ಮೇ 10, ಭಾರತದಲ್ಲಿ ಇಂದಿನ ಚಿನ್ನದ ಬೆಲೆ: ನಿನ್ನೆ ಚಿನ್ನಪ್ರಿಯರಿಗೆ ಖುಷಿ ನೀಡಿದ್ದ ಬಂಗಾರದ ಬೆಲೆ ಇಂದು ಮತ್ತೆ ಕಹಿ ಉಣಿಸಿದೆ. ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಇಂದು ಕೂಡ ಚಿನ್ನದ ಬೆಲೆ ಏರಿಕೆ ಕಂಡಿದೆ. ಭಾರತ-ಪಾಕಿಸ್ತಾನ ಸಂಘರ್ಷದ ನಡುವೆ ಚಿನ್ನದ ಬೆಲೆ ಏರಿಕೆ ಕಾಣುತ್ತಲೇ ಇದೆ. ಆಪರೇಷನ್ ಸಿಂದೂರ್ ದಾಳಿ ನಂತರದ ದಿನಗಳಲ್ಲಿ, ನಿನ್ನೆ ಒಂದು ದಿನ ಮಾತ್ರ ಚಿನ್ನದ ಬೆಲೆ ಇಳಿಕೆ ನೋಡಿದೆ.. ಈ ವಾರ ಪೂರ್ತಿ ಏರಿಕೆ ನೋಡಿದ್ದ ಚಿನ್ನದ ಬೆಲೆ ಹೂಡಿಕೆದಾರರಿಗೆ ಹೆಚ್ಚು ಆತಂಕ ನೀಡುತ್ತಿದೆ. ಭಾರತ-ಪಾಕಿಸ್ತಾನ ನಡುವಿನ ಸಂಘರ್ಷ ತಲ್ಲಣ ಉದ್ಭವಿಸಿದೆ.

ಚಿನ್ನವನ್ನು ಕೊಳ್ಳುವುದಕ್ಕಿಂತ ಬೆಲೆ ಕೇಳಿದರೇ ಜೇಬಿಗೆ ಕತ್ತರಿ ಬಿದ್ದಷ್ಟು ಭಾಸವಾಗುತ್ತಿದೆ. ಇತ್ತೀಚಿನ ಬೆಲೆ ಏರಿಕೆಗಳಿಂದ ಚಿನ್ನದ ಮೇಲೆ ಹೂಡಿಕೆ ಮಾಡುವುದು ಸೂಕ್ತವೋ ಇಲ್ಲವೋ ಎಂಬ ಗೊಂದಲಕ್ಕೆ ಗುರಿ ಮಾಡಿದೆ. ಹೂಡಿಕೆಗೆ ಆಸಕ್ತರಾಗಿರುವವರಿಗೆ ಈ ಪರಿಸ್ಥಿತಿ ಎರಡು ಬಗೆಯ ಪ್ರಭಾವ ಬೀರಬಹುದು.ಹೀಗಾಗಿ ಒಂದೆಡೆ ಬೆಲೆ ಇನ್ನಷ್ಟು ಏರಬಹುದು ಎಂಬ ನಿರೀಕ್ಷೆಯಿಂದ ಈಗಲೇ ಹೂಡಿಕೆ ಮಾಡೋದು ಸೂಕ್ತವೆಂಬ ಯೋಚನೆ,ಮತ್ತೊಂದೆಡೆ ಈಗ ತಕ್ಷಣ ಹೂಡಿಕೆಗೆ ಮುನ್ನುಡಿಯಿಟ್ಟರೆ ನಷ್ಟವೋ ಎಂಬ ಆತಂಕ.ಅಂತಾರಾಷ್ಟ್ರೀಯ ಮಾರುಕಟ್ಟೆಯ ಒತ್ತಡ,ಜಿಯೋಪಾಲಿಟಿಕಲ್ ಅನಿಶ್ಚಿತತೆಗಳು ಹಾಗೂ ರೂಪಾಯಿಯ ಮೌಲ್ಯ ಕುಸಿತ ಈ ಬೆಲೆ ಏರಿಕೆಗೆ ಪ್ರಮುಖ ಕಾರಣಗಳಾಗಿ ಗುರುತಿಸಲಾಗಿದೆ. ಹಾಗಾದರೆ ಇಂದು ಯಾವ್ಯಾವ ಕ್ಯಾರಟ್ ಚಿನ್ನದ ಬೆಲೆ ಎಷ್ಟು ಏರಿಕೆಯಾಗಿದೆ ಎಂದು ತಿಳಿಯುವುದಾದರೆ.
ಭಾರತದಲ್ಲಿ ಇಂದಿನ ಚಿನ್ನದ ಬೆಲೆ:
22 ಕ್ಯಾರಟ್ ಚಿನ್ನದ ಬೆಲೆ:
ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿಇಂದಿನ ಚಿನ್ನದ ಬೆಲೆ ಏರಿಕೆಯಾಗಿದೆ. 22 ಕ್ಯಾರಟ್‌ನ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9,045 ಇದೆ.ಅಂದರೆ ನಿನ್ನೆ ₹9,015 ಆಗಿದ್ದು ಇಂದು ₹30 ಹೆಚ್ಚಳವಾಗಿದೆ. 22 ಕ್ಯಾರಟ್‌ನ ಚಿನ್ನದಬೆಲೆ 10 ಗ್ರಾಂಗೆ 90 ಸಾವಿರದ 450 ರೂ. ಇದೆ. ಅಂದರೆ ನಿನ್ನೆ 90 ಸಾವಿರದ 150 ರೂ. ಆಗಿದ್ದು ಇಂದು ₹300 ಹೆಚ್ಚಳವಾಗಿದೆ. ಹಾಗೆಯೇ 22 ಕ್ಯಾರಟ್‌ನ ಚಿನ್ನದ ಬೆಲೆ 100 ಗ್ರಾಂಗೆ 9 ಲಕ್ಷದ 4 ಸಾವಿರದ 500 ರೂ. ಆಗಿದೆ. ಅಂದರೆ ನಿನ್ನೆ 9 ಲಕ್ಷ 1 ಸಾವಿರದ 500 ರೂ. ಆಗಿದ್ದು ಇಂದು ₹3,000 ಹೆಚ್ಚಳವಾಗಿದೆ.
24 ಕ್ಯಾರಟ್ ಚಿನ್ನದ ಬೆಲೆ:
ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿಇಂದಿನ ಚಿನ್ನದ ಬೆಲೆ ಏರಿಕೆಯಾಗಿದೆ. 24 ಕ್ಯಾರಟ್‌ನ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9,868 ಇದೆ. ಅಂದರೆ ನಿನ್ನೆ ₹9,835 ಆಗಿದ್ದು ಇಂದು ₹33 ಹೆಚ್ಚಳವಾಗಿದೆ. 24 ಕ್ಯಾರಟ್‌ನ ಚಿನ್ನದ ಬೆಲೆ 10 ಗ್ರಾಂಗೆ 98 ಸಾವಿರದ 680 ರೂ. ಇದೆ. ಅಂದರೆ ನಿನ್ನೆ 98 ಸಾವಿರದ 350 ರೂ. ಆಗಿದ್ದು ಇಂದು ₹330 ಹೆಚ್ಚಳವಾಗಿದೆ. ಹಾಗೆಯೇ 24 ಕ್ಯಾರಟ್‌ನ ಚಿನ್ನದ ಬೆಲೆ 100 ಗ್ರಾಂಗೆ 9 ಲಕ್ಷದ 86 ಸಾವಿರದ 800 ರೂ. ಆಗಿದೆ. ಅಂದರೆ ನಿನ್ನೆ 9 ಲಕ್ಷ 83 ಸಾವಿರದ 500 ರೂ. ಆಗಿದ್ದು ಇಂದು ₹3,300 ಹೆಚ್ಚಳವಾಗಿದೆ.
18 ಕ್ಯಾರಟ್ ಚಿನ್ನದ ಬೆಲೆ:
18 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7,401 ಇದೆ. ಅಂದರೆ ನಿನ್ನೆಯ ಬೆಲೆ ₹7,376 ಆಗಿದ್ದು ಇಂದು ಪ್ರತಿ ಗ್ರಾಂಗೆ ₹25 ಏರಿಕೆಯಾಗಿದೆ. 18 ಕ್ಯಾರಟ್‌ನ ಚಿನ್ನದ ಬೆಲೆ 10 ಗ್ರಾಂಗೆ 74 ಸಾವಿರದ 10 ರೂ. ಇದೆ. ಅಂದರೆ ನಿನ್ನೆಯ ಬೆಲೆ 73 ಸಾವಿರದ 760 ರೂ. ಆಗಿದ್ದು ಇಂದು ಪ್ರತಿ ಗ್ರಾಂಗೆ ₹250 ಏರಿಕೆಯಾಗಿದೆ. ಹಾಗೆಯೇ ಕ್ಯಾರಟ್‌ನ ಚಿನ್ನದ ಬೆಲೆ 100 ಗ್ರಾಂಗೆ 7 ಲಕ್ಷ 40 ಸಾವಿರದ 100 ರೂ. ಆಗಿದೆ. ಅಂದರೆ ನಿನ್ನೆಯ ಬೆಲೆ 7 ಲಕ್ಷದ 37 ಸಾವಿರದ 600 ರೂ. ಆಗಿದ್ದು ಇಂದು ₹2,500 ಏರಿಕೆಯಾಗಿದೆ.
ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ (1 ಗ್ರಾಂ)
ಚೆನ್ನೈ: ಚೆನ್ನೈನಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹9,045 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹9,868 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,455 ಆಗಿದೆ.
ಮುಂಬೈ: ಮುಂಬೈನಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹9,045 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹9,868 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,401 ಆಗಿದೆ.
ದೆಹಲಿ: ದೆಹಲಿಯಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹9,060 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹9,883 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,413 ಆಗಿದೆ.
ಕೋಲ್ಕತಾ: ಕೋಲ್ಕತ್ತಾದಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹9,045 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹9,868 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,401 ಆಗಿದೆ.
ಬೆಂಗಳೂರು: ಬೆಂಗಳೂರಿನಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹9,045 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹9,868 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,401 ಆಗಿದೆ.
ಹೈದರಾಬಾದ್: ಹೈದರಾಬಾದ್‌ನಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹9,045 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹9,868 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,401 ಆಗಿದೆ.
ಕೇರಳ: ಕೇರಳದಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹9,045 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹9,868 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,401 ಆಗಿದೆ.
ಪುಣೆ: ಪುಣೆಯಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹9,045 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹9,868 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,401 ಆಗಿದೆ.
ಬರೋಡಾ: ಬರೋಡಾದಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹9,050 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹9,873 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,405 ಆಗಿದೆ.
ಅಹಮದಾಬಾದ್: ಅಹಮದಾಬಾದ್‌ನಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹9,050 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹9,873 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,405 ಆಗಿದೆ.
ಭಾರತದಲ್ಲಿ ಇಂದಿನ ಬೆಳ್ಳಿ ಬೆಲೆ:
ಭಾರತದಲ್ಲಿ ಇಂದು ಬೆಳ್ಳಿ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. ಇಂದು ಒಂದು ಗ್ರಾಂ ಬೆಳ್ಳಿಗೆ ಇದ್ದು ₹98.90 ನಿನ್ನೆ ಈ ಬೆಲೆ ₹99 ಆಗಿತ್ತು. ಅಂದರೆ ನಿನ್ನೆಗಿಂತ ಇಂದಿಗೆ ₹0.10ರಷ್ಟು ಇಳಿಕೆಯಾಗಿದೆ. 10 ಗ್ರಾಂ ಬೆಳ್ಳಿಗೆ ₹989 ಇದ್ದು ನಿನ್ನೆ ಈ ಬೆಲೆ ₹990 ಆಗಿತ್ತು. ಅಂದರೆ ನಿನ್ನೆಗಿಂತ ಇಂದಿಗೆ ₹1 ರಷ್ಟು ಇಳಿಕೆಯಾಗಿದೆ. 100 ಗ್ರಾಂ ಬೆಳ್ಳಿಗೆ ₹9,890 ಇದ್ದು ನಿನ್ನೆ ಈ ಬೆಲೆ ₹9,900 ಆಗಿತ್ತು. ಅಂದರೆ ನಿನ್ನೆಗಿಂತ ಇಂದಿಗೆ ₹10 ರಷ್ಟು ಇಳಿಕೆಯಾಗಿದೆ. ಒಂದು ಕೆ.ಜಿ ಬೆಳ್ಳಿಗೆ ₹98,900 ಇದ್ದು ನಿನ್ನೆ ಈ ಬೆಲೆ ₹99,000 ಆಗಿತ್ತು. ಅಂದರೆ ನಿನ್ನೆಗಿಂತ ಇಂದಿಗೆ ₹100 ರಷ್ಟು ಇಳಿಕೆಯಾಗಿದೆ.
ಸ್ಪಾಟ್ ಗೋಲ್ಡ್ ವಿವರ:
ಮೇ 9, 2025ರಂದು ರಾಯಿಟರ್ಸ್ ನೀಡಿರುವ ವರದಿಯ ಅನುಸಾರ, ಸ್ಪಾಟ್ ಚಿನ್ನದ ಬೆಲೆಯು ಇಳಿಕೆಯಾಗಿದೆ. ಬೆಳಿಗ್ಗೆ 02:17 ವೇಳೆಗೆ 0.8% ಇಳಿಕೆಯಾಗಿ, ಪ್ರತಿ ಔನ್ಸ್‌ಗೆ $3,277.67ರಷ್ಟು ವಹಿವಾಟು ನಡೆಸಿದೆ. ಹಾಗೆಯೇ ಇಂದು ಯುಎಸ್ ಗೋಲ್ಡ್ ಫ್ಯೂಚರ್ ಕೂಡ 0.7% ಇಳಿಕೆ ನೋಡಿದ್ದು, ಪ್ರತಿ ಔನ್ಸ್‌ಗೆ $3,282.80 ವಹಿವಾಟು ನಡೆಸಿದೆ.
ಚಿನ್ನದ ಬೆಲೆ ಏರಿಕೆ-ಇಳಿಕೆಗೆ ಕಾರಣವೇನು?
ಚಿನ್ನದ ಬೆಲೆಯ ಏರಿಕೆ ಹಾಗೂ ಇಳಿಕೆಗೆ ನಾನಾ ಕಾರಣಗಳಿರುತ್ತವೆ. ಚಿನ್ನದ ಬೆಲೆಯಲ್ಲಿ ಏರಿಕೆ ವಿವಿಧ ಆರ್ಥಿಕ, ರಾಜಕೀಯ ಮತ್ತು ಜಾಗತಿಕ ಅಂಶಗಳಿಂದ ಪ್ರೇರಿತವಾಗಿರುತ್ತದೆ. ನಾಣ್ಯ ಮೌಲ್ಯ ಕುಸಿದಾಗ ಹೂಡಿಕೆದಾರರು ಚಿನ್ನವನ್ನು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸುತ್ತಾರೆ. ಇದರ ಫಲಿತಾಂಶವಾಗಿ ಚಿನ್ನದ ಬೇಡಿಕೆ ಹೆಚ್ಚಾಗಿ ಬೆಲೆ ಏರುತ್ತದೆ. ಯುದ್ಧಗಳು, ವ್ಯಾಪಾರ ತಕರಾರುಗಳು, ಜಾಗತಿಕ ರಾಜಕೀಯ ಸಮಸ್ಯೆಗಳು ಚಿನ್ನದ ಬೆಲೆಯ ಮೇಲೆ ನೇರ ಪರಿಣಾಮ ಬೀರುತ್ತವೆ. ಹೂಡಿಕೆದಾರರು ಭದ್ರತೆಯ ಹೂಡಿಕೆ ಎಂದು ಚಿನ್ನವನ್ನು ಖರೀದಿಸುತ್ತಾರೆ, ಇದರಿಂದ ಬೇಡಿಕೆ ಹೆಚ್ಚಾಗಿ ಬೆಲೆ ಏರಿಕೆಯಾಗುತ್ತದೆ.
ಅಮೆರಿಕದ ಫೆಡೆರಲ್ ರಿಸರ್ವ್ ಅಥವಾ ಭಾರತದ RBI ಬಡ್ಡಿದರಗಳನ್ನು ಇಳಿಸಿದರೆ, ಹೂಡಿಕೆದಾರರು ಚಿನ್ನದತ್ತ ಮುಖ ಮಾಡುತ್ತಾರೆ. ಇದು ಚಿನ್ನದ ಬೆಲೆಯನ್ನು ಹೆಚ್ಚಿಸುತ್ತದೆ. ಚಿನ್ನದ ಉತ್ಪಾದನೆ ಕಡಿಮೆಯಾದರೆ ಅಥವಾ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಹೆಚ್ಚಾದರೆ, ಬೆಲೆ ತಾನಾಗಿಯೇ ಏರಿಕೆಯಾಗುತ್ತದೆ. ಚಿನ್ನದ ಬೆಲೆಯ ಏರಿಕೆ ಬಹುಪಾಲು ಆರ್ಥಿಕ ಅಸ್ಥಿರತೆ, ಇನ್‌ಫ್ಲೇಶನ್, ರಾಜಕೀಯ ಅಶಾಂತಿ, ಮಾರುಕಟ್ಟೆ ತಾಣಮೌಲ್ಯಗಳು, ಹಾಗೂ ಹೂಡಿಕೆದಾರರ ಮನೋಭಾವ ಇತ್ಯಾದಿ ಅಂಶಗಳಿಂದ ನಿರ್ಧಾರವಾಗುತ್ತದೆ. ಚಿನ್ನದ ಬೆಲೆಯ ಈ ಬದಲಾವಣೆಗಳಿಗೆ ಆಂತರಾಷ್ಟ್ರೀಯ ಮಾರುಕಟ್ಟೆಯ ಪ್ರಭಾವ, ಕರೆನ್ಸಿ ವಿನಿಮಯ ದರಗಳು, ದೇಶೀಯ ಬೇಡಿಕೆ, ಹೂಡಿಕೆದಾರರ ನಂಬಿಕೆ ಮತ್ತು ಆರ್ಥಿಕ ಪರಿಸ್ಥಿತಿಗಳು ಪ್ರಮುಖವಾಗಿರಬಹುದು. ಹೀಗೆ ನಾನಾ ಕಾರಣಗಳಿಂದ ಚಿನ್ನದ ಬೆಲೆ ಏರಿಳಿತ ನೋಡುತ್ತಿವೆ.


Click it and Unblock the Notifications