ಚಿನ್ನಪ್ರಿಯರಿಗೆ ಸಿಹಿ ಸುದ್ದಿ ಸಿಕ್ಕಿದೆ. ಬೆಂಗಳೂರಿನಲ್ಲಿ ಕೆಲವು ದಿನಗಳ ಹಿಂದೆ ಏರಿಕೆಯಾಗಿದ್ದ ಚಿನ್ನದ ದರ ಈಗ ಮತ್ತೆ ಇಳಿಕೆಯಾಗಿದೆ. ಕೆಲವು ದಿನಗಳಿಂದ ಭಾರಿ ದುಭಾರಿ ಆಗಿದ್ದ ಚಿನ್ನದ ಬೆಲೆ ಈಗ ಮತ್ತೆ ಇಳಿಮುಖವಾಗಿದ್ದು, ಬಂಗಾರ ಪ್ರಿಯರಿಗೆ ಸಿಹಿ ಸುದ್ದಿ ಸಿಕ್ಕಂತಾಗಿದೆ. ಅದರಲ್ಲೂ ಮುಖ್ಯವಾಗಿ ಈ ವಾರ ಹೂಡಿಕೆದಾರರು ಸಾಕಷ್ಟು ಲಾಭವನ್ನ ಕೂಡ ಗಳಿಸಿದ್ದರು. ಆದ್ರೆ ಇಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆಗಳು ಇಳಿಕೆಯಾದ್ದರಿಂದ ಹೂಡಿಕಕೆದಾರರಿಗೆ ಮತ್ತೆ ನಿರಾಸೆಯಾಗಿದೆ.
ಸ್ಥಳೀಯ ಚಿನ್ನದ ದರಗಳು ಹೆಚ್ಚುತ್ತಿರುವ ಹಿನ್ನೆಲೆ ಖರೀದಿದಾರರಿಂದ ಬೇಡಿಕೆಯು ಕೂಡ ಕಡಿಮೆಯಾಯಿತು. ಇದರಿಂದಾಗಿ ಕಳೆದ ವಾರ, ಭಾರತದಲ್ಲಿ ಚಿನ್ನದ ಪ್ರೀಮಿಯಂಗಳು ಕುಸಿದಿವೆ. ಚಿನ್ನದ ಬೆಲೆಗ ಹೆಚ್ಚಾಗುತ್ತಿದ್ದಂತೆ,ಖರೀದಿಸುವ ಜನರು ಕೂಡ ಕಡಿಮೆಯಾದರು, ಇದರಿಂದಾಗಿ ಸ್ಥಳೀಯವಾಗಿ ಮತ್ತು ಏಷ್ಯಾದ ಮಾರುಕಟ್ಟೆಗಳಾದ್ಯಂತ ಚಿನ್ನದ ಬೇಡಿಕೆ ಕಡಿಮೆಯಾಯಿತು. ಇದರಿಂದಾಗಿ ಭಾರತದಲ್ಲೂ ಕೂಡ ಚಿನ್ನದ ಬೆಲೆ ಇಳಿಮುಖವಾಗಿದೆ.

ಇಂದು ಬೆಂಗಳೂರಿನಲ್ಲಿ 24-ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 1,090 ರೂಪಾಯಿಗಳಷ್ಟು ಇಳಿಕೆಯಾಗಿ 78,550,ರೂ. ಆಗಿದೆ. ಅದೇ ರೀತಿ ಬೆಂಗಳೂರಿನಲ್ಲಿ 22ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 1,000ರೂ ಇಳಿಕೆಯಾಗಿ, ಈಗ 72,000 ರೂ ಆಗಿದೆ. ಹಾಗೆ 18 ಕ್ಯಾರೆಟ್‌ನ ಚಿನ್ನದ ಬೆಲೆ 820 ರೂ. ಇಳಿಕೆಯಾಗಿ 58,910,ರೂ. ಆಗಿದೆ.
ಬೆಂಗಳೂರಿನಲ್ಲಿ ಚಿನ್ನದ ಬೆಲೆ ದೊಡ್ಡಮಡ್ಡದಲ್ಲಿ ಕುಸಿತವನ್ನ ಕಂಡಿದೆ. 100 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 1,090 ರೂಪಾಯಿಗಳಷ್ಟು ಇಳಿಕೆಯಾಗಿ ರೂ. 7,85,500 ರೂ. ಆಗಿದೆ. 22-ಕ್ಯಾರೆಟ್ ಚಿನ್ನ 10,000 ರೂ ಇಳಿಕೆಯಾಗಿ 7,20,000 ರೂಪಾಯಿ ಆಗಿದೆ.
ಬುಲ್ಲಿಶ್ ಮೊಮೆಂಟಮ್ ಅಂತ್ಯ?
ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಚಿನ್ನದ ಬೆಲೆ ಉತ್ತಮವಾಗಿಯೇ ಕಾರ್ಯನಿರ್ವಹಿಸುತ್ತಿದೆ. ಅದರಲ್ಲೂ ಕೋವಿಡ್ ನಂತರ ಕಳೆದ ವಾರ ಚಿನ್ನ ಮತ್ತೆ ಗಣನೀಯವಾಘಿ ಏರಿಕೆಯಾಗಿತ್ತು. ಇನ್ನು ಇಂದು, ರಾಯಿಟರ್ಸ್ ವರದಿಯ ಪ್ರಕಾರ, ದೇಶೀಯವಾಗಿ ಮತ್ತು ಇತರ ಏಷ್ಯಾದ ಮಾರುಕಟ್ಟೆಗಳಲ್ಲಿ ಬೇಡಿಕೆ ಕಡಿಮೆಯಾದ್ದರಿಂದ ಬೆಲೆಗಳುಗಳು ಕೂಡ ಗಮನಾರ್ಹವಾಗಿ ಕುಸಿತಕಂಡಿದೆ ಎನ್ನಲಾಗ್ತಿದೆ.
ಈ ಹಿಂದೆ ಚಿನ್ನದ ಬೆಲೆಗಳಲ್ಲಿ ಏರಿಳಿತವನ್ನ ನಾವು ಗಮನಿಸಿದರೆ ಅವೆಲ್ಲವೂ ಹೆಚ್ಚಾಗಿ ಉಕ್ರೇನ್ ಮತ್ತು ರಷ್ಯಾ ನಡುವಿನ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳಿಂದ ಆಗಿವೆ. ಅಲ್ಲದೆ ಇದು ಹೂಡಿಕೆದಾರರ ಗಮನವನ್ನು ಚಿನ್ನದ ಮಾರುಕಟ್ಟೆಯ ಮೆಲೆ ಸೆಳೆಯುವಂತೆ ಮಾಡಿದೆ. ಭೌಗೋಳಿಕ ರಾಜಕೀಯ ಕಾಳಜಿಯ ಜೊತೆಗೆ, US ಡಾಲರ್ ಸೂಚ್ಯಂಕವು ಕೂಡ ಶೇಕಡಾ 0.55 ರಷ್ಟು ಕುಸಿದಿದೆ, ಮತ್ತು ಪ್ರಸ್ತುತ 106.97ನಲ್ಲಿದೆ, ಇದು ಚಿನ್ನದ ಬೆಲೆಗಳಲ್ಲಿನ ಇತ್ತೀಚಿನ ಏರಿಳಿತಗಳಿಗೆ ಕಾರಣವಾಗಿದೆ.
ಇತರ ಪ್ರಮುಖ ಭಾರತೀಯ ನಗರಗಳಲ್ಲಿ ಚಿನ್ನದ ಬೆಲೆಗಳು
ಭಾರತದ ಕೆಲವು ಮೆಟ್ರೋಪಾಲಿಟನ್ ನಗರಗಳಲ್ಲಿನ ಚಿನ್ನದ ಬೆಲೆಗಳ ವಿವರ:
ನಗರಗಳು - 24ಕ್ಯಾರೆಟ್ - 22ಕ್ಯಾರೆಟ್
ದೆಹಲಿ - 78,700 - 72,150
ಮುಂಬೈ - 78,550 - 72,000
ಚೆನ್ನೈ - 78,550 - 72,000
ಕೋಲ್ಕತ್ತಾ - 78,550 - 72,000
ಇಂದು ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ
ಸತತ ಮೂರು ದಿನಗಳಲ್ಲಿ ಬೆಳ್ಳಿ ಬೆಲೆಯಲ್ಲಿ ಯಾವುದೇ ಏರಿಳಿತ ಕಂಡುಬಂದಿಲ್ಲ. ಆದ್ರೆ ಇಂದು ಬೆಳ್ಳಿ ಮತ್ತೆ ಇಳಿಕೆಯಾಗಿದೆ. ಪ್ರಸ್ತುತ, ಬೆಂಗಳೂರಿನಲ್ಲಿ 1 ಕಿಲೋಗ್ರಾಂ ಬೆಳ್ಳಿ ಬೆಲೆ ರೂ.500 ಇಳಿಕೆಯಾಗಿ 91,500 ರೂ ಆಗಿದೆ. ಅದೇ ರೀತಿ 100 ಗ್ರಾಂ ಬೆಳ್ಳಿಯ ಬೆಲೆ 9,150. ರೂಪಾಯಿ ಆಗಿದೆ.
MCX ನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ
ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX), ಚಿನ್ನದ ಭವಿಷ್ಯವು ಶೇಕಡಾ 0.86ರಷ್ಟು ಏರಿಕೆಯಾಗಿದೆ. ಪ್ರಸ್ತುತ 10 ಗ್ರಾಂ MCX ಚಿನ್ನಕ್ಕೆ 74,581 ರೂಪಾಯಿ ಆಗಿದೆ. ಅದೇ ರೀತಿ, ಡಿಸೆಂಬರ್ 5ರ ಬೆಳ್ಳಿ ಭವಿಷ್ಯದ ವಹಿವಾಟು ಹಸಿರು ಬಣ್ಣದಲ್ಲಿದ್ದು, 0.90% ರಷ್ಟು ಹೆಚ್ಚಾಗಿದ್ದು, 89,220 ರೂಪಾಯಿ ಆಗಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications