ಭಾರತದಲ್ಲಿ ಚಿನ್ನದ ಬೆಲೆ, ಡಿಸೆಂಬರ್‌-10: 24k/100g ಚಿನ್ನ 8,700 ರೂ. ಏರಿಕೆ, ಬೆಳ್ಳಿ ಬೆಲೆ 4,500/kg ಏರಿಕೆ

ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಗಗನಕ್ಕೇರಿದೆ. ಚಿನ್ನ ಕಡಿಮೆಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದ, ಆಭರಣ ಪ್ರಿಯರಿಗೆ ಚಿನ್ನದ ಬೆಲೆಯ ಬಿಸಿ ತಾಗಿದೆ. ಕಳೆದ ಎರಡು ದಿನಗಳಿಗೆ ಹೋಲಿಸಿದರೆ ಇಂದು ಚಿನ್ನದ ಬೆಲೆ ಭಾರಿ ದುಭಾರಿಯಾಗಿದೆ. ಸಿರಿಯಾ ಆಂತರಿಕ ಯುದ್ಧ ಹಾಗೆ ರಷ್ಯ ಉಕ್ರೇನ್‌ ಯುದ್ಧ ಸಮಸ್ಯೆಗಳ ಮಧ್ಯೆ ಭಾರತದಲ್ಲಿ ಚಿನ್ನದ ಬೆಲೆ ಏರಿಕೆಯಾಗಿದೆ. ಜಾಗತಿಕವಾಗಿ ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಹಿನ್ನೆಲೆ ಭಾರತದಲ್ಲಿ ಚಿನ್ನದ ಬೆಲೆಗಳು ಮತ್ತೊಮ್ಮೆ ಏರಿಕೆಯಾಗಿದೆ. ವಿಶೇಷವಾಗಿ ಸಿರಿಯನ್ ಸರ್ಕಾರದ ಪತನದ ನಂತರ, ಚಿನ್ನದ ಆಕರ್ಷಣೆಯನ್ನು ಸುರಕ್ಷಿತ ಸ್ವತ್ತಾಗಿ ಹೆಚ್ಚಿಸಿದೆ.

ಡಿಸೆಂಬರ್‌ 10ರಂದು ಭಾರತದಲ್ಲಿ ಚಿನ್ನದ ಬೆಲೆ ಮತ್ತೆ ಗಗನಕ್ಕೇರಿದೆ. 22-ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 750 ರೂಪಾಯಿ ಏರಿಕೆಯಾಗಿ 72,050 ರೂ. ಆಗಿದೆ. ಅದೇ ರೀತಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 820 ರೂ. ಏರಿಕೆಯಾಗಿ, ಈಗ 78,600 ರೂ ಆಗಿದೆ. ಹಾಗೆ 18 ಕ್ಯಾರೆಟ್‌ನ ಚಿನ್ನದ ಬೆಲೆ 610 ರೂ. ಏರಿಕೆಯಾಗಿ 58,950 ರೂ. ಆಗಿದೆ.

ಭಾರತದಲ್ಲಿ ದುಭಾರಿಯಾದ ಚಿನ್ನ ಮತ್ತು ಬೆಳ್ಳಿ ಬೆಲೆ!

ಇನ್ನು ಇತ್ತ 100 ಗ್ರಾಂನ ಚಿನ್ನದ ದರಗಳನ್ನ ಗಮನಿಸಿದ್ರೆ, 100 ಗ್ರಾಂ 24 ಕ್ಯಾರೆಟ್ ಚಿನ್ನ 8,200 ರೂ ಏರಿಕೆಯಾಗಿ 7,86,000 ರೂಪಾಯಿ ಆಗಿದೆ. 100 ಗ್ರಾಂ 22 ಕ್ಯಾರೆಟ್ ಚಿನ್ನ 7,500 ರೂ ಏರಿಕೆಯಾಗಿ 7,20,500 ರೂಪಾಯಿ ಆಗಿದೆ.

ಕಳೆದ ಎರಡು ದಿನಗಳಿಗೆ ಹೋಲಿಸಿದರೆ ಚಿನ್ನದ ಬೆಲೆಯಲ್ಲಿ ಭಾರಿ ವ್ಯತ್ಯಾಸವನ್ನ ನಾವು ಗಮನಿಸಬಹುದು. ಒಂದು ವಾರದಿಂದ ನಿಧಾನವಾಗಿ ಸಾಗುತ್ತಿದ್ದ ಚಿನ್ನದ ದರ ಇಂದು ದಿಢೀರ್‌ ಎಂದು ಏರಿಕೆಯಾಗಿದೆ. ಜಾಗತಿಕವಾಗಿ ಚಿನ್ನಕ್ಕೆ ಬೇಡಿಕೆ ಹೆಚ್ಚಾಗಿದ್ದು, ಇದು ಬೆಲೆ ಏರಿಕೆಗೆ ಮುಖ್ಯ ಕಾರಣವಾಗಿದೆ. ಚೀನಾದಲ್ಲಿ ಗಮನಾರ್ಹವಾಗಿ ಚಿನ್ನದ ಗ್ರಾಹಕರಿರುವುದರಿಂದ ಬಂಗಾರಕ್ಕೆ ಹೆಚ್ಚಿನ ಬೇಡಿಕೆ ಇದೆ ಹೀಗಾಗಿ ಚಿನ್ನದ ಬೆಲೆ ಮತ್ತೆ ಏರಿಕೆಯಾಗುವ ನಿರೀಕ್ಷೆ ಇದೆ. ಭೌಗೋಳಿಕ ರಾಜಕೀಯ ಅಪಾಯ ಮತ್ತು ಟ್ರಂಪ್‌ ಆಡಳಿತದ ಅಡಿಯಲ್ಲಿ ಅನುಷ್ಠಾನ ಮಾಡಿದ ರಕ್ಷಣಾ ನೀತಿಗಳು, ಹಾಗೆ ಸುತ್ತಲಿನ ಸಂದಿಗ್ಧತೆಯಿಂದಾಗಿ ಚಿನ್ನದ ಬೇಡಿಕೆಯೂ ಕೂಡ ಹೆಚ್ಚಾಗಿದೆ ಎನ್ನಲಾಗ್ತಿದೆ.

ಹಾಗೆ ದಕ್ಷಿಣ ಕೊರಿಯಾದ ರಾಜಕೀಯ ಗದ್ದಲ, ಸಿರಿಯಾ ಆಂತರಿಕ ಯುದ್ಧ ಹಾಗೆ ರಷ್ಯ ಉಕ್ರೇನ್‌ ಯುದ್ಧ ಸಮಸ್ಯೆಗಳ ಮಧ್ಯೆ ಭಾರತದಲ್ಲಿ ಚಿನ್ನದ ಬೆಲೆ ಏರಿಕೆಯಾಗಿದೆ.
ಅಲ್ಲದೆ ಪ್ರಮುಖ ಅಂತರಾಷ್ಟ್ರೀಯ ಅಂಶಗಳು ಕೂಡ ಚಿನ್ನದ ಬೆಲೆ ಮೇಲೆ ಪ್ರಭಾವ ಬೀರುತ್ತಿವೆ, ವಿಶೇಷವಾಗಿ US ಡಾಲರ್‌ನ ದತ್ತಾಂಶಕ್ಕಾಗಿ ಮಾರುಕಟ್ಟೆ ನಿರೀಕ್ಷೆ ಮಾಡುತ್ತಿದೆ. ಹಾಗೆ, ಹೂಡಿಕೆದಾರರು ಸಂಭಾವ್ಯ ದರ ಬದಲಾವಣೆಗಳಿಗೆ ಸಂಬಂಧಿಸಿದಂತೆ ಫೆಡರಲ್ ರಿಸರ್ವ್‌ನಿಂದ ಅಪ್‌ಡೇಟ್‌ಗಳನ್ನ ಸ್ಪಷ್ಟವಾಗಿ ಪರಿಶೀಲನೆ ಮಾಡುತ್ತಿದ್ದಾರೆ. ಏಕೆಂದರೆ ಈ ನಿರ್ಧಾರಗಳು ಮಾರುಕಟ್ಟೆಯ ಭಾವನೆಯ ಮೇಲೆ ಮತ್ತಷ್ಟು ಪರಿಣಾಮ ಬೀರುವ ನಿರೀಕ್ಷೆಯಿದೆ. ಇದರ ಮಧ್ಯೆ ಯುಎಸ್‌ ಡಾಲರ್‌ ಬಲವರ್ಧನೆ ಹೆಚ್ಚಾಗುತ್ತಿದ್ದು, ಪ್ರಸ್ತುತ0.06%ನಷ್ಟು 106.13ರಲ್ಲಿ ವಹಿವಾಟುಗಳನ್ನ ನಡೆಸುತ್ತಿದೆ.ಆರ್ಥಿಕ ದತ್ತಾಂಶಗಳ ನಡುವೆ ಫೆಡ್‌ ದರ ಕಡಿತಕ್ಕೆ ಎಚ್ಚರಿಕೆಯ ಕ್ರಮ ತೆಗೆದುಕೊಳ್ಳುವುದರಿಂದ ಜಾಗತಿಕವಾಗಿ ಚಿನ್ನದ ದರಗಳು ಹೆಚ್ಚಿನ ಬೆಂಬಲವನ್ನ ಪಡೆಯುವ ನಿರೀಕ್ಷೆ ಇದೆ.

ಸ್ಪಾಟ್‌ ಚಿನ್ನದ ಬೆಲೆ

ಈ ವಾರ ಯುಎಸ್‌ ಡಾಲರ್‌ನ ದುರ್ಬಲತೆಯಿಂದಾಗಿ ಸೋಮವಾರ ಚಿನ್ನದ ಬೆಲೆಯಲ್ಲಿ ಏರಿಕೆಯನ್ನ ಕಾಣುವಂತಾಗಿದೆ. 0248 GMTಯಲ್ಲಿ ಸ್ಪಾಟ್‌ ಚಿನ್ನ ಪ್ರತಿ ಔನ್ಸ್‌ಗೆ 2,669.84 ಡಾಲರ್‌ನಂತೆ 0.4%ನಷ್ಟು ಏರಿಕೆಯಾಗಿದೆ. ಇನ್ನು ರಾಯಿಟರ್ಸ್‌ ವರದಿ ಪ್ರಕಾರ ಯುಎಸ್‌ ಚಿನ್ನದ ಭವಿಷ್ಯ 0.3% ನಷ್ಟು ಏರಿಕೆಯಾಗಿ 2,692.50, ಡಾಲರ್‌ ಆಗಿದೆ. ಪಲ್ಲಾಡಿಯಮ್ 0.3% ಏರಿಕೆಯಾಗಿ 976.25 ಡಾಲರ್‌ ಇದೆ. ಇನ್ನು ಪ್ಲಾಟಿನಂ ಶೇಕಡಾ 0.3% ರಷ್ಟು ಏರಿಕೆಯಾಗಿ, 940.15 ಡಾಲರ್‌ ಆಗಿದೆ. ಇತ್ತ ಸ್ಪಾಟ್ ಬೆಳ್ಳಿ ಪ್ರತೀ ಔನ್ಸ್‌ಗೆ ಶೇಕಡಾ 0.6% ರಷ್ಟು ಏರಿಕೆಯಾಗಿ 31.98 ಡಾಲರ್‌ ಆಗಿದೆ.

ಭಾರತದಲ್ಲಿ ಬೆಳ್ಳಿ ದರ

ಹಲವು ದಿನಗಳ ನಂತರ ಇಂದು ಭಾರತದಲ್ಲಿ ಮತ್ತೆ ಬೆಳ್ಳಿ ಏರಿಕೆಯಾಗಿದೆ. ಯಾವುದೇ ಬದಲಾವಣೆಯಾಗದೆ ಸ್ಥಿರವಾಗಿದ್ದ ಬೆಳ್ಳಿ ಬೆಲೆ ಇಂದು ಏರಿಕೆಯಾಗಿದೆ. ಪ್ರಸ್ತುತ, ಭರತದಲ್ಲಿ 1 ಕಿಲೋ ಗ್ರಾಂ ಬೆಳ್ಳಿ ಬೆಲೆ 4,500 ರೂ. ಏರಿಕೆಯಾಗಿ 96,500 ರೂ ಇದೆ. ಅದೇ ರೀತಿ 100 ಗ್ರಾಂ ಬೆಳ್ಳಿಯ ಬೆಲೆ 450 ರೂ. ಏರಿಕೆಯಾಗಿ 9,650 ರೂಪಾಯಿ ಇದೆ.

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರಗಳು ​
ನಗರ22k ಚಿನ್ನ24k ಚಿನ್ನ18k ಚಿನ್ನ
​ಚೆನ್ನೈ7,205​7,8605,950
​ಮುಂಬೈ7,205​7,8605,895
ದೆಹಲಿ​7,220​7,8755,907
​ಕೋಲ್ಕತ್ತಾ7,205​7,8755,895
​ಬೆಂಗಳೂರು7,205​7,8755,895
ಹೈದರಾಬಾದ್‌​7,2057,8755,895

MCX ಗೋಲ್ಡ್ ಔಟ್‌ಲುಕ್

ತಾಂತ್ರಿಕವಾಗಿ ದೈನಂದಿನ ಚಾರ್ಟ್‌ನಲ್ಲಿ ಬುಲಿಶ್ ಕ್ಯಾಂಡಲ್ ರಚನೆಯೊಂದಿಗೆ MCX ಗೋಲ್ಡ್ ಪ್ರಮುಖ ಮಟ್ಟವಾದ 77000ಗೆ ಮುಕ್ತಾಯವಾಗಿದೆ. ದೇಶೀಯ ಸರಕು ದೈನಂದಿನ ಚಾರ್ಟ್‌ನಲ್ಲಿ ಬುಲಿಶ್ ಆಯತ ಚಾರ್ಟ್ ಮಾದರಿಯಿಂದ ಧನಾತ್ಮಕ ಬ್ರೇಕ್‌ಔಟ್‌ಗೆ ಸಾಕ್ಷಿಯಾಗಿದೆ. ಇದು ಮಾರುಕಟ್ಟೆಯಲ್ಲಿ ಭಾಗವಹಿಸುವವರಲ್ಲಿ ಅಸ್ಪಷ್ಟ ವರ್ತನೆಯನ್ನು ಸೂಚಿಸುತ್ತದೆ. ಸರಕು ಹಿಂದಿನ ದಿನದ ಗರಿಷ್ಠ ಮಟ್ಟವಾದ 76850 ಮಟ್ಟದ ನಂತರ ಇದು 78200/78850 ಮಟ್ಟಗಳ ಕಡೆಗೆ ಮುನ್ನಡೆಯಬಹುದು. MCX ಗೋಲ್ಡ್‌ಗೆ ಪ್ರಮುಖ ಬೆಂಬಲ 77250/76600 ಮಟ್ಟದಲ್ಲಿ ಇದೆ, ಭೌಗೋಳಿಕ ರಾಜಕೀಯ ಸಮಸ್ಯೆಗಳಿಂದಾಗಿ ವ್ಯತ್ಯಾಸಗಳು ಹೆಚ್ಚಿರಬಹುದು ಎಂದು ವೇ2ವೆಲ್ತ್ ಬ್ರೋಕರ್ಸ್ ಪ್ರೈವೇಟ್ ಲಿಮಿಟೆಡ್‌ನ ತಾಂತ್ರಿಕ ಸಂಶೋಧನಾ ವಿಶ್ಲೇಷಕರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+