ಡಿಸೆಂಬರ್ 26ರಂದು, ಭಾರತದಲ್ಲಿ ಚಿನ್ನದ ದರ ಮತ್ತೆ ಏರಿಕೆಯಾಗಿದೆ. ಮತ್ತೆ ಆಭರಣ ಪ್ರಿಯರಿಗೆ ನಿರಾಸೆಯುಂಟುಮಾಡಿದೆ. ಕಳೆದ ಕೆಲ ದಿನಗಳಿಂದ ನಿದಾನಗತಿಯಲ್ಲಿ ಸಾಗುತ್ತಿದ್ದ ಚಿನ್ನದ ದರ ಇಂದು ಮತ್ತೆ ಗಣನೀಯವಾಗಿ ಏರಿಕೆಯನ್ನ ಕಂಡಿದೆ.
ಯುಎಸ್ ಡಾಲರ್ ಭಲವರ್ದನೆಯಿಂದಾಗಿ ಚಿನ್ನದ ಬೆಲೆ ಕೂಡ ಏರಿಕೆಯಾಗಿದೆ. ಇನ್ನು 2025 ರ ವೇಳೆಗೆ ಫೆಡರಲ್ ರಿಸರ್ವ್‌ನಿಂದ ಹಣಕಾಸು ನೀತಿ ಮುನ್ಸೂಚನೆಯ ಬಗ್ಗೆ ನೀಖರವಾದ ಸಂಕೇತಗಳನ್ನ ನಿರೀಕ್ಷಿಸಲಾಗಿದೆ. ಇದು ಸ್ಪಾಟ್ ಚಿನ್ನದ ಮೇಲೂ ಕೂಡ ಪರಿಣಾಮವನ್ನ ಬೀರಿದೆ. ಗುರುವಾರ ರಜಾದಿನವಾದ್ರಿಂದ ಚಿನ್ನದ ಮಾರುಕಟ್ಟೆಗಳು ಮುಚ್ಚಿರುತ್ತವೆ. ಅಲ್ಲದೆ ಬೌಗೋಳಿಕ ರಾಜಕೀಯ ಕಾಳಜಿ ಮತ್ತು ಯುಸ್ ಡಾಲರ್ ಕುಸಿತದಿಂದಾಗಿ ಚಿನ್ನದ ಬೆಲೆಗಳು ಕೂಡ ಇಳಿಕೆಯನ್ನ ಕಂಡಿದ್ದವು. ಜಾಗತಿಕವಾಗಿ ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಹಿನ್ನೆಲೆ ಭಾರತದಲ್ಲಿ ಚಿನ್ನದ ಬೆಲೆಗಳಲ್ಲಿ ವ್ಯತ್ಯಾಸವನ್ನ ಕಾಣುವಂತಾಗಿದೆ. ಅಲ್ಲದೆ ಯುಎಸ್ ಹಣದುಬ್ಬರ ಹೆಚ್ಚಾಗಿ ನವೆಂಬರ್‌ನಲ್ಲಿ ಅನಿರೀಕ್ಷಿತತೆ ಉಂಟಾದ ಕಾರಣ ಚಿನ್ನದ ಬೆಲೆಯಲ್ಲಿ ಏರಿಳಿತವನ್ನ ಕಾಣುವಂತಾಯಿತು. ಸ್ಪಾಟ್ ಚಿನ್ನದ ಬೆಲೆಗಳ ಮೇಲೆ ಗಮನಾರ್ಹ ಚೇತರಿಕೆ ಕಂಡಿತು.

ಭಾರತದಲ್ಲಿ ಚಿನ್ನದ ದರಗಳು
ಇಂದು ಭಾರತದಲ್ಲಿ ಚಿನ್ನದ ದರ ಏರಿಕೆಯಾಗಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 250 ಏರಿಕೆಯಾಗಿ 71,250 ರೂ. ಆಗಿದೆ. ಮತ್ತು 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 280 ಏರಿಕೆಯಾಗಿ 77,730 ರೂ. ಆಗಿದೆ. 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 210 ಏರಿಕೆಯಾಗಿ 58,300 ರೂ. ಆಗಿದೆ.
ಹಾಗೆ 22 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 2,500 ರೂ. ಏರಿಕೆಯಾಗಿ 7,12,500 ರೂ. ಆಗಿದೆ. ಮತ್ತು 24 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 7,77,300 ರೂ. ಆಗಿದೆ. 18 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 2,100 ಏರಿಕೆಯಾಗಿ 5,83,000 ರೂ. ಆಗಿದೆ.
ಭಾರತದಲ್ಲಿ ಬೆಳ್ಳಿ ದರಗಳು
ಇಂದು ಭಾರತದಲ್ಲಿ ಬೆಳ್ಳಿ ಬೆಲೆ ಏರಿಕೆಯಾಗಿದೆ . ಪ್ರಸ್ತುತ, ಭರತದಲ್ಲಿ 1 ಗ್ರಾಂ ಚಿನ್ನದ ಬೆಲೆ 91.60 ರೂ ಇದೆ. ಹಾಗೆ 1 ಕಿಲೋ ಗ್ರಾಂ ಬೆಳ್ಳಿ ಬೆಲೆ 100 ರೂ ಏರಿಕೆಯಾಗಿ 91,600ರೂ. ಆಗಿದೆ. ಅದೇ ರೀತಿ ನಿನ್ನೆ 915ರೂ. ಇದ್ದ 100 ಗ್ರಾಂ ಬೆಳ್ಳಿಯ ಬೆಲೆ ಇಂದು 916 ರೂ. ಆಗಿದೆ. ನಿನ್ನೆ 91,500 ರೂ ಇದ್ದ ಬೆಳ್ಳಿ ಬೆಲೆ ಇಂದು 100 ಏರಿಕೆಯಾಗಿ 91,600ರೂ. ಆಗಿದೆ.
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರಗಳು
| ನಗರ | ಇಂದಿನ ಚಿನ್ನದ ಬೆಲೆ 22K | ||
| ಚೆನ್ನೈ | 7,125 ರೂ. | ||
| ಮುಂಬೈ | 7,125 ರೂ | ||
| ದೆಹಲಿ | 7,140 ರೂ | ||
| ಕೋಲ್ಕತ್ತಾ | 7,125 ರೂ | ||
| ಬೆಂಗಳೂರು | 7,125 ರೂ | ||
| ಹೈದರಾಬಾದ್ | 7,125 ರೂ | ||
MCX ಗೋಲ್ಡ್ ಔಟ್‌ಲುಕ್
ದೇಶೀಯ ಮಾರುಕಟ್ಟೆಯಲ್ಲಿ MCX ಗೋಲ್ಡ್ ಬಿಗಿಯಾದ ಶ್ರೇಣಿಯಲ್ಲಿ ವ್ಯಾಪಾರವನ್ನ ನಡೆಸುತ್ತಿದೆ. ತಾಂತ್ರಿಕವಾಗಿ ದೈನಂದಿನ ಚಾರ್ಟ್‌ನಲ್ಲಿ ಬುಲಿಶ್ ಕ್ಯಾಂಡಲ್ ರಚನೆಯೊಂದಿಗೆ MCX ಗೋಲ್ಡ್ 76350-76850 ಮಟ್ಟಗಳಲ್ಲಿ ವಹಿವಾಟು ನಡೆಸುತ್ತಿದೆ ಹಾಗೆ 76850 ಮಟ್ಟಕ್ಕಿಂತ ಏರಿಕೆಯಾಗಿದೆ. ಇದು ಮಾರುಕಟ್ಟೆಯಲ್ಲಿ ಭಾಗವಹಿಸುವವರಲ್ಲಿ ಅಸ್ಪಷ್ಟ ವರ್ತನೆಯನ್ನು ಸೂಚಿಸುತ್ತದೆ. ಸರಕು ಹಿಂದಿನ ದಿನದ ಗರಿಷ್ಠ ಮಟ್ಟವಾದ 76850 ಮಟ್ಟದ ನಂತರ ಇದು 77200/77700 ಮಟ್ಟಗಳ ಕಡೆಗೆ ಮುನ್ನಡೆಯಬಹುದು. ಮಾರಾಟದ ಒತ್ತಡ ಮುಂದಿನ ತರಂಗವು ಬೆಲೆಗಳನ್ನ 76000/75450 ಮಟ್ಟಕ್ಕೆ ತಲುಪಬಹುದು. ಭೌಗೋಳಿಕ ರಾಜಕೀಯ ಸಮಸ್ಯೆಗಳಿಂದಾಗಿ ವ್ಯತ್ಯಾಸಗಳು ಹೆಚ್ಚಿರಬಹುದು ಎಂದು ವೇ2ವೆಲ್ತ್ ಬ್ರೋಕರ್ಸ್ ಪ್ರೈವೇಟ್ ಲಿಮಿಟೆಡ್‌ನ ತಾಂತ್ರಿಕ ಸಂಶೋಧನಾ ವಿಶ್ಲೇಷಕರು ತಿಳಿಸಿದ್ದಾರೆ.
ಸ್ಪಾಟ್ ಚಿನ್ನದ ಭವಿಷ್ಯ
ಸ್ಪಾಟ್ ಚಿನ್ನದ ಬೆಲೆ ಏರಿಕೆಯಾಗುವ ನಿರೀಕ್ಷೆ ಇದೆ. ಯುಎಸ್ ಡಾಲರ್ ಏರಿಕೆಯಿಂದಾಗಿ ಇದು ಸ್ಪಾಟ್ ಚಿನ್ನದ ಮೇಲೆ ಹೆಚ್ಚು ಪ್ರಭಾವ ಬೀರಲಿದೆ. ಇನ್ನು ರಾಯಿಟರ್ಸ್ ವರದಿ ಪ್ರಕಾರ ಯುಎಸ್ ಚಿನ್ನದ ಭವಿಷ್ಯ 02:46 GMT ಯಲ್ಲಿ ಸ್ಪಾಟ್ ಚಿನ್ನ 0.5%ನಷ್ಟು ಏರಿಕೆಯಾಗಿ ಪ್ರತಿ ಔನ್ಸ್‌ಗೆ 2,626.10 ಡಾಲರ್ ತಲುಪಲಿದೆ. ಪಲ್ಲಾಡಿಯಂ 1.2% ನಷ್ಟು ಇಳಿಕೆಯಾಗಿ ಪ್ರತಿ ಔನ್ಸ್‌ಗೆ 942.52ಡಾಲರ್ ತಲುಪಲಿದೆ. ಹಾಗೆ ಪ್ಲಾಟಿನಮ್ 0.8% ನಷ್ಟು ಇಳಿಕೆಯಾಗಿ ಪ್ರತಿ ಔನ್ಸ್‌ಗೆ 936.41 ಡಾಲರ್ ತಲುಪಲಿದೆ. ಇತ್ತ ಸ್ಪಾಟ್ ಬೆಳ್ಳಿ ಬದಲಾಗದೆ ಪ್ರತಿ ಔನ್ಸ್‌ಗೆ 29.6 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ. ಅಲ್ಲದೆ ಇನ್ನು ಮುಂಬರುವ ವರ್ಷದಲ್ಲಿ ಚಿನ್ನದ ಬೆಲೆಯಲ್ಲಿ ಸಾಕಷ್ಟು ಏರಿಳಿತಗಳು ಉಂಟಾಗಲಿದೆ ಎನ್ನಲಾಗ್ತಿದೆ.
ಹೂಡಿಕೆದಾರರು 2025 ರ ಫೆಡರಲ್ ರಿಸರ್ವ್‌ನ ದರ ಕಾರ್ಯತಂತ್ರ ಹಾಗೆ ಸುಂಕದ ನೀತಿಗಳ ಬಗ್ಗೆ ನಿರೀಕ್ಷೆ ಮಾಡುತ್ತಿದ್ದಾರೆ. ಇನ್ನು ಇಂದು ಚಿನ್ನದ ಬೆಲೆಗಳು ರಜೆದಿನಗಳು ಇರುವುದರಿಂದ ಹೆಚ್ಚಿನ ವಹಿವಾಟನ್ನ ನಿರೀಕ್ಷಿಸಲಾಗಿದೆ. ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳಿಂದ ಯುಎಸ್ ಡಾಲರ್‌ನಲ್ಲಿ ಸ್ವಲ್ಪ ಕುಸಿತ ಕಾಣುವಂತಾಗಿದೆ ಎಂದು ಏಂಜೆಲ್ ಒನ್ ಸಂಶೋಧನಾ ತಂಡ ತಿಳಿಸಿದೆ. ಅಂತರಾಷ್ಟ್ರೀಯ ಷೇರು ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಂದು ಸ್ವಲ್ಪ ಮಟ್ಟಿಗೆ ಅಧಿಕ ವಹಿವಾಟುಗಳನ್ನ ನಡೆಸುತ್ತಿವೆ. ಇದರ ಜೊತೆಗೆ ಚಿನ್ನ, ಬೆಳ್ಳಿ ಎರಡೂ ಲೋಹಗಳು ಹೆಚ್ಚಿನ ಪ್ರಮಾಣದಲ್ಲಿ ವ್ಯಾಪಾರ ಮಾಡುತ್ತವೆ ಎಂಬ ನಿರೀಕ್ಷೆ ಇದೆ.


Click it and Unblock the Notifications