ಚಿನ್ನದ ದರ ಇಳಿಕೆಯಾಯ್ತು ಎಂದು ಸ್ವಲ್ಪ ಸಮಾಧಾನ ಮಾಡಿಕೊಂಡಿದ್ದ ಬೆಂಗಳೂರಿಗರಿಗೆ ಮತ್ತೆ ಚಿನ್ನದ ಬೆಲೆಯ ಬಿಸಿ ತಾಗಿದೆ. ಇಂದು ಚಿನ್ನದ ದರ ಜಿಗಿತವನ್ನ ಕಂಡಿದೆ. ಇದರಿಂದಾಗಿ ಚಿನ್ನ ಪ್ರಿಯರಿಗೆ ಸ್ವಲ್ಪ ನಿರಾಸೆಯಾಗಿದೆ. ಈ ತಿಂಗಳ ಆರಂಭದಲ್ಲೇ ಚಿನ್ನದ ದರ ಇಳಿಕೆಯಾಗಿದ್ದರಿಂದ ಜನರು ಸ್ವಲ್ಪ ನಿಟ್ಟುಸಿರು ಬಿಟ್ಟಿದ್ದರು. ಆದ್ರೆ ಮತ್ತೆ ಇಂದು ಬೆಲೆ ಏರಿಕೆಯಾಗಿ ಚಿನ್ನಪ್ರಿಯರಿಗೆ ನಿರಾಸೆಯುಂಟು ಮಾಡಿದೆ.
ಮತ್ತೆ ಬೆಂಗಳೂರಿನಲ್ಲಿ ಚಿನ್ನದ ಬೆಲೆ ಏರಿಕೆಯಾಗಿದೆ. ತಿಂಗಳ ಆರಂಭದಲ್ಲಿ ಇಳಿಮುಖವಾಗಿದ್ದ ಚಿನ್ನದ ದರ ಮತ್ತೆ ಮಾರುಕಟ್ಟೆಯಲ್ಲಿ ಎದ್ದು ನಿಂತಿದೆ. ಹೀಗಾಗಿ ಹೂಡಿಕೆದಾರರು ಮುಂಬರುವ ಯುಎಸ್ ದತ್ತಾಂಶವನ್ನ ಪರಿಶೀಲನೆ ಮಾಡ್ತಿದ್ದಾರೆ. ಇನ್ನು ಈ ತಿಂಗಳ ಕೊನೆಯಲ್ಲಿ ಚಿನ್ನದ ದರ ಕಡಿತದ ಕುರಿತು ಫೆಡರಲ್ ನಿರ್ಧಾರಗಳ ಬಗ್ಗೆ ಒಂದಿಷ್ಟು ಮಾಹಿತಿ ನೀಡುವ ನಿರೀಕ್ಷೆಯಿದೆ.

ಡಿಸೆಂಬರ್ 3ರಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಏರಿಕೆಯಾಗಿದೆ. 22-ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 400 ರೂಪಾಯಿ ಏರಿಕೆಯಾಗಿ 71,300 ರೂ. ಆಗಿದೆ. ಅದೇ ರೀತಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 430 ರೂ ಏರಿಕೆಯಾಗಿ, ಈಗ 77,780 ರೂ ಆಗಿದೆ. ಹಾಗೆ 18 ಕ್ಯಾರೆಟ್‌ನ ಚಿನ್ನದ ಬೆಲೆ 330 ರೂ. ಏರಿಕೆಯಾಗಿ 58,340 ರೂ. ಆಗಿದೆ.
ಇನ್ನು ಇತ್ತ 100 ಗ್ರಾಂನ ಚಿನ್ನದ ದರಗಳನ್ನ ನೋಡೋದಾದ್ರೆ, 22 ಕ್ಯಾರೆಟ್ ಚಿನ್ನದ ಬೆಲೆ 4,000 ರೂಪಾಯಿ ಏರಿಕೆಯಾಗಿ ರೂ. 7,13,000 ರೂ. ಆಗಿದೆ. 100 ಗ್ರಾಂ 24 ಕ್ಯಾರೆಟ್ ಚಿನ್ನ 4,500 ರೂ ಏರಿಕೆಯಾಗಿ 7,77,800 ರೂಪಾಯಿ ಆಗಿದೆ.
ಭಾರತದಲ್ಲಿ, ವರ್ಷದ ಈ ಸಮಯದಲ್ಲಿ ಸಾಮಾನ್ಯವಾಗಿ ಚಿನ್ನಕ್ಕೆ ಈ ಸಮಯದಲ್ಲಿ ಹೆಚ್ಚಿನ ಬೇಡಿಕೆ ಇರುತ್ತದೆ. ಆದರೆ, ಈ ವರ್ಷ ಚಿಲ್ಲರೆ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾದ ಹಿನ್ನೆಲೆ ತಿಂಗಳ ಆರಂಭದಲ್ಲಿ ಚಿನ್ನದ ದರದಲ್ಲಿ ಕುಸಿತವನ್ನ ಕಾಣುವಂತಾಯಿತು. ಹೆಚ್ಚಿನ ಸಂಖ್ಯೆಯ ವಿವಾಹಗಳಿಂದಾಗಿ ಹಳದಿ ಲೋಹಕ್ಕೆ ಬೇಡಿಕೆ ಸ್ಥಿರವಾಗಿರುವುದರಿಂದ ಚಿನ್ನದ ಬೆಲೆ ಏರಿಕೆಯಾಗಿದೆ.
ಅಲ್ಲದೆ ಪ್ರಮುಖ ಅಂತರಾಷ್ಟ್ರೀಯ ಅಂಶಗಳು ಕೂಡ ಚಿನ್ನದ ಬೆಲೆ ಮೇಲೆ ಪ್ರಭಾವ ಬೀರುತ್ತಿವೆ, ವಿಶೇಷವಾಗಿ US ಡಾಲರ್‌ನ ದತ್ತಾಂಶಕ್ಕಾಗಿ ಮಾರುಕಟ್ಟೆ ನಿರೀಕ್ಷೆ ಮಾಡುತ್ತಿದೆ. ಹಾಗೆ, ಹೂಡಿಕೆದಾರರು ಸಂಭಾವ್ಯ ದರ ಬದಲಾವಣೆಗಳಿಗೆ ಸಂಬಂಧಿಸಿದಂತೆ ಫೆಡರಲ್ ರಿಸರ್ವ್‌ನಿಂದ ಅಪ್‌ಡೇಟ್‌ಗಳನ್ನ ಸ್ಪಷ್ಟವಾಗಿ ಪರಿಶೀಲನೆ ಮಾಡುತ್ತಿದ್ದಾರೆ. ಏಕೆಂದರೆ ಈ ನಿರ್ಧಾರಗಳು ಮಾರುಕಟ್ಟೆಯ ಭಾವನೆಯ ಮೇಲೆ ಮತ್ತಷ್ಟು ಪರಿಣಾಮ ಬೀರುವ ನಿರೀಕ್ಷೆಯಿದೆ. ಇದರ ಮಧ್ಯೆ ಯುಎಸ್ ಡಾಲರ್ ಬಲವರ್ಧನೆ ಹೆಚ್ಚಾಗುತ್ತಿದ್ದು, ಪ್ರಸ್ತುತ 0.11%ನಷ್ಟು 106.57ರಲ್ಲಿ ವಹಿವಾಟುಗಳನ್ನ ನಡೆಸುತ್ತಿದೆ.
ಇಂದು ಬೆಂಗಳೂರಿನಲ್ಲಿ ಬೆಳ್ಳಿ ದರ
ಬೆಂಗಳೂರಿನಲ್ಲಿ ಇಂದು ಬೆಳ್ಳಿ ಬೆಲೆಲ್ಲಿ ಯಾವುದೇ ವ್ಯತ್ಯಾಸವನ್ನ ಗಮನಿಸಿಲ್ಲ. ನಿನ್ನೆ ಇಳಿಕೆಯಾಗಿದ್ದ ಬೆಳ್ಳಿ ಬೆಲೆ ಇಂದು ಸ್ಥಿರವಾಗಿದೆ. ಪ್ರಸ್ತುತ, ಬೆಂಗಳೂರಿನಲ್ಲಿ 1 ಕಿಲೋ ಗ್ರಾಂ ಬೆಳ್ಳಿ ಬೆಲೆ 91,000 ರೂ ಇದೆ. ಅದೇ ರೀತಿ 100 ಗ್ರಾಂ ಬೆಳ್ಳಿಯ ಬೆಲೆ 9,100 ರೂಪಾಯಿ ಇದೆ.
MCX ನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ
ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX), ಡಿಸೆಂಬರ್ 5ರ ವಿತರಣೆಯ ಚಿನ್ನದ ಭವಿಷ್ಯ ನೋಡೋದಾದ್ರೆ, 10 ಗ್ರಾಂ ಚಿನ್ನಕ್ಕೆ 76,079 ರೂ ಆಗಿದೆ. ಅದೇ ರೀತಿ, ಡಿಸೆಂಬರ್ 5ರ ಬೆಳ್ಳಿ ಭವಿಷ್ಯದ ವಹಿವಾಟು ನಿನ್ನೆ ಬಾರಿ ಏರಿಕೆಯನ್ನ ಕಂಡಿತ್ತು ಮತ್ತು 0.37% ರಷ್ಟು ಏರಿಕೆಯಾಗಿ, ಸದ್ಯಕ್ಕೆ 89,020 ರೂಪಾಯಿ ವಹಿವಾಟು ನಡೆಸುತ್ತಿದೆ.
ಇತರ ಪ್ರಮುಖ ಭಾರತೀಯ ನಗರಗಳಲ್ಲಿ ಚಿನ್ನದ ಬೆಲೆಗಳು
ಭಾರತದ ಕೆಲವು ಮೆಟ್ರೋಪಾಲಿಟನ್ ನಗರಗಳಲ್ಲಿನ ಚಿನ್ನದ ಬೆಲೆಗಳ ವಿವರ:
ನಗರಗಳು 24ಕ್ಯಾರೆಟ್ 22ಕ್ಯಾರೆಟ್
ದೆಹಲಿ 77,930 71,450
ಮುಂಬೈ 77,780 71,350
ಚೆನ್ನೈ 77,780 71,350
ಕೋಲ್ಕತ್ತಾ 77,780 71,350
ಸ್ಪಾಟ್ ಚಿನ್ನ ಮತ್ತು ಬೆಳ್ಳಿ ದರಗಳು
ರಾಯಿಟರ್ಸ್ ಇತ್ತೀಚಿನ ವರದಿ ಪ್ರಕಾರ ಯುಎಸ್ ಡಾಲರ್‌ನ ಸ್ವಲ್ಪ ಪ್ರಮಾಣದ ದುರ್ನಲತೆಯಿಂದಾಗಿ ಚಿನ್ನದ ಬೆಲೆಗಳು ಏರಿಕೆಯಾಗಿವೆ. ಹೀಗೆಂದು ರಾಯಿಟರ್ಸ್ ವರದಿ ಹೇಳಿದೆ. ಸ್ಪಾಟ್ ಚಿನ್ನವು 0156 GMT ಯ ಹೊತ್ತಿಗೆ ಪ್ರತಿ 1% ಔನ್ಸ್‌ಗೆ 22,636.50 ಡಾಲರ್ ಇದ್ದು ಚಿನ್ನದ ದರ ಏರಿಕೆಯಾಗಿದೆ. ಸ್ಪಾಟ್ ಬೆಳ್ಳಿ ಕೂಡ 0.1% ಏರಿಕೆಯಾಗಿ ಪ್ರತಿ ಔನ್ಸ್‌ಗೆ $30.51 ಆಗಿದೆ. US ಡಾಲರ್‌ನಲ್ಲಿ ನವೀಕೃತ ಶಕ್ತಿ ಮತ್ತು ಇತ್ತೀಚಿನ ಚಿನ್ನದ ರ್ಯಾಲಿಯ ನಂತರ ಲಾಭವಿದ್ದರು ಕೂಡ ಈ ನಡುವೆ ಚಿನ್ನದ ಬೆಲೆಯಲ್ಲಿ ಕುಸಿತವನ್ನ ಕಂಡಿತ್ತು ಆದ್ರೆ ಇಂದು ಮತ್ತೆ ಏರಿಕೆಯಾಗಿದೆ. ಹೀಗಾಗಿ ಹೂಡಿಕೆದಾರರು ಈಗ ಮುಂಬರುವ US ಆರ್ಥಿಕ ದತ್ತಾಂಶ ಬಿಡುಗಡೆಗಳನ್ನು ನಿಕಟವಾಗಿ ಪರಿಶೀಲನೆ ಮಾಡುತ್ತಿದ್ದಾರೆ. ಇದು ಫೆಡರಲ್ ರಿಸರ್ವ್‌ನ ಭವಿಷ್ಯದ ಹಣಕಾಸು ನೀತಿಯ ನಿಲುವಿನ ಬಗ್ಗೆ ಸ್ಪಷ್ಟವಾದ ಸಂಕೇತಗಳನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.
ಬೆಂಗಳೂರಿನಲ್ಲಿ ನಿನ್ನೆ ಇಳಿಕೆಯಾಗಿದ್ದ ಚಿನ್ನದ ದರ ಇಂದು ಮತ್ತೆ ಏರಿಕೆಯಾಗಿದೆ.ಈ ತಿಂಗಳ ಆರಂಭದಲ್ಲಿ ಚಿನ್ನದ ಬೆಲೆಯಲ್ಲಿ ಏರಿಳತವನ್ನ ಕಾಣುವಂತಾಗಿತ್ತು ಆದ್ರೆ ಮತ್ತೆ ಹಳದಿ ಲೋಹದ ದರ ಏರಕೆಯಾಗುವ ಮೂಲಕ ಮಾರುಕಟ್ಟೆಯಲ್ಲಿ ಮತ್ತೆ ಸ್ಥಾನ ಪಡೆದುಕೊಂಡಿದೆ. ಚಿನ್ನವು ತಿಂಗಳ ಆರಂಭದಲ್ಲಿ ಕುಸಿತವನ್ನ ಕಂಡಿತ್ತು. ದೇಶಿಯ ಚಿನ್ನದ ಬೆಲೆಗಳ ಮೇಲೆ ಅಂತರಾಷ್ಟ್ರೀಯ ಮಾರುಕಟ್ಟೆಯ ಪ್ರಭಾವ ಕಡಿಮೆಯಾದ್ದರಿಂದ ಚಿನ್ನದ ಬೆಲೆ ಇಂದು ಏರಿಕೆಯಾಗಿದೆ. ಆದ್ರೆ ಯುಸ್ ಡಾಲರ್‌ನ ದುರ್ಬಲತೆಯಿಂದಾಗಿ ಚಿನ್ನ ಮತ್ತೆ ಮಾರುಕಟ್ಟೆಯಲ್ಲಿ ಮತ್ತೆ ಸ್ಥಾನ ಪಡೆದುಕೊಂಡಿದೆ.


Click it and Unblock the Notifications