ಭಾರತದಲ್ಲಿ ಚಿನ್ನದ ಬೆಲೆ, ಡಿಸೆಂಬರ್‌-9: ಪ್ರತಿ 100 ಗ್ರಾಂ 24 ಕ್ಯಾರಟ್‌ ಚಿನ್ನದ ಬೆಲೆ 1,600 ರೂ. ಏರಿಕೆ

ಭಾರತದಲ್ಲಿ ಚಿನ್ನದ ದರ ಮತ್ತೆ ಏರಿಕೆಯಾಗಿದೆ. ಚಿನ್ನದ ಬೆಲೆ ಕಡಿಮೆಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಆಭರಣ ಪ್ರಿಯರಿಗೆ ಮತ್ತೆ ನಿರಾಸೆಯಾಗಿದೆ. ದಕ್ಷಿಣ ಕೊರಿಯಾದ ರಾಜಕೀಯ ಗದ್ದಲ, ಸಿರಿಯಾ ಆಂತರಿಕ ಯುದ್ಧ ಹಾಗೆ ರಷ್ಯ ಉಕ್ರೇನ್‌ ಯುದ್ಧ ಸಮಸ್ಯೆಗಳ ಮಧ್ಯೆ ಭಾರತದಲ್ಲಿ ಚಿನ್ನದ ಬೆಲೆ ಏರಿಕೆಯಾಗಿದೆ. ಆರ್ಥಿಕ ದತ್ತಾಂಶಗಳ ನಡುವೆ ಫೆಡ್‌ ದರ ಕಡಿತಕ್ಕೆ ಎಚ್ಚರಿಕೆಯ ಕ್ರಮ ತೆಗೆದುಕೊಳ್ಳುವುದರಿಂದ ಜಾಗತಿಕವಾಗಿ ಚಿನ್ನದ ದರಗಳು ಹೆಚ್ಚಿನ ಬೆಂಬಲವನ್ನ ಪಡೆಯುವ ನಿರೀಕ್ಷೆ ಇದೆ.

ಭಾರತದಲ್ಲಿ ಚಿನ್ನ ದರ

ಇಂದು ಭಾರತದಲ್ಲಿ 22ಕ್ಯಾರಟ್‌ನ ಪ್ರತೀ ಗ್ರಾಂ ಚಿನ್ನದ ಬೆಲೆ 7,130 ಇದೆ. ಹಾಗೆ 24ಕ್ಯಾರಟ್‌ನ ಪ್ರತೀ ಗ್ರಾಂ ಚಿನ್ನದ ಬೆಲೆ 7,778 ಇದೆ. ಹಾಗೆ ಭಾರತದಲ್ಲಿ ನಿನ್ನೆ 71,150 ರೂ ಇದ್ದ 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ ಇಂದು 150 ರೂ. ಏರಿಕೆಯಾಗಿ 71,300 ರೂ. ಆಗಿದೆ. ಹಾಗೆ ನಿನ್ನೆ 7,11,500 ಇದ್ದ 100 ಗ್ರಾಂನ 22 ಕ್ಯಾರೆಟ್‌ ಚಿನ್ನದ ಬೆಲೆ ಇಂದು 1,500 ರೂಗಳಷ್ಟು ಏರಿಕೆಯಾಗಿ, 7,13,000 ರೂಪಾಯಿ ಆಗಿದೆ.

ಭಾರತದಲ್ಲಿ ಮತ್ತೆ ಚಿನ್ನದ ದರ ಏರಿಕೆ; ಬೆಳ್ಳಿ ಬೆಲೆ ಸ್ಥಿರ

24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 160 ರೂ. ಏರಿಕೆಯಾಗಿ 77,780 ಆಗಿದೆ. ಹಾಗೆಯೇ 24 ಕ್ಯಾರೆಟ್ ನ 100 ಗ್ರಾಂ ಚಿನ್ನದ ಬೆಲೆ ಇಂದು 1,600 ರೂ. ಏರಿಕೆಯಾಗಿ 7,77,800 ರೂಪಾಯಿಗಳಿಗೆ ತಲುಪಿದೆ.

ಹಾಗೆ ನಿನ್ನೆ 58,220 ಇದ್ದ 18 ಕ್ಯಾರಟ್‌ನ 10ಗ್ರಾಂ ಚಿನ್ನದ ಬೆಲೆ ಇಂದು 120 ರೂಗಳಷ್ಟು ಏರಿಕೆಯಾಗಿ 58,340 ಆಗಿದೆ. ಜೊತೆಗೆ ನಿನ್ನೆ 5,82,200 ಇದ್ದ 100 ಗ್ರಾಂನ 18 ಕ್ಯಾರಟ್‌ನ ಚಿನ್ನದ ಬೆಲೆ 1,200 ಗಳಷ್ಟು ಏರಿಕೆಯಾಗಿ 5,83,400 ರೂ. ಆಗಿದೆ.

ಸ್ಪಾಟ್‌ ಚಿನ್ನದ ಬೆಲೆ

ಈ ವಾರ ಯುಎಸ್‌ ಡಾಲರ್‌ನ ದುರ್ಬಲತೆಯಿಂದಾಗಿ ಸೋಮವಾರ ಚಿನ್ನದ ಬೆಲೆಯಲ್ಲಿ ಏರಿಕೆಯನ್ನ ಕಾಣುವಂತಾಗಿದೆ. 0238 GMTಯಲ್ಲಿ ಸ್ಪಾಟ್‌ ಚಿನ್ನ ಪ್ರತಿ ಔನ್ಸ್‌ಗೆ 2,644.91 ಡಾಲರ್‌ನಂತೆ 0.3%ನಷ್ಟು ಏರಿಕೆಯಾಗಿದೆ. ಇನ್ನು ರಾಯಿಟರ್ಸ್‌ ವರದಿ ಪ್ರಕಾರ ಯುಎಸ್‌ ಚಿನ್ನದ ಭವಿಷ್ಯ 0.3% ನಷ್ಟು ಏರಿಕೆಯಾಗಿ 2,666.80 ಡಾಲರ್‌ ಆಗಿದೆ. ಪಲ್ಲಾಡಿಯಮ್ 0.7% ಏರಿಕೆಯಾಗಿ 963.00 ಡಾಲರ್‌ ಇದೆ. ಇನ್ನು ಪ್ಲಾಟಿನಂ ಶೇಕಡಾ 0.5 ರಷ್ಟು ಏರಿಕೆಯಾಗಿ, 934.75 ಡಾಲರ್‌ ಆಗಿದೆ. ಇತ್ತ ಸ್ಪಾಟ್ ಬೆಳ್ಳಿ ಪ್ರತೀ ಔನ್ಸ್‌ಗೆ ಶೇಕಡಾ 0.4 ರಷ್ಟು ಏರಿಕೆಯಾಗಿ 31.08 ಡಾಲರ್‌ ಆಗಿದೆ.

ಭಾರತದಲ್ಲಿ ಬೆಳ್ಳಿ ದರ

ಡಿಸೆಂಬರ್‌ 9ರಂದು ಭಾರತದಲ್ಲಿ ಬೆಳ್ಳಿ ಬೆಲೆ ಮತ್ತೆ ಸ್ಥಿರವಾಗಿದೆ. ಹಾಗೆ ಪ್ರತಿ ಗ್ರಾಂ ಬೆಳ್ಳಿ ಬೆಲೆ 92 ರೂ. ಇದೆ. ಹಾಗೆ ಪ್ರತಿ ಕೆಜಿಗೆ ಬೆಳ್ಳಿ ದರ 92,000 ರೂ. ಇದೆ. ನಿನ್ನೆ ಮತ್ತು ಇಂದು ಬೆಳ್ಳಿ ಬೆಲೆಯಲ್ಲಿ ಯಾವುದೆ ಬದಲಾವಣೆ ಆಗಿಲ್ಲ. ಚಿನ್ನದ ಬೆಲೆ ಇಂದು ಸ್ಥಿರವಾಗಿದೆ. ಪ್ರತಿ 10 ಗ್ರಾಂ ಬೆಳ್ಳಿ ಬೆಲೆ 920 ರೂ ಇದ್ದು, 100 ಗ್ರಾಂ ಬೆಳ್ಳಿ ಬೆಲೆ 9,200ರೂ ಇದೆ.

ಆರು ತಿಂಗಳ ನಂತರ ನವೆಂಬರ್‌ನಲ್ಲಿ ಪೀಪಲ್ಸ್‌ ಬ್ಯಾಂಕ್‌ ಆಫ್‌ ಚೀನಾ ಮತ್ತೆ ಚಿನ್ನವನ್ನ ಖರೀದಿ ಮಾಡಲು ಆರಂಭಿಸಿದೆ. ಚೀನಾದಲ್ಲಿ ಗಮನಾರ್ಹವಾಗಿ ಚಿನ್ನದ ಗ್ರಾಹಕರಿರುವುದರಿಂದ ಬಂಗಾರಕ್ಕೆ ಹೆಚ್ಚಿನ ಬೇಡಿಕೆ ಇದೆ ಹೀಗಾಗಿ ಚಿನ್ನದ ಬೆಲೆ ಮತ್ತೆ ಏರಿಕೆಯಾಗುವ ನಿರೀಕ್ಷೆ ಇದೆ. ಭೌಗೋಳಿಕ ರಾಜಕೀಯ ಅಪಾಯ ಮತ್ತು ಟ್ರಂಪ್‌ ಆಡಳಿತದ ಅಡಿಯಲ್ಲಿ ಅನುಷ್ಠಾನ ಮಾಡಿದ ರಕ್ಷಣಾ ನೀತಿಗಳು, ಹಾಗೆ ಸುತ್ತಲಿನ ಸಂದಿಗ್ಧತೆಯಿಂದಾಗಿ ಚಿನ್ನದ ಬೇಡಿಕೆಯೂ ಕೂಡ ಹೆಚ್ಚಾಗಿದೆ ಎನ್ನಲಾಗ್ತಿದೆ.

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರಗಳು ​ ​
ನಗರ22k ಚಿನ್ನ24k ಚಿನ್ನ18k ಚಿನ್ನ
​ಚೆನ್ನೈ7,130​7,7785,885
​ಮುಂಬೈ7,130​7,7785,834
ದೆಹಲಿ​7,145​7,7935,846
​ಕೋಲ್ಕತ್ತಾ7,130​7,7785,834
​ಬೆಂಗಳೂರು7,130​7,7785,834
ಹೈದರಾಬಾದ್‌​7,130​7,7785,834

MCX ಗೋಲ್ಡ್ ಔಟ್‌ಲುಕ್

ದೇಶೀಯ ಮುಂಭಾಗದಲ್ಲಿ, MCX ಗೋಲ್ಡ್ ನೇರವಾಗಿ ಆರನೇ ಅವಧಿಗೆ ತನ್ನ ಕನ್ಸಾಲಿಡೇಟಿವ್ ಹಂತವನ್ನು ಮುಂದುವರೆಸಿದೆ. ದೈನಂದಿನ ಚಾರ್ಟ್ನಲ್ಲಿ ಡೋಜಿ ಕ್ಯಾಂಡಲ್ಸ್ಟಿಕ್ ಮಾದರಿಯನ್ನು ರೂಪಿಸುತ್ತದೆ, ಇದು ಮಾರುಕಟ್ಟೆಯಲ್ಲಿ ಭಾಗವಹಿಸುವವರಲ್ಲಿ ಅಸ್ಪಷ್ಟ ವರ್ತನೆಯನ್ನು ಸೂಚಿಸುತ್ತದೆ. ಸರಕು ಹಿಂದಿನ ದಿನದ ಗರಿಷ್ಠ ಮಟ್ಟವಾದ 76850 ಮಟ್ಟದ ನಂತರ ಇದು 77100/77500 ಮಟ್ಟಗಳ ಕಡೆಗೆ ಮುನ್ನಡೆಯಬಹುದು. MCX ಗೋಲ್ಡ್‌ಗೆ ಪ್ರಮುಖ ಬೆಂಬಲ 76400/76000 ಮಟ್ಟದಲ್ಲಿ ಇದೆ, ಭೌಗೋಳಿಕ ರಾಜಕೀಯ ಸಮಸ್ಯೆಗಳಿಂದಾಗಿ ವ್ಯತ್ಯಾಸಗಳು ಹೆಚ್ಚಿರಬಹುದು ಎಂದು ವೇ2ವೆಲ್ತ್ ಬ್ರೋಕರ್ಸ್ ಪ್ರೈವೇಟ್ ಲಿಮಿಟೆಡ್‌ನ ತಾಂತ್ರಿಕ ಸಂಶೋಧನಾ ವಿಶ್ಲೇಷಕರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+