಳಿಕೆಗೆ ಕಾರಣವೇನು?
ಚಿನ್ನದ ಬೆಲೆಯ ಏರಿಕೆ ಹಾಗೂ ಇಳಿಕೆಗೆ ನಾನಾ ಕಾರಣಗಳಿರುತ್ತವೆ. ಚಿನ್ನದ ಬೆಲೆಯಲ್ಲಿ ಏರಿಕೆ ವಿವಿಧ ಆರ್ಥಿಕ, ರಾಜಕೀಯ ಮತ್ತು ಜಾಗತಿಕ ಅಂಶಗಳಿಂದ ಪ್ರೇರಿತವಾಗಿರುತ್ತದೆ. ನಾಣ್ಯ ಮೌಲ್ಯ ಕುಸಿದಾಗ ಹೂಡಿಕೆದಾರರು ಚಿನ್ನವನ್ನು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸುತ್ತಾರೆ. ಇದರ ಫಲಿತಾಂಶವಾಗಿ ಚಿನ್ನದ ಬೇಡಿಕೆ ಹೆಚ್ಚಾಗಿ ಬೆಲೆ ಏರುತ್ತದೆ. ಯುದ್ಧಗಳು, ವ್ಯಾಪಾರ ತಕರಾರುಗಳು, ಜಾಗತಿಕ ರಾಜಕೀಯ ಸಮಸ್ಯೆಗಳು ಚಿನ್ನದ ಬೆಲೆಯ ಮೇಲೆ ನೇರ ಪರಿಣಾಮ ಬೀರುತ್ತವೆ. ಹೂಡಿಕೆದಾರರು ಭದ್ರತೆಯ ಹೂಡಿಕೆ ಎಂದು ಚಿನ್ನವನ್ನು ಖರೀದಿಸುತ್ತಾರೆ, ಇದರಿಂದ ಬೇಡಿಕೆ ಹೆಚ್ಚಾಗಿ ಬೆಲೆ ಏರಿಕೆಯಾಗುತ್ತದೆ.
ಅಮೆರಿಕದ ಫೆಡೆರಲ್ ರಿಸರ್ವ್ ಅಥವಾ ಭಾರತದ RBI ಬಡ್ಡಿದರಗಳನ್ನು ಇಳಿಸಿದರೆ, ಹೂಡಿಕೆದಾರರು ಚಿನ್ನದತ್ತ ಮುಖ ಮಾಡುತ್ತಾರೆ. ಇದು ಚಿನ್ನದ ಬೆಲೆಯನ್ನು ಹೆಚ್ಚಿಸುತ್ತದೆ. ಚಿನ್ನದ ಉತ್ಪಾದನೆ ಕಡಿಮೆಯಾದರೆ ಅಥವಾ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಹೆಚ್ಚಾದರೆ, ಬೆಲೆ ತಾನಾಗಿಯೇ ಏರಿಕೆಯಾಗುತ್ತದೆ. ಚಿನ್ನದ ಬೆಲೆಯ ಏರಿಕೆ ಬಹುಪಾಲು ಆರ್ಥಿಕ ಅಸ್ಥಿರತೆ, ಇನ್‌ಫ್ಲೇಶನ್, ರಾಜಕೀಯ ಅಶಾಂತಿ, ಮಾರುಕಟ್ಟೆ ತಾಣಮೌಲ್ಯಗಳು, ಹಾಗೂ ಹೂಡಿಕೆದಾರರ ಮನೋಭಾವ ಇತ್ಯಾದಿ ಅಂಶಗಳಿಂದ ನಿರ್ಧಾರವಾಗುತ್ತದೆ. ಚಿನ್ನದ ಬೆಲೆಯ ಈ ಬದಲಾವಣೆಗಳಿಗೆ ಆಂತರಾಷ್ಟ್ರೀಯ ಮಾರುಕಟ್ಟೆಯ ಪ್ರಭಾವ, ಕರೆನ್ಸಿ ವಿನಿಮಯ ದರಗಳು, ದೇಶೀಯ ಬೇಡಿಕೆ, ಹೂಡಿಕೆದಾರರ ನಂಬಿಕೆ ಮತ್ತು ಆರ್ಥಿಕ ಪರಿಸ್ಥಿತಿಗಳು ಪ್ರಮುಖವಾಗಿರಬಹುದು.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications