ಭಾರತದಲ್ಲಿ ಇಂದಿನ ಚಿನ್ನದ ದರ, ನವೆಂಬರ್‌-19: ಪ್ರತಿ ಗ್ರಾಂ 24 ಕ್ಯಾರಟ್‌ ಚಿನ್ನದ ಬೆಲೆ 7,065 ರೂ.

ಭಾರತದಲ್ಲಿ ಚಿನ್ನದ ದರ ಹಾವು ಏಣಿ ಆಟವನ್ನ ಆಡ್ತಿದೆ. ಒಮ್ಮೆ ಚಿನ್ನ ಗಗನಕ್ಕೆ ಏರಿದ್ರೆ ಮತ್ತೊಮ್ಮೆ ಬಾರಿ ಕುಸಿತ ಕಾಣ್ತಿದೆ. ಆದ್ರೆ ನವೆಂಬರ್‌ 19 ರ ಮಂಗಳವಾರ ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ. ಇತ್ತೀಚೆಗೆ ಡಾಲರ್‌ ಸೂಚ್ಯಂಕ ತನ್ನ ಗರಿಷ್ಠ ಮಟ್ಟದಿಂದ ಕೆಳಗಿಳಿಯಿತು ಹೀಗಾಗಿ ಹೆಚ್ಚಿನ ದರ ಕಡಿತವಾಗಬಹುದು ಎಂದು ಸಾಧ್ಯತೆಯ ಮೇಲೆ ಫೆಡ್‌ ಸದಸ್ಯರ ಭಾವನೆಯಾಗಿದೆ. ಇತ್ತೀಚೆಗೆ ಚಿನ್ನದ ಬೆಲೆ ತೀವ್ರವಾಗಿ ಇಳಿಮುಖಗೊಂಡ ನಂತರ MCX ಚಿನ್ನದ ಬೆಲೆಗಳು ಕೂಡ ಚೇತರಿಸಿಕೊಂಡಿವೆ. ಹಾಗೆ ಚಿನ್ನದ ಬೆಲೆಯಲ್ಲಿ ಏರಿಳಿತವನ್ನ ಕಾಣಲು ಡಾಲರ್‌ ಸೂಚ್ಯಾಂಕದ ಕುಸಿತವೇ ಕಾರಣ ಎನ್ನಲಾಗ್ತಿದೆ. ಇನ್ನು ಈ ಕುರಿತು ಈ ವಾರ ಹಲವಾರು ಫೆಡ್ ಅಧಿಕಾರಿಗಳು ಮಾತನಾಡಿದ್ರು, ಡಾಲರ್‌ ತನ್ನ ಒಂದು ವರ್ಷದ ಗರಿಷ್ಠ ಮಟ್ಟದಿಂದ ಇಳಿಕೆಯಾದ ನಂತರ ಚಿನ್ನದ ದರಗಳು ಏಕೀಕರಿಸುವ ಸಾಧ್ಯತೆಯಿದೆ ಎಂದರು. ಜೊತೆಗೆ ಫೆಡ್‌ನಿಂದ ಹೆಚ್ಚುತ್ತಿರುವ ಇಳುವರಿ ಮತ್ತು ಪರಿಣಾಮಕಾರಿ ಹೇಳಿಕೆಗಳಿಂದ ಅತ್ಯಮೂಲ್ಯವಾದ ಲೋಹದ ಲಾಭವನ್ನು ಸಹ ನಿರ್ಬಂಧಿಸಲಾಗಿದೆ ಎಂದು ಹೇಳಲಾಗ್ತಿದೆ.

ಇಂದು ಭಾರತದಲ್ಲಿ ಚಿನ್ನದ ಬೆಲೆಗಳು

ಭಾರತದಲ್ಲಿ ಪ್ರಸ್ತುತ ಚಿನ್ನದ ಬೆಲೆಯನ್ನ ನಾವು ನೋಡೋದಾದ್ರೆ, ಪ್ರತಿ ಗ್ರಾಂಗೆ 24 ಕ್ಯಾರೆಟ್ ಚಿನ್ನದ ಬೆಲೆ 7,707 ರೂ. ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ 7,065 ರೂ. ಇದೆ. ಭಾರತದಲ್ಲಿ ಮಂಗಳವಾರ 69,950 ರೂ. ಇದ್ದ 22 ಕ್ಯಾರೆಟ್‌ನ 10 ಗ್ರಾಂ ಚಿನ್ನ 700 ರೂ.ನಿಂದ 70,650 ರೂ.ಗೆ ಏರಿಕೆಯಾಗಿದೆ. ಹಾಗೆ ಸೋಮವಾರ ಅಂದರೆ ನಿನ್ನೆ 6,99,500 ರೂ ಇದ್ದ 100 ಗ್ರಾಂನ 22 ಕ್ಯಾರೆಟ್‌ ಚಿನ್ನದ ಬೆಲೆ ಇಂದು 7,000 ದಿಂದ 7,06,500 ರೂ. ಏರಿಕೆಯಾಗಿದೆ. ಹಾಗೆ ಮಂಗಳವಾರ ಭಾರತದಲ್ಲಿ 24 ಕ್ಯೆರಟ್‌ 10 ಗ್ರಾಂ ಚಿನ್ನದ ಬೆಲೆ 760ರೂಗಳಷ್ಟು ಏರಿಕೆಯಾಗಿದ್ದು, ಸೋಮವಾರ 76,310 ರೂ.ಗಳಿಂದ 77,070 ರೂಪಾಯಿಗೆ ತಲುಪಿದೆ.

ಭಾರತದಲ್ಲಿ ಇಂದು ಚಿನ್ನದ ದರ ಎಷ್ಟಿದೆ? ಇಲ್ಲಿದೆ ಮಾಹಿತಿ

ನಿನ್ನೆ ಭಾರತದಲ್ಲಿ 7,63,100 ರೂ. ಇದ್ದ 24 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ ಇಂದು 7,600 ರೂಗಳಷ್ಟು ಏರಿಕೆಯಾಗಿ ಇಂದು 7,70,700 ರೂಪಾಯಿಗಳಿಗೆ ತಲುಪಿದೆ. ಸೋಮವಾರದಂದು 57,230 ರೂ.ಗಳಿದ್ದ 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ಮಂಗಳವಾರ 580 ರೂಗಳಷ್ಟು ಏರಿಕೆಯಾಗಿ 57,810 ರೂಪಾಯಿಗೆ ತಲುಪಿದೆ. ಇದರ ಮಧ್ಯೆ, ಸೋಮವಾರದಂದು 5,72,300 ರೂ.ಗಳಷ್ಟಿದ್ದ 18 ಕ್ಯಾರಟ್‌ನ 100 ಗ್ರಾಂ ಚಿನ್ನದ ಬೆಲೆ 5,800 ರೂ. ಏರಿಕೆಯಾಗಿ 5,78,100 ರೂಪಾಯಿಯಾಗಿದೆ.

ಸ್ಪಾಟ್‌ ಚಿನ್ನದ ಬೆಲೆ

ಸ್ಪಾಟ್ ಚಿನ್ನವು 02:46 GMTಯಲ್ಲಿ ಪ್ರತಿ ಔನ್ಸ್‌ಗೆ 0.4% ಏರಿಕೆಯಾಗಿ 2,623.54 ಡಾಲರ್‌ಗೆ ತಲುಪಿದೆ. ಇನ್ನು ರಾಯಿಟರ್ಸ್ ಪ್ರಕಾರ, US ಚಿನ್ನದ ಭವಿಷ್ಯವು 0.5% ರಿಂದ 2,627.60 ಡಾಲರ್‌ಗೆ ತಲುಪಿದೆ. ಹಾಗೆ ಸ್ಪಾಟ್ ಸಿಲ್ವರ್ 0.5% ಏರಿಕೆಯಾಗಿ ಇತರ ಸರಕುಗಳ ನಡುವೆ ಔನ್ಸ್‌ಗೆ 31.32 ಡಾಲರ್‌ ಆಗಿ, ಒಂದು ವಾರದ ಗರಿಷ್ಠ ಮಟ್ಟವನ್ನು ತಲುಪಿದೆ. ಜೊತೆಗೆ ಪ್ಲಾಟಿನಂ 0.3% ಏರಿಕೆಯಾಗಿ 969.80 ಡಾಲರ್‌ಗೆ ತಲುಪಿದೆ. ಸೋಮವಾರ ಶೇಕಡಾ ಐದಕ್ಕಿಂತ ಹೆಚ್ಚು ಏರಿಕೆಯಾದ ನಂತರ, ಪಲ್ಲಾಡಿಯಮ್ 1,005.20ನಷ್ಟಿದ್ದು, ಅದರ ಬೆಲೆಯಲ್ಲಿ ಸ್ಥಿರವಾಗಿ ಉಳಿದಿದೆ ಎಂದು ವರದಿ ತಿಳಿಸಿದೆ.

ಇಂದು ಭಾರತದಲ್ಲಿ ಬೆಳ್ಳಿ ಬೆಲೆಗಳು

ಭಾರತದಲ್ಲಿ ಬೆಳ್ಳಿ ಬೆಲೆಯನ್ನ ನೋಡೋದಾದ್ರೆ, ಪ್ರತಿ ಗ್ರಾಂನ ಬೆಳ್ಳಿಯ ಬೆಲೆ 91.50 ರೂ.ಗಳಿದೆ. ಹಾಗೆ ಪ್ರತಿ ಕಿಲೋಗ್ರಾಂ ಬೆಳ್ಳಿ ಬೆಲೆ 91,500 ರೂ. ಆಗಿದೆ. ನಿನ್ನೆ ಭಾರತದಲ್ಲಿ 8,950 ರೂ. ಇದ್ದ 100 ಗ್ರಾಂ ಬೆಳ್ಳಿ ಬೆಲೆ 200 ರೂಗಳಷ್ಟು ಏರಿಕೆಯಾಗಿ ಮಂಗಳವಾರ 9,150 ರೂಪಾಯಿಗೆ ತಲುಪಿದೆ. ಹಾಗೆ ಸೋಮವಾರ 895 ರೂ. ಇದ್ದ 10 ಗ್ರಾಂ ಬೆಳ್ಳಿಯ ಬೆಲೆ 915ರೂಗಳಷ್ಟು ಏರಿಕೆಯಾಗಿದೆ. ಭಾರತದಲ್ಲಿ, ಸೋಮವಾರದಂದು 89,500 ರೂ.ಗಳಿದ್ದ ಒಂದು ಕಿಲೋಗ್ರಾಂ ಬೆಳ್ಳಿ ಬೆಲೆ,ಒಂದೇ ದಿನದಲ್ಲಿ 2000 ರೂಪಾಯಿ ಏರಿಕೆಯಾಗಿ ಮಂಗಳವಾರ 91,500 ರೂಪಾಯಿ ಆಗಿದೆ.

ಇಂದು ಚಿನ್ನ ಮತ್ತು ಬೆಳ್ಳಿಯ ಔಟ್‌ಲುಕ್

ಅಂತಾರಾಷ್ಟ್ರೀಯ ಷೇರು ಮಾರುಕಟ್ಟೆಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಇಂದು ಸ್ವಲ್ಪ ಹೆಚ್ಚಿನ ವಹಿವಾಟುಗಳನ್ನು ಕಾಣಬಹುದು. ಚಿನ್ನ ಮತ್ತು ಬೆಳ್ಳಿಯ ದರಗಳು ದಿನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ವ್ಯಾಪಾರ ವಹಿವಾಟುಗಳನ್ನ ಮಾಡುತ್ತವೆ ಎಂದು ನಾವು ನಿರೀಕ್ಷಿಸಬಹುದು. ಹಾಗೆ ಆಗಸ್ಟ್‌ನಲ್ಲಿ ತೀವ್ರವಾಗಿ ಏರಿಕೆಯಾಗಿದ್ದ ಚಿನ್ನದ ದರಗಳು ಸೋಮವಾರದ ವೇಳೆಗೆ ಸ್ಥಿರವಾಗಿರುವುದರಿಂದ, ಮಾರುಕಟ್ಟೆಯ ಜೊತೆಗೆ ಡಾಲರ್ ಮತ್ತು ಫೆಡರಲ್ ರಿಸರ್ವ್‌ನ ಬಡ್ಡಿದರದ ಮೇಲೆ ಕೂಡ ಹೆಚ್ಚು ಗಮನಹರಿಸಲಾಗಿದೆ" ಎಂದು ನಿರ್ಮಲ್ ಬ್ಯಾಂಗ್ ಸೆಕ್ಯುರಿಟೀಸ್ ಪ್ರೈವೇಟ್‌ ಲಿಮಿಟೆಡ್‌ನ ತಾಂತ್ರಿಕ ಸಂಶೋಧನಾ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+