ಡಿಸೆಂಬರ್ 27ರಂದು, ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆಯಾಗಿದೆ. ನಿನ್ನೆ ಹಾಗು ಇಂದು ಸತತವಾಗಿ ಏರಿಕೆಯನ್ನ ಕಾಣುತ್ತಿದೆ. ಬಹುದಿನಗಳಿಂದ ಏರಿಳಿತಗಳನ್ನ ನಡೆಸುತ್ತಿದ್ದ ಚಿನ್ನ ಕಳೆದ ವಾರ ತೀವ್ರವಾಗಿ ಕುಸಿದಿತ್ತು. ಇಂದು ಮತ್ತೆ ಏರಿಕೆಯಾಗುವ ಮೂಲಕ ಮಾರುಕಟ್ಟೆ ಸ್ಥಾನವನ್ನ ಪಡೆದಿದೆ.
ಯುಎಸ್ ಡಾಲರ್ ಭಲವರ್ದನೆಯಿಂದಾಗಿ ಚಿನ್ನದ ಬೆಲೆ ಕೂಡ ಏರಿಕೆಯಾಗಿದೆ. ಇನ್ನು 2025 ರ ವೇಳೆಗೆ ಫೆಡರಲ್ ರಿಸರ್ವ್‌ನಿಂದ ಹಣಕಾಸು ನೀತಿ ಮುನ್ಸೂಚನೆಯ ಬಗ್ಗೆ ನಿಖರವಾದ ಸಂಕೇತಗಳನ್ನ ನಿರೀಕ್ಷಿಸಲಾಗಿದೆ. ಇದು ಸ್ಪಾಟ್ ಚಿನ್ನದ ಮೇಲೂ ಕೂಡ ಪರಿಣಾಮವನ್ನ ಬೀರಿದೆ. ಗುರುವಾರ ರಜಾದಿನವಾದ್ರಿಂದ ಚಿನ್ನದ ಮಾರುಕಟ್ಟೆಗಳು ಮುಚ್ಚಿರುತ್ತವೆ. ಬೌಗೋಳಿಕ ಹಾಗು ರಾಜಕೀಯ ಉದ್ವಿಗ್ನತೆಗಳು ಚಿನ್ನದ ದರದ ಮೇಲೆ ಪರಿಣಾಮ ಬೀರುತ್ತಿವೆ. ರಷ್ಯ ಉಕ್ರೇನ್‌ನ ಯುದ್ದ ಹಿನ್ನೆಲೆ ಜಾಗತಿಕ ಉದ್ವಿಗ್ನತೆಗಳಿಂದಾಗಿ ಚಿನವನದ ಬೆಲೆಯಲ್ಲಿ ಏರಿಳಿತಗಳನ್ನ ಕಾಣುವಂತಾಗಿದೆ.

ಚಿಲ್ಲರೆ ಮಾರುಕಟ್ಟೆಯಲ್ಲಿ ಚಿನ್ನಕ್ಕೆ ಹೆಚ್ಚಿದ ಬೇಡಿಕೆಯನ್ನು ನಾವು ಕಾಣಬಹುದು. ಮುಂದಿನ ವರ್ಷ ಬೆಲೆಗಳು $ 3,000 ಅನ್ನು ಮುರಿಯುವ ನಿರೀಕ್ಷೆಯಿದೆ ಎಂದು ತಜ್ಞರು ಆಬಿಪ್ರಾಯ ಪಡುತ್ತಾರೆ. ಅಲ್ಲದೆ ಯುಎಸ್ ಹಣದುಬ್ಬರ ಹೆಚ್ಚಾಗಿ ನವೆಂಬರ್‌ನಲ್ಲಿ ಅನಿರೀಕ್ಷಿತತೆ ಉಂಟಾದ ಕಾರಣ ಚಿನ್ನದ ಬೆಲೆಯಲ್ಲಿ ಏರಿಳಿತವನ್ನ ಕಾಣುವಂತಾಯಿತು. ಸ್ಪಾಟ್ ಚಿನ್ನದ ಬೆಲೆಗಳ ಮೇಲೆ ಗಮನಾರ್ಹ ಚೇತರಿಕೆ ಕಂಡಿತು.
ಬೆಂಗಳೂರಿನಲ್ಲಿ ಚಿನ್ನದ ದರಗಳು
ಡಿಸೆಂಬರ್ 27 ರಂದು, ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆಯಾಗಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 250 ರೂ. ಏರಿಕೆಯಾಗಿ 71,500 ರೂ. ಆಗಿದೆ. ಮತ್ತು 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 270ರೂ. ಏರಿಕೆಯಾಗಿ 78,000ರೂ. ಆಗಿದೆ. ಬೆಂಗಳೂರಿನಲ್ಲಿ 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 200 ರೂ. ಏರಿಕೆಯಾಗಿ 58,500 ರೂ. ಆಗಿದೆ.
ಹಾಗೆ 22 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 2,500ರೂ. ಏರಿಕೆಯಾಗಿ 7,15,000ರೂ. ಆಗಿದೆ. ಮತ್ತು 24 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 2,700 ರೂ. ಏರಿಕೆಯಾಗಿ 7,80,000 ರೂ. ಆಗಿದೆ. 18 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 2,000 ಏರಿಕೆಯಾಗಿ 5,85,000 ರೂ. ಆಗಿದೆ.
ಬೆಂಗಳೂರಿನಲ್ಲಿ ಬೆಳ್ಳಿ ದರಗಳು
ಇಂದು ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಏರಿಕೆಯಾಗಿದೆ . ಪ್ರಸ್ತುತ, ಬೆಂಗಳೂರಿನಲ್ಲಿ 1 ಗ್ರಾಂ ಚಿನ್ನದ ಬೆಲೆ 92.50 ರೂ ಇದೆ. ಹಾಗೆ 1 ಕಿಲೋ ಗ್ರಾಂ ಬೆಳ್ಳಿ ಬೆಲೆ 92,500ರೂ. ಇದೆ. ಇಂದು ಬೆಳ್ಳಿ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ. ನಿನ್ನೆ 1,000ರೂ ಏರಿಕೆಯಾಗಿದ್ದ ಬೆಳ್ಳಿ ಬೆಲೆ ಇಂದು ಸ್ಥಿರವಾಗಿದೆ.
ಭಾರತದ ಕೆಲವು ಮೆಟ್ರೋಪಾಲಿಟನ್ ನಗರಗಳಲ್ಲಿನ ಚಿನ್ನದ ಬೆಲೆಗಳ ವಿವರ:
| ನಗರಗಳು | 24 ಕ್ಯಾರೆಟ್ | 22 ಕ್ಯಾರೆಟ್ |
| ದೆಹಲಿ | 78,150 | 71,650 |
| ಮುಂಬೈ | 78,000 | 71,500 |
| ಚೆನ್ನೈ | 78,000 | 71,500 |
| ಕೋಲ್ಕತ್ತಾ | 78,000 | 71,500 |
MCX ಗೋಲ್ಡ್ ಔಟ್‌ಲುಕ್
ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX), ಫೆಬ್ರವರಿ 5, 2025 ರರ ವಿತರಣೆಯ ಚಿನ್ನದ ಭವಿಷ್ಯ ನೋಡೋದಾದ್ರೆ, 10 ಗ್ರಾಂ ಚಿನ್ನಕ್ಕೆ 0.14 % ನಷ್ಟು ಏರಿಕೆಯಾಗುವ ಮೂಲಕ 10 ಗ್ರಾಂಗೆ 76,931 ರೂ ಆಗಿದೆ. ಅದೇ ರೀತಿ, ಮಾರ್ಚ್ 5, 2025ರ ಬೆಳ್ಳಿ ಭವಿಷ್ಯವು 0.04% ರಷ್ಟು ಕಡಿಮೆಯಾಗಿ, 89,360.ರೂಪಾಯಿ ವಹಿವಾಟು ನಡೆಸುತ್ತಿದೆ. ಜಾಗತಿಕ ಬೇಡಿಕೆ, ಬಡ್ಡಿ ದರಗಳು, ಕರೆನ್ಸಿ ವಿನಿಮಯ ದರಗಳು, ಸರ್ಕಾರಿ ನೀತಿಗಳು ಮತ್ತು ಜಾಗತಿಕ ಘಟನೆಗಳಂತಹ ದೇಶೀಯ ಮತ್ತು ಅಂತರರಾಷ್ಟ್ರೀಯ ಎರಡೂ ಅಸ್ಥಿರಗಳಿಂದ ಚಿನ್ನದ ಬೆಲೆಗಳು ಹೆಚ್ಚು ಪರಿಣಾಮ ಬೀರಬಹುದು.
ಸ್ಪಾಟ್ ಚಿನ್ನದ ಭವಿಷ್ಯ
ಸ್ಪಾಟ್ ಚಿನ್ನದ ಬೆಲೆ ಏರಿಕೆಯಾಗುವ ನಿರೀಕ್ಷೆ ಇದೆ. ಯುಎಸ್ ಡಾಲರ್ ಏರಿಕೆಯಿಂದಾಗಿ ಇದು ಸ್ಪಾಟ್ ಚಿನ್ನದ ಮೇಲೆ ಹೆಚ್ಚು ಪ್ರಭಾವ ಬೀರಲಿದೆ. ಇನ್ನು ರಾಯಿಟರ್ಸ್ ವರದಿ ಪ್ರಕಾರ 01:47 pm ET (1847 GMT)ಯಲ್ಲಿ ಸ್ಪಾಟ್ ಚಿನ್ನ 0.9% ನಷ್ಟು ಏರಿಕೆಯಾಗಿ ಪ್ರತಿ ಔನ್ಸ್‌ಗೆ 2,635.29 ಡಾಲರ್ ತಲುಪಲಿದೆ. ಯುಎಸ್ ಚಿನ್ನದ ಭವಿಷ್ಯವು 0.7%ನಷ್ಟು ಏರಿಕೆಯಾಗಿ 2,653.90 ನಲ್ಲಿ ನೆಲೆಸಿದೆ. ಇತ್ತ ಸ್ಪಾಟ್ ಬೆಳ್ಳಿ ಬದಲಾಗದೆ ಪ್ರತಿ ಔನ್ಸ್‌ಗೆ 29.6 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ. ಅಲ್ಲದೆ ಇನ್ನು ಮುಂಬರುವ ವರ್ಷದಲ್ಲಿ ಚಿನ್ನದ ಬೆಲೆಯಲ್ಲಿ ಸಾಕಷ್ಟು ಏರಿಳಿತಗಳು ಉಂಟಾಗಲಿದೆ ಎನ್ನಲಾಗ್ತಿದೆ.
ಹೂಡಿಕೆದಾರರು 2025 ರ ಫೆಡರಲ್ ರಿಸರ್ವ್‌ನ ದರ ಕಾರ್ಯತಂತ್ರ ಹಾಗೆ ಸುಂಕದ ನೀತಿಗಳ ಬಗ್ಗೆ ನಿರೀಕ್ಷೆ ಮಾುತ್ತಿದ್ದಾರೆ. ಇನ್ನು ಇಂದು ಚಿನ್ನದ ಬೆಲೆಗಳು ರಜೆದಿನಗಳು ಇರುವುದರಿಂದ ಹೆಚ್ಚಿನ ವಹಿವಾಟನ್ನ ನಿರೀಕ್ಷಿಸಲಾಗಿದೆ. ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳಿಂದ ಯುಎಸ್ ಡಾಲರ್‌ನಲ್ಲಿ ಸ್ವಲ್ಪ ಕುಸಿತ ಕಾಣುವಂತಾಗಿದೆ ಎಂದು ಏಂಜೆಲ್ ಒನ್ ಸಂಶೋಧನಾ ತಂಡ ತಿಳಿಸಿದೆ. ಅಂತರಾಷ್ಟ್ರೀಯ ಷೇರು ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಂದು ಸ್ವಲ್ಪ ಮಟ್ಟಿಗೆ ಅಧಿಕ ವಹಿವಾಟುಗಳನ್ನ ನಡೆಸುತ್ತಿವೆ. ಇದರ ಜೊತೆಗೆ ಚಿನ್ನ, ಬೆಳ್ಳಿ ಎರಡೂ ಲೋಹಗಳು ಹೆಚ್ಚಿನ ಪ್ರಮಾಣದಲ್ಲಿ ವ್ಯಾಪಾರ ಮಾಡುತ್ತವೆ ಎಂಬ ನಿರೀಕ್ಷೆ ಇದೆ.


Click it and Unblock the Notifications