ಬೆಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಕುಸಿದಿದೆ. ಅದರಲ್ಲೂ ಇಂದು 22 ಕ್ಯಾರಟ್‌ನ ಚಿನ್ನದ ಬೆಲೆಯಲ್ಲಿ ಭಾರಿ ಇಳಕೆಯಾಗಿದೆ. ಬೆಂಗಳೂರಿನಲ್ಲಿ ಬೆಲೆ ಇಳಕೆಯಾದ ಕಾರಣ ಬಂಗಾರದ ಅಂಗಡಿಗಳು ಗ್ರಾಹಕರನ್ನ ಸ್ವಾಗತ ಮಾಡ್ತಿವೆ. ಅಲ್ಲದೆ ನಿನ್ನೆ ಕೂಡ ಚಿನ್ನದ ಬೆಲೆ ಸ್ವಲ್ಪ ಏರಿಕೆಯಾಗಿತ್ತು. ಆದ್ರೆ ಮತ್ತೆ ಇಂದು ಚಿನ್ನದ ದರದಲ್ಲಿ ಭಾರಿ ವ್ಯತ್ಯಾಸ ಕಂಡುಬಂದಿದೆ. ಕೆಲವು ದಿನಗಳ ಹಿಂದೆ ಗಗನಕ್ಕೆ ಏರಿದ್ದ ಚಿನ್ನ ಈಗ ಮತ್ತೆ ಇಳಿಮುಖವಾಗಿದೆ.
ನವೆಂಬರ್ 28 ಬೆಂಗಳೂರಿನಲ್ಲಿ 22-ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 160 ರೂಪಾಯಿಗಳಷ್ಟು ಇಳಿಕೆಯಾಗಿ 70,900 ರೂ. ಆಗಿದೆ. ಅದೇ ರೀತಿ ಬೆಂಗಳೂರಿನಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 150 ರೂ ಇಳಿಕೆಯಾಗಿ, ಈಗ 77,300 ರೂ ಆಗಿದೆ. ಹಾಗೆ 18 ಕ್ಯಾರೆಟ್‌ನ ಚಿನ್ನದ ಬೆಲೆ 120 ರೂ. ಇಳಿಕೆಯಾಗಿ 58,010 ರೂ. ಆಗಿದೆ.

ಬೆಂಗಳೂರಿನಲ್ಲಿ ಅದೇ ರೀತಿ 100 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 1,600 ರೂಪಾಯಿಗಳಷ್ಟು ಸ್ವಲ್ಪ ಏರಿಕೆಯಾಗಿ ರೂ. 7,73,000 ರೂ. ಆಗಿದೆ. ಆದ್ರೆ 22-ಕ್ಯಾರೆಟ್ ಚಿನ್ನ 1,500 ರೂ ಇಳಿಕೆಯಾಗಿ 7,09,000 ರೂಪಾಯಿ ಆಗಿದೆ.
ಚಿನ್ನದ ಬೆಲೆಗಳು ಜಾಗತಿಕ ಮಾರುಕಟ್ಟೆಯ ಪ್ರವೃತ್ತಿಗಳಿಂದ ಪ್ರಭಾವಿತವಾಗಿವೆ. ಯುಎಸ್ ಡಾಲರ್ ಬಲವರ್ಧನೆ ಅಥವಾ ಬಡ್ಡಿದರಗಳಲ್ಲಿನ ಬದಲಾವಣೆಗಳು ಚಿನ್ನದ ಬೆಲೆಗಳ ಮೇಲೆ ರಪಿಣಾಮ ಬೀರಿವೆ, ಹೀಗಾಗಿ ಚಿನ್ನದ ಬೆಲೆ ಮತ್ತೆ ಇಳಿಕೆಯಾಗಿದೆ. ವಿಶೇಷವಾಗಿ ಹಬ್ಬದ ಋತುವಿನಲ್ಲಿ ಅಥವಾ ಆಫ್-ಸೀಸನ್ ಸಮಯದಲ್ಲಿ ಇದ್ದ ಬೇಡಿಕೆ ಈಗ ಕಡಿಮೆಯಾದ್ದರಿಂದ ಇದು ಕೂಡ ಕಡಿಮೆ ಬೆಲೆಗೆ ಕಾರಣವಾಗಿದೆ. ಭಾರತದಲ್ಲಿ, ಚಿನ್ನದ ಮಾರುಕಟ್ಟೆಯು ಆಮದು ಸುಂಕಗಳು ಮತ್ತು ರೂಪಾಯಿ ಮತ್ತು ಇತರ ಕರೆನ್ಸಿಗಳ ನಡುವಿನ ವಿನಿಮಯ ದರಗಳಂತಹ ಅಂಶಗಳಿಂದ ಪ್ರಭಾವಿತವಾಗಿರುತ್ತದೆ, ವಿಶೇಷವಾಗಿ ಯುಎಸ್ ಡಾಲರ್ ವಿತ್ತೀಯ ನೀತಿಯನ್ನು ಸರಿಹೊಂದಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಂತಹ ಕೇಂದ್ರೀಯ ಬ್ಯಾಂಕುಗಳ ಯಾವುದೇ ಕ್ರಮಗಳು ಚಿನ್ನದ ಬೆಲೆಗಳ ಮೇಲೆ ಪರಿಣಾಮ ಬೀರಬಹುದು.
ಭಾರತೀಯ ಬುಲಿಯನ್ ಮಾರುಕಟ್ಟೆ
ಈ ವಾರ ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ಹಲವು ಏರಿತಗಳನ್ನ ನಾವು ಕಾಣಬಹುದು. ವಾರದ ಆರಂಭದಲ್ಲಿ ಇಳಿಮುಖವಾಗಿದ್ದ ಚಿನ್ನ ಮತ್ತೆ ನಿನ್ನೆ ಸ್ವಲ್ಪ ಏರಿಕೆಯಾಗಿತ್ತು. ಆದ್ರೆ ಇಂದು ಯಥಾಸ್ಥಿತಿಯಲ್ಲಿ ಮತ್ತೆ ಇಳಿಕೆಯಾಗಿದೆ. ದೇಶಿಯ ಚಿನ್ನದ ಬೆಲೆಗಳ ಮೇಲೆ ಅಂತರಾಷ್ಟ್ರೀಯ ಮಾರುಕಟ್ಟೆಯ ಪ್ರಭಾವ ಹೆಚ್ಚಿರುವುದರಿಂದ ಬೆಲೆ ಇಳಿಕೆಯಾಗಿದೆ ಎಂದೇ ಹೇಳಬಹುದು. ಯುಎಸ್ ಡಾಲರ್‌ನ ಸೂಚ್ಯಂಕ ಹೆಚ್ಚಳವಾಗುತ್ತಿರುವುದರಿಂದ ಚಿನ್ನದ ಬೆಲೆಗಳು ಕೂಡ ಕೆಳಮುಖವಾಗುತ್ತಿವೆ. ಅಲ್ಲದೆ ಯುಎಸ್ ಸೂಚ್ಯಂಕ 0.13% ನಷ್ಟು ಏರಿಕೆಯಾಗಿ, 106.22 ಆಗಿದೆ.
ಈ ಹಿಂದೆ ಚಿನ್ನದ ಬೆಲೆಗಳಲ್ಲಿ ಏರಿಳಿತವನ್ನ ನಾವು ಗಮನಿಸಿದರೆ ಅವೆಲ್ಲವೂ ಹೆಚ್ಚಾಗಿ ಉಕ್ರೇನ್ ಮತ್ತು ರಷ್ಯಾ ನಡುವಿನ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳಿಂದ ಆಗಿವೆ. ಅಲ್ಲದೆ ಇದು ಹೂಡಿಕೆದಾರರ ಗಮನವನ್ನು ಚಿನ್ನದ ಮಾರುಕಟ್ಟೆಯ ಮೆಲೆ ಸೆಳೆಯುವಂತೆ ಮಾಡಿದೆ. ಯುಎಸ್‌ನ ಬಲವರ್ಧನೆಯಿಂದಾಗಿ ಚಿನ್ನದ ಬೆಲೆಗಳು ಕೂಡ ಇಳಿಮುಖವಾಗುವಂತಾಗಿದೆ.
ಇತರ ಪ್ರಮುಖ ಭಾರತೀಯ ನಗರಗಳಲ್ಲಿ ಚಿನ್ನದ ಬೆಲೆಗಳು
ಭಾರತದ ಕೆಲವು ಮೆಟ್ರೋಪಾಲಿಟನ್ ನಗರಗಳಲ್ಲಿನ ಚಿನ್ನದ ಬೆಲೆಗಳ ವಿವರ:
ನಗರಗಳು 24ಕ್ಯಾರೆಟ್ 22ಕ್ಯಾರೆಟ್
ದೆಹಲಿ 77,500 71,050
ಮುಂಬೈ 77,350 70,900
ಚೆನ್ನೈ 77,350 70,900
ಕೋಲ್ಕತ್ತಾ 77,350 70,900
ಇಂದು ಬೆಂಗಳೂರಿನಲ್ಲಿ ಬೆಳ್ಳಿ ದರ
ಇಂದು ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಸ್ಥಿರವಾಗಿದೆ. ಅಲ್ಲದೆ ಸತತ ಮೂರು ದಿನಗಳಲ್ಲಿ ಬೆಳ್ಳಿ ಬೆಲೆಯಲ್ಲಿ ಯಾವುದೇ ಏರಿಳಿತ ಕಂಡುಬಂದಿಲ್ಲ. ಪ್ರಸ್ತುತ, ಬೆಂಗಳೂರಿನಲ್ಲಿ 1 ಕಿಲೋಗ್ರಾಂ ಬೆಳ್ಳಿ ಬೆಲೆ 89,500. ರೂ ಆಗಿದೆ. ಅದೇ ರೀತಿ 100 ಗ್ರಾಂ ಬೆಳ್ಳಿಯ ಬೆಲೆ 8,950. ರೂಪಾಯಿ ಆಗಿದೆ.
MCX ನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ
ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX), ಚಿನ್ನದ ಭವಿಷ್ಯವು ಶೇಕಡಾ 0.17ರಷ್ಟು . ಪ್ರಸ್ತುತ 10 ಗ್ರಾಂ MCX ಚಿನ್ನಕ್ಕೆ 75,545 ರೂಪಾಯಿ ಆಗಿದೆ. ಅದೇ ರೀತಿ, ಡಿಸೆಂಬರ್ 5ರ ಬೆಳ್ಳಿ ಭವಿಷ್ಯದ ವಹಿವಾಟು ಹಸಿರು ಬಣ್ಣದಲ್ಲಿದ್ದು, 0.70%, ರಷ್ಟು ವಹಿವಾಟು ಕಡಿಮೆಯಾಗಿದ್ದು, ಸದ್ಯಕ್ಕೆ 87,070 ರೂಪಾಯಿ ಆಗಿದೆ.
ಸ್ಪಾಟ್ ಚಿನ್ನ ಮತ್ತು ಬೆಳ್ಳಿ ದರಗಳು
ರಾಯಿಟರ್ಸ್, ತನ್ನ ಇತ್ತೀಚಿನ ವರದಿಲ್ಲಿ ತಿಳಿಸಿರುವ ಪ್ರಕಾರ ಸ್ಪಾಟ್ ಚಿನ್ನವು 03:02 GMT ಯ ಹೊತ್ತಿಗೆ ಪ್ರತಿ 0.3% ಔನ್ಸ್‌ಗೆ 2,627.60 ಡಾಲರ್ ಇದ್ದು ದರ ಸ್ಥಿರವಾಗಿದೆ ಎಂದು ವರದಿ ತಿಳಿಸಿದೆ. US ಚಿನ್ನದ ಭವಿಷ್ಯವು 0.5% ಗಳಿಸಿ ಪ್ರತಿ ಔನ್ಸ್‌ಗೆ 2,627.00 ಡಾಲರ್ ತಲುಪಿದೆ. ಸ್ಪಾಟ್ ಬೆಳ್ಳಿ ಕೂಡ 1% ಏರಿಕಯಾಗಿ ಪ್ರತಿ ಔನ್ಸ್‌ಗೆ $ 29.78 ಆಗಿದೆ. ಕಳೆದ ವಾರ ಏರಿಕೆಯಾಗಿದ್ದ ಚಿನ್ನದ ಬೆಲೆ ಈಗ ಮತ್ತೆ ಕುಸಿತ ಕಂಡಿದೆ . ಬುಧವಾರ ಚಿನ್ನದ ಬೆಲೆಯಲ್ಲಿ ಸ್ವಲ್ಪ ಏರಿಕೆಯಾಗಿತ್ತು, ಆದ್ರೆ ಇಂದು ಮತ್ತೆ ಇಳಿಕೆ ಕಂಡಿದೆ.


Click it and Unblock the Notifications